
ನಾನು ನಾನಾಗದೇ
ಇದ್ದಾಗಲೇ ಚೆನ್ನಿತ್ತು ಎಲ್ಲ.
ನನ್ನಿಂದ ಮೂಡಿದ್ದಕ್ಕೆಲ್ಲ ಸ್ವತಂತ್ರ ರೆಕ್ಕೆಗಳಿದ್ದವು
ನನ್ನ ಹಂಗಿರಲಿಲ್ಲ.
ಅದೇಕೋ ನೀವೆಲ್ಲಾ ಒತ್ತಾಯ ಮಾಡಿ
ನೀನ್ಯಾರು ನೀನ್ಯಾರೆಂದು ಕೇಳಿದಿರಿ.
ಹಾಗೆ ನಾನು ನಾನಾಗಬೇಕಾಯ್ತು

ಈಗ ನಾನೇನು ಮಾಡಿದರೂ
ಅದಕ್ಕೆ ನನ್ನದೇ ವಾಸನೆ ಅಂಟಿಸುವಿರಿ
ನನ್ನ ಛಾಪಿಲ್ಲವೆಂದು ಅವನ್ನು ಹಂಗಿಸುವಿರಿ
ಸಮಾಜ ನನಗಿತ್ತ ರೋಗಗಳನ್ನು
ಪಾಪ ಅವೂ ಹೊತ್ತು ತಿರುಗುತವೆ
ಈಗಲಾದರೂ
ನಾನು ನಾನಾಗದೇ ಹುಟ್ಟಬೇಕಿದೆ
ಮತ್ತೆ ಅದೆಲ್ಲೋ..

ಸರ್,
Identity crisis ನಮ್ಮನ್ನೆಲ್ಲಾ ಒಂದಿಲ್ಲೊಂದು ದಿನ ತೀವ್ರವಾಗಿ ಕಾಡಿರುತ್ತದೆ. ನಾವು ನಾವಾಗ ಹೊರಟು ನಮ್ಮನ್ನು ಕಳೆದು ಕೊಳ್ಳುವುದನ್ನು ಚೆನ್ನಾಗಿ ವ್ಯಾಖ್ಯಾನಿಸಿದ್ದೀರಿ. ಕವನ ಚೆನ್ನಾಗಿದೆ.
kavana tumba chennagi mooDi bandide
identity, yess…. nimma kavaitheya prati saalu ishtavaaytu…
kavithe tumbaa chennaagi moodide…
Ranjit,… one of your best poems
ತ್ರಿಮೂರ್ತಿಗಳ ಚಿತ್ರ ತುಂಬ ಚೆನ್ನಾಗಿದೆ.
superb agide anna..:)
ಚೆನ್ನಾಗಿದೆ ಸಾರ್.. ಆದರೆ, ಪ್ರತಿಯೋರ್ವರಿಗೂ ಅವರದೇ ಆದ ವ್ಯಕ್ತಿತ್ವವಿರುತ್ತೆ…. ವಯಸ್ಕರಾದ ನಂತರ ವ್ಯಕ್ತಿತ್ವ ಬದಲಾಯಿಸೋದು ಅಸಾಧ್ಯಕ್ಕೆ ಹತ್ತಿರವಾದುದು ಅಲ್ಲವೇ
ಸಕತ್ ಕವನ ರಂಜಿತ್, ತುಂಬಾ ಅರ್ಥಪೂರ್ಣವಾಗಿದೆ. ಫೇಮಸ್ ಆಗೋದ್ರ ಹಿಂದಿನ ನೋವು ಚನ್ನಾಗಿ ಬಿಂಬಿಸಿದ್ದೀರಿ.
ಕವನ ಚೆನ್ನಾಗಿದೆ. ಆದರೆ ನನ್ನ ನಿಲುವು ಬೇರೆ. ನಾನು ನಾನಾದರೆ ನನ್ನೊಳಗಿನ ಉತ್ತಮನನ್ನು ಹೊರಗೆಡವಲು ಸಾಧ್ಯ ಎ೦ಬುದು ನನ್ನ ವಾದ.
ನಿಮ್ಮ ತಾಣವನ್ನ ಚೆನ್ನಾಗಿ ಬೆಳೆಸಿದ್ದೀರಿ.
nice lines…ella saalugaLu kaaDuttave
ನಿಮ್ಮ ಕವಿತೆಯಲಿನ ನವಿರುತನಕ್ಕೆ ಸಲಾಂ ನನ್ನ ಬ್ಲಾಗ್ ಒಮ್ಮೆ ನೋಡಿ ಸಾದ್ಯವಾದರೆ ನಿಮ್ಮ ಅಭಿಪ್ರಾಯ ತಿಳಿಸಿ
sahayaatri.blogspot.com
ಕವನ ತುಂಬಾ ಚೆನ್ನಾಗಿದೆ ರಂಜಿತ್. ಕೊನೆಯ ನುಡಿ ಬಿಗಿಯಾಗಬಹುದಿತ್ತು. ಇದು ಕೇವಲ ಅನಿಸಿಕೆ ಮಾತ್ರ. ಇದರ ಹೊರತಾಗಿಯೂ ಮೊದಲೆರಡು ನುಡಿಗಳು ತುಂಬ ಹಿಡಿಸಿದವು.
thanks for remembering that old sweet line !
sakkath agide..