01
Sep
09

ವಿರಹ ಗೀತೆ..!

ಈ ಮಳೆ ಇಳಿಯುವ ಮುಸ್ಸಂಜೆ ತೊಯ್ಯುವ ಗಳಿಗೆ
ದಯವಿಟ್ಟು
ಒಂದು ವಿರಹ ಗೀತೆ ಕೊಡಿ
ಗುನುಗಿ ಬದುಕಿಕೊಳ್ಳುತ್ತೇನೆ
untitled
ನಿಮಗೆ ತೋರುವ ಸುರಿಯುವ ತಂಪು
ನಿಜವಾದ್ದಲ್ಲ
ಅದರ ಮುಖವಾಡ ಕಳಚಿ
ಹನಿಹನಿಯೊಳಗಿಣುಕುವ ಕೆಂಡ
ಮೆಲ್ಲಗೆ ನನ್ನೊಳಗನ್ನು ದಹಿಸುವ ದೃಶ್ಯ
ನಿಮಗೆ ಕಾಣಿಸಲಾರೆ

 

ಮೌನವಾಗಿ ಯಾರಿಗೂ ತೋರದೇ
ಮಳೆ ಮಣ್ಣೊಳು ಸೇರಿ
ಗಂಧ ಮಾಡುವ ಮಸಲತ್ತು,
ಮತ್ತು ಅದು ತರಿಸುವ
ನೆನಪ ಮೊನೆಯಂಚು ಭಾರೀ ಚೂಪು

 

feelings,girl,neck,nude,painting,sadness,water-069e13779cbfda2448d9bac42a80ac2e_m

 

ಕೂಗಲೂ ಆಗದ ನೋವುಗಳನ್ನು
ಖಾಲೀ ಪೀಲಿ ಪದಗಳಲ್ಲಿ ನಿಮಗೆಲ್ಲಾ
ವಿವರಿಸಲಾರೆ

ಒಂದಿಷ್ಟು ಕಿಡಿಗಳಿವೆ ಒಳಗೆ
ಕ್ಷಣಗಳ ಕಾಡಿಗೆ ಸುರಿದು
ಆ ಬೆಚ್ಚಗಿನ ಮುಸುಕಿನಲ್ಲೇ ಉಳಿದುಕೊಳ್ಳುವೆ

ದಯವಿಟ್ಟು, ಒಂದು ವಿರಹ ಗೀತೆ ಕೊಡಿ.
ಗುನುಗಿ ಬದುಕಿಕೊಳ್ಳುವೆ.


7 Responses to “ವಿರಹ ಗೀತೆ..!”


  1. 1 manasu
    September 1, 2009 at 11:40 am

    nice one!!!

  2. 3 ಶರಶ್ಚಂದ್ರ ಕಲ್ಮನೆ
    September 1, 2009 at 6:29 pm

    ಸುಂದರ ಕವನ ರಂಜಿತ್… ಮತ್ತೊಮ್ಮೆ ಪದಗಳ ಪ್ರಯೋಗ ಖುಷಿ ತಂದಿದೆ… ವಿರಹ ಗೀತೆಗಳನ್ನು ಕೊಡುವ ಇಲ್ಲಿಗೆ ಬನ್ನಿ :)

    ಶರಶ್ಚಂದ್ರ ಕಲ್ಮನೆ

  3. September 4, 2009 at 5:43 am

    Tumbaa Ishtavaaytu… !!!

  4. September 16, 2009 at 1:49 am

    ಮನಸು, ಕಲ್ಲರೆ, ಸುನಿಲ್, ರೂಪ ,

    ನಿಮ್ಮನಿಸಿಕೆಗೆ ಥ್ಯಾಂಕ್ಸ್.

    ಶರಶ್,

    ಒಳಗಿನ ನೆನಪಿನ ಒಣಹುಲ್ಲುಗಳಿಗೆ ಕಿಚ್ಚಿಡಲು ವಿರಹ ಕಿಡಿಯಷ್ಟಿದ್ದರೆ ಸಾಕು. ಅಷ್ಟು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ..:)

  5. 7 mallige
    September 19, 2009 at 8:56 am

    geleya, VIRAHA GEETE ruchisida madalu barahagaara ninu.VIRAHAVE ondu apayamana. adarallu VIRAHADA urige bendade hoda bandugalilla. VIRAHA ondu VARA aagali. jagattina joligeyalli.


Leave a Reply




ಹೆಜ್ಜೆ ಗುರುತು

  • 23,000 ಜನ

ಈ ಕ್ಷಣ

ಮೆನು

ಇಣುಕಿದವರ ಜಿಯೋಗ್ರಫಿ

Page copy protected against web site content infringement by Copyscape