ಬಾಲ್ಯದ ತುಂಬಾ
ಚಂದಮಾಮನನು ತೋರಿಸಿಯೇ
ಉಣ್ಣಿಸಿದ್ದ ಅವ್ವನಿಗೆ
ಕಲೆಯಿರದ ಚಂದಿರನ
ಕಲ್ಪನೆಯೇ ಇರಲಿಲ್ಲವಂತೆ

ರೂಮಿನಲಿ ಚೆಲ್ಲಾಪಿಲ್ಲಿಯಾಗಿ
ಬಿದ್ದ ವಸ್ತುಗಳಂತಿದ್ದ ಬದುಕಿಗೆ
ಒಪ್ಪ ಓರಣಗಳ ಕಲಿಸುವ
ಟೀಚರಿನ ಅವಶ್ಯಕತೆಯಿದೆಯೆಂದು
ನನಗೂ ಅರಿವಿರಲಿಲ್ಲ.
ಬೇಲಿ ಹಾರಿ ಲೂಟಿ ಮಾಡುವ
ಜೋಡಿ ಹೋರಿಗಳಂತಿದ್ದ ಕಣ್ಣುಗಳನು
ನೊಗ ಕಟ್ಟುವಂಥ ಮೊಗ
ಇದೆಯೆಂಬುದರ ತಿಳಿವೂ ಇದ್ದಿರಲಿಲ್ಲ
ಅವಳು ಸಿಕ್ಕಿದ್ದು
ತೀರಾ ಇತ್ತೀಚೆಗೆ.
- ಅಕ್ಟೋಬರ್ ಮಾಸದ “ಮಯೂರ” ದಲ್ಲಿ ಪ್ರಕಟಿತ.

nice one!!! istavaayitu
ತುಂಬಾ ಇಷ್ಟವಾಯ್ತು…
ರಂಜಿತ್,
ಇದನ್ನು ಮೊದಲೇ ಮಯೂರದಲ್ಲಿ ಓದಿ ಖುಷಿಪಟ್ಟಿದ್ದೆ. ತುಂಬಾ ಚೆನ್ನಾಗಿದೆ.
ತುಂಬಾ ಚೆನ್ನಾಗಿದೆ, ಮೊದಲ ಪ್ಯಾರವಂತು ಸೂಪರ್.
ಚೆನ್ನಾಗಿದೆ!!
nice
Nice one Ranjit.
hi ranjit,
do you know why they have stopped kendasampige ? editor has not given any information about that.What happened all in a sudden ?
regards,
Ramesh
Neevu andahaage ilvallaa sirr!!
Chennagi bandide…
ranjita ji.. hegiddiri?… tumba channagi kavite baradiddiri…thanks
ಚೆನ್ನಾಗಿದೆ, ಮಯೂರದಲ್ಲೇ ಓದಿದ್ದೆ. ಕೊನೆಯ ಸಾಲಿನಲ್ಲಿ ಮಯೂರದಲ್ಲಿ ಪ್ರಕಟವಾಗಿದ್ದಾಗ “ಅವಳು ಸಿಕ್ಕದ್ದು.. ತೀರಾ ಇತ್ತೀಚೆಗೆ” ಅಂತ ಇದೆ.
ಇಲ್ಲಿ ಅದು ಸಿಕ್ಕಿದ್ದು ಆಗಿದೆ.
ಯಾವುದು ಸರಿ?
chennagide anna………. howdu…..ittichege elli sikidru???
Tumbaa ishtavaaytu kavithe…
Good one…
khushi kotta kavana:)
ರಂಜಿತ್,
ಎಂದಿನಂತೆ ಸಕತ್ತಾದ ಕವನ. ಕೊನೆಯ ಸಾಲು ಬರುವವರೆಗೆ ಕವಿತೆಯ ಒಳಾರ್ಥ ನಿಗೂಢವೇ. ಕೊನೆಯ ಸಾಲುಗಳನ್ನು ಓದಿದಾಗ ಮುಗುಳ್ನಗೆ ತನಗೆ ತಾನೇ ಮೂಡುತ್ತದೆ. ಮತ್ತೆ ಮೊದಲಿನಿಂದ ಓದುವಂತೆ ಪ್ರೇರೇಪಿಸುತ್ತದೆ. ನಿಮಗೆ ಕೈತುತ್ತು ಉಣ್ಣಿಸುವಾಗ ಅಮ್ಮನಿಗೆ ಚೆಂದುಳ್ಳಿ ಸೊಸೆಯ ಕಲ್ಪನೆ ಬಂದೀತಾದರೂ ಹೇಗೆ? ಇನ್ನು ಬ್ಯಾಚಲರ್ ಬದುಕಲ್ಲಿ ಮುಳುಗಿರುವಾಗ, ರೋಮ್ಯಾಂಟಿಕ್ ಜಗತ್ತಿನಲ್ಲಿ ಇಲ್ಲವಾಗಿರುವಾಗ, ಒಪ್ಪ ಓರಣದ ಒಡತಿಯೊಬ್ಬಳು ನೊಗ ಕಟ್ಟಲು ಬರುತ್ತಾಳೆಂಬ ಯೋಚನೆ ಬರುವುದಾದರೂ ಹೇಗೆ?
ಸೊಗಸಾಗಿದೆ ಕವನ.
ಚೆನ್ನಾಗಿದೆ
ಮನಸು, ದಿಲೀಪ್ ಹೆಗ್ಡೆ, ಶಿವು, ಪ್ರದೀಪ್, ವಿಜಯರಾಜ್ ಕನ್ನಂತ್, ಅನಿಕೇತನ ಸುನಿಲ್, ರೂಪಾ ಸತೀಶ್, ವೈಶಾಲಿ, ರೂಪಾ,
ಕವಿತೆ ಮೆಚ್ಚಿಕೊಂಡಿದ್ದಕ್ಕೆ ನಿಮಗೆಲ್ಲರಿಗೂ ಧನ್ಯವಾದಗಳು,
ಕಲ್ಲರೆ,
ಹ್ಯಾಗೆ ಬರೆದರೂ ಒಂದು ಅಳುಕು ಇದ್ದೇ ಇರುತ್ತದೆ. ನಾನು ಬರೆವ ಕ್ಷಣ ಇದ್ದ ಗುಂಗಿನಲ್ಲಿ ಅರ್ಥವಾದ (ಇಷ್ಟವಾದ ಅಂತಲೂ ಅರ್ಥೈಸಿಕೊಳ್ಳಿ) ಕವಿತೆ, ಓದುಗನಿಗೆ (ಕೊನೆಗೆ ನನಗೂ!) ಓದುವಾಗ ದೊರಕುತ್ತದೋ ಇಲ್ಲವೋ ಎಂಬ ಅಳುಕು ಅದು.
ನನಗ್ಯಾಕೋ ಇಂತದ್ದೆಲ್ಲಾ ಸಾತ್ವಿಕ ರೀತಿಯದ್ದು ಅನ್ನಿಸಿದೆ.
ಚೆನ್ನಾಗಿ ಬಂದಿದೆ ಅಂದಿರಿ, ಥ್ಯಾಂಕ್ಯೂ!
ಚಕೋರ,
ನಿಮಗೆ ಯಾವುದು ಸರಿ ಅನ್ನಿಸಿದೆ, ಹೇಳಿ?
ಅದರಲ್ಲೇ ನನ್ನುತ್ತರ ಅಡಗಿದೆ!
ಶೃತಿ,
ಬರೆದದ್ದು ಕವಿಸಮಯದಲ್ಲಿ, ಕವಿಕಲ್ಪನೆಯಲ್ಲಿ… ನಿಮ್ಮ ಪ್ರಶ್ನೆಗೆ ಉತ್ತರ ಇನ್ನೂ ಒಂದೆರಡು ವರುಷದಲ್ಲಿ ತಿಳಿಯುತ್ತದೆ..:)
ಶರಣು,
ಚೆನಾಗಿದೀನಿ ಸರ್. ಕವಿತೆ ನೀವು ಮೆಚ್ಕೊಂಡಿದ್ದು ನನಗೆ ಹೆಮ್ಮೆ ನೀಡಿದೆ.
******
ಗೌತಮ್ ಹೆಗ್ಡೆ, ಕಾರ್ತಿಕ್ ಉಡುಪ,
ನೀಲಿಹೂವಿನ ತೋಟಕ್ಕೆ ಸ್ವಾಗತ!
ಚಾಮರಾಜ ಸವಡಿ,
ಕವಿತೆ ನಿಮಗೆ ಇಷ್ಟವಾಗಿ ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್.