ಅವ್ವನ ಸೀರೆ…!

Posted: November 28, 2011 in ಕವಿತೆ, ಕವಿತೆ ತರಹ

ಟಣ್ ಟಣ್ ಸಾಸರಿನೊಳಗೆ
ಅಳತೆ ಮಾಡಿ ಹಾಕುವ ಚಾ
ಅಲ್ಲವೋ ಕವಿತೆಯೆಂದರೆ
ಗೂಡಂಗಡಿಯಲಿ ದಾರಿಹೋಕ
ಸುರಕ್ ಸುರಕ್
ಎಂದು ಸವಿವ ಟೀ.

ಬೇಕಾದ್ದನ್ನು ಹೆಕ್ಕಿ
ಬೇಡದ್ದನ್ನು ಬಿಸುಡುವ
ಬಫೆಯಲ್ಲವೋ ಕವಿತೆಯೆಂದರೆ
ಬಟ್ಟಲಿನೊಳಗೊಂದಗುಳೂ
ಉಳಿಯದಂತೆ ತಿಂದು
ತಪ್ತನಾಗಬಲ್ಲಂಥ ಹಸಿವು.

ಚೂರು ಸುರಿದು ಗಾಳಿಗೆ
ಹಾರಿಹೋಗುವ ಮೇಘವಲ್ಲವೋ
ಕವಿತೆಯೆಂದರೆ
ಸರ್ವಸ್ವವನೂ ಸುರಿದು
ಬರಿದಾಗುವ ಮಳೆ.

images

ಮಡಿಕೆಗಳಿಲ್ಲದ ರೇಷಿಮೆ
ಜರತಾರಿ ಸೀರೆಯಲ್ಲವೋ
ಕವಿತೆಯೆಂದರೆ
ಪುಟ್ಟನ ಮೂಗೊರೆಸಲ್ಪಟ್ಟ
ಅವ್ವನ ಸೀರೆ.

****

 

(ಫೋಟೋಕೃಪೆ : www.gulfnews.com)

Comments
  1. Supreeth Ks says:

    ಜಗತ್ ಸತ್ಯವನ್ನೊಂದೇ
    ಸಾಲಲ್ಲಿ ಕೆಡವಿ
    ಹಾಕುವುದಲ್ಲವೋ,
    ಸಾಲು ಸಾಲಲ್ಲು
    ಸಾಲದಷ್ಟು ಕೆನ್ನೆ
    ಮಿದು ಮುತ್ತುಗಳಂತೆ
    ಕವಿತೆ

  2. Anonymous says:

    Hi Ranjith,
    ಬಟ್ಟಲಿನೊಳಗೊಂದಗುಳೂ
    ಉಳಿಯದಂತೆ ತಿಂದು
    ತಪ್ತನಾಗಬಲ್ಲಂಥ ಹಸಿವು.

    killer lines…! too gud ri…

  3. Anonymous says:

    Hi Ranjith,
    ಬಟ್ಟಲಿನೊಳಗೊಂದಗುಳೂ
    ಉಳಿಯದಂತೆ ತಿಂದು
    ತಪ್ತನಾಗಬಲ್ಲಂಥ ಹಸಿವು.

    Killer lines ri… liked it!

  4. Anonymous says:

    unable to comment

  5. Divya says:

    Beautiful lines Ranjith!!

  6. ಮಡಿಕೆಗಳಿಲ್ಲದ ರೇಷಿಮೆ
    ಜರತಾರಿ ಸೀರೆಯಲ್ಲವೋ
    ಕವಿತೆಯೆಂದರೆ
    ಪುಟ್ಟನ ಮೂಗೊರೆಸಲ್ಪಟ್ಟ
    ಅವ್ವನ ಸೀರೆ.

    ವಾಹ್, ಎಂಥಾ ಚೆಂದದ ಸಾಲು!

  7. Prakash.B. Jalahalli says:

    nimma avvan sire kavite tumba chennagide kivtea artavannu nivu visistvagiruv pratitimeglind kottiddiri.sogasagive nimma pratimegalu.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s