ನಮ್ಮ ಬೆಚ್ಚಗಿನ ಸ್ನಾನಕ್ಕೆಂದು
ಒಲೆ ಎದುರು ಹೊಳೆವ ಕಂಗಳಿಂದ
ಅಗರಬತ್ತಿ ಪ್ಯಾಕೆಟ್ಟು ಹಿಡಿದು ಊದುತ್ತಿರುವ ಅವ್ವನ
ಪರವಾನಗಿ ಇನ್ನೂ ಅವನಿಗೆ ಸಿಕ್ಕಿಲ್ಲ,
ಸಿಗಬಹುದು ಅವನಿಗೆ ನೀರು ಬೆಚ್ಚಗಾದ ಮೇಲೆ
ಒಮ್ಮೆ ಕಣ್ಣುಜ್ಜಿಕೊಳ್ಳುತ್ತಾ ಕಿಟಕಿಯಾಚೆ ಇಣುಕಿದರೆ ಆಕೆ
ಅದೇ ಅದೃಷ್ಟವೆಂಬಂತೆ
ಪ್ರಪಾತದಂಚಿನಿಂದ ಎದ್ದು
ಪ್ರಪಂಚದ ಕಪ್ಪು ಕ್ಯಾನ್ವಾಸಿನಲ್ಲಿ
ಕರಗಿರುವ ಚರಾಚರಗಳಿಗೆ ಬೆಳಕ ಕುಂಚದಿಂದ
ಬಣ್ಣ ಬಳಿಯುತ್ತಾ ಬರುವನು ನೇಸರ.

ವಾಹ್.. ಚಂದ ಉಂಟು..ಎಷ್ಟು ನಿಜ ಅಲ್ವಾ.. ಹಿಂಗೇ ಬರೀತಿರಿ
ನನ್ನ ಹಳ್ಳಿಯ ಬಾಲ್ಯವನ್ನು ನೆನಪಿಸಿದ ಕವನ. ಉತ್ತಮ ಭಾವ ನಿರೂಪಣೆ ಮತ್ತು ತಟ್ಟುವ ಲಾಸ್ಯ.
ಮಿತ್ರರೇ, ನನ್ನ ಬ್ಲಾಗಿಗೂ ನಿಮಗೆ ಸ್ವಾಗತ.
http://www.badari-poems.blogspot.com