ಹೂವು ನೀಲಿ, ನಾನು ಮಾಲಿ..!
ಹೆಸ್ರು ರಂಜಿತ್ ಅಡಿಗ. ಬೇರೂರು ಕುಂದಾಪುರ. ಬೆಂಗಳೂರಲ್ಲಿ ತುಂಬಾ ವರ್ಷ ವಾಸವಾಗಿದ್ದೆ. ಬದುಕು, ಕೆಲಸ ನನ್ನನ್ನು ಕುಂದಾಪುರದಿಂದ ಹಿಡಿದು ಸಿಂಗಾಪೂರದವರೆಗೆ ಓಡಿಸಿದೆ.
ಚಿಕ್ಕ ವಯಸ್ಸಿಂದ ಓದುವ, ಬರೆಯುವ ಗೀಳು. ಶಾಲೆಯ ಗೋಡೆಯ ಮೇಲೆ, ತೋಡಿನ ಮೇಲೆ ಬಿಡುವ ಕಾಗದದ ದೋಣಿ, ಕುಡುಮಿ ವಿಧ್ಯಾರ್ಥಿಯ ಬೆನ್ನಿಗಂಟಿದ ಚೀಟಿ ಮೇಲೆ, ಕ್ಯಾಂಟೀನಿನ ಬೆಂಚುಗಳ ಮೇಲೆ, ಗಾಯ ಮಾಡಿಕೊಂಡ ಗೆಳೆಯನ ಕೈಯ ಪ್ಲಾಸ್ಟೆರ್ ಆಫ್ ಪ್ಯಾರಿಸ್, ಟೀಚರತ್ತ ನುಗ್ಗಿದ ಹಾಳೆಯ ಕ್ಷಿಪಣಿ, ಮೊಬೈಲ್ ಎಸ್ಸೆಮ್ಮೆಸ್ಸು, ತರಂಗ, ಸುಧಾ, ಕನ್ನಡಪ್ರಭ, ವಿಜಯ ಕರ್ನಾಟಕ, ವಿಕ್ರಾಂತ ಕರ್ನಾಟಕ, ಮಂಗಳ, ಆರ್ಕುಟ್.. ಹೀಗೆ ಎಲ್ಲಾ ಕಡೆ ಸಾಹಿತ್ಯ ರಾರಾಜಿಸಿದ ನಂತರ, ಈ ಬ್ಲಾಗು ಒಂದು ಬಿಟ್ಟಿದ್ದಕ್ಕೆ ಬಹಳ ಖೇದವಾಗಿತ್ತು. ನವಿಲುಗರಿ ಬ್ರಾಂಡಿನ ಸೋಮನ (ದಯವಿಟ್ಟು ಅವನನ್ನೂ ಕ್ಷಮಿಸಿ ಬಿಡಿ!) ನೆರವಿನಿಂದ “ನೀಲಿಹೂವು” ಎಂಬ ಬ್ಲಾಗು ತೆರೆದು ಆ ಆಸೆಯನ್ನೂ ಪೂರೈಸಿದ್ದೇನೆ.
ಸಿನೆಮಾ, ಅಡುಗೆ, ಪರಿಸರ, ಸಾಹಿತ್ಯ ಅಂದರೆ ಭಾರಿ ಪ್ರೀತಿ. ಜಯಂತ್ ಕಾಯ್ಕಿಣಿ, ಯಂಡಮೂರಿ, ಬೇಂದ್ರೆ ಬರಹಗಳು ಹೆಚ್ಚು ಇಷ್ಟ. ನಾಗತಿಹಳ್ಳಿ ಚಂದ್ರಶೇಖರ್ , ಸುನಂದಾ ಪ್ರಕಾಶ ಕಡಮೆ ಸಣ್ಣಕತೆಗಳೂ ಖುಷಿಕೊಡುತ್ತದೆ. ಅಪರೂಪಕ್ಕೆ ಪತ್ರಿಕೆಗಳಲ್ಲಿ ಬರೆವ ರಮೇಶ್ ಕೆದಿಲಾಯ ರ ಬರವಣಿಗೆಯೂ ಆಪ್ತ ಅನ್ನಿಸುತ್ತದೆ.
ಈ ಬ್ಲಾಗು ನನ್ನ ಒಳಗೆ ಕುದಿವ ಭಾವಗಳಿಗೆ, ಬರಯಲೇ ಬೇಕೆಂಬ ತುಡಿತಕ್ಕೆ ಶಮನ ನೀಡುತ್ತಿದೆ.

Hello
Really impressed by your writings.
Awaiting for your response….mesha.chin@gmail.com
Regards
Ramesha
ರಮೇಶ,
ನಿಮ್ಮ ಮೆಚ್ಚುಗೆಯ ಮಾತುಗಳೇ ನಮಗೆ ಬರೆಯಲು ಹುಮ್ಮಸ್ಸು ನೀಡುವುದು.
ಮೈಲ್ ಮಾಡಿರುವೆ.
ಪ್ರೀತಿಯಿರಲಿ.
Tumba tumba santhosha…nimma baraha nijakoo chenda ranjith.
please keep going…
Preetiyinda,
Sunil.
ಸುನಿಲ್,
ನಿಮ್ಮ ಮೆಚ್ಚುಗೆಯಿಂದ ಬಹಳ ಖುಷಿಯಾಯಿತು.
ಬರೆಯುತ್ತಿರುತ್ತೇನೆ, ನೀವೂ ಬರುತ್ತಿರಿ.
ಪ್ರೀತಿಯಿರಲಿ,
-ರಂಜಿತ್.
nimma one line stories na thumbaa miss maadkotaa iddare bahaLa jana Odugaru… avarellara paravaagi nanna binnavattaLe…
bega Ondu saalina kathegala series barali
ವಿಜಯರಾಜ್ ಜಿ,
ನೀವು ಕೇಳಿದ್ಮೇಲೆ ಇಲ್ಲ ಅನ್ನೋಕ್ಕಾಗುತ್ಯೇ? ಖಂಡಿತಾ ಇನ್ನು ಸ್ವಲ್ಪ ದಿನದಲ್ಲೇ ಹಾಕ್ತೀನಿ. ಬರೆದದ್ದನ್ನು ನನ್ನೊಳಗಿನ ವಿಮರ್ಶಕ “ಹಾಕಯ್ಯ.. ಪರ್ವಾಗಿಲ್ಲ ಅನ್ನೋ ಹಂಗೆ ಬರ್ದಿದ್ದೀಯಾ” ಅಂದ ಕೂಡ್ಲೇ ಹಾಕುವೆ.
ನಿಮ್ಮ ನಲ್ಮೆಯ ಮಾತುಗಳಿಗೆ ಥ್ಯಾಂಕ್ಸ್.
ಹಾಗೇ ಹೂ ತೋಟದಲ್ಲೊಂದು ಸುತ್ತು ಹೊಡೆಯುವಾಗ ಕಣ್ಣಿಗೆ ಬಿದ್ದಿದ್ದು ಈ ನೀಲಿ ಹೂವು. ಎಲ್ಲೆಲ್ಲೂ ಕಾಣ ಸಿಗುವ ಕೆಂಪು, ಹಳದಿ, ಬಿಳಿ ಹೂಗಳಿಗಿಂತ ಇದು ಖಂಡಿತ ಭಿನ್ನ..
ಅನಂತ ಅವರೇ,
ನೀಲಿಹೂವಿನ ಭಿನ್ನತೆ ನಿಮಗಿಷ್ಟ ಆಗಿದ್ದು ಸಂತಸ ತಂದಿತು. ಹೀಗೆಯೆ ಬರುತ್ತಿರಿ ಸಮಯವಾದಾಗ.
ಧನ್ಯವಾದಗಳು.
itteechege ishtondu impress maaduvantaha barahagalu kannige biddiralillaa….ree nim FAN aagbittideeni kanree..!!
ಉಷಾ ಮೇಡಮ್,
ನಿಮ್ಮ ಅನಿಸಿಕೆಗೆ ಧನ್ಯವಾದಗಳು. ನನ್ನದೇನಿಲ್ಲ, ನಿಮ್ಮಂತವರ ಪ್ರೋತ್ಸಾಹವೇ ಬರೆಸುತ್ತಿರುವುದು. ಮುಂದೆ ಇನ್ನೂ ಚೆನ್ನಾಗಿ ಬರೆಯಲು ಪ್ರಯತ್ನಿಸುವೆ. ಬರುತ್ತಿರಿ.
ರಂಜಿತ್ ಕಾಲೇಜ್ನಲ್ಲಿ ನಿಮ್ಮ ಕೆಲ ಕವನಗಳನ್ನ ಓದಿದಾಗ ಇಸ್ಟವಾಗಿತ್ತು. ಆಮೇಲೆ ಎಲ್ಲೋ ಮರೆತೇ ಹೋಗಿದ್ರಿ. ಹಾಗೇ ಬ್ರೌಸ್ ಮಾಡುವಾಗ ನೀಲಿ ಹೂ ಸಿಕ್ಕಿತು, ವ್ಹಾ ನಿಜವಾಗ್ಲೂ amazing. ಅದರಲ್ಲೂ ಕವನಗಳಂತೂ ಸೂಪರ್. ಇಷ್ಟು ದಿನ ನಿಮ್ಮ ಬ್ಲಾಗ್ನ ನೋಡ್ದೆ ತುಂಬಾ ಮಿಸ್ ಮಾಡ್ಕೊಂಡೆ ಅನಿಸ್ತಿದೆ. ಒಂದೇ ಸಮನೆ ಕೊತ್ಕಂಡು ಓದ್ತಿದೀನಿ, ಹೀಗೆ ಬರೀತಿರಿ.
nice write ups, hige sumne kutide neeli hoovu siktu.kushiyaytu