Archive Page 2

14
Sep
09

ಸಿನೆಮಾ ಎಂದರೇನು?

ಈ ಪ್ರಶ್ನೆಗೆ ಒಬ್ಬ ಸಿನೆಮಾರಂಗದವನಿಂದ ಏನೇನೋ ಡೆಫಿನೇಶನ್ ಗಳು ಬರಬಹುದು. ಅವರದೇ ವೃತ್ತಿಶ್ರದ್ಧೆಯಿಂದ, passion ನಿಂದಾಗಿ ಸಿನೆಮಾಕ್ಕೆ ನೀಡುವ ವ್ಯಾಖ್ಯೆ ಬದಲಾಗಬಹುದು. ಟೆಕ್ನಿಕಲ್ ಆಗಿ ಸಿನೆಮಾ ಕ್ಕೆ ಬೇರೆ ಬೇರೆ ರೀತಿಯಲಿ ಭಾಷ್ಯ ನೀಡಬಹುದು ಕೂಡ.
ಆದರೆ ಅದನ್ನು ಮುಟ್ಟಿಸಿಕೊಳ್ಳುವ, ತಟ್ಟಿಸಿಕೊಳ್ಳುವ ಆ ಪ್ರೇಕ್ಷಕಪ್ರಭುವಿನ ಪ್ರಕಾರ ಸಿನೆಮಾ ಅಂದರೇನು?
ವಾರವಿಡೀ ಕಷ್ಟಪಟ್ಟು ಒಂದು ದಿನ ಸಮಯ ಮಾಡಿಕೊಂಡು ಫ್ಯಾಮಿಲಿ ಜತೆಗೆ ಖುಷಿಖುಷಿಯಾಗಿ ಸಮಯ ಕಳೆಯಲು ಇದೂ ಒಂದು ಮಾರ್ಗವಾ? ಅವಿವಾಹಿತನಾದರೆ ತನ್ನ ಗೆಳತಿ ಜತೆ. ಇಲ್ಲವಾದರೆ ತನ್ನ ಬೇಸರಿನ ಸಂಜೆಯನು ಕಳೆಯಲು ಇದೊಂದು ಟೈಮ್ ಪಾಸ್ ವಿಷಯವಾ? ಹೊಸದೊಂದು ಅನುಭವ ಗಿಟ್ಟಿಸುವ ಸಲುವಾಗಿ ಇಷ್ಟಪಟ್ಟು ಹೋಗುವುದಾ? ಅಥವ ತನ್ನ ಕ್ರಿಯೇಟಿವ್ ಅರ್ಜ್ ಗಾಗಿಯಷ್ಟೇ ಸಿನೆಮಾ ನೋಡುತ್ತಾನಾ?
ಹೀಗೇ ನೋಡುಗನ ಉದ್ದೇಶಕ್ಕನುಗುಣವಾಗಿಯೋ, ಮಾಡುವ ನಿರ್ದೇಶಕನ ಗ್ರಹಿಕೆಗನುಗುಣವಾಗಿಯೋ ಸಿನೆಮಾ ಬದಲಾಗುತ್ತಿರುತ್ತದೆ. ಒಬ್ಬ ನಿರ್ದೇಶಕ ಸಾಮಾಜಿಕ ಬದಲಾವಣೆಯಷ್ಟೇ ತನ್ನ ಸಿನೆಮಾದ ಉದ್ದಿಶ್ಯ ಅಂದರೆ ಇನ್ನೊಬ್ಬ ಪ್ರೇಕ್ಷಕನಿಗೆ ಮನರಂಜನೆ ನೀಡುವುದಷ್ಟೇ ತನ್ನ ಕೆಲಸ ಅಂದುಬಿಡುತ್ತಾನೆ. ಅಲ್ಲಿಗೇ ಸಿನೆಮಾ ಅನ್ನುವುದು ಕ್ಲಾಸ್ ಮತ್ತು ಮಾಸ್ ಎಂದು ಎರಡು ವಿಧವಾಗಿಬಿಡುತ್ತದೆ. ಕ್ಲಾಸ್ ಸಿನೆಮಾ ಅಂದರೆ ಜನ ನೋಡಲು ಬರುವುದಿಲ್ಲವೋ ಎನ್ನುತ್ತ ಭಯಪಡುವ ಕೆಲವು ನಿರ್ದೇಶಕರು, “ಬ್ರಿಡ್ಜ್ ಸಿನೆಮಾ” ಅನ್ನುತ್ತಾ ಮತ್ತೊಂದು ಪಂಗಡ ಹುಟ್ಟುಹಾಕಿದರು.
ಪ್ರೇಕ್ಷಕ ಮಾತ್ರ ತನಗಿಷ್ಟವಾದ ಸಿನೆಮಾ ನೋಡುತ್ತಾ ಬಂದಿದ್ದಾನೆ. ನಿಜವಾದ ಸೈಕಾಲಜಿ ಆಫ್ ಆಡಿಯೆನ್ಸ್ ನ್ನು, ಪ್ರೇಕ್ಷಕನ ನಾಡಿಮಿಡಿತವನ್ನು ಯಾವ ನಿರ್ದೇಶಕ ಲೇಖಕನಿಗೂ ಸರಿಯಾಗಿ ಹಿಡಿಯಲಾಗಿಲ್ಲ. ಪ್ರೇಕ್ಷನೊಬ್ಬನಿಗೆ ಸಿನೆಮಾ ನೋಡಲು ಸಾಕಷ್ಟು ಕಾರಣಗಳು ಒಂದಾಗಿ ನಂತರವಷ್ಟೇ ನಿರ್ಧರಿಸುತಾನೆಂದೇನೂ ಇಲ್ಲ. ಗಂಡ ತನ್ನನ್ನು ಸಿನೆಮಾಕ್ಕೆ ಕರೆದುಕೊಂಡು ಹೋಗಲೇ ಇಲ್ಲ ಅನ್ನುವ ಗೃಹಿಣಿ, ಇಂಥಾ ಸಿನೆಮಾಕ್ಕೆ ಅಂತ ಹೇಳೋಲ್ಲ, ಆಕೆಗೆ ಅಲ್ಲಿ ಗಂಡನ ಜತೆ ಸಿನೆಮಾಕ್ಕೆ ಹೋಗುವುದಷ್ಟೇ ಮುಖ್ಯ. ನಿರ್ದೇಶಕ ಎಷ್ಟು ವಿಭಿನ್ನವಾಗಿ ಸಿನೆಮಾ ಮಾಡಿದ್ದಾನೆ , ಎಷ್ಟು ಗಿಮ್ಮಿಕ್ ಮಾಡಿದಾನೆ ಅಂತೆಲ್ಲಾ ಅಲ್ಲ.
ನನ್ನ ಸಿನೆಮಾ ಬಗೆಗಿನ ಗ್ರಹಿಕೆ ಅಥವ ರುಚಿ ಬಗ್ಗೆ ವಯಸ್ಸಿಗೆ, ಅನುಭವಕ್ಕನುಗುಣವಾಗಿ ಬೇರೆಯಾಗುತ್ತಾ ಬಂದಿದೆ. ಚಿಕ್ಕ ವಯಸ್ಸಿನಲ್ಲಿ ಪ್ರಭಾಕರ್, ವಿಷ್ಣುವರ್ಧನ್ ಆಕ್ಷನ್ ಸಿನೆಮಾಗಳು ಇಷ್ಟವಾಗುತ್ತಿದ್ದವು. ಒಬ್ಬ ಮನುಷ್ಯ ಹತ್ತಿಪ್ಪತ್ತು ಮಂದಿಯನ್ನು ಹೊಡೆದುರುಳಿಸುವುದು ಪ್ರಿಯವಾಗುತ್ತಿತ್ತು. ಆಗ ನನಗೆ ಸಿನೆಮಾ ಅಂದರೇನು ಅಂತ ಯಾರಾದರೂ ಪ್ರಶ್ನೆ ಮಾಡಿದ್ದರೆ ಕಷ್ಟವನ್ನೆಲ್ಲಾ ಅಟ್ಟಿ, ವಿಜಯಿಯಾಗುವ ಹೀರೋ ನ ಸಿನೆಮಾ ಅಷ್ಟೇ ನನ್ನ ಪಾಲಿನ ಐಡಿಯಲ್ ಸಿನೆಮಾ ಆಗಿತ್ತು.  ಹದಿಹರೆಯಕ್ಕೆ ಬಂದೊಡನೆ ರೋಮ್ಯಾಂಟಿಕ್ ಸಿನೆಮಾಗಳಾದ ಡಿಡಿಎಲ್ ಜೆ, ಹಮ್ ಆಪ್ಕೆ ಹೈ ಕೌನ್ ನಂತವು ಇಷ್ಟವಾಗುತ್ತಿದ್ದವು. ಆಗ ನನ್ನ ಹೀರೋ ಹುಡುಗಿಯ ಮನಸ್ಸನ್ನು ಹೇಗೆ ಕದಿಯುತ್ತಾನೆಂಬುದೇ ಆಸಕ್ತಿಕರ ವಿಷಯ. ಸ್ವಲ್ಪ ಸಮಯ ಥ್ರಿಲ್ಲರ್ ಗಳು ಇಷ್ಟವಾಗತೊಡಗಿದವು ಥ್ರಿಲ್ಲರ್ ನೊಳಗಿನ ತಂತ್ರ, ಒಂದೊಂದೇ ವಿಷಯವನ್ನು ಪ್ರೇಕ್ಷಕನಿಗೆ ತಿಳಿಸುತ್ತಾ ಹೋಗಿ ಕೊನೆಯ ಕ್ಲೈಮಾಕ್ಸ್ ನಲ್ಲಿ ಹೇಗೆ ಮುಖ್ಯಾಂಶ ರಿವೀಲ್ ಆಗುತ್ತದೆ ಎಂಬುದು ನನ್ನ ಸಿನೆಮಾದೆಡೆಗಿನ ಕಾತರವಾಗಿತ್ತು. ಕಾಲೇಜು ಮುಗಿದು ಕೆಲಸಕ್ಕಲೆಯುವಾಗ ಸಮಾಜದ ಮುಖಗಳು ಪರಿಚಯವಾಗತೊಡಗಿತು. ಶಂಕರ್ ರ ಜಂಟಲ್ ಮ್ಯಾನ್, ಅನ್ನಿಯನ್ ಮತ್ತು ರಾಜ್ ಕುಮಾರ್ ಚಿತ್ರಗಳು ಪ್ರಿಯವಾಗತೊಡಗಿದವು. ಅ ವೆಡ್ನೆಸ್ ಡೇ , ಆಮೀರ್ ನಂತವು ಆಕರ್ಷಕವಾಗತೊಡಗಿತು. ನನ್ನ ಐಡಿಯಲ್ ಹೀರೋನ ಕೆಲಸ ಆಗ ಸಮಾಜವನ್ನು ಒಬ್ಬಂಟಿಯಾಗಿ ಗುಡಿಸುವುದು!
ಈಗೆಲ್ಲಾ ಸಿನೆಮಾ ನೋಡುವಾಗ ಅದರ ಮೇಕಿಂಗ್ ಹೇಗಾಗಿರಬಹುದು, ಯಾವ ಯಾವ ಕೋನದಲ್ಲಿ ಕ್ಯಾಮರಾ ಇಟ್ಟಿದ್ದಾರೆ, ಕಥೆ ಯಾವ ಅಂಶವನ್ನು ಮೊದಲು ಅರುಹಿ ಯಾವಂಶವನ್ನು ಕ್ಲೈಮಾಕ್ಸ್ ನಲ್ಲಿ ತಿಳಿಸಿದ್ದಾರೆ, ಪ್ರೇಕ್ಷಕನ ಮನಸ್ಸಿಗೆ ಆ ಪಾತ್ರವನ್ನು ಹೇಗೆ ರಿಜಿಸ್ಟರ್ ಮಾಡಿದ್ದಾರೆ, ಅನವಶ್ಯಕ ಸನ್ನಿವೇಶಗಳ್ಯಾವುವು, ಹಿನ್ನೆಲೆ ಸಂಗೀತ ಹೇಗೆ ಪರಿಣಾಮಕಾರಿಯಾಗಿದೆ, ಸ್ಕ್ರಿಪ್ಟ್ ನಲ್ಲಿ ಇನ್ನೂ ಹೇಗೆ ಉತ್ತಮವಾಗಿ ಮಾಡಬಹುದಿತ್ತು ಅಂಶಗಳೆಲ್ಲ ಮನಸ್ಸಿಗೆ ಬರುತ್ತದೆ. ನಿರ್ದೇಶಕನ, ಲೇಖಕನ ಸಂದರ್ಶನಗಳನ್ನೆಲ್ಲಾ ಟೀವಿಯಲ್ಲಿ ನೋಡುವುದರಿಂದ ಸಿನೆಮಾದೆಡೆಗೆ ಆಸಕ್ತಿ ಹೆಚ್ಚಾಗಿದೆ. “ಮಿಸ್ಕಿನ್” ಅನ್ನುವ ತಮಿಳು ನಿರ್ದೇಶಕ “ನನ್ನ ಪ್ರಕಾರ ಖುಷಿಯಿಂದ ಸಾಯುವುದೆಂದರೆ ಆ ಸಾವು ನಾನು ನಿರ್ದೇಶಕನಾಗಿ ಸಿನೆಮಾವೊಂದರ ಕೊನೇ ಶಾಟ್ ತೆಗೆಯುವಾಗ ಬಂದರಷ್ಟೇ” ಅಂತನ್ನುವಾಗ ಆತನ ಸಿನೆಮಾದೆಡೆಗಿನ ತುಡಿತ ನೋಡಿ ಅಸೂಯೆಮೂಡುತ್ತದೆ. ಶಾಶ್ವಂಕ್ ರಿಡಂಪ್ಶನ್, ಸಿಟಿಜನ್ ಕೇನ್ , ಆನಂದ್(ಹಿಂದಿ) ನಂತಹಾ ಸಿನೆಮಾ ನೋಡುವಾಗ ಅದರ ಸ್ಕ್ರಿಪ್ಟ್ ಸಮಯದಲ್ಲಿ ಬರೆಯುವಾತನ ಪುಳಕ ಊಹಿಸಿದರೆ ಹೊಟ್ಟೆಕಿಚ್ಚಾಗುತ್ತದೆ. ನಮ್ಮ ಪಕ್ಕದಲ್ಲಿಯೇ ಆರ್ಯ, ಅಕಾಶಮಂತ, ರೈನ್ ಬೋ ಕಾಲನಿ, ಸುಬ್ರಮಣ್ಯಪುರಂ, ಅಂಜಾದೇ ನಂತಹ ಸಿನೆಮಾ ಮಾಡುವಾಗ ನಮ್ಮಲ್ಲೂ ಅಂಥಾದ್ದು ಮಾಡುವುದು ಕಷ್ಟಕರವಲ್ಲ ಅನ್ನುವ ಅನಿಸಿಕೆ ಹುಟ್ಟುತ್ತದೆ.
ಹೀಗೆ ಈ ಸಿನೆಮಾ ಮೇಕಿಂಗ್ ನೆಡೆಗಿನ ಆಸಕ್ತಿ, ನನ್ನ “ನೋಡುವ, ಅನುಭವಿಸುವ, ನನ್ನೊಳಗಿನ ಕಲ್ಪನಾಲೋಕವನ್ನು ವಿಸ್ತರಿಸುವ ಪ್ರಕ್ರಿಯೆಗೆ” ತೊಡಕಾಗಿದೆಯೇನೊ. ಟೈಗರ್ ಪ್ರಭಾಕರ್ ಪೋಲೀಸ್ ಆಗಿ ನಾಲ್ಕು ಜನರನ್ನು ಚಚ್ಚುವಾಗ ಸಿಗುತ್ತಿದ್ದ ಆನಂದಗಳು, ಆಗಿನ ಸೆಟ್ ಗಳು, ಆಕ್ಷನ್ ಕಲಾವಿದರ ಬದುಕು, ಶಾಟ್ ತೆಗೆದಾದ ಮೇಲೆ ಏನಾಗಿರಬಹುದು ಎಂಬ ಊಹೆ, ಡಿಶ್ಯುಂ ಅನ್ನುವುದು ಹಿನ್ನೆಲೆಯಷ್ಟೇ ಅನ್ನುವ ಗ್ರಹಿಕೆ ಇದೆಲ್ಲಾ ಆಲೋಚನೆ, ಕಲ್ಪನೆ ಮನಸ್ಸಲ್ಲಿ ಹುಟ್ಟಿದ ಮೇಲೆ ಆ ದೃಶ್ಯದ ರಸವತ್ತತೆಯನ್ನು ಕಿತ್ತುಕೊಂಡಿದೆ ಅನ್ನಿಸುತ್ತದೆ. ಕ್ಯಾಮರಾ ಹಿಂದಿನ ಪರಿಕಲ್ಪನೆಗಳು ಸಿನೆಮಾ ಎಂದರೇನು ಅನ್ನುವ ನನ್ನ ಡೆಫಿನೇಶನ್ ಗಳನ್ನು ಅಂದಗೆಡಿಸಿವೆ.  ನನ್ನ ಸಿನೆಮಾದೆಡೆಗಿನ ವ್ಯಾಖ್ಯಾನಗಳು ತಾಂತ್ರಿಕತೆಗೆ, ಅದು ದೃಶ್ಯ ಮೂಡಿಸುವ “ಅನುಭವಗಳ ಹುಟ್ಟಿಸುವಿಕೆ”ಗೆ ಹೊಂದಿಕೊಂಡಿವೆಯೇ ಹೊರತು ಪ್ರೇಕ್ಷಕನ ಸ್ವಯಂ ಅನುಭೂತಿ, ಅವನ ಮನದಾಳದ ಅಚ್ಚರಿಗಳಿಗಲ್ಲ. ಅದು ಹೀಗೆ ವಿವರಿಸಬಲ್ಲೆ. ನಿರ್ದೇಶಕನೊಬ್ಬ ಒಂದು ಸಿನೆಮಾ ತೆರೆ ಮೇಲೆ ಮೂಡುವ ಮೊದಲು ಸ್ಕ್ರಿಪ್ಟಿನ ಇಂಚಿಂಚಿನ ಮೇಲೆ ಅದೆಷ್ಟು ವರ್ಕ್ ಮಾಡುತ್ತಿರುತ್ತಾನೆಂದರೆ, ಕಾಲಕ್ರಮೇಣ ಸ್ಕ್ರಿಪ್ಟಿನ ಬದಲಾವಣೆಗಳಿಗೆ, ಅದರ ಬೆಳವಣಿಗೆಯ ಮೌಲ್ಯ ತಿಳಿಯಬೇಕೆಂದರೆ ಆತ ಫ್ರೆಶ್ ಒಪೀನಿಯನ್ ಗಳ ಮೊರೆ ಹೋಗುತ್ತಾನೆ. ಮೊದಲ ಬಾರಿ ಕಥೆ ಕೇಳುವಾತನ ಪ್ರತಿಕ್ರಿಯೆಯ ಮೇಲೆ ತನ್ನ ಸ್ಕ್ರಿಪ್ಟಿನ ಶಕ್ತಿ ಅರಿಯುತ್ತಾನೆ. ಸಿಹಿ ತಿಂದಾದ ನಾಲಿಗೆ ಹೇಗೆ ಮತ್ತೆ ಕೂಡಲೇ ಸಿಹಿ ಗ್ರಹಿಸಲು ಸೋಲುತ್ತದೋ ಅಂತಹ ಮನಸ್ಥಿತಿ ಉಂಟಾಗಿರುತ್ತದೆ ಅವನಿಗೆ. ಆ ನಿರ್ದೇಶಕ ತನ್ನ ಸಿನೆಮಾ ತಯಾರಿಕೆ ಮೇಲೆಯೇ ತನ್ನ ಪ್ಯಾಶನ್ ಬೆಳೆಸಿಕೊಂಡಿರುವುದರಿಂದ, ಕಾಲಕ್ರಮೇಣ ದೃಶ್ಯಗಳಿಗೆ ಪ್ರೇಕ್ಷಕನ ಮೊದಲ ಪ್ರತಿಕ್ರಿಯೆ ಹೇಗಿರಬಹುದು ಅನ್ನುವುದನು ಗ್ರಹಿಸಲು ಆಗದೇ ಜಡ್ಡಾಗಿರುತ್ತದೆ.
ಲೋಕೋ ಭಿನ್ನ ರುಚಿಃ ಎಂಬಂತೆ ಅನುಭವ ಪಡೆದುಕೊಳ್ಳುವಾತನ (ಪ್ರೇಕ್ಷಕ) ಮತ್ತು ಅನುಭವ ಹುಟ್ಟಿಸುವಿಕೆಗೆ ಕಾರಣೀಭೂತನಾಗುವ (ನಿರ್ದೇಶಕ, ಲೇಖಕ) ಮನೋರುಚಿಯೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾದ್ದರಿಂದ ಸಿನೆಮಾಕ್ಕೆ ತಾಂತ್ರಿಕವಾಗಿ ವ್ಯಾಖ್ಯೆ ನೀಡಬಹುದಾದರೂ ಬೇರೆ ರೀತಿಯಲ್ಲಲ್ಲ.
ಈ ಪ್ರಶ್ನೆಗೆ ಒಬ್ಬ ಸಿನೆಮಾರಂಗದವನಿಂದ ಏನೇನೋ ಡೆಫಿನೇಶನ್ ಗಳು ಬರಬಹುದು. ಅವರದೇ ವೃತ್ತಿಶ್ರದ್ಧೆಯಿಂದ, passion ನಿಂದಾಗಿ ಸಿನೆಮಾಕ್ಕೆ ನೀಡುವ ವ್ಯಾಖ್ಯೆ ಬದಲಾಗಬಹುದು. ಟೆಕ್ನಿಕಲ್ ಆಗಿ ಸಿನೆಮಾ ಕ್ಕೆ ಬೇರೆ ಬೇರೆ ರೀತಿಯಲಿ ಭಾಷ್ಯ ನೀಡಬಹುದು ಕೂಡ.
ಆದರೆ ಅದನ್ನು ಮುಟ್ಟಿಸಿಕೊಳ್ಳುವ, ತಟ್ಟಿಸಿಕೊಳ್ಳುವ ಆ ಪ್ರೇಕ್ಷಕಪ್ರಭುವಿನ ಪ್ರಕಾರ ಸಿನೆಮಾ ಅಂದರೇನು?
ವಾರವಿಡೀ ಕಷ್ಟಪಟ್ಟು ಒಂದು ದಿನ ಸಮಯ ಮಾಡಿಕೊಂಡು ಫ್ಯಾಮಿಲಿ ಜತೆಗೆ ಖುಷಿಖುಷಿಯಾಗಿ ಸಮಯ ಕಳೆಯಲು ಇದೂ ಒಂದು ಮಾರ್ಗವಾ? ಅವಿವಾಹಿತನಾದರೆ ತನ್ನ ಗೆಳತಿ ಜತೆ. ಇಲ್ಲವಾದರೆ ತನ್ನ ಬೇಸರಿನ ಸಂಜೆಯನು ಕಳೆಯಲು ಇದೊಂದು ಟೈಮ್ ಪಾಸ್ ವಿಷಯವಾ? ಹೊಸದೊಂದು ಅನುಭವ ಗಿಟ್ಟಿಸುವ ಸಲುವಾಗಿ ಇಷ್ಟಪಟ್ಟು ಹೋಗುವುದಾ? ಅಥವ ತನ್ನ ಕ್ರಿಯೇಟಿವ್ ಅರ್ಜ್ ಗಾಗಿಯಷ್ಟೇ ಸಿನೆಮಾ ನೋಡುತ್ತಾನಾ?
ShowImage.aspx
ಹೀಗೇ ನೋಡುಗನ ಉದ್ದೇಶಕ್ಕನುಗುಣವಾಗಿಯೋ, ಮಾಡುವ ನಿರ್ದೇಶಕನ ಗ್ರಹಿಕೆಗನುಗುಣವಾಗಿಯೋ ಸಿನೆಮಾ ಬದಲಾಗುತ್ತಿರುತ್ತದೆ. ಒಬ್ಬ ನಿರ್ದೇಶಕ ಸಾಮಾಜಿಕ ಬದಲಾವಣೆಯಷ್ಟೇ ತನ್ನ ಸಿನೆಮಾದ ಉದ್ದಿಶ್ಯ ಅಂದರೆ ಇನ್ನೊಬ್ಬ ಪ್ರೇಕ್ಷಕನಿಗೆ ಮನರಂಜನೆ ನೀಡುವುದಷ್ಟೇ ತನ್ನ ಕೆಲಸ ಅಂದುಬಿಡುತ್ತಾನೆ. ಅಲ್ಲಿಗೇ ಸಿನೆಮಾ ಅನ್ನುವುದು ಕ್ಲಾಸ್ ಮತ್ತು ಮಾಸ್ ಎಂದು ಎರಡು ವಿಧವಾಗಿಬಿಡುತ್ತದೆ. ಕ್ಲಾಸ್ ಸಿನೆಮಾ ಅಂದರೆ ಜನ ನೋಡಲು ಬರುವುದಿಲ್ಲವೋ ಎನ್ನುತ್ತ ಭಯಪಡುವ ಕೆಲವು ನಿರ್ದೇಶಕರು, “ಬ್ರಿಡ್ಜ್ ಸಿನೆಮಾ” ಅನ್ನುತ್ತಾ ಮತ್ತೊಂದು ಪಂಗಡ ಹುಟ್ಟುಹಾಕಿದರು.
ಪ್ರೇಕ್ಷಕ ಮಾತ್ರ ತನಗಿಷ್ಟವಾದ ಸಿನೆಮಾ ನೋಡುತ್ತಾ ಬಂದಿದ್ದಾನೆ. ನಿಜವಾದ ಸೈಕಾಲಜಿ ಆಫ್ ಆಡಿಯೆನ್ಸ್ ನ್ನು, ಪ್ರೇಕ್ಷಕನ ನಾಡಿಮಿಡಿತವನ್ನು ಯಾವ ನಿರ್ದೇಶಕ ಲೇಖಕನಿಗೂ ಸರಿಯಾಗಿ ಹಿಡಿಯಲಾಗಿಲ್ಲ. ಪ್ರೇಕ್ಷನೊಬ್ಬನಿಗೆ ಸಿನೆಮಾ ನೋಡಲು ಸಾಕಷ್ಟು ಕಾರಣಗಳು ಒಂದಾಗಿ ನಂತರವಷ್ಟೇ ನಿರ್ಧರಿಸುತಾನೆಂದೇನೂ ಇಲ್ಲ. ಗಂಡ ತನ್ನನ್ನು ಸಿನೆಮಾಕ್ಕೆ ಕರೆದುಕೊಂಡು ಹೋಗಲೇ ಇಲ್ಲ ಅನ್ನುವ ಗೃಹಿಣಿ, ಇಂಥಾ ಸಿನೆಮಾಕ್ಕೆ ಅಂತ ಹೇಳೋಲ್ಲ, ಆಕೆಗೆ ಅಲ್ಲಿ ಗಂಡನ ಜತೆ ಸಿನೆಮಾಕ್ಕೆ ಹೋಗುವುದಷ್ಟೇ ಮುಖ್ಯ. ನಿರ್ದೇಶಕ ಎಷ್ಟು ವಿಭಿನ್ನವಾಗಿ ಸಿನೆಮಾ ಮಾಡಿದ್ದಾನೆ , ಎಷ್ಟು ಗಿಮ್ಮಿಕ್ ಮಾಡಿದಾನೆ ಅಂತೆಲ್ಲಾ ಅಲ್ಲ.
ನನ್ನ ಸಿನೆಮಾ ಬಗೆಗಿನ ಗ್ರಹಿಕೆ ಅಥವ ರುಚಿ ಬಗ್ಗೆ ವಯಸ್ಸಿಗೆ, ಅನುಭವಕ್ಕನುಗುಣವಾಗಿ ಬೇರೆಯಾಗುತ್ತಾ ಬಂದಿದೆ. ಚಿಕ್ಕ ವಯಸ್ಸಿನಲ್ಲಿ ಪ್ರಭಾಕರ್, ವಿಷ್ಣುವರ್ಧನ್ ಆಕ್ಷನ್ ಸಿನೆಮಾಗಳು ಇಷ್ಟವಾಗುತ್ತಿದ್ದವು. ಒಬ್ಬ ಮನುಷ್ಯ ಹತ್ತಿಪ್ಪತ್ತು ಮಂದಿಯನ್ನು ಹೊಡೆದುರುಳಿಸುವುದು ಪ್ರಿಯವಾಗುತ್ತಿತ್ತು. ಆಗ ನನಗೆ ಸಿನೆಮಾ ಅಂದರೇನು ಅಂತ ಯಾರಾದರೂ ಪ್ರಶ್ನೆ ಮಾಡಿದ್ದರೆ ಕಷ್ಟವನ್ನೆಲ್ಲಾ ಅಟ್ಟಿ, ವಿಜಯಿಯಾಗುವ ಹೀರೋ ನ ಸಿನೆಮಾ ಅಷ್ಟೇ ನನ್ನ ಪಾಲಿನ ಐಡಿಯಲ್ ಸಿನೆಮಾ ಆಗಿತ್ತು.  ಹದಿಹರೆಯಕ್ಕೆ ಬಂದೊಡನೆ ರೋಮ್ಯಾಂಟಿಕ್ ಸಿನೆಮಾಗಳಾದ ಡಿಡಿಎಲ್ ಜೆ, ಹಮ್ ಆಪ್ಕೆ ಹೈ ಕೌನ್ ನಂತವು ಇಷ್ಟವಾಗುತ್ತಿದ್ದವು. ಆಗ ನನ್ನ ಹೀರೋ ಹುಡುಗಿಯ ಮನಸ್ಸನ್ನು ಹೇಗೆ ಕದಿಯುತ್ತಾನೆಂಬುದೇ ಆಸಕ್ತಿಕರ ವಿಷಯ. ಸ್ವಲ್ಪ ಸಮಯ ಥ್ರಿಲ್ಲರ್ ಗಳು ಇಷ್ಟವಾಗತೊಡಗಿದವು ಥ್ರಿಲ್ಲರ್ ನೊಳಗಿನ ತಂತ್ರ, ಒಂದೊಂದೇ ವಿಷಯವನ್ನು ಪ್ರೇಕ್ಷಕನಿಗೆ ತಿಳಿಸುತ್ತಾ ಹೋಗಿ ಕೊನೆಯ ಕ್ಲೈಮಾಕ್ಸ್ ನಲ್ಲಿ ಹೇಗೆ ಮುಖ್ಯಾಂಶ ರಿವೀಲ್ ಆಗುತ್ತದೆ ಎಂಬುದು ನನ್ನ ಸಿನೆಮಾದೆಡೆಗಿನ ಕಾತರವಾಗಿತ್ತು. ಕಾಲೇಜು ಮುಗಿದು ಕೆಲಸಕ್ಕಲೆಯುವಾಗ ಸಮಾಜದ ಮುಖಗಳು ಪರಿಚಯವಾಗತೊಡಗಿತು. ಶಂಕರ್ ರ ಜಂಟಲ್ ಮ್ಯಾನ್, ಅನ್ನಿಯನ್ ಮತ್ತು ರಾಜ್ ಕುಮಾರ್ ಚಿತ್ರಗಳು ಪ್ರಿಯವಾಗತೊಡಗಿದವು. ಅ ವೆಡ್ನೆಸ್ ಡೇ , ಆಮೀರ್ ನಂತವು ಆಕರ್ಷಕವಾಗತೊಡಗಿತು. ನನ್ನ ಐಡಿಯಲ್ ಹೀರೋನ ಕೆಲಸ ಆಗ ಸಮಾಜವನ್ನು ಒಬ್ಬಂಟಿಯಾಗಿ ಗುಡಿಸುವುದು!
ಈಗೆಲ್ಲಾ ಸಿನೆಮಾ ನೋಡುವಾಗ ಅದರ ಮೇಕಿಂಗ್ ಹೇಗಾಗಿರಬಹುದು, ಯಾವ ಯಾವ ಕೋನದಲ್ಲಿ ಕ್ಯಾಮರಾ ಇಟ್ಟಿದ್ದಾರೆ, ಕಥೆ ಯಾವ ಅಂಶವನ್ನು ಮೊದಲು ಅರುಹಿ ಯಾವಂಶವನ್ನು ಕ್ಲೈಮಾಕ್ಸ್ ನಲ್ಲಿ ತಿಳಿಸಿದ್ದಾರೆ, ಪ್ರೇಕ್ಷಕನ ಮನಸ್ಸಿಗೆ ಆ ಪಾತ್ರವನ್ನು ಹೇಗೆ ರಿಜಿಸ್ಟರ್ ಮಾಡಿದ್ದಾರೆ, ಅನವಶ್ಯಕ ಸನ್ನಿವೇಶಗಳ್ಯಾವುವು, ಹಿನ್ನೆಲೆ ಸಂಗೀತ ಹೇಗೆ ಪರಿಣಾಮಕಾರಿಯಾಗಿದೆ, ಸ್ಕ್ರಿಪ್ಟ್ ನಲ್ಲಿ ಇನ್ನೂ ಹೇಗೆ ಉತ್ತಮವಾಗಿ ಮಾಡಬಹುದಿತ್ತು ಅಂಶಗಳೆಲ್ಲ ಮನಸ್ಸಿಗೆ ಬರುತ್ತದೆ. ನಿರ್ದೇಶಕನ, ಲೇಖಕನ ಸಂದರ್ಶನಗಳನ್ನೆಲ್ಲಾ ಟೀವಿಯಲ್ಲಿ ನೋಡುವುದರಿಂದ ಸಿನೆಮಾದೆಡೆಗೆ ಆಸಕ್ತಿ ಹೆಚ್ಚಾಗಿದೆ. “ಮಿಸ್ಕಿನ್” ಅನ್ನುವ ತಮಿಳು ನಿರ್ದೇಶಕ “ನನ್ನ ಪ್ರಕಾರ ಖುಷಿಯಿಂದ ಸಾಯುವುದೆಂದರೆ ಆ ಸಾವು ನಾನು ನಿರ್ದೇಶಕನಾಗಿ ಸಿನೆಮಾವೊಂದರ ಕೊನೇ ಶಾಟ್ ತೆಗೆಯುವಾಗ ಬಂದರಷ್ಟೇ” ಅಂತನ್ನುವಾಗ ಆತನ ಸಿನೆಮಾದೆಡೆಗಿನ ತುಡಿತ ನೋಡಿ ಅಸೂಯೆಮೂಡುತ್ತದೆ. ಶಾಶ್ವಂಕ್ ರಿಡಂಪ್ಶನ್, ಸಿಟಿಜನ್ ಕೇನ್ , ಆನಂದ್(ಹಿಂದಿ) ನಂತಹಾ ಸಿನೆಮಾ ನೋಡುವಾಗ ಅದರ ಸ್ಕ್ರಿಪ್ಟ್ ಸಮಯದಲ್ಲಿ ಬರೆಯುವಾತನ ಪುಳಕ ಊಹಿಸಿದರೆ ಹೊಟ್ಟೆಕಿಚ್ಚಾಗುತ್ತದೆ. ನಮ್ಮ ಪಕ್ಕದಲ್ಲಿಯೇ ಆರ್ಯ, ಆನಂದ್, ಅಕಾಶಮಂತ, ರೈನ್ ಬೋ ಕಾಲನಿ, ಸುಬ್ರಮಣ್ಯಪುರಂ, ಅಂಜಾದೇ ನಂತಹ ಸಿನೆಮಾ ಮಾಡುವಾಗ ನಮ್ಮಲ್ಲೂ ಅಂಥಾದ್ದು ಮಾಡುವುದು ಕಷ್ಟಕರವಲ್ಲ ಅನ್ನುವ ಅನಿಸಿಕೆ ಹುಟ್ಟುತ್ತದೆ.
polish-cinema
ಹೀಗೆ ಈ ಸಿನೆಮಾ ಮೇಕಿಂಗ್ ನೆಡೆಗಿನ ಆಸಕ್ತಿ, ನನ್ನ “ನೋಡುವ, ಅನುಭವಿಸುವ, ನನ್ನೊಳಗಿನ ಕಲ್ಪನಾಲೋಕವನ್ನು ವಿಸ್ತರಿಸುವ ಪ್ರಕ್ರಿಯೆಗೆ” ತೊಡಕಾಗಿದೆಯೇನೊ. ಟೈಗರ್ ಪ್ರಭಾಕರ್ ಪೋಲೀಸ್ ಆಗಿ ನಾಲ್ಕು ಜನರನ್ನು ಚಚ್ಚುವಾಗ ಸಿಗುತ್ತಿದ್ದ ಆನಂದಗಳು, ಆಗಿನ ಸೆಟ್ ಗಳು, ಆಕ್ಷನ್ ಕಲಾವಿದರ ಬದುಕು, ಶಾಟ್ ತೆಗೆದಾದ ಮೇಲೆ ಏನಾಗಿರಬಹುದು ಎಂಬ ಊಹೆ, ಡಿಶ್ಯುಂ ಅನ್ನುವುದು ಹಿನ್ನೆಲೆಯಷ್ಟೇ ಅನ್ನುವ ಗ್ರಹಿಕೆ ಇದೆಲ್ಲಾ ಆಲೋಚನೆ, ಕಲ್ಪನೆ ಮನಸ್ಸಲ್ಲಿ ಹುಟ್ಟಿದ ಮೇಲೆ ಆ ದೃಶ್ಯದ ರಸವತ್ತತೆಯನ್ನು ಕಿತ್ತುಕೊಂಡಿದೆ ಅನ್ನಿಸುತ್ತದೆ. ಕ್ಯಾಮರಾ ಹಿಂದಿನ ಪರಿಕಲ್ಪನೆಗಳು ಸಿನೆಮಾ ಎಂದರೇನು ಅನ್ನುವ ನನ್ನ ಡೆಫಿನೇಶನ್ ಗಳನ್ನು ಅಂದಗೆಡಿಸಿವೆ.  ನನ್ನ ಸಿನೆಮಾದೆಡೆಗಿನ ವ್ಯಾಖ್ಯಾನಗಳು ತಾಂತ್ರಿಕತೆಗೆ, ಅದು ದೃಶ್ಯ ಮೂಡಿಸುವ “ಅನುಭವಗಳ ಹುಟ್ಟಿಸುವಿಕೆ”ಗೆ ಹೊಂದಿಕೊಂಡಿವೆಯೇ ಹೊರತು ಪ್ರೇಕ್ಷಕನ ಸ್ವಯಂ ಅನುಭೂತಿ, ಅವನ ಮನದಾಳದ ಅಚ್ಚರಿಗಳಿಗಲ್ಲ. ಅದು ಹೀಗೆ ವಿವರಿಸಬಲ್ಲೆ. ನಿರ್ದೇಶಕನೊಬ್ಬ ಒಂದು ಸಿನೆಮಾ ತೆರೆ ಮೇಲೆ ಮೂಡುವ ಮೊದಲು ಸ್ಕ್ರಿಪ್ಟಿನ ಇಂಚಿಂಚಿನ ಮೇಲೆ ಅದೆಷ್ಟು ವರ್ಕ್ ಮಾಡುತ್ತಿರುತ್ತಾನೆಂದರೆ, ಕಾಲಕ್ರಮೇಣ ಸ್ಕ್ರಿಪ್ಟಿನ ಬದಲಾವಣೆಗಳಿಗೆ, ಅದರ ಬೆಳವಣಿಗೆಯ ಮೌಲ್ಯ ತಿಳಿಯಬೇಕೆಂದರೆ ಆತ ಫ್ರೆಶ್ ಒಪೀನಿಯನ್ ಗಳ ಮೊರೆ ಹೋಗುತ್ತಾನೆ. ಮೊದಲ ಬಾರಿ ಕಥೆ ಕೇಳುವಾತನ ಪ್ರತಿಕ್ರಿಯೆಯ ಮೇಲೆ ತನ್ನ ಸ್ಕ್ರಿಪ್ಟಿನ ಶಕ್ತಿ ಅರಿಯುತ್ತಾನೆ. ಸಿಹಿ ತಿಂದಾದ ನಾಲಿಗೆ ಹೇಗೆ ಮತ್ತೆ ಕೂಡಲೇ ಸಿಹಿ ಗ್ರಹಿಸಲು ಸೋಲುತ್ತದೋ ಅಂತಹ ಮನಸ್ಥಿತಿ ಉಂಟಾಗಿರುತ್ತದೆ ಅವನಿಗೆ. ಆ ನಿರ್ದೇಶಕ ತನ್ನ ಸಿನೆಮಾ ತಯಾರಿಕೆ ಮೇಲೆಯೇ ತನ್ನ ಪ್ಯಾಶನ್ ಬೆಳೆಸಿಕೊಂಡಿರುವುದರಿಂದ, ಕಾಲಕ್ರಮೇಣ ದೃಶ್ಯಗಳಿಗೆ ಪ್ರೇಕ್ಷಕನ ಮೊದಲ ಪ್ರತಿಕ್ರಿಯೆ ಹೇಗಿರಬಹುದು ಅನ್ನುವುದನು ಗ್ರಹಿಸಲು ಆಗದೇ ಜಡ್ಡಾಗಿರುತ್ತದೆ.
ಲೋಕೋ ಭಿನ್ನ ರುಚಿಃ ಎಂಬಂತೆ ಅನುಭವ ಪಡೆದುಕೊಳ್ಳುವಾತನ (ಪ್ರೇಕ್ಷಕ) ಮತ್ತು ಅನುಭವ ಹುಟ್ಟಿಸುವಿಕೆಗೆ ಕಾರಣೀಭೂತನಾಗುವ (ನಿರ್ದೇಶಕ, ಲೇಖಕ) ಮನೋರುಚಿಯೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾದ್ದರಿಂದ ಸಿನೆಮಾಕ್ಕೆ ತಾಂತ್ರಿಕವಾಗಿ ವ್ಯಾಖ್ಯೆ ನೀಡಬಹುದಾದರೂ ಬೇರೆ ರೀತಿಯಲ್ಲಲ್ಲ.
(ಸಾಂಗತ್ಯದಲ್ಲಿ ಪ್ರಕಟವಾದದ್ದು)
08
Sep
09

ದುರಾದೃಷ್ಟವಂತರು..!

ಈ ಸಂಜೆಗಳು ಹಾಗೆಯೇ
ಕೆಲವೆಡೆ ಮುಷ್ಟಿ ಬಿಗಿದಿಟ್ಟರೂ
ಕೈಯೆಡೆಯಿಂದ ಉರುಳುವ ಮರುಳು
ಎಲ್ಲೋ ಕೆಲವರಿಗೆ ಮಾತ್ರ ಸಾಧ್ಯ
ಮನೆಗೆ ಬಂದು ಕಾಫಿ
ಕುಡಿಯುತಿರುವಾಗ ಬೆಚ್ಚಗಿನ ಬೋಂಡಾ
ಸೂರ್ಯನಂತೆ ಮೆಲ್ಲ ಮೆಲ್ಲ
ಹೊಟ್ಟೆಯಾಳಕ್ಕೆ ಇಳಿಯುವ
ಅನುಭವ ಮತ್ತು
ತುಂತುರ ತಂಪು
ಸುರಿಯುವುದನು ನೋಡುತ್ತ ಕೂರುವುದು
ಮತ್ತೆ ಹಲವರು ದುರದೃಷ್ಟವಂತರು
ಎಲ್ಲಿಯೋ ಅರ್ಜೆಂಟಾಗಿ ಹೋಗಬೇಕಾಗಿದ್ದಾಗ
ಮಳೆಮೂಡಿ ಅಡ್ರೆಸ್ಸಿಲ್ಲದ ಸೂರಿರಡಿ
ಮಳೆನಿಲ್ಲುವುದ ಕಾಯುತ್ತಾ
ಮೌನವಾಗಿ ನಿಂತ ಕ್ಷಣ,
ಕಾರಣವಿಲ್ಲದೇ ಹಳೆಯ ಅವಳ ನೆನಪಾಗಿ
ತನ್ನ ಸುಂದರ ಸಂಜೆಯೊಂದು ಕಣ್ಣ ಮುಂದೆಯೇ
ಧಗಧಗಿಸುತ್ತಾ ದಹಿಸುತ್ತಿರುವುದನು
ನಿರುಪಾಯನಾಗಿ
ಯುದ್ಧಮಧ್ಯೆಯ ನಿಶ್ಯಸ್ತ್ರ ಸೈನಿಕನಂತೆ
ಸುಮ್ಮನೆ ನೋಡಬೇಕಾಗುವುದು
ಅವರಿಗೂ ತಿಳಿದಿದೆ, ಆ ಕ್ಷಣದಲಿ
ಸಾವು ಹಾಗೆಲ್ಲ
ಸುಲಭವಾಗಿ
ಕರುಣೆ ತೋರುವಂಥಾದ್ದಲ್ಲ.ಈ ಸಂಜೆಗಳು ಹಾಗೆಯೇ
ಕೆಲವೆಡೆ ಮುಷ್ಟಿ ಬಿಗಿದಿಟ್ಟರೂ
ಕೈಯೆಡೆಯಿಂದ ಉರುಳುವ ಮರುಳು
ಎಲ್ಲೋ ಕೆಲವರಿಗೆ ಮಾತ್ರ ಸಾಧ್ಯ
ಮನೆಗೆ ಬಂದು ಕಾಫಿ
ಕುಡಿಯುತಿರುವಾಗ ಬೆಚ್ಚಗಿನ ಬೋಂಡಾ
ಸೂರ್ಯನಂತೆ ಮೆಲ್ಲ ಮೆಲ್ಲ
ಹೊಟ್ಟೆಯಾಳಕ್ಕೆ ಇಳಿಯುವ
ಅನುಭವ ಮತ್ತು
ತುಂತುರ ತಂಪು
ಸುರಿಯುವುದನು ನೋಡುತ್ತ ಕೂರುವುದು
ಮತ್ತೆ ಹಲವರು ದುರದೃಷ್ಟವಂತರು
ಎಲ್ಲಿಯೋ ಅರ್ಜೆಂಟಾಗಿ ಹೋಗಬೇಕಾಗಿದ್ದಾಗ
ಮಳೆಮೂಡಿ ಅಡ್ರೆಸ್ಸಿಲ್ಲದ ಸೂರಿರಡಿ
ಮಳೆನಿಲ್ಲುವುದ ಕಾಯುತ್ತಾ
ಮೌನವಾಗಿ ನಿಂತ ಕ್ಷಣ,
ಕಾರಣವಿಲ್ಲದೇ ಹಳೆಯ ಅವಳ ನೆನಪಾಗಿ
ತನ್ನ ಸುಂದರ ಸಂಜೆಯೊಂದು ಕಣ್ಣ ಮುಂದೆಯೇ
ಧಗಧಗಿಸುತ್ತಾ ದಹಿಸುತ್ತಿರುವುದನು
ನಿರುಪಾಯನಾಗಿ
ಯುದ್ಧಮಧ್ಯೆಯ ನಿಶ್ಯಸ್ತ್ರ ಸೈನಿಕನಂತೆ
ಸುಮ್ಮನೆ ನೋಡಬೇಕಾಗುವುದು
ಅವರಿಗೂ ತಿಳಿದಿದೆ, ಆ ಕ್ಷಣದಲಿ
ಸಾವು ಹಾಗೆಲ್ಲ
ಸುಲಭವಾಗಿ
ಕರುಣೆ ತೋರುವಂಥಾದ್ದಲ್ಲ.
ಈ ಸಂಜೆಗಳು ಹಾಗೆಯೇ
ಕೆಲವೆಡೆ ಮುಷ್ಟಿ ಬಿಗಿದಿಟ್ಟರೂ
ಕೈಯೆಡೆಯಿಂದ ಉರುಳುವ ಮರುಳು
ಎಲ್ಲೋ ಕೆಲವರಿಗೆ ಮಾತ್ರ ಸಾಧ್ಯ
ಮನೆಗೆ ಬಂದು ಕಾಫಿ
ಕುಡಿಯುತಿರುವಾಗ ಬೆಚ್ಚಗಿನ ಬೋಂಡಾ
ಸೂರ್ಯನಂತೆ ಮೆಲ್ಲ ಮೆಲ್ಲ
ಹೊಟ್ಟೆಯಾಳಕ್ಕೆ ಇಳಿಯುವ
ಅನುಭವ ಮತ್ತು
ತುಂತುರ ತಂಪು
ಸುರಿಯುವುದನು ನೋಡುತ್ತ ಕೂರುವುದು
parke_summer-rain
ಮತ್ತೆ ಹಲವರು ದುರದೃಷ್ಟವಂತರು
ಎಲ್ಲಿಯೋ ಅರ್ಜೆಂಟಾಗಿ ಹೋಗಬೇಕಾಗಿದ್ದಾಗ
ಮಳೆಮೂಡಿ ಅಡ್ರೆಸ್ಸಿಲ್ಲದ ಸೂರಿರಡಿ
ಮಳೆನಿಲ್ಲುವುದ ಕಾಯುತ್ತಾ
ಮೌನವಾಗಿ ನಿಂತ ಕ್ಷಣ,
ಕಾರಣವಿಲ್ಲದೇ ಹಳೆಯ ಅವಳ ನೆನಪಾಗಿ
ತನ್ನ ಸುಂದರ ಸಂಜೆಯೊಂದು ಕಣ್ಣ ಮುಂದೆಯೇ
ಧಗಧಗಿಸುತ್ತಾ ದಹಿಸುತ್ತಿರುವುದನು
ನಿರುಪಾಯನಾಗಿ
ಯುದ್ಧಮಧ್ಯೆಯ ನಿಶ್ಯಸ್ತ್ರ ಸೈನಿಕನಂತೆ
ಸುಮ್ಮನೆ ನೋಡಬೇಕಾಗುವುದು
ಅವರಿಗೂ ತಿಳಿದಿದೆ, ಆ ಕ್ಷಣದಲಿ
ಸಾವು ಹಾಗೆಲ್ಲ
ಸುಲಭವಾಗಿ
ಕರುಣೆ ತೋರುವಂಥಾದ್ದಲ್ಲ.
07
Sep
09

ಹೊಸ ಹನಿಗಳು.

ಪ್ರಶ್ನೆ
ಮಾತು ಬರೆದೋರು ಯಾರೋ
ಫೈಟು ಹೇಳ್ಕೊಡೋನು ಇನ್ಯಾರೋ
ಡ್ಯಾನ್ಸು ಕಲಿಸ್ಕೊಡೋನು ಮತ್ಯಾರೋ
ಹಾಗಾದರೆ
ಇವನ್ಯಾವ ಸೀಮೆ ಹೀರೋ?!
ಅರಸಿಕ
ನಿನ್ನಂದವನು ಬರೀ
ಹೊಗಳುತ್ತಾ ಕುಳಿತ
ನನ್ನನ್ನು ಇಡೀ ಜಗತ್ತು
ಶುದ್ಧ ಅರಸಿಕ ಮುಂಡೇದು
ಎಂದು ಅಪಹಾಸ್ಯ ಮಾಡಿತು!
ಪ್ರೀತಿ ಮತ್ತು ದ್ವೇಷ!
ಜೀವಕ್ಕಿಂತ ಹೆಚ್ಚು
ಪ್ರೀತಿಸಿದವರ್ಯಾರೂ
ಈಗವನ ಬಳಿಯಿಲ್ಲ
ಅದಕ್ಕೇ ಅವನಿಗೆ
ದ್ವೇಷ ಅಂದರೆ ಪ್ರೀತಿ
ಪ್ರೀತಿ ಅಂದರೆ ದ್ವೇಷ!
(ಈ ಹನಿಗಳು ವಿ.ಕ. ದ ಸಿಂಪ್ಲಿಸಿಟಿ ಪೇಜ್ ನಲ್ಲಿ ೩೧ ಆಗಸ್ಟ್ ೦೯ ರಂದು ಪ್ರಕಟ ಆಗಿದೆ)

01
Sep
09

ವಿರಹ ಗೀತೆ..!

ಈ ಮಳೆ ಇಳಿಯುವ ಮುಸ್ಸಂಜೆ ತೊಯ್ಯುವ ಗಳಿಗೆ
ದಯವಿಟ್ಟು
ಒಂದು ವಿರಹ ಗೀತೆ ಕೊಡಿ
ಗುನುಗಿ ಬದುಕಿಕೊಳ್ಳುತ್ತೇನೆ
untitled
ನಿಮಗೆ ತೋರುವ ಸುರಿಯುವ ತಂಪು
ನಿಜವಾದ್ದಲ್ಲ
ಅದರ ಮುಖವಾಡ ಕಳಚಿ
ಹನಿಹನಿಯೊಳಗಿಣುಕುವ ಕೆಂಡ
ಮೆಲ್ಲಗೆ ನನ್ನೊಳಗನ್ನು ದಹಿಸುವ ದೃಶ್ಯ
ನಿಮಗೆ ಕಾಣಿಸಲಾರೆ

ಮೌನವಾಗಿ ಯಾರಿಗೂ ತೋರದೇ
ಮಳೆ ಮಣ್ಣೊಳು ಸೇರಿ
ಗಂಧ ಮಾಡುವ ಮಸಲತ್ತು,
ಮತ್ತು ಅದು ತರಿಸುವ
ನೆನಪ ಮೊನೆಯಂಚು ಭಾರೀ ಚೂಪು

feelings,girl,neck,nude,painting,sadness,water-069e13779cbfda2448d9bac42a80ac2e_m

ಕೂಗಲೂ ಆಗದ ನೋವುಗಳನ್ನು
ಖಾಲೀ ಪೀಲಿ ಪದಗಳಲ್ಲಿ ನಿಮಗೆಲ್ಲಾ
ವಿವರಿಸಲಾರೆ

ಒಂದಿಷ್ಟು ಕಿಡಿಗಳಿವೆ ಒಳಗೆ
ಕ್ಷಣಗಳ ಕಾಡಿಗೆ ಸುರಿದು
ಆ ಬೆಚ್ಚಗಿನ ಮುಸುಕಿನಲ್ಲೇ ಉಳಿದುಕೊಳ್ಳುವೆ

ದಯವಿಟ್ಟು, ಒಂದು ವಿರಹ ಗೀತೆ ಕೊಡಿ.
ಗುನುಗಿ ಬದುಕಿಕೊಳ್ಳುವೆ.

20
Aug
09

ನನ್ನೊಳಗೂ ಒಂದು ಸುಂದರ ಬೆಳಗು!

ತನ್ನ ಮಡಿಲಿನಲಿ ಒಂದು ಜಗತ್ತನ್ನೇ ಮಲಗಿಸಿಕೊಂಡಿರುವ ರಾತ್ರಿಯೊಂದು, ಅದನ್ನು ಹಗಲಿನ ಹೆಗಲಿಗೆ, ಸೂರ್ಯನ ಸುಪರ್ದಿಗೆ ಒಪ್ಪಿಸಲು ತಯಾರಾಗುವ ಸಮಯ.
ಚಂದ್ರ ಹೊರಗೆ ತನ್ನ ಪಾಳಿ ಯಾವಾಗ ಮುಗಿಯುತ್ತದೋ ಎಂದು ಆಕಳಿಸುತ್ತಿದ್ದಾನೆ. ದಿನವೂ ಅಮ್ಮ ಅದ್ಯಾವಾಗಲೋ ಎದ್ದು ಮನೆಮುಂದೆ ರಂಗವಲ್ಲಿ ಇಡುವಾಗ ಕಣ್ಣೆತ್ತಿ ನೋಡಿದರೆ ತನ್ನ ಮೇಲೂ ರಂಗೋಲಿ ಬರೆದುಬಿಟ್ಟಾಳು ಎಂದು ಹೆದರಿ ಪಿಳಿಪಿಳಿ ನೋಡುವ ಆಗಸದ ಚುಕ್ಕಿಗಳು. ಜಯಂತರು ತಮ್ಮ ಒಂದು ಕವಿತೆಯಲ್ಲಿ ಅಂದಂತೆ ಹಿತ್ತಲಿನ ತೋಟದಲಿ “ರೆಕ್ಕೆಗಳ ಫಡಫಡಿಸಿ ಮರವೊಂದು ಕತ್ತಲ ಕೊಡವಿಕೊಳ್ಳುತ್ತಿದೆ”. ಪಾರಿಜಾತ ಗಿಡದ ಮೇಲಿನ ಇಬ್ಬನಿ ಇನ್ನೂ ಜಾರದೇ ಜಂಭ ಬೀರುತ್ತಿದೆ. ಇಬ್ಬನಿ ಜಾರದೇ ತನ್ನ ಹೂವಿನ ಮೊಗ್ಗೊಡೆಸುವುದಿಲ್ಲ ಎಂಬ ಗಿಡದ ಹಠ ಇನ್ನೂ ಜಾರಿಯಲ್ಲಿದೆ. ತೋಟದ ಕರವೀರ, ತುಳಸಿಯಂತೆ ತನಗೂ ಕಟ್ಟೆ ಕಟ್ಟಿಲ್ಲ ಅಂತೆಲ್ಲಾ ಸಿಟ್ಟಿನಿಂದ ಎಂದೂ ಹೂವ ಬಿಡದೇ ಇದ್ದುದಿಲ್ಲ. ಗಿಡದ ಗೂಡಿನಲಿ ಆಗಲೇ ಬೆಳಗಾಗಿದೆ. ಮರಿ ಎದ್ದುದ್ದಕ್ಕೆ ಹಕ್ಕಿ ಬೇಗ ಬೇಗ ಗೂಡಿನಿಂದ ಹೊರಟಿದೆ; ಮರಿಯ ಕೂಗು ತಾರಕಕ್ಕೇರುವ ಮುನ್ನ ಕಾಳೊಂದನು ಅದರ ಗಂಟಲಲ್ಲಿ ಇಳಿಸಬೇಕಿದೆ. ಸ್ವಲ್ಪವೇ ದೂರದಲ್ಲಿ ಎನ್ನೆಚ್ ೧೭ ರ ವಾಹನಗಳು ಚಲಿಸುವ ಸದ್ದು ಕತ್ತಲೆಯ ಮೌನಕ್ಕೆ ಹಿನ್ನೆಲೆ ಸಂಗೀತ ಒದಗಿಸುತ್ತದೆ. ಒಮ್ಮೊಮ್ಮೆ ಹಾಗೆ ಕೇಳದೇ ಹೋದರೆ ಮನಸ್ಸಿಗೆ ಬೆಳಗ್ಗೆಂದು ಒಪ್ಪಿಕೊಳ್ಳುವುದೇ ಕಷ್ಟ.
ಒಲೆಗೆ ಇದ್ದ ಕಟ್ಟಿಗೆಗಳನ್ನು ಕೊಂಚ ಕೊಂಚವೇ ಹಾಕಿ ಈಗ ಅಮ್ಮ ಬಿಸಿನೀರು ಕಾಯಿಸುತ್ತಿದ್ದಾಳೆ. ಅವಳ ಅರ್ಧ ತೆರೆದ  ಕಣ್ಣು ಒಲೆಯ ಬೆಂಕಿ ಬೆಳಕಲ್ಲಿ ಮತ್ತಷ್ಟು ಹೊಳೆಯುತ್ತಿದೆ. ಹಿಂದಿನ ದಿನದ ಒಲೆಯ ಬಿಸಿಗೆ ಬೆಚ್ಚಗೆ ಮಲಗಿದ್ದ ಬೆಕ್ಕು, ಅಮ್ಮ ಏಳಿಸಿದ್ದಕ್ಕೆ ಮತ್ತು ತನ್ನ ನಿದಿರೆ ಭಂಗವಾಗಿದ್ದಕ್ಕೆ ಸಿಟ್ಟಿನಿಂದ ನೋಡುತ್ತಿದೆ. ಅಮ್ಮ ಮಧ್ಯೆ ಮಧ್ಯೆ ಅಡುಗೆ ಮನೆಗೆ ಬಂದು ಅಲ್ಲಿನ ತಯಾರಿಯನ್ನೂ ನೋಡಿಕೊಳ್ಳುತ್ತಿದ್ದಾಳೆ. ಅಡುಗೆ ಮನೆಗೆ ಹೋಗುವ ದಾರಿಯಲೇ ಒಂದು ಹಾಲ್. ಅಲ್ಲಿ ಒಬ್ಬರ ಪಕ್ಕ ಇನ್ನೊಬ್ಬರಂತೆ ನಾನು, ನನ್ನಣ್ಣ ಬಿದ್ದುಕೊಂಡಿದ್ದೇವೆ. ಫ್ಯಾನಿನ ಸದ್ದಿಗೂ, ಗೊರಕೆಗೂ ಸ್ಪರ್ಧೆ ನಡೆಯುತ್ತಿರುತ್ತದೆ. ದೊಡ್ಡ ಗೊರಕೆ ಸದ್ದು ಕೇಳಿ ಅಮ್ಮನಿಗೆ ಅಪ್ಪನ ನೆನಪಾಗಿ ಪುಟ್ಟ ಕಣ್ಣು ಮಂಜಾಗುತ್ತದೆ. ಅಣ್ಣನಿಗಿನ್ನೂ ಮಧ್ಯರಾತ್ರಿ. ಆತನದು ಸೂರ್ಯವಂಶ. ಸೂರ್ಯ ಹುಟ್ಟಿ ಬಹಳ ಹೊತ್ತಿನ ನಂತರವಷ್ಟೇ ಅವನ ಬೆಳಗು. ದಿನವೂ ಮಲಗುವಾಗಲೇ ಅಪರಾತ್ರಿ.  ಎಚ್ಚರಿರುವ ಅಮ್ಮ ದಿನವೂ ಹನ್ನೆರೆಡು-ಒಂದಾಗುತ್ತಲೇ ಒತ್ತಾಯ ಮಾಡಿ ಅವನ ಅಕೌಂಟ್ಸ್ ಬರವಣಿಗೆಯನು ನಿಲ್ಲಿಸುತ್ತಾಳೆ. ಗಾಢವಾದ ನಿದ್ರೆಯಲ್ಲಿರುವ ಅವನ ಬಿಳೀ ಬನೀನಿನಲಿ ಪುಟ್ಟ ತೂತೊಂದು ನಕ್ಷತ್ರದಂತೆ ಕಾಣುತ್ತಿದೆ, ಅದ ನೋಡಿದ ಅಮ್ಮ ತನ್ನಷ್ಟಕ್ಕೆ ತಾನೇ ಮುಗುಳ್ನಗುತ್ತಾಳೆ. ಆ ನಗು ಅರಳುವಾಗ ಮುಂಚೆ ಮೂಡಿದ್ದ ಬಿಂದು, ಕಣ್ಣಿನ ಹಿತ್ತಲುಬಾಗಿಲಿಂದ ಓಡಿಹೋಗುತ್ತದೆ.
ನಾನು ಕೆಲವೊಮ್ಮೆ ಐದಕ್ಕೆಲ್ಲಾ ಎದ್ದಿದ್ದರೂ ಸುಮ್ಮನೆ ಏನೋ ಆಲೋಚಿಸುತ್ತಾ, ಮೌನವಾಗಿ ಮಲಗಿಕೊಂಡೇ ಇರುವುದನ್ನು ಅಮ್ಮ ಗಮನಿಸಿದ್ದಾಳೆ. ಅದಕ್ಕೇ ಅಡುಗೆಮನೆಗೆ ಹೋಗುವಾಗಲೆಲ್ಲ ಒಮ್ಮೆ ನನ್ನ ಕಣ್ಣಬಳಿ ಬಂದು ಎಚ್ಚರಿದ್ದಾನೇನೋ ಅಂತ ಇಣುಕುತ್ತಾಳೆ. ನಾನು ನಾಟಕವಾಡುತ್ತಿದ್ದೆನೇನೊ ಅನ್ನಿಸಿ ಕೈಯ್ಯಲ್ಲಿನ ಹನಿಯನ್ನು ಚಿಮುಕಿ ಪರೀಕ್ಷಿಸುತ್ತಾಳೆ. ಮೆದುವಾಗಿ ಕೆನ್ನೆಬಡಿದು ನೋಡುತ್ತಾಳೆ. ಆಕೆಯ ಮಮತೆಯ, ಬೆಚ್ಚಗಿನ ಕೈಯ್ಯ ಸ್ಪರ್ಶ, ಒಂದು ಜೀವಂತಿಕೆಯ ಅಲೆಯೊಂದನು ದೇಹವಿಡೀ ಪಸರಿಸುತ್ತದೆ. ಅಡುಗೆಮನೆಯಲಿ ಹಬೆಯಾಡುವ ಒಂದು ಲೋಟ ಕಾಫಿ ರೆಡಿಯಾಗಿರುತ್ತದೆ ಆಗಲೇ. ನಾನೆದ್ದ ಕೂಡಲೇ ಕಾಫಿ ಕುಡಿಯುತ್ತಾ ಸ್ವಲ್ಪ ಹರಟೆ ಹೊಡೆಯಬೇಕೆಂಬುದವಳಾಸೆ.
ಮನೆಬೆಕ್ಕು ತನ್ನ ಮೊದಲ ಸುತ್ತಿನ ಊಟಕ್ಕಾಗಿ ಅಮ್ಮನನ್ನು ಪೀಡಿಸುತ್ತಿದೆ. ತುರಿದ ಕಾಯಿ, ಹಾಲು ಬಿಸ್ಕಿಟ್ಟು ಹಾಕುವವರೆಗೂ ಹಾಗೆಲ್ಲ ಸುಮ್ಮನೇ ಇರುವುದಿಲ್ಲವದು. ಅಮ್ಮ ಕಾಯಿ ತುರಿಯುವಾಗ ಮಾತ್ರ ಧ್ಯಾನಸ್ಥ ಮುನಿಯಂತೆ ಎದುರೇ ಕುಳಿತಿರುತ್ತದೆ. ಅದಕ್ಕೆ ಹಾಕದೇ ಇದ್ದರೆ ನಮ್ಮ ಹೊಟ್ಟೆಕೆಟ್ಟೀತು ಎಂಬ ಭಾವ ಉಕ್ಕಿಸುವಂತೆ ಅದು ತಿಂಡಿಯೆಡೆಗೆ ನೋಡುವ ರೀತಿ ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತದೆ. ನಮ್ಮ ಸೈಕಾಲಜಿಯೆಲ್ಲಾ ಅರಗಿಸಿಕೊಂಡುಬಿಟ್ಟಿತೇ ಈ ಪುಟ್ಟ ಮುದ್ದು ಪ್ರಾಣಿ !?
ಎದ್ದಿದ್ದರೂ ನನ್ನ ಮೌನ ತಪಸ್ಸಿಗೆ ಭಂಗ ಬರಬಾರದೆಂಬಾಸೆಯಿಂದ ಮಲಗಿದ್ದಂತೆ ನಾಟಕವಾಡುತ್ತೇನೆ. ಹನಿ ಚಿಮುಕಿಸುವಿಕೆಗೆಲ್ಲಾ ಅಲುಗದಂತೆ ನಿದ್ರಿಸುವ ನಾಟಕ ಅಭ್ಯಾಸವಾಗಿದೆ. ಅತ್ತ ಅಡುಗೆ ಮನೆಯ ಕಿಟಕಿಯಿಂದ ಸೂರ್ಯ ಕಾಣತೊಡಗುತ್ತಲೇ, ಮೌನವೂ ಕೊಂಚ ಭಾರವೆನ್ನಿಸಿ ಎದ್ದು ಹಗುರಾಗುತ್ತೇನೆ. ಆಗಲೇ ಘನೀಭವಿಸಿದ್ದ ಭಾವವೊಂದನ್ನು ಪುಟ್ಟದಾಗಿ ಮೊಬೈಲಿನಲ್ಲಿ ಇಳಿಸುತ್ತೇನೆ. ನಂತರ ಎಲ್ಲರಿಗೂ ಎಸ್ಸೆಮ್ಮೆಸ್ಸಿನ ಮೂಲಕ ಕಳಿಸುವಾಗ ಆಗುತ್ತಿರುವ ಸದ್ದಿಗೆ ತಣ್ಣಗಾಗಿದ್ದ ಕಾಫಿಯನು ಮತ್ತೆ ಬಿಸಿಮಾಡುತ್ತಾಳೆ ಅಮ್ಮ. ಮುಖತೊಳೆದು ಬರುತ್ತಲೇ  ಕಾಫಿಯೊಂದಿಗೆ ಬಿಸಿಬಿಸಿ ಹರಟೆ ಶುರು. ಬೆಕ್ಕು ಈಗ ನನ್ನ ಕಾಲು ಸುತ್ತುವರಿಯುತ್ತದೆ. ಗೊತ್ತಿದೆ ಅದಕ್ಕೆ, ತನಗೆ ಎರಡನೇ ಸುತ್ತಿನ ಊಟ ಸಿಗಲಿದೆ ಎಂಬುದು.
“ಅಲ್ಲಿ ಊಟ ಹ್ಯಾಗೆ? ತರಕಾರಿ ಸಿಗ್ತದಾ? ಏನೂ ಸಿಗದಿದ್ರೆ ಅವಲಕ್ಕಿ-ಮೊಸರು ಸೇರಿಸ್ಕೊಂಡು ತಿನ್ಬಾರ್ದಾ? ” ಹೀಗೆ ಪ್ರಾರಂಭ ಅಮ್ಮನ ಪ್ರಶ್ನಾವಳಿ; ಮುದ್ದು ಸುಪ್ರಭಾತ!  ಅಲ್ಲಿನೆಲ್ಲಾ ವಿವರಗಳನ್ನು ಪದರು ಪದರಾಗಿ ವಿವರಿಸುತ್ತಿರುವಾಗ ಸೂರ್ಯ ಹೊಟ್ಟೆಕಿಚ್ಚಿನಿಂದಲೋ, ತನ್ನ ಕಾರ್ಯವೇ ಅದೇ ಎಂಬಂತೆ ಉರಿಯುತ್ತಾ ಮೆತ್ತಗೆ ಮೂಡಿಬರುತ್ತಿರುತ್ತಾನೆ.
ಒಂದು ಸುಂದರ ಸಸಿಯಂತ ದಿನದ, ಹೂವಿನಂತ ಬೆಳಿಗ್ಗೆ ಹೀಗೆ ಮೊಗ್ಗೊಡೆಯುತ್ತದೆ; ನನ್ನೊಳಗೂ ಕೂಡ!

funlok_com_01

15
Aug
09

ಬುದ್ಧಿವಂತಿಕೆ ಅಂದರೆ..!

ಬುದ್ಧಿವಂತಿಕೆ ಅಂದರೆ..!
ಬೀದಿಯಲ್ಲಿ ಹುಡುಗರೆಲ್ಲಾ ಸೇರಿ ಕ್ರಿಕೆಟ್ ಆಡುತ್ತ ಇದ್ದರು. ತೆಂಡುಲ್ಕರನ್ನು ಆವಾಹಿಸಿಕೊಂಡಿದ್ದ ಪುಟ್ಟ, ಬ್ಯಾಟನ್ನು ಶಕ್ತಿಯೆಲ್ಲಾ ಹಾಕಿ ಬೀಸಿ ಹೊಡೆದ. ಚೆಂಡು ತೇಲುತ್ತ ಎರಡನೆಯ ಫ್ಲೋರ್ ನಲ್ಲಿದ್ದ ಪುಟ್ಟನ ಮನೆಯ ಕಿಟಕಿಯೊಳಗೆ ನುಸುಳಿ ಟೀಪಾಯಿ ಮೇಲಿದ್ದ ಫ್ಲವರ್ ವಾಜ್ ಗೆ ಮುತ್ತಿಟ್ಟಿತು. ಅದರ ಗುಂಗಿಗೇನೊ ಎಂಬಂತೆ ವಾಜ್ ಒಂದು ಸುತ್ತು ಹೊಡೆದು ನೆಲಕೆ ಬಿದ್ದು ಒಡೆದು ಹೋಯಿತು.
ಪುಟ್ಟನಿಗೆ ಚಿಂತೆಗಿಟ್ಟುಕೊಂಡಿತು. ಗೊತ್ತಾದರೆ ಅಮ್ಮ ಬೆನ್ನಿಗೆ ಬರೆ ಬರಿಸಿಯಾಳು. ಆಟವನ್ನು ಅಲ್ಲಿಗೇ ರದ್ದುಗೊಳಿಸಿ ಅಡುಗೆ ಮನೆಯಲ್ಲಿದ್ದ ಅಮ್ಮನ ಬಳಿಗೆ ಬಂದ.
ಕೊನೆ : ೧
“ಅಮ್ಮ…ಅಮ್ಮ.. ಅದೂ..ಅದು…”
“ಏನೋ ಅದು? ಏನ್ಮಾಡಿದ್ದೀಯಾ?”
“ಅದೂ..ಅದೂ.. ಕ್ರಿಕೆಟ್ ಆಡ್ತಿದ್ನಾ…ಬಾಲ್ ತಾಗಿ… ನಮ್ಮನೆ ಫ್ಲವರ್ ವಾಜ್ ಒಡೆದುಹೋಯ್ತು..!”
“ಅಯ್ಯೋ… ಎಂಥ ಕೆಲ್ಸ ಮಾಡ್ಬಿಟ್ಯೋ..ಅದೆಷ್ಟ್ ದುಬಾರಿ ಗೊತ್ತಾ?… ಇರು ನಿಂಗೆ ಮಾಡಿಸ್ತೀನಿ..” ಎನ್ನುತ್ತಾ ಕೋಲು ತೆಗೆದುಕೊಳ್ಳಲು ಹೋದಳು..
ಕೊನೆ : ೨
“ಅಮ್ಮ… ಅದೂ.. ಅದೂ..”
“ಏನೋ ಅದು? ಏನ್ಮಾಡಿದ್ದೀಯಾ?”
“ಅದೂ… ಇವತ್ತು ಕ್ರಿಕೆಟ್ ಆಡ್ತಿದ್ನಾ…ಬಾಲ್ ತಾಗಿ.. ನಮ್ಮನೆ ಗ್ಲಾಸಿನ ಟೀಪಾಯಿ ಇದೆಯಲ್ಲಾ…”
” ಅಯ್ಯೋ ಪಾಪಿ!… ಆ ಟೀಪಾಯಿ ಒಡೆದು ಹಾಕಿದ್ಯೇನೋ?!”
“ಇಲ್ಲಮ್ಮಾ.. ಅದರ್ ಮೇಲಿತ್ತಲ್ಲಾ.. ಫ್ಲವರ್ ವಾಜ್ ಅದು ಒಡೆದುಹೋಯ್ತು!”
“ಅಬ್ಬ…ಬದುಕಿದೆ.. ನಾನೆಲ್ಲೋ ಟೀಪಾಯಿ ಮುರಿದ್ಯೆನೋ ಅಂತ ಹೆದರಿದೆ!” ಅನ್ನುತ್ತಾ ಅಡುಗೆ ಮಾಡತೊಡಗಿದಳು.ಬುದ್ಧಿವಂತಿಕೆ ಅಂದರೆ..!
ಬೀದಿಯಲ್ಲಿ ಹುಡುಗರೆಲ್ಲಾ ಸೇರಿ ಕ್ರಿಕೆಟ್ ಆಡುತ್ತ ಇದ್ದರು. ತೆಂಡುಲ್ಕರನ್ನು ಆವಾಹಿಸಿಕೊಂಡಿದ್ದ ಪುಟ್ಟ, ಬ್ಯಾಟನ್ನು ಶಕ್ತಿಯೆಲ್ಲಾ ಹಾಕಿ ಬೀಸಿ ಹೊಡೆದ. ಚೆಂಡು ತೇಲುತ್ತ ಎರಡನೆಯ ಫ್ಲೋರ್ ನಲ್ಲಿದ್ದ ಪುಟ್ಟನ ಮನೆಯ ಕಿಟಕಿಯೊಳಗೆ ನುಸುಳಿ ಟೀಪಾಯಿ ಮೇಲಿದ್ದ ಫ್ಲವರ್ ವಾಜ್ ಗೆ ಮುತ್ತಿಟ್ಟಿತು. ಅದರ ಗುಂಗಿಗೇನೊ ಎಂಬಂತೆ ವಾಜ್ ಒಂದು ಸುತ್ತು ಹೊಡೆದು ನೆಲಕೆ ಬಿದ್ದು ಒಡೆದು ಹೋಯಿತು.
ಪುಟ್ಟನಿಗೆ ಚಿಂತೆಗಿಟ್ಟುಕೊಂಡಿತು. ಗೊತ್ತಾದರೆ ಅಮ್ಮ ಬೆನ್ನಿಗೆ ಬರೆ ಬರಿಸಿಯಾಳು. ಆಟವನ್ನು ಅಲ್ಲಿಗೇ ರದ್ದುಗೊಳಿಸಿ ಅಡುಗೆ ಮನೆಯಲ್ಲಿದ್ದ ಅಮ್ಮನ ಬಳಿಗೆ ಬಂದ.
ಕೊನೆ : ೧
“ಅಮ್ಮ…ಅಮ್ಮ.. ಅದೂ..ಅದು…”
“ಏನೋ ಅದು? ಏನ್ಮಾಡಿದ್ದೀಯಾ?”
“ಅದೂ..ಅದೂ.. ಕ್ರಿಕೆಟ್ ಆಡ್ತಿದ್ನಾ…ಬಾಲ್ ತಾಗಿ… ನಮ್ಮನೆ ಫ್ಲವರ್ ವಾಜ್ ಒಡೆದುಹೋಯ್ತು..!”
“ಅಯ್ಯೋ… ಎಂಥ ಕೆಲ್ಸ ಮಾಡ್ಬಿಟ್ಯೋ..ಅದೆಷ್ಟ್ ದುಬಾರಿ ಗೊತ್ತಾ?… ಇರು ನಿಂಗೆ ಮಾಡಿಸ್ತೀನಿ..” ಎನ್ನುತ್ತಾ ಕೋಲು ತೆಗೆದುಕೊಳ್ಳಲು ಹೋದಳು..
ಕೊನೆ : ೨
“ಅಮ್ಮ… ಅದೂ.. ಅದೂ..”
“ಏನೋ ಅದು? ಏನ್ಮಾಡಿದ್ದೀಯಾ?”
“ಅದೂ… ಇವತ್ತು ಕ್ರಿಕೆಟ್ ಆಡ್ತಿದ್ನಾ…ಬಾಲ್ ತಾಗಿ.. ನಮ್ಮನೆ ಗ್ಲಾಸಿನ ಟೀಪಾಯಿ ಇದೆಯಲ್ಲಾ…”
” ಅಯ್ಯೋ ಪಾಪಿ!… ಆ ಟೀಪಾಯಿ ಒಡೆದು ಹಾಕಿದ್ಯೇನೋ?!”
“ಇಲ್ಲಮ್ಮಾ.. ಅದರ್ ಮೇಲಿತ್ತಲ್ಲಾ.. ಫ್ಲವರ್ ವಾಜ್ ಅದು ಒಡೆದುಹೋಯ್ತು!”
“ಅಬ್ಬ…ಬದುಕಿದೆ.. ನಾನೆಲ್ಲೋ ಟೀಪಾಯಿ ಮುರಿದ್ಯೆನೋ ಅಂತ ಹೆದರಿದೆ!” ಅನ್ನುತ್ತಾ ಅಡುಗೆ ಮಾಡತೊಡಗಿದಳು.

(ಸಂಗ್ರಹಿತ ಬರಹ)
06
Aug
09

ನಾನು ನಾನಾಗದೇ..!

Id_ego_superego

ನಾನು ನಾನಾಗದೇ

ಇದ್ದಾಗಲೇ ಚೆನ್ನಿತ್ತು ಎಲ್ಲ.

ನನ್ನಿಂದ ಮೂಡಿದ್ದಕ್ಕೆಲ್ಲ ಸ್ವತಂತ್ರ ರೆಕ್ಕೆಗಳಿದ್ದವು

ನನ್ನ ಹಂಗಿರಲಿಲ್ಲ.

ಅದೇಕೋ ನೀವೆಲ್ಲಾ ಒತ್ತಾಯ ಮಾಡಿ

ನೀನ್ಯಾರು ನೀನ್ಯಾರೆಂದು ಕೇಳಿದಿರಿ.

ಹಾಗೆ ನಾನು ನಾನಾಗಬೇಕಾಯ್ತು

Id_Ego_Super_ego_by_spiritofdarkness

ಈಗ ನಾನೇನು ಮಾಡಿದರೂ

ಅದಕ್ಕೆ ನನ್ನದೇ ವಾಸನೆ ಅಂಟಿಸುವಿರಿ

ನನ್ನ ಛಾಪಿಲ್ಲವೆಂದು ಅವನ್ನು ಹಂಗಿಸುವಿರಿ

ಸಮಾಜ ನನಗಿತ್ತ ರೋಗಗಳನ್ನು

ಪಾಪ ಅವೂ ಹೊತ್ತು ತಿರುಗುತವೆ

ಈಗಲಾದರೂ

ನಾನು ನಾನಾಗದೇ ಹುಟ್ಟಬೇಕಿದೆ

ಮತ್ತೆ ಅದೆಲ್ಲೋ..

04
Aug
09

ಕೊನೆಯಾಸೆ!

ಸರಳುಗಳಾಚೆ
ಮಗನಿಗಾಗಿ ಒಯ್ಯುತಿರುವ
ಬುತ್ತಿಯ ಬಿಸಿ ಕರಗೀತೆಂದು ಸೆರಗಲ್ಲಿ ಮುಚ್ಚಿ
ಬೇಗ ಬೇಗ ಹೆಜ್ಜೆ ಹಾಕುತಿರುವ ಅವ್ವನನ್ನು
ಅವರು ನೋಡದಿರಲಿ.
ಮಿಂಚಿನಂತೆ ಸಾಗುವ ವಾಹನಗಳಿಂದ
ಕಲಸಿಹೋಗಿರುವ ರಸ್ತೆಯ ಒಂದು ಬದಿಯಲ್ಲಿ
ದಾಟಲಾಗದ ಅಸಾಹಯಕತೆಯಿಂದ ನಿಂತ ವೃದ್ಧನ
ಕೈಯ್ಯ ನೀಲಿನರ ಹಿಡಿದು ರಸ್ತೆ ದಾಟಿಸಿದ ಯುವಕನ ಕಣ್ಣ ಹಿಗ್ಗಿಗೆ
ನಾಚಿದ ಆಗಸದ ನೀಲಿ ಕಿಟಕಿಯೊಳಗೆ ಇಳಿಯದಿರಲಿ
ಕ್ರೂರ ಮೃಗಗಳಲೂ ಉಕ್ಕುವ ತನ್ನ ಕುಡಿಯೆಡೆಗಿನ ಅಕ್ಕರೆಯನ್ನು
ಪಶ್ಚಾತ್ತಾಪದ ಉತ್ತಮ ಪರಿಣಾಮದ ಪ್ರವಚನಗಳನ್ನು
ಹಾಗೆಲ್ಲ ಅಪ್ಪಿತಪ್ಪಿಯೂ ಅವರೆದುರು ಉಸುರದಿರಿ
ಬದುಕುವುದೇ ಕೊನೆಯಾಸೆ ಎಂಬುದನ್ನು
ಎದೆಯಲ್ಲಿಟ್ಟುಕೊಂಡೇ ಗಲ್ಲಿಗೇರಲು ಬರುವವರ
ಕಣ್ಣಲ್ಲಿ ಕಣ್ಣಿಟ್ಟು ಯಾವ ಜೈಲರನೂ ನೋಡಲಾರ.ಸರಳುಗಳಾಚೆ

ಕಣ್ಣಲ್ಲಿ ಕಣ್ಣಿಟ್ಟು ಯಾವ ಜೈಲರನೂ ನೋಡಲಾರ.

Hang till death
ಏಕೆಂದರೆ ಬದುಕುವುದೇ ಕೊನೆಯಾಸೆ ಎಂಬುದನ್ನು
ಎದೆಯಲ್ಲಿಟ್ಟುಕೊಂಡೇ ಗಲ್ಲಿಗೇರಲು ಬರುವವರ
ಕಣ್ಣಲ್ಲಿ ಕಣ್ಣಿಟ್ಟು ಯಾವ ಜೈಲರನೂ ನೋಡಲಾರ.
29
Jul
09

ಒಂದಿಷ್ಟು ಹನಿಗಳು!

೧. ಚಂದಿರ
ಆಕಾಶದಲ್ಲಿ ಅರಳಿದ
ರಾತ್ರಿರಾಣಿ,
ಮಲ್ಲಿಗೆಗಳ ಕಾಯುವ
ತೋಟದ ಮಾಲಿ.
********
೨. ಉಕ್ಕುವ ಕಡಲು
ತುಂಬು ಬೆಳ್ದಿಂಗಳ ದಿನ
ಚಂದಿರನು ತನ್ನ ಕಲೆಗಳಿರುವ
ಮೊಗವನ್ನು ಕಡಲ ಕನ್ನಡಿಯಲ್ಲಿ
ನೋಡಿಕೊಂಡು
ಕೀಳರಿಮೆಗೊಳ್ಳಬಾರದೆಂಬ
ಕಾರಣದಿಂದಲೇ
ಅಲೆಗಳೇಳುತ್ತಿವೆ,
*******
೩. ಕಾರ್ಮೋಡ
ಅವಳು ತೊರೆದು
ಹೋಗುವಾಗ
ಸುಟ್ಟ ಹೃದಯವೊಂದು
ಆವಿಯಾಗಿ ಕಣ್ಣತುಂಬ
ಮೂಡಿದ್ದು.
*******
೪. ಮಳೆ
ಅವಳ ಜತೆ ಆಗಸದಲ್ಲಿ
ತೇಲುವ ಮೋಡಗಳ ಮೇಲೆ
ವಿಹಾರಿಸಿದ ಕನಸು ಕಂಡಿದ್ದ
ಅವನ ಪಾಲಿಗೆ
ಮಳೆಯೆಂದರೆ ಕೇವಲ
ಅವಳ ಹೆಜ್ಜೆಯ ತಂಪು!
*******
೫. ಭಗ್ನಪ್ರೇಮಿ
ಮರಣದಂಡನೆ ವಿಧಿಸಿರುವ
ಖೈದಿಗೆ ಇನ್ನೂ ತನ್ನ ತಪ್ಪನ್ನು,
ಶಿಕ್ಷೆಗೆ ಕಾರಣವನ್ನು
ತಿಳಿಸಲಾಗಿಲ್ಲ.
*******೧. ಚಂದಿರ
ಆಕಾಶದಲ್ಲಿ ಅರಳಿದ
ರಾತ್ರಿರಾಣಿ,
ಮಲ್ಲಿಗೆಗಳ ಕಾಯುವ
ತೋಟದ ಮಾಲಿ.
********
೨. ಉಕ್ಕುವ ಕಡಲು
ತುಂಬು ಬೆಳ್ದಿಂಗಳ ದಿನ
ಚಂದಿರನು ತನ್ನ ಕಲೆಗಳಿರುವ
ಮೊಗವನ್ನು ಕಡಲ ಕನ್ನಡಿಯಲ್ಲಿ
ನೋಡಿಕೊಂಡು
ಕೀಳರಿಮೆಗೊಳ್ಳಬಾರದೆಂಬ
ಕಾರಣದಿಂದಲೇ
ಅಲೆಗಳೇಳುತ್ತಿವೆ,
*******
೩. ಕಾರ್ಮೋಡ
ಅವಳು ತೊರೆದು
ಹೋಗುವಾಗ
ಸುಟ್ಟ ಹೃದಯವೊಂದು
ಆವಿಯಾಗಿ ಕಣ್ಣತುಂಬ
ಮೂಡಿದ್ದು.
*******
೪. ಮಳೆ
ಅವಳ ಜತೆ ಆಗಸದಲ್ಲಿ
ತೇಲುವ ಮೋಡಗಳ ಮೇಲೆ
ವಿಹಾರಿಸಿದ ಕನಸು ಕಂಡಿದ್ದ
ಅವನ ಪಾಲಿಗೆ
ಮಳೆಯೆಂದರೆ ಕೇವಲ
ಅವಳ ಹೆಜ್ಜೆಯ ತಂಪು!
*******
೫. ಭಗ್ನಪ್ರೇಮಿ
ಮರಣದಂಡನೆ ವಿಧಿಸಿರುವ
ಖೈದಿಗೆ ಇನ್ನೂ ತನ್ನ ತಪ್ಪನ್ನು,
ಶಿಕ್ಷೆಗೆ ಕಾರಣವನ್ನು
ತಿಳಿಸಲಾಗಿಲ್ಲ.
*******
೧. ಚಂದಿರ
ಆಕಾಶದಲ್ಲಿ ಅರಳಿದ
ರಾತ್ರಿರಾಣಿ,
ಮಲ್ಲಿಗೆಗಳ ಕಾಯುವ
ತೋಟದ ಮಾಲಿ.
********
೨. ಉಕ್ಕುವ ಕಡಲು
ತುಂಬು ಬೆಳ್ದಿಂಗಳ ದಿನ
ಚಂದಿರನು ತನ್ನ ಕಲೆಗಳಿರುವ
ಮೊಗವನ್ನು ಕಡಲ ಕನ್ನಡಿಯಲ್ಲಿ
ನೋಡಿಕೊಂಡು
ಕೀಳರಿಮೆಗೊಳ್ಳಬಾರದೆಂಬ
ಕಾರಣದಿಂದಲೇ
ಅಲೆಗಳೇಳುತ್ತಿವೆ,
*******
೩. ಕಾರ್ಮೋಡ
ಅವಳು ತೊರೆದು
ಹೋಗುವಾಗ
ಸುಟ್ಟ ಹೃದಯವೊಂದು
ಆವಿಯಾಗಿ ಕಣ್ಣತುಂಬ
ಮೂಡಿದ್ದು.
*******
೪. ಮಳೆ
ಅವಳ ಜತೆ ಆಗಸದಲ್ಲಿ
ತೇಲುವ ಮೋಡಗಳ ಮೇಲೆ
ವಿಹಾರಿಸಿದ ಕನಸು ಕಂಡಿದ್ದ
ಅವನ ಪಾಲಿಗೆ
ಮಳೆಯೆಂದರೆ ಕೇವಲ
ಅವಳ ಹೆಜ್ಜೆಯ ತಂಪು!
*******
೫. ಭಗ್ನಪ್ರೇಮಿ
ಮರಣದಂಡನೆ ವಿಧಿಸಿರುವ
ಖೈದಿಗೆ ಇನ್ನೂ ತನ್ನ ತಪ್ಪನ್ನು,
ಶಿಕ್ಷೆಗೆ ಕಾರಣವನ್ನು
ತಿಳಿಸಲಾಗಿಲ್ಲ.
*******
೬. ಚಳಿ
ಸದಾ ಆಫೀಸು ಆಫೀಸು ಅನ್ನುತ್ತಾ
ಕೆಲಸಕಾರ್ಯದಲ್ಲೇ ಕಾಲಕಳೆಯುವ
ಅವನಿಗೆ ಅವಳ ಮಹತ್ತ್ವ ತಿಳಿಸಲು
ಮತ್ತು ಆಕೆಯ ನೆನಪಾಗಿಸಲು
ದೇವರು ಹೂಡಿದ ತಂತ್ರ.
23
Jul
09

ಸಕ್-ಹತ್ತು ಸಾಲುಗಳು!-೨

ಒಂದು ಸಾಲಿನ ಕಥೆಗಳು!
೧. ರಾಜನ ವೇಷಧಾರಿಗೆ ಇಂದು ಮೇಕಪ್ ಕಳಚಲು ಭಯವಾಗಿರುತಿರುವುದಕ್ಕೆ ಕಾರಣ, ಮೇಕಪ್ ಕಳಚಿದ ಬಳಿಕ ಸೇವಕ ಪಾತ್ರಧಾರಿಗೆ ಸಾವಿರ ರೂಪಾಯಿ ಸಾಲ ವಾಪಸ್ಸು ಮಾಡದಿದ್ದರೆ ಮನೆವರೆಗೂ ಬರುತ್ತೇನೆಂದು ಹೆದರಿಸಿದ್ದಾನೆ.
೨. ಗಂಟೆಕಾಲ ಅತ್ತು ಚಾಕಲೇಟು ಕೊಳ್ಳಲಿಕ್ಕಾಗಿ ತಂದೆಯನು ಪೀಡಿಸಿ ಈಸಿಕೊಂಡ ರೂಪಾಯಿಯೊಂದು ಚಿಣ್ಣನ ಮೆದು ಕೈಯ ನಯ ಬೆರಳುಗಳಿಂದ ತೂರಿ ಜಾರಿ ಅದೋ, ರಸ್ತೆಯಂಚಿನ ಮೋರಿಯ ಚಿಕ್ಕ ತೂತೊಳಗೆ ಹೋಗಿ ಬಿದ್ದಿದೆ.
೩. ಕದ್ದ ಮಾಲನ್ನೆಲ್ಲಾ ಒಟ್ಟಾಗಿರಿಸಿ ಮಡಿಯುಟ್ಟುಕೊಂಡ ಕಳ್ಳರು ಕೋಳಿಗೆ ಸೌಟಿನ ತೀರ್ಥದಲ್ಲಿ ತುಳಸಿ ಜೊತೆಗೆ ಅದರ ಮೇಲೆ ಬಿಟ್ಟು ’ಕೃಷ್ಣಾರ್ಪಣಮಸ್ತು’ ಅಂದರು!
೪. ಅಂದಿನ ಪ್ರವಚನದಲ್ಲಿ ಗುರುಗಳು ’ತಮ್ಮ ತಂದೆ-ತಾಯಿಯನ್ನು ಅವರ ಮುಪ್ಪಿನ ಕಾಲದಲ್ಲಿ ಚೆನ್ನಾಗಿ ನೋಡಿಕೊಳ್ಳದ, ಕಷ್ಟ ಕೊಡುವ ಮಕ್ಕಳು ನೂರು ವರ್ಷ ಬಾಳಲಿ’ ಎಂದಾಗ ಆಶ್ಚರ್ಯಚಕಿತರಾದ ಭಕ್ತಾದಿಗಳು, ನಂತರ ’ ಮುಪ್ಪಿನ ಸಮಯದ ಸಮಸ್ಯೆಗಳು ಅವರಿಗೇ ಹೆಚ್ಚು ಕಾಲ ಕಾಡಲಿ!’ ಎಂದಾಗ ಚಪ್ಪಾಳೆ ತಟ್ಟಿದರು!
೫. ತನಗಾಗಿ ಲಕ್ಷಾಂತರ ರೂಪಾಯಿಯ ರಿಂಗ್ ಗಳನ್ನು ಗಿಫ್ಟ್ ಮಾಡಿದ್ದ, ತನ್ನನ್ನು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸ್ತೀನಿ ಅನ್ನುವ ಶ್ರೀಮಂತರ ಮನೆ ಹುಡುಗ ಇವತ್ತಿನ ತನ್ನ ಬರ್ತ್ ಡೇ ಗೆ ಗಿಫ್ಟ್ ಆಗಿ ಕೇವಲ ಐನೂರು ರೂಪಾಯಿಯ ವಾಚ್ ತಂದಿದ್ದಕ್ಕೆ ಬೇಸರಿಸಿಕೊಂಡಿದ್ದ ಹುಡುಗಿಗೆ, ಅವನು ಆದ್ರನಾಗಿ ’ನಾನು ಮೊದಲ ಬಾರಿ ಸ್ವಂತ ದುಡಿದು ಗಳಿಸಿದ ಹಣದಿಂದ ತಂದಿದ್ದು’ ಎಂದಾಗ ಅವಳು ತುಂಬಿದ ಕಂಗಳಿಂದ ಅವನಿಗೆ ಮುತ್ತಿಟ್ಟಳು!
೬. ನಡುದಾರಿಯಲ್ಲಿ ಬಿದ್ದಿದ್ದ ಗುರುತು ಪರಿಚಯವಿಲ್ಲದ ವೃದ್ಧರೊಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದ ಯುವಕನನ್ನು ’ಆಪರೇಷನ್ ಆಗಬೇಕಿದೆ; ಈ ಪೇಷೆಂಟ್ ನಿಮಗೇನಾಗಬೇಕು’ ಎಂದು ನರ್ಸ್ ಕೇಳಿದಾಗ ತಡವರಿಸಿ..’ತಂದೆ’ ಎಂದ ಕ್ಷಣ ಮಾನವೀಯತೆಯನ್ನು ಹೊತ್ತ ತಂಗಾಳಿ ಅಲ್ಲಿನ ಸಮಸ್ತ ಹೃದಯಗಳಿಗೂ ಪಸರಿಸುತ್ತಿತ್ತು.
೭. ’ಯಾವುದೇ ಜೀವಿಯನ್ನು ಕೊಲ್ಲುವುದು ಮಹಾಪಾಪ; ಪ್ರತಿಯೊಂದು ಆತ್ಮದಲ್ಲೂ ದೇವರು ನೆಲೆಸಿದ್ದಾನೆ’ ಎಂದು ಸ್ವಲ್ಪ ಹೊತ್ತಿನ ಬಳಿಕ ’ಈಗ ಎಲ್ಲರೂ ಕಣ್ಮುಚ್ಚಿ ಒಂದು ನಿಮಿಷ ಭಗವಂತನನ್ನು ನೆನೆಯಿರಿ’ ಎಂದ ಸ್ವಾಮೀಜಿಗಳು ಎಲ್ಲರೂ ಕಣ್ಮುಚ್ಚಿದಾಗ ಆಗಿನಿಂದಲೂ ತಮಗೆ ತೊಂದರೆ ಕೊಡುತ್ತಿದ್ದ ಸೊಳ್ಳೆಯನ್ನು ಕೊಂದದ್ದನ್ನು ಕಣ್ಮುಚ್ಚಿದ ನಾಟಕ ಆಡುತಿದ್ದ ಪುಟ್ಟ ತನ್ನ ಅರೆಕಂಗಳಿಂದ ನೋಡುತ್ತಿದ್ದ..!
೮. ಹೆಣ್ಣಿನ ಮನಸ್ಸನ್ನು ಅತೀ ಚಿಕ್ಕದಾಗಿ ವರ್ಣಿಸಬೇಕಾದ ಸ್ಪರ್ಧೆಯಲ್ಲಿ ಸರ್ವಾನುಮತದಿಂದ ಜಂಟಿಯಾಗಿ ಗೆದ್ದ ಎರಡು ಸ್ಪರ್ಧಿ ಬರೆದಿದ್ದು ಅನುಕ್ರಮವಾಗಿ  ”!” ಮತ್ತು “?” ಎಂದು!
೯. ಆದರ್ಶ ದಂಪತಿಗಳು ಸ್ಪರ್ಧೆಯಲ್ಲಿ ಗೆದ್ದ ಹಣದಲ್ಲಿ ಬಂಗಾರ ಮಾಡಿಸೋಣವೆಂದು ಅವಳೂ, ಪಲ್ಸಾರ್ ಬೈಕ್ ಖರೀದಿಸೋಣವೆಂದು ಅವನೂ ಜಗಳಾಡಿಕೊಂಡರು.
೧೦. ಭಟ್ಟರ ಮಗು ಆರೋಗ್ಯವಂತವಾಗಲು ಮೀನಿನೆಣ್ಣೆಯಿಂದ ಮಾಡಿದ ಮಾತ್ರೆಯನ್ನು ನುಂಗಲೇಬೇಕೆಂದು ಡಾಕ್ಟರು ಹೇಳಿದ್ದರು.ಒಂದು ಸಾಲಿನ ಕಥೆಗಳು!

೧೦. ಭಟ್ಟರ ಮಗು ಆರೋಗ್ಯವಂತವಾಗಲು ಮೀನಿನೆಣ್ಣೆಯಿಂದ ಮಾಡಿದ ಮಾತ್ರೆಯನ್ನು ನುಂಗಲೇಬೇಕೆಂದು ಡಾಕ್ಟರು ಹೇಳಿದ್ದರು.

೩. ಕದ್ದ ಮಾಲನ್ನೆಲ್ಲಾ ಒಟ್ಟಾಗಿರಿಸಿ ಮಡಿಯುಟ್ಟುಕೊಂಡ ಕಳ್ಳರು, ಕೋಳಿಗೆ ಸೌಟಿನ ತೀರ್ಥದಲ್ಲಿ ತುಳಸಿ ಜೊತೆಗೆ ಅದರ ಮೇಲೆ ಬಿಟ್ಟು ’ಕೃಷ್ಣಾರ್ಪಣಮಸ್ತು’ ಅಂದರು!
೪. ಅಂದಿನ ಪ್ರವಚನದಲ್ಲಿ ಗುರುಗಳು ’ತಮ್ಮ ತಂದೆ-ತಾಯಿಯನ್ನು ಅವರ ಮುಪ್ಪಿನ ಕಾಲದಲ್ಲಿ ಚೆನ್ನಾಗಿ ನೋಡಿಕೊಳ್ಳದ, ಕಷ್ಟ ಕೊಡುವ ಮಕ್ಕಳು ನೂರು ವರ್ಷ ಬಾಳಲಿ’ ಎಂದಾಗ ಆಶ್ಚರ್ಯಚಕಿತರಾದ ಭಕ್ತಾದಿಗಳು, ನಂತರ ’ ಮುಪ್ಪಿನ ಸಮಯದ ಸಮಸ್ಯೆಗಳು ಅವರಿಗೇ ಹೆಚ್ಚು ಕಾಲ ಕಾಡಲಿ!’ ಎಂದಾಗ ಚಪ್ಪಾಳೆ ತಟ್ಟಿದರು!
೫. ತನಗಾಗಿ ಲಕ್ಷಾಂತರ ರೂಪಾಯಿಯ ರಿಂಗ್ ಗಳನ್ನು ಗಿಫ್ಟ್ ಮಾಡಿದ್ದ, ತನ್ನನ್ನು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸ್ತೀನಿ ಅನ್ನುವ ಶ್ರೀಮಂತರ ಮನೆ ಹುಡುಗ ಇವತ್ತಿನ ತನ್ನ ಬರ್ತ್ ಡೇ ಗೆ ಗಿಫ್ಟ್ ಆಗಿ ಕೇವಲ ಐನೂರು ರೂಪಾಯಿಯ ವಾಚ್ ತಂದಿದ್ದಕ್ಕೆ ಬೇಸರಿಸಿಕೊಂಡಿದ್ದ ಹುಡುಗಿಗೆ, ಅವನು ಆದ್ರನಾಗಿ ’ನಾನು ಮೊದಲ ಬಾರಿ ಸ್ವಂತ ದುಡಿದು ಗಳಿಸಿದ ಹಣದಿಂದ ತಂದಿದ್ದು’ ಎಂದಾಗ ಅವಳು ತುಂಬಿದ ಕಂಗಳಿಂದ ಅವನಿಗೆ ಮುತ್ತಿಟ್ಟಳು!
೬. ನಡುದಾರಿಯಲ್ಲಿ ಬಿದ್ದಿದ್ದ ಗುರುತು ಪರಿಚಯವಿಲ್ಲದ ವೃದ್ಧರೊಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದ ಯುವಕನನ್ನು ’ಆಪರೇಷನ್ ಆಗಬೇಕಿದೆ; ಈ ಪೇಷೆಂಟ್ ನಿಮಗೇನಾಗಬೇಕು’ ಎಂದು ನರ್ಸ್ ಕೇಳಿದಾಗ ತಡವರಿಸಿ..’ತಂದೆ’ ಎಂದ ಕ್ಷಣ ಮಾನವೀಯತೆಯನ್ನು ಹೊತ್ತ ತಂಗಾಳಿ ಅಲ್ಲಿನ ಸಮಸ್ತ ಹೃದಯಗಳಿಗೂ ಪಸರಿಸುತ್ತಿತ್ತು.
grabbing_arm
೭. ’ಯಾವುದೇ ಜೀವಿಯನ್ನು ಕೊಲ್ಲುವುದು ಮಹಾಪಾಪ; ಪ್ರತಿಯೊಂದು ಆತ್ಮದಲ್ಲೂ ದೇವರು ನೆಲೆಸಿದ್ದಾನೆ’ ಎಂದು ಸ್ವಲ್ಪ ಹೊತ್ತಿನ ಬಳಿಕ ’ಈಗ ಎಲ್ಲರೂ ಕಣ್ಮುಚ್ಚಿ ಒಂದು ನಿಮಿಷ ಭಗವಂತನನ್ನು ನೆನೆಯಿರಿ’ ಎಂದ ಸ್ವಾಮೀಜಿಗಳು ಎಲ್ಲರೂ ಕಣ್ಮುಚ್ಚಿದಾಗ ಆಗಿನಿಂದಲೂ ತಮಗೆ ತೊಂದರೆ ಕೊಡುತ್ತಿದ್ದ ಸೊಳ್ಳೆಯನ್ನು ಕೊಂದದ್ದನ್ನು ಕಣ್ಮುಚ್ಚಿದ ನಾಟಕ ಆಡುತಿದ್ದ ಪುಟ್ಟ ತನ್ನ ಅರೆಕಂಗಳಿಂದ ನೋಡುತ್ತಿದ್ದ..!
೮. ಹೆಣ್ಣಿನ ಮನಸ್ಸನ್ನು ಅತೀ ಚಿಕ್ಕದಾಗಿ ವರ್ಣಿಸಬೇಕಾದ ಸ್ಪರ್ಧೆಯಲ್ಲಿ ಸರ್ವಾನುಮತದಿಂದ ಜಂಟಿಯಾಗಿ ಗೆದ್ದ ಎರಡು ಸ್ಪರ್ಧಿ ಬರೆದಿದ್ದು ಅನುಕ್ರಮವಾಗಿ  ”!” ಮತ್ತು “?” ಎಂದು!
೯. ಆದರ್ಶ ದಂಪತಿಗಳು ಸ್ಪರ್ಧೆಯಲ್ಲಿ ಗೆದ್ದ ಹಣದಲ್ಲಿ ಬಂಗಾರ ಮಾಡಿಸೋಣವೆಂದು ಅವಳೂ, ಪಲ್ಸಾರ್ ಬೈಕ್ ಖರೀದಿಸೋಣವೆಂದು ಅವನೂ ಜಗಳಾಡಿಕೊಂಡರು.
೧೦. ಭಟ್ಟರ ಮಗು ಆರೋಗ್ಯವಂತವಾಗಲು ಮೀನಿನೆಣ್ಣೆಯಿಂದ ಮಾಡಿದ ಮಾತ್ರೆಯನ್ನು ನುಂಗಲೇಬೇಕೆಂದು ಡಾಕ್ಟರು ಹೇಳಿದ್ದರು.

ಹೆಜ್ಜೆ ಗುರುತು

  • 23,000 ಜನ

ಈ ಕ್ಷಣ

ಮೆನು

ಇಣುಕಿದವರ ಜಿಯೋಗ್ರಫಿ

Page copy protected against web site content infringement by Copyscape