ನನ್ನ ಕವಿತೆಗಳು..!

Posted: ಆಗಷ್ಟ್ 17, 2008 in ಕವಿತೆ

ಭಾವನೆಗಳಿಗೆ ರೆಕ್ಕೆ
ಮೂಡಿಸಿ ಕಲ್ಪನಾ
ವಿಹಾರ ಮಾಡಿಸುವ..

ಅರೆ ಕ್ಷಣ ಕಣ್ಮುಚ್ಚಿದರೆ
ನಿಮ್ಮವಳ ಪರಿಮಳ
ನೆನಪಾಗಿಸುವ..

ಒಮ್ಮೆ ಗುನುಗಿದರೆ
ಹೊಸ ಹೊಸ
ರಾಗ ಹುಟ್ಟಿಸುವ…

ಪದ ಗಳನ್ನೂ ಹೊಡೆದು
ಹಾಕಿದಷ್ಟೂ ಹೊಸ
ಅರ್ಥ ಗಳು ಉದ್ಭವಿಸುವ…

ನನ್ನ ಕವಿತೆಗಳು..

ಓ ಸಂಪಾದಕನೇ..

ನಿನಗಿಷ್ಟವಾಗದೆ ಹೋದಲ್ಲಿ
ಕಸದ ಬುಟ್ಟಿಯಲ್ಲೂ
ತಮ್ಮ ಬೆಲೆ ಕಳೆದುಕೊಳ್ಳುತ್ತದೆ

ನಿಮ್ಮ ಟಿಪ್ಪಣಿ ಬರೆಯಿರಿ