ಅಮ್ಮ ನ ನೆನಪು ಮತ್ತು ಫಾರಿನ್ನು .:)

Posted: ಆಗಷ್ಟ್ 24, 2008 in ದಿನದ ಎಸಳುಗಳು...

ಅಮ್ಮನಿಗೆ ಮೊಬೈಲ್ ಕಂಡರೆ ಆಗಲ್ಲ.

ಮಗನ ಜತೆ ಮಾತನಾಡಬಹುದು ಅನ್ನುವ ಒಂದು ಕಾರಣ ಇಲ್ಲದೇ ಹೋಗಿರದಿದ್ದರೆ ಅದನ್ನು ಯಾವಾಗಲೋ  ಎಸೆದಿರುತಿದ್ದಳು  ಅನ್ನಿಸುತ್ತೆ.
ಮೊಬೈಲ್ ನಲ್ಲಿ ಕರೆ ಸ್ವೀಕರಿಸುವ ಗುಂಡಿ ಬಿಟ್ಟರೆ ಬೇರೇನೂ ಒತ್ತಲು ಗೊತ್ತಿಲ್ಲ. ಅದನ್ನೂ ನಾನು ಕರೆ ಮಾಡುವೆ ಎಂಬ ಉದ್ದೇಶದಿಂದಲೇ ಕಷ್ಟಪಟ್ಟು  ಕಲಿತದ್ದು . ನನ್ನ ಬಿಟ್ಟರೆ ಬೇರೆ ಯಾರೂ ಕರೆ ಮಾಡದೇ ಹೋದರೂ ಯಾವಾಗಲೋ ಒಮ್ಮೆ ಆ ನಂಬರನ್ನು ನಾನು ಉಪಯೋಗಿಸಿದ್ದನ್ನು  ನೆನೆದು ಕೊಂಡು ನನ್ನ ಗೆಳೆಯರು ಮಾಡಿರಬಹುದು ಅಂತ ಊಹೆ ಮಾಡುತ್ತಾಳೆ. ಆ ನಂಬಿಕೆಗೆ ತುಪ್ಪ ಹುಯ್ಯುವಂತೆ ನಾನೂ ಆಗಾಗ್ಗೆ  ಬೇರೆ ದನಿಯಲ್ಲಿ ಮಾತಾಡಿ  ಕಾಡುತಿರುತ್ತೇನೆ.
ಯಾವಾಗಲೋ  ಒಮ್ಮೆ ಬೇರೆ ಯಾರಾದರೂ ಕರೆ ಮಾಡಿದಾಗ ನಾನೇ ಬೇರೆ ದನಿಯಲ್ಲಿ ಮಾತಾಡ್ತಾ ಇದ್ದೇನೆ ಅಂದುಕೊಂಡು ಅವಳ ಬಾಯಲ್ಲಿ ಹಿಗ್ಗಾ ಮುಗ್ಗಾ  ಉಗಿಸಿಕೊಳ್ಳುತ್ತಾರೆ ಅನ್ನಿಸುತಿರುತ್ತದೆ.
ಆದರೆ ಹಾಗೆಂದೂ ಆಗಿಲ್ಲ .

ಎಷ್ಟು ಸಲ ಆ ರೀತಿ ಮಾಡಿದರೂ ಮತ್ತೆ ಮತ್ತೆ ಮೋಸ ಹೋಗುತ್ತಾಳೆ. ನನಗೆ ಮೊದಲ ತೊದಲ  ಮಾತು ಕಳಿಸಿದ ಋಣ ಮರೆಯದೇ ಎಲ್ಲೂ ನೋವಾಗದಂತೆಯೇ ಮಾತಾಡುವೆ. ಕಾಮಿಡಿ ಟೈಮ್ ಗಣೇಶ್ ತರ ಬೇರೆ ದನಿಯಲ್ಲಿ ಮಾತಾಡಿದ,
ಅಂತ ಎಲ್ಲೆಡೆ ಕುಶೀಯಿಂದ ಹೇಳಿಕೊಳ್ಳಬೇಕು ಹಾಗೆ ಮಾತಾಡುತಿದ್ದೆ.

ಅಪ್ಪ ತೀರಿ ಹೋದ ಮೇಲೆ  ಮನೆಯಲ್ಲಿ ಒಬ್ಬಳೇ ಇರುತ್ತಳಲ್ಲ ಅಂತ ಬೇಸರಾಗಿ ನಾನು ಮಾಲ್ಡಿವ್ಸ್ ಗೆ ಬಂದ ಮೇಲೆ ಹೆಚ್ಚು ಕರೆ ಮಾಡುತ್ತೇನೆ. ಕೆಲಸಕ್ಕೆ ಹೋದ ಅಣ್ಣ  ಮರಳಿ ಬರುವುದು ರಾತ್ರಿಯೆ. ಅವನ ಬಳಿ ಮೈಲ್ ನಲ್ಲಿ ಮಾತಾಡಬಹುದು.ಹಾಗಾಗಿ ಅವಳು ಧಾರಾವಾಹಿಗಳಿಗೆ ಅಡ್ಡಿಯಾಗದಂತೆ ಸಮಯ ನೋಡಿ ಕರೆ ಮಾಡ್ತಾ ಇರ್ತೇನೆ.
ಒಮ್ಮೆ ಈ  ಕೀಟಲೆ  ಮನಸ್ಸಿಗೆ ಯಾಕೋ ಅಮ್ಮನ ಜನರಲ್  ನಾಲೆಜ್  ನೋಡಬೆಕನ್ನಿಸಿತು. “ಎಲ್ಲಿದ್ದಾನೆ ಈಗ ನಿಮ್ಮ ಕಿರಿಯ ಮಗ ?”ಅಂತ ಯಾರಾದರೂ ಕೇಳಿದರೆ “ಫಾರಿನಲ್ಲಿದ್ದಾನೆ ” ಅನ್ನಬಲ್ಲಳಾದರೂ ಎಲ್ಲಿ ಅಂತ ಕೇಳಿದರೆ ಎನನ್ನುವಳು ಎಂಬ ಕುತೂಹಲ ನನಗೂ ಇತ್ತು.
ಅಂದೂ ಕರೆ ಮಾಡಿ ವಿಭಿನ್ನ ದನಿಯಲ್ಲಿ ಮಾತು ಶುರು ಮಾಡಿದೆ.
“ಎಲ್ಲಿದ್ದಾನಮ್ಮ  ನಿಮ್ಮ ಕಿರೀ ಮಗ?”
“ಮ್..ಅವ ಫಾರಿನ್ನಿಗ್ ಹೋಯ್ದ..”
“ಅಯ್ಯ… ಫಾರೀನ್ ಅಂದ್ರೆ ಎಲ್ಲಿ..?”
“ಮ್..ಅದ್  ಅದ್ .. ಮೋಸ್ಕೋ ಅಂತ್ ಹೇಳಿ  ಕಾಣುತ್ತ್… ಸರೀಗೆ ಗೊತ್ತಿಲ್ಲ ಕಾಣಿ..” ಅಂತ ಕೇಳಿದೊಡನೆ ನಗು ತಡೆಯಲಾಗಲಿಲ್ಲ.
ತನ್ನ ಪ್ರೀತಿ ಮುಗ್ಧತೆಯಿಂದ , ಪ್ರೀತಿಯಿಂದ ಸದಾ ನೆನಪಾಗ್ತಾ ಇರ್ತಾಳೆ. ಮಗ ಫಾರಿನ್ನಿಗೆ ಹೋದ ಅಂತ ಒಂದು ಹೆಮ್ಮೆ,,ನನ್ನೆಡೆಗಿನ ಭರ್ಜರಿ  ಪ್ರೀತಿ ಬಿಟ್ಟರೆ ಆಕೆಯ ಮನದಲ್ಲಿ ಬೇರೇನೂ ಕಾಣಸಿಗದು.
ತನ್ನ ಹಾಸ್ಪಿಟಾಲಿಟಿಗಾಗಿ   ಜಗತ್ತಿಗೇ  ಹೆಸರುವಾಸಿಯಾದ ಮಾಲ್ಡಿವ್ಸ್ ಗೆ ಬಂದರೂ ಅಮ್ಮನ ಪ್ರೀತಿ ಸಿಗದಷ್ಟು ದೂರ ಇರುವ ನಾವು ಒಂದು ತರ ಅನಾಥರೆ ಅಲ್ಲವೇ ಎಂಬುದು ಆಗ್ಗಾಗ್ಗೆ ಚುಚ್ಚುತ್ತಾ ಇರುತ್ತದೆ…

Advertisements
ಟಿಪ್ಪಣಿಗಳು
 1. satish ಹೇಳುತ್ತಾರೆ:

  suuper…. really a good ending. particularly the last line. the innocence of a mother. when we all writers crib at the mobile being “thumba addi kathe bariuvudake, aa oondu gundi ne ammana preethi baagila screen theriyuvudu… (baagilalla…. adu avagalu theride iruthe)

 2. hema ಹೇಳುತ್ತಾರೆ:

  Odhid mele yako maneg bega hogi amman nodbeku annisthu ree… 😦

 3. neelihoovu ಹೇಳುತ್ತಾರೆ:

  ಸತೀಶ್,
  “ತುಂಬಾ ಅಡ್ಡಿ ಕತೆ ಬರೆಯುವುದಕ್ಕೆ….ಆ ಒಂದು ಗುಂಡಿನೇ ಅಮ್ಮನ ಪ್ರೀತಿ ಬಾಗಿಲ ತೆಗೆಯುವುದು…
  (ಬಾಗಿಲಲ್ಲ ಅದು… ಸದಾ ತೆರೆದೇ ಇರುತ್ತದಲ್ಲವಾ?)”
  ಎಂಬ ನಿಮ್ಮ ಮಾತು ನೂರಕ್ಕೆ ನೂರು ಸರಿ…

 4. neelihoovu ಹೇಳುತ್ತಾರೆ:

  ಹೇಮಾ,
  ನಿಮ್ಮಮ್ಮನ ಮೇಲೆ ನಿಮ್ಮ ಪ್ರೀತಿ ನೋಡಿ ನಂಗೂ ಈಗ ಆಸೆಯಾಗ್ತಿದೆ… ನಮ್ಮಮ್ಮನ ನೋಡಲು..:)

 5. nagesh mangalore ಹೇಳುತ್ತಾರೆ:

  niv nimma ammanannu kitale madodu nodidre nangu hagene ammanannu kitle madbeku ansute adre………….. nanna amma tirkondu 24 yrs aitu ……………..yako odi kannu thumbi bantu………..

 6. neelihoovu ಹೇಳುತ್ತಾರೆ:

  ಸಾರಿ ನಾಗೇಶ್ ಸರ್,

  ನಿಮ್ಮ ಭಾವನೆ ಅರ್ಥವಾಗುತ್ತದೆ.
  ನಿಮ್ಮ ಅಭಿಪ್ರಾಯಕ್ಕೆ ಬಹಳ ಧನ್ಯವಾದಗಳು….

 7. svatimuttu ಹೇಳುತ್ತಾರೆ:

  ಅಣ್ಣ ಅಮ್ಮನ ತುಂಬಾ ಮಿಸ್ ಮಡ್ಕೊತಿದ್ದಿರ….????

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s