ಒಂದಿಷ್ಟು ಕಥೆ ಹೇಳುವೆ…(ಒಂದೆರಡು ಸಾಲಲ್ಲೇ ಮುಗಿಸುವೆ… ಕುಯ್ಯಲ್ಲ ಕಣ್ರೀ…:) )

Posted: ಆಗಷ್ಟ್ 27, 2008 in ಒಂದು ಸಾಲಿನ ಕತೆಗಳು..

 

 

**  “೦ ಹೊಡೆದರೆ 10 ಕೋಟಿ ಕೊಡುವೆ” ಎಂಬ ಬುಕ್ಕಿಯ offer ನ್ನು ಧಿಕ್ಕರಿಸಿದ

ದೇಶಪ್ರೇಮಿ ಬ್ಯಾಟ್ಸಮನ್… ಮೊದಲ ಎಸೆತದಲ್ಲೇ ಎದುರಾಳಿಯ ಶರವೇಗದ ಯಾರ್ಕರಗೆ ಕ್ಲೀನ್ ಬೌಲ್ಡ್ ಆದ!

 

 

 

**  ಅವರು ಹೇಳುವ ಮೊದಲೇ “ಮಾಡುವೆ” ಎಂದು ಹೇಳಿ ಆಗಿತ್ತು.

ಈಗ ಅವರೇನು ಮಾಡಲು ಹೇಳುವರೋ ಎಂದು ಭಯದಿಂದ ಕಾಯುತ್ತ ಕುಳಿತ…!

 

 

**  ಜಗತ್ತಿನಲ್ಲೇ ಅದ್ಭುತ ಕವಿತೆ ಬರೆದ ಕವಿ,

ಯಾರಾದರು ಕೃತಿ ಚೌರ್ಯ ಮಾಡುವರೆನೋ ಅಂತ ಭಯಪಟ್ಟು

ಸಾಯುವವರೆಗೆ ತನ್ನೊಳಗೆ ಬಚ್ಚಿಟ್ಟುಕೊಂಡ…!

 

 

 

**  ಬಡ್ಡಿ ಮಗ….ಎಷ್ಟು ಬಡಿದರೂ ಅತ್ತಿರಲಿಲ್ಲ….

ಆದರೆ…

ಒಮ್ಮೆ ರಮ್ಯ “ನಿನ್ನನು ಪ್ರೀತಿಸೋಲ್ಲ ” ಅಂದಳು ನೋಡಿ…..

 

 

**  ಅವಳ ಕನಸೆಲ್ಲಿ

ಬೀಳುವುದೋ”

ಎಂದು ಭಯಪಟ್ಟು ಅವನು ನಿದಿರಿಸಲೇ ಇಲ್ಲ…!

 

 

**  ನಿಜ, ಪ್ರಪಂಚದಲಿ ಅಸಾಧ್ಯವಾದುದು ಯಾವುದೂ ಇಲ್ಲ

ಅಂತ ಅವಳಿಗೆ ಹೇಳಿದ್ದೆ!

ವರ್ಷಗಟ್ಟಲೆ ಪ್ರೀತಿಸಿ ಈಗ ಒಮ್ಮೆಲೇ

ನನ್ನ ಮರೆತುಬಿಡು” ಅನ್ನುತಿದ್ದಾಳೆ!

 

 

**  ನ್ಯೂಸ್ ಪೇಪರಿನ T.V. ಪುಟದಲ್ಲಿ . ಪೋಗೋ ಚಾನೆಲ್ಲಿನಲ್ಲಿ ರಾತ್ರಿ ೯ ಗಂಟೆಗೆ “Mr. Bean” ಇದ್ದಿದ್ದು ನೋಡಿ ಖುಷಿಯಾದ  ಪುಟ್ಟ,

ಹಿಂದಿನ ಪುಟದಲ್ಲಿದ್ದ “ಇಂದಿನಿಂದ ರಾತ್ರಿ ೯ ಕ್ಕೆ ಅರ್ಧ ಗಂಟೆ ಲೋಡ್ ಶೆಡ್ಡಿಂಗ್”

ಎಂಬ ಸುದ್ದಿಯನ್ನು ಗಮನಿಸಲೇ ಇಲ್ಲ!

 

 

**  ಆ ದಿನ ಅವನು ರಿಬ್ಬನ್ ಕಟ್ ಮಾಡುವ ದೃಶ್ಯವಿತ್ತು…

ನಿರ್ದೇಶಕರು ಕಟ್ ಅನ್ನುವಷ್ಟೂ ಹೊತ್ತು ಆತ ಕಟ್ ಮಾಡುತ್ತಲೇ ಇದ್ದ!

 

 

**  ಎಲ್ಲವನ್ನು ರಿಯಲ್ ಆಗಿ ತೋರಿಸುವ ನಿರ್ದೇಶಕನ ಜತೆ ಸಿನೆಮ ಮಾಡುತಿದ್ದ

ನಟ ಅವತ್ತು ತುಂಬಾ ಭಯಭೀತನಾಗಿದ್ದ.. ಕಥೆಯಲ್ಲಿ ಅವನು ಸಾಯುವ ದೃಶ್ಯ ವಿತ್ತು..!

 

 

 

**  ಹುಡುಕಲು ಹೋದವರು ಇನ್ನು ಬಂದಿಲ್ಲವಂತೆ..!

ಬಹುಶ ಕಾಣೆಯಾಗಿರಬಹುದು!

 

 

 

**  ಕಥಾ ಲೇಖಕರಿಗೆ ಅಪರೇಷನ್ ..

ದೇವರು ಬರೆದ ಕ್ಲೈಮ್ಯಾಕ್ಸ್ ನ್ನು ಅವರೂ ಕಾಯುತಿದ್ದಾರಂತೆ..!

 

 

**  ಬಾಳೆಲ್ಲ  ತಾನು  ಏನು ಎಂದು ಅರಿಯಲು  ಹೋದವನಿಗೆ ….

ಕೊನೆಯಲ್ಲಿ  ಗೊತ್ತಾಯಿತು …

ತಾನೇನೂ  ಅಲ್ಲವೆಂದು …

ಅಷ್ಟರಲ್ಲಿ  ಹೊತ್ತಾಗಿತ್ತು !

ಟಿಪ್ಪಣಿಗಳು
 1. vijayraj ಹೇಳುತ್ತಾರೆ:

  nijavagloo thumbaane enjoy maadidri….
  nam navilugari somu tarahaane chikka chikka vaakyagaLalli mahattannu katti koduva shakti nimage ide ansutte.
  keep up the good writing

  – vijayraj kannanth

 2. neelihoovu ಹೇಳುತ್ತಾರೆ:

  Nimmella anisikegaLige thumna danyavaadagalu Vijayaraj ravare..

  Nimma preethi heege irali..:)

 3. somu ಹೇಳುತ್ತಾರೆ:

  hmmm 2 page nalli bareyodanna( koreyodana) 2 salalli baredu mugsiddiri..:) yako nange ee blog tumba ishta gta ide:)

 4. somashekar ಹೇಳುತ್ತಾರೆ:

  tumba chennagide andre salodilla sakathagide andre?… nanage iddakinta jaasti expres madoke aagodilla. naanu tumba enjoy madde.adre kelavu sariyagi arta aaglilla(inner meaning).adakke helodu kale arta madkoloke kalegara agbeku anta.. nice work keep doing..

 5. neelihoovu ಹೇಳುತ್ತಾರೆ:

  ಸೋಮು ಮತ್ತು ಸೋಮಶೇಖರ್ ಇಬ್ರಿಗೂ ತುಂಬಾನೇ ಥ್ಯಾಂಕ್ಸ್..

 6. ಅನಾಮಿಕ ಹೇಳುತ್ತಾರೆ:

  superb yar matthashtu onderadu salina kathegalannu bareyabeku geleya

 7. harishkumar.c ಹೇಳುತ್ತಾರೆ:

  suberb yar yako nimma blogigie nanu addict hagtha iddini boss dialy enadru baritha iri
  wt madthane irthini ,

 8. viorequieme ಹೇಳುತ್ತಾರೆ:

  Just want to say what a great blog you got here!
  I’ve been around for quite a lot of time, but finally decided to show my appreciation of your work!

  Thumbs up, and keep it going!

  Cheers
  Christian, iwspo.net

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s