ಮತ್ತೊಂದಿಷ್ಟು ಸಾಲು ಸಾಲು ಕಥೆಗಳು…

Posted: ಆಗಷ್ಟ್ 28, 2008 in ಒಂದು ಸಾಲಿನ ಕತೆಗಳು..

 

 

** ಅವನು ಆ  ಹಣ್ಣಿನ  ರುಚಿ  ಹೇಳುವಷ್ಟರಲ್ಲಿ

ಅದರ  ವಿಷದಿಂದ  ಸತ್ತಿದ್ದ !

 

 

 

** ಬಿದ್ದವನು ಸತ್ತನ ಇಲ್ಲವ ರಮ್ಯಳಿಗೆ ಗೊತ್ತಾಗಲಿಲ್ಲ…

ಅವಳೆಂದೂ ಸತ್ತಿರಲಿಲ್ಲ… !

 

 

** ರಾಮಮೂರ್ತಿ ಸತ್ತು ಎರಡು ತಿಂಗಳಾಯಿತು” ಎಂದು ಸುಳ್ಳು ಹೇಳಿದ

ರಾಮಮೂರ್ತಿ, “ಇಲ್ಲಿ ರಾಮಮೂರ್ತಿ ಎಂದರೆ ಯಾರು?” ಅಂತ ಸಾವು ವಿಳಾಸ ಹುಡುಕಿಕೊಂಡು ಬಂದಾಗ!

 

 

 

** ಬದುಕು ಎಂದು ಅವನನ್ನು ಸಾಯಲು ಬಿಟ್ಟಿರಲಿಲ್ಲ..

ಇಂದು ಸಾವು ಅವನನ್ನು ಬದುಕಲು ಬಿಡಲಿಲ್ಲ!

 

 

 

**  ಅವಳು ತುಂಬ ದೂರ ಹೋದ ಮೇಲೂ ತಿರುಗಿ ನೋಡುತ್ತಲೇ ಇದ್ದಳು,

ರಂಜಿತ್ ಸತ್ತನ ಇಲ್ಲವ ಎಂದು…

ಅವನು ಉಸಿರು ಎಳೆದುಕೊಳ್ಳುತ್ತಲೇ ಇದ್ದ!

 

 

 

** ಸೆಕ್ಯೂರಿಟಿ ಅವಳನ್ನು ಪೂರ್ಣವಾಗಿ ಪರಿಶೀಲಿಸಿದ,

ಯಾವ ಆಯುಧವೂ ಸಿಗಲಿಲ್ಲ… ಆದರೆ ವಿಷವನ್ನು ಆಕೆ ಕಣ್ಣಲ್ಲೇ ಇಟ್ಟುಕೊಂಡಿದ್ದಳು!

 

 

**  ಎಂಥ ಚಂದದ ಕಥೆ ಬರೆದಿದ್ದ…

ಕೊನೆಯಲ್ಲಿ ಹೆಸರು ಬರೆವಾಗ ಪೆನ್ನಿನ ನಿಬ್ಬಿನಂತೆಯೇ ಉಸಿರು ಕೂಡ ನಿಂತು ಹೋಯಿತಂತೆ!

 

 

**  ಅವನು ಅವತ್ತು ವಾಂತಿ ಮಾಡಿಕೊಂಡ…

ಮದುವೆಯಾಗಿ ಮೂರು ತಿಂಗಳಾಗಿತ್ತಷ್ಟೆ…!

ಅವನು ಅಪ್ಪ ಆಗಿದ್ದಕ್ಕೆ ಅವಳು ತುಂಬಾ ಖುಷಿ ಪಟ್ಟಳು…!”

ಇದನ್ನು ಕೇಳಿ ಶಾಸ್ತಿಗಳು ಬೇಸ್ತು ಬಿದ್ದರು…!

ಒಳಗೆ, ಸಾಲು ಬಿಟ್ಟು ಸಾಲು ಓದುತಿದ್ದ ಪುಟ್ಟ!”

ಹೀಗೆ ಸಾಲು ಸಾಲಿಗೂ ತಿರುವು ನೀಡಿದ ಲೇಖಕನಿಗೆ ಬೋರಾಯಿತು..!

 

 

** ಭಯಗೊಂಡು ಅವನಿಗೆ ಎಷ್ಟು ಫೋನ್ ಮಾಡಿದರು network ಸಿಗ್ತಾ ಇರ್ಲಿಲ್ಲ…

TV9 ಮಾತ್ರ ಬಾಂಬು ವಿವರಗಳನ್ನು ಮತ್ತೆ ಮತ್ತೆ ತೋರಿಸುತ್ತಲೇ ಇತ್ತು..!

 

** ಕುರುಡನೂ, ಕಣ್ಣಿದ್ದವನೂ  ಒಂದು ಲಾಟೀನು ಹಿಡಿದು ಹೊರಟಿದ್ದರು.
ಎಣ್ಣೆ ಖಾಲಿಯಾದ್ದರಿಂದ ದೀಪ ಆರಿತು. ಕಣ್ಣಿರುವವನು ಮುಂದೆ ಹೋಗಲಾರದೆ ನಿಂತ.
ಕುರುಡನು ತನ್ನ  ಪಾಡಿಗೆ ಗುನುಗುತ್ತ ಹೋಗುತ್ತಲೇ ಇದ್ದ..!

 

Advertisements
ಟಿಪ್ಪಣಿಗಳು
  1. ಶಿವು.ಕೆ ಹೇಳುತ್ತಾರೆ:

    ಬಲು ಮಜಾ ಬರುತ್ತೆ ಇಂಥ ಒಂದು ಸಾಲಿನ ಕಥೆಗಳನ್ನು ಓದಿದರೆ. ಕೊನೆಯದಂತೂ ಸೂಪರ್! ಎಲ್ಲಿ ಹುಡುಕಿ ತರುತ್ತೀರಿ ಇದನ್ನು? ನನಗೆ ಇನ್ನಷ್ಟು ಬೇಕಿದೆಯಲ್ಲ !

    ಮತ್ತೆ ಇಂತದೇ ರೀತಿಯ ಟೋಪಿ ಫೋಟೊಗಳು ನನ್ನ ಬ್ಲಾಗಿಗೆ ಬಂದಿವೆ. ಬನ್ನಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s