** ಏನು ಈ ನೀಲಿ ಹೂವೆಂದರೆ..? **

Posted: ಆಗಷ್ಟ್ 31, 2008 in ಬ್ಲಾಗ್ ನ ಬಗ್ಗೆ..

ನನ್ನೊಳಗಿನ ನನ್ನೊಲವಿನ ಸಾಲುಗಳಾ ?
ಬದುಕಿನೆಡೆಗೆ, ಬರಹದೆಡೆಗೆ ನನಗಿರೋ ತೀವ್ರ passion ನ್ನಾ? ,
ಭಾವಗಳಿಗೆ ಗಾಳ ಹಾಕಿ ದಾಗ ಸಿಕ್ಕ ಪ್ರೀತಿ ಎಂಬ ತಿಮಿಂಗಿಲ ವಾ?…
ಭೋರೆಂದು ಸುರಿಯುವ ಭಾವಗಳಿಗೆ ನಾನು ಹಿಡಿದ ಬೊಗಸೆ ನಾ?
ಬದುಕಿನ ತೋಟದಲ್ಲಿ ಎಲ್ಲರು ಕೆಂಪು,ಹಳದಿ ಹೂವುಗಳನ್ನೇ ಮೆಚ್ಚಿಕೊಂಡಾಗ
ಮೂಲೆಯಲ್ಲಿ ನ(ಅ)ರಳಿ ಅತ್ತದ್ದಾ … ?
ನಲುಮೆಯ ಹುಡುಗಿ ಇದ್ದಕ್ಕಿದ್ದಂತೆ ಕೈ ಕೊಟ್ಟಾಗ
ಎದೆಯಲ್ಲಿ ಭಗ್ಗನೆ ಹೊತ್ತಿ ಉರಿದದ್ದಾ ಈ “ನೀಲಿ ಹೂವು…” ?
ಅಥವಾ
ಕೇವಲ ನನ್ನ ಬರೆವ ತೆವಲಾ?
ಗೊತ್ತಿಲ್ಲ…
ಆದರೆ ನೀಲಿಹೂವಿನ ತೋಟಕ್ಕೆ ಬಂದ ಯಾರೂ ಅತೃಪ್ತರಾಗಿ ವಾಪಸ್ಸು ಹೋಗಬಾರದೆಂಬುದು
ಮಾತ್ರ ನನ್ನ ಉದ್ದೇಶ. ಆದ್ದರಿಂದಲೇ ಬರೆದಿದ್ದನ್ನೆಲ್ಲಾ ತುರುಕದೇ, ಗೆಳೆಯರ ಸಹಾಯ ಮತ್ತು ನನ್ನ
ಮನಸ್ಸಿನ ಜರಡಿ ಉಪಯೋಗಿಸಿ ಚೆನ್ನಾಗಿದೆ ಅಂತ ಅನ್ನಿಸಿದ್ದನ್ನು ಮಾತ್ರ ಹಾಕಿದ್ದೇನೆ.
ಜಯಂತ್ ಕಾಯ್ಕಿಣಿ ಯವರ ಬರಹ ಅಂದ್ರೆ ತುಂಬಾ ಇಷ್ಟ. ಅವರ ಮೇಲಿನ ಪ್ರೀತಿಯಿಂದಾನೇ “ನೀಲಿ ಹೂವು” ಅಂತಿಟ್ಟಿದ್ದೇನೆ.

ಈ ಬರಹಗುಚ್ಚ ನಿಮಗೆ ಇಷ್ಟ ಆಗ್ತದೆ ಅಂತ ನನ್ನ ಬಲವಾದ ನಂಬಿಕೆ.

 

******

Beautiful thoughts vast and so high…
the mind as serene as the blue sky….
at the marriage of pen and paper, the blue sky breaks into small stars
lands on earth to bloom as the blue flowers 
 

*******

Advertisements
ಟಿಪ್ಪಣಿಗಳು
 1. Tina ಹೇಳುತ್ತಾರೆ:

  ನೀಲಿಹೂವುಗಳು ಏನನ್ನು ಸಂಕೇತಿಸುತ್ತವೊ ಗೊತ್ತಿಲ್ಲ,
  ನನಗಂತು ಅವು ಬಹಳ ಮಿಸ್ಟೀರಿಯಸ್ ಅನ್ನಿಸ್ತವೆ.
  ಬರೆಯಿರಿ, ಹೇಳಿಕೊಳ್ಳಿ.
  ಓದಲಿಕ್ಕೆ, ಕೇಳಲಿಕ್ಕೆ ನಾವಿದೀವಲ್ಲ!!
  ಸ್ವಾಗತ.
  -ಟೀನಾ.

 2. neelihoovu ಹೇಳುತ್ತಾರೆ:

  ಟೀನಾ ಮೇಡಂ,
  ನೀವಷ್ಟು ಧೈರ್ಯ,ಪ್ರೋತ್ಸಾಹ ಕೊಟ್ಟರೆ ಸಾಕು…
  ನಿಮ್ಮ ಸಮಯಕ್ಕೆ ಮೋಸ ಮಾಡಲ್ಲ ಅನ್ನೋ ಆಸೆ, ಆಶಯ,ನಂಬಿಕೆ ನನ್ನದು…
  ಧನ್ಯವಾದಗಳು…

 3. Roopa Satish ಹೇಳುತ್ತಾರೆ:

  hi,
  very sensitive blog…
  nimma baravaNige, shaili, heLuvante heLadiruvante aadaru chinte… annodu spashtavaagutte…
  aadru odokke tumba chennaagansutte…
  namma orkut nallu swalpa bareeri Sir
  3K.

 4. neelihoovu ಹೇಳುತ್ತಾರೆ:

  ರೂಪ ಮೇಡಂ,
  ನಿಮ್ಮ ಅಕ್ಷರಗಳೆಡೆಗೆ,ಬರಹಗಳೆಡೆಗಿನ ಪ್ರೀತಿಗೆ ಇನ್ನಿಂಗ್ಸ್ ಜಯ ಸಿಕ್ಕಿದೆ..:)
  ನಿಮ್ಮ ಕೆ ಲೋಕದ ಕದ ತಟ್ಟಿರುವೆ ಮೇಡಂ..:)

 5. denice_menace ಹೇಳುತ್ತಾರೆ:

  nanage ootyalli 12 varshakkomme araluva neelihoovugalu nenapaguttive..:)
  denny Boi..

 6. ಪಲ್ಲವಿ ಎಸ್‌. ಹೇಳುತ್ತಾರೆ:

  ತುಂಬ ಭಾವುಕರಾಗುತ್ತೀರಿ ಅನಿಸುತ್ತದೆ ರಂಜಿತ್‌. ಅಷ್ಟೊಂದು ಭಾವುಕತೆ ಒಳ್ಳೇದಲ್ಲ.

  ಎಲ್ಲ ಕೌತುಕದೆಡೆಗೂ ಒಂದು ಕಣ್ಣಿರಲಿ. ಇನ್ನೊಂದು ಕಣ್ಣು ದಾರಿಯ ಮೇಲಿರಲಿ.

  ಹಾಗಂತ ಅಂದುಕೊಳ್ಳುತ್ತಲೇ ನಾನು ಬದುಕಲು ಕಲಿಯುತ್ತಿದ್ದೇನೆ.

  – ಪಲ್ಲವಿ ಎಸ್‌.

 7. neelihoovu ಹೇಳುತ್ತಾರೆ:

  ಭಾವುಕತೆ ಒಳ್ಳೇದಲ್ಲವಾ?
  ಗೊತ್ತಿಲ್ಲ.
  ಒಂದು ವಾರ ಭಾವುಕತೆಯಿಲ್ಲದೇ ಬದುಕುವ ಪ್ರಯೋಗ ಮಾಡುವೆ.
  ಬಹುಶಃ ಆಗಲೇ ಮನುಷ್ಯ ಜಡತೆಯಲ್ಲಿನ ಸುಖ ಕಂಡುಕೊಳ್ಳುತಾನೆ ಅನ್ನಿಸುತ್ತೆ.
  ಹಾಗೆಯೆ ಕೌತುಕದೆಡೆಗೂ,ದಾರಿಯೆಡೆಗೂ ಕಣ್ಣಿದೆ. ಯಾವ ಕಣ್ಣಿನಿಂದ ಕಾಣಬೇಕೋ ತಿಳಿದಿಲ್ಲ.
  ಮನದ ಕಣ್ಣಿಂದ ನೋಡುತ್ತಿದ್ದರೆ ಭಾವುಕತೆಯಾಗುತ್ತದೆ.
  ಬಹುಶಃ ಮೆದುಳಿನ ಕಣ್ಣಿಂದ ಕಾಣಬೇಕು ಅನ್ನಿಸುತ್ತದೆ..:)
  ನೀವು ನನ್ನ ನೀಲಿ ಹೂವಿನ ತೋಟಕ್ಕೆ ಕಾಲಿಟ್ಟಿದ್ದು ತುಂಬಾ ಖುಷಿಕೊಟ್ಟಿತು.
  ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ….

 8. neelihoovu ಹೇಳುತ್ತಾರೆ:

  ಡೆನ್ನಿಸ್ ರವರಿಗೆ,
  ತುಂಬಾ ಧನ್ಯವಾದಗಳು ಸರ್,
  ಅದನ್ನು ನೋಡುವ ಅದೃಷ್ಟ ನೀವು ಪಡೆದಿದ್ದಿರಲ್ಲ ಅಂತ ಹೊಟ್ಟೆಕಿಚ್ಚು ಪಡ್ತಾ ಇದ್ದೇನೆ..:)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s