ಅಪಾರ್ಟ್ ಮೆಂಟ್ ನೊಳಗಿನ ಬೊನ್ಸಾಯ್ ಬದುಕು..

Posted: ಸೆಪ್ಟೆಂಬರ್ 8, 2008 in ಲೇಖನ

ಜನಸಂಖ್ಯೆ ವಿಪರೀತವಾಗುತಿದ್ದಂತೆ ಸ್ವಂತ ಮನೆ ಬೇಕೆಂದು ಆಸೆ ಪಡುವ ಎಲ್ಲ ವ್ಯಕ್ತಿಗಳೂ ಮುಗಿಲೆತ್ತರಕ್ಕೇರುತ್ತಿರುವ ಭೂಮಿಯ ಬೆಲೆ ಕಂಡು ಆಗಸದಲ್ಲಿ ತಮ್ಮ ಸೈಟ್ ಗಳನ್ನ ಕೊಂಡುಕೊಳ್ಳುತ್ತಿದ್ದಾರೆ.  ಸ್ವಲ್ಪ ಜಾಗ ಕಂಡರೆ ಸಾಕು,ಅಲ್ಲೊಬ್ಬ ಬಿಲ್ಡರ್ ನ ಉಗಮ.  ಬೆಂಕಿಪೆಟ್ಟಿಗೆಯನ್ನು ಒಂದರ ಮೇಲೊಂದು ಇಡುವಂತೆ ಮನೆಗಳು. ತನ್ನ ಜಾಗ ಯಾವುದು ಅಂತ ಫ್ಲಾಟ್ ಕೊಂಡವನನ್ನು ಕೇಳಿದರೆ ಮುಗಿಲಿಗೆ ಕೈ ತೋರಿಸಿ ಯಾವುದೋ
ನಂಬರಿನ ಫ್ಲೋರ್ ಹೇಳುವನು. “ಮುಷ್ಟಿಯೊಳಗೆ ಸಮಷ್ಟಿ” ಎಂಬಂತೆ ಒಂದು ಕಾಂಪೌಂಡ್  ಒಳಗೆ ಎಲ್ಲವೂ ದೊರಕುವವು.ಈಜುಕೊಳ, ಒಳಾಂಗಣ ಕ್ರೀಡೆಗಳು, ಜಿಮ್, ಪಾರ್ಕಿಂಗ್ ಲಾಟ್..ಹೋಂ ಥಿಯೇಟರ್ ಗಳು..ಕಮ್ಯುನಿಟಿ ಹಾಲ್ಸ್…ಒಂದಾ ಎರಡಾ..!
ಆಫೀಸಿನ ದಾರಿಯಿಂದ ಮನೆವರೆಗೆ ಬಿಟ್ಟರೆ ಮನುಷ್ಯರು ಬೇರೆಲ್ಲೂ ಹೋಗಬೇಕೆಂದಿಲ್ಲ.ಎಲ್ಲವೂ ಕೂಗಳತೆ ದೂರ.ಮನೆಯೊಳಕ್ಕೇ ಇಂಟರ್ನೆಟ್ ಬಂದಿರುವುದರಿಂದ  ಸಮಸ್ತ ವರದಿಯೂ ರೂಮೊಳಗೆ.
ನಿಧಾನವಾಗಿ ಭಾರತ ಅಮೇರಿಕಾ ಆಗುವತ್ತ?
ಊಟದ ಕೋಣೆ,ಅಡುಗೆ ಕೋಣೆ ಮತ್ತು ಹಜಾರ ಮೂರಕ್ಕೂ ನಡುವೆ ಗೋಡೆಗಳಿಲ್ಲ. ವಯಸ್ಸಾದವರು ನೆಮ್ಮದಿಯಾಗಿ ಕುಳಿತುಕೊಳ್ಳಲು ಜಗುಲಿಯೆಲ್ಲಿ?ಮಲಗುವ ಕೋಣೆಯಲ್ಲಿ ಕುಳಿತು ಕಿಟಕಿಯಿಂದ ಹೊರಗಗನವ ನೋಡಬೇಕಷ್ಟೆ…ಬಚ್ಚಲು ಕೋಣೆಯೊಳಗೆ ಯುರೋಪಿಯನ್ ಟಾಯ್ಲೆಟ್ಟು ….ಅಲ್ಲಿಯೂ ಅರಾಮಾಗಿ ಆಫೀಸಿನಲಿ ಕುಳಿತಂತೆ. ಪಕ್ಕದ ಮನೆಯವರಿಗೂ ನಮ್ಮ ಮನೆಗೂ ನಡುವೆ ಎಂಟಿಂಚು ಗೋಡೆ. ಅವರ ಮನೆಯಲ್ಲಿ ಅವತ್ತು ಯಾವುದರ ಪಲ್ಯ ಕೇಳಬೇಕೆಂದರೆ ಕಾಲಿಂಗ್ ಬೆಲ್ಲೇ ಬಡಿಯಬೇಕು. ಮಕ್ಕಳು ಆಟ ಆಡಬೇಕೆಂದರೆ ಆ ಕಡೆ ಲಿಫ್ಟು- ಈ ಕಡೆ ಮೆಟ್ಟಿಲು.ಮಧ್ಯೆ ಜಾಗ ಅವರಷ್ಟೆ.
ವಾಕಿಂಗಿಗೆ ಹೋಗೋಣ ಎಂದು ಗೇಟು ತೆಗೆದರೆ ರಸ್ತೆ. ಗಿಜಿಗುಟ್ಟುವ ಟ್ರಾಫಿಕ್ಕು. ಏಕಾಂಗಿತನದಂತೆ ಮುತ್ತುವ ಶಬ್ದಮಾಲಿನ್ಯ. ನೆರಳ ಸುಳಿವಿಲ್ಲದಂತೆ ಬಿಸಿಲ ಧಗೆ. ಉಸಿರಾಡದಂತೆ ಎಲ್ಲೆಲ್ಲೂ ಹೊಗೆ.

ವೀಕೆಂಡು ಬಂತೆಂದರೆ ಮಜಾ ಮಾಡಬೇಕೆಂಬಾಸೆ. ಸೇವ್.. ಸೇವ್ ಅಂತಲೇ ಶೇವ್ ಮಾಡುವ ಬಜಾರು. ಪ್ರಯಾಣ ಹೊರಟರೆ ಟ್ರಾಫಿಕ್ಕು ಜಾಮು.
ಯಾವ ಸ್ಥಳಕ್ಕೆ ಹೋದರೂ ದಿನವೆಲ್ಲಾ ಕಳೆದರೂ ಅಲ್ಲಿ ನಾವು ಪ್ರವಾಸಿಗರು ಮಾತ್ರ.
ಮತ್ತೆ ಅಪಾರ್ಟ್ ಮೆಂಟೊಳಗೆ ನಮ್ಮದೇ ಪ್ರಪಂಚದೊಳಗೆ.
ಹಾಗಾದರೆ ಹಕ್ಕಿಗಳು ಗೂಡು ಕಟ್ಟುವುದ ನೋಡುವುದು ಹೇಗೆ?
ಮೊಟ್ಟೆಗಳಿಗೆ ಕಾವು ನೀಡುವುದು, ಕಾಳು ನೀಡುವುದನ್ನು, ಮೀನಿನ ಈಜುವಿಕೆ.. ಮತ್ತಿತರ ವಿಸ್ಮಯಗಳನ್ನು ನೋಡುವುದು ಹೇಗಂದಿರಾ?
ಅದಕ್ಕಿದೆಯಲ್ಲಾ ಡಿಸ್ಕವರಿ ಚಾನೆಲ್ಲು,ಆನಿಮಲ್ ಪ್ಲಾನೆಟ್ಟು.
ಕೊನೆಗೂ ಅದೇ ಪ್ರಪಂಚ. ಡ್ರಾಯಿಂಗ್ ರೂಮಿನ ಇಪ್ಪತ್ತೊಂಬತ್ತಿಂಚಿನ ಟೀವಿಯೆ ನಮಗೆ ಜೂ, ಸಿನೆಮಾ ಹಾಲ್, ಪ್ರೇಕ್ಷಣೀಯ ಸ್ಥಳ  ಎಲ್ಲಾ.
ನೀರ ಹರಿವಿನ ಜುಳುಜುಳು ಕೇಳಬೇಕೆಂದರೆ ಮನೆಯೊಳಗೇ ಡಿ.ಟಿ.ಎಸ್ಸು.
ಎಲ್ಲಾದಕ್ಕೂ ನಾವು ಪ್ರೇಕ್ಷಕರು.

ಆಳವಾಗಿ ಯಾವುದನ್ನೂ ಅನುಭವಿಸಲಾಗದ ಸಂವೇದನಾ ವಂಚಿತರು.

ಗಾಳ ಹಾಕಿ ಮೀನು ಹಿಡಿವ ಖುಶಿ, ಗೆಳೆಯರೆಲ್ಲಾ ಸೇರಿ ಶಾಲೆಗೆ ಹೋಗುವಾಗ ಭಾರಿ ಮಳೆಗೆ ಕೊಡೆ ಹಾರಿ ಹೋಗದ ಹಾಗೆ ಹಿಡಿವುದು, ಗದ್ದೆ ಬಯಲಿನ ನಡುವಿನ ಗೆರೆ ದಾರಿ,ಮಧ್ಯೆ ಮಧ್ಯೆ ನೀರ ಹರಿವಿಗಾಗಿ ಬಿಟ್ಟ ಜಾಗ, ಅಲ್ಲಿಂದ ಕಳ್ಳತನದಿ ನುಸುಳುವ ಮೀನ ಚಲನೆ, ನೀರು ಕುಡಿವ ಹಕ್ಕಿಗಳು, ಮೊದಲ ಮಳೆಯ ಮಣ್ಣಿನ ಘಮ , ಸಂಜೆಯಾದೊಡೆ ಅಜ್ಜಿಯ ವಿಸ್ಮಯ ಕತೆಗಳು, ಮನೆಯವರೆಲ್ಲಾ ಒಂದಾಗಿ ನೆಲದ ಮೇಲೆ ಕುಳಿತು ಊಟ ಮಾಡುವ ಸುಖ, ಒಂದೇ ಕೋಣೆಯಲ್ಲಿ ಮನೆಯವರೆಲ್ಲಾ ಹರಟುತ್ತಾ ಮಲಗುವುದು, ಬೆಳಿಗ್ಗೆ ಏಳುತ್ತಲೇ ಕಟ್ಟಿಗೆಯಿಂದ ಬಿಸಿಮಾಡಿದ ಹಂಡೆ ನೀರು, ಅಪ್ಪನ ಪೂಜೆ,ಮಂಗಳಾರತಿ ಸಮಯಕ್ಕೆ ಸರಿಯಾಗಿ ಕೂಗುವ ನಾಯಿ, ವಯಸ್ಸಾಗುತ್ತಾ ಆಗುತ್ತಾ ಅಪ್ಪನೆಡೆಗೆ ಭಯ ತೊಲಗಿ ಸ್ನೇಹ ಬೆಳೆವ ಪರಿ..

ಅಪಾರ್ಟ್ ಮೆಂಟ್ ನಲ್ಲಿ ಬೆಳೆವ ಚಿಕ್ಕ ಮಗು ಈ ವೇಗದ ಬದುಕಿನಲ್ಲಿ ಮಿತಿ ಮೀರಿದ ಜನಸಂಖ್ಯೆಯ ಲೋಕದಲ್ಲಿ ಅರಳಿ ನಿಲ್ಲುವ ಅರಳಿ ಮರವಾಗದೇ ಬೊನ್ಸಾಯ್ ಅರಳಿ ಮರವಾಗುತ್ತದಲ್ಲವಾ? ಸ್ವತಂತ್ರವಾಗಿ ಬೆಳೆವ ಪ್ರಕೃತಿಯೊಡನೆ ಸಾಮರಸ್ಯ ಬೆಳೆಸಿಕೊಳ್ಳುವುದ ಅರಿವ ವಿಸ್ಮಯಗಳೆಡೆಗೆ ಬೆರಗು ಕಂಗಳಿಂದ ನೋಡುವ, ತಮ್ಮ ಅನುಭವಗಳ ಮೂಲಕ ಕಲಿತುಕೊಳ್ಳುವ ಪ್ರಕೃತಿಯನ್ನು ಉಳಿಸಿ ಬೆಳೆಸುವ, ಬದುಕೇ ಸೋಜಿಗ ಎಂಬ ಭಾವನೆಗಳನ್ನು ಮಕ್ಕಳಿಗೆ ಮಿಸ್ ಮಾಡಿಸುತಿದ್ದೆವಾ?

ನಾವು ನೀವೆಲ್ಲರೂ ತಣ್ಣಗಿನ ಸಮಯದಲ್ಲಿ ಗಂಭೀರವಾಗಿ ಕುಳಿತು ಅಲೋಚಿಸಬೇಕಾದ ವಿಷಯವಿದು…!

ಟಿಪ್ಪಣಿಗಳು
 1. hema ಹೇಳುತ್ತಾರೆ:

  alochisi charchisabekendare adakku computerru internettu… tamashe alva?

 2. vijayraj ಹೇಳುತ್ತಾರೆ:

  beLeyuttiruva nagaragaALalli haLLiya aa sobagu barabEkandroo jaaga ellide…
  namma ooru haLLigaLa biTTu bandiruva naavella ‘nagrikaru’ yOchisabEkaada vishaya idu…
  naanno ommomme ee reetiyalle baalyadalli kanda nammoorina savi illilla antha halubuvuduntu…
  eegannisuttide … bahushaha naavu hindiragalaaradashtu munde bandu bittiddEve… eega halubi praojanavillavEno… iddudarallE baduku sahyavaagisikoLLabEkEnO….

  ಅರಳಿ ನಿಲ್ಲುವ ಅರಳಿ ಮರವಾಗದೇ ಬೊನ್ಸಾಯ್ ಅರಳಿ ಮರವಾಗುತ್ತದಲ್ಲವಾ? konepaksha…ಬೊನ್ಸಾಯ್ aadroo araLali aannOdE sarinEnO..EnaMteeri?

 3. neelihoovu ಹೇಳುತ್ತಾರೆ:

  ವಿಜಯರಾಜ್ ಸರ್,
  ನೀವು ಹೇಳೋದು ಸರಿ.ನಾವು ಮುಂದೆಬಂದಿರುವ ರಸ್ತೆಗೆ ಯು ಟರ್ನ್ ಎಂಬುದೇ ಇಲ್ಲ..
  ಡೆಡ್ ಎಂಡ್ ಗೆ ಹೋಗಿ ಹಾರುವುದಷ್ಟೇ ಉಳಿದಿರುವುದು..:)
  ಬಾಲ್ಯ ಎಂಬುದಕ್ಕೇ ಅಂತ ಜಾದೂ ಇದೆ ಅನ್ನಿಸುತ್ತೆ.
  ಅದೇ ಸಂದರ್ಭಗಳನ್ನು, ಅದೇ ಪರಿಸ್ಥಿತಿಗಳನ್ನು ನಾವು ದೊಡ್ಡವರಾದಾಗ ನೀಡಿದರೆ
  ಬಾಲ್ಯದಲ್ಲಿದ್ದಷ್ಟು ಮುದವಾಗಿ ಅನುಭವಿಸಲಾರೆವೇನೊ.
  ಅದಕ್ಕೆ ಮುಗ್ಧತೆಯೇ ಕಾರಣವೆ?
  ದೊಡ್ಡವರಾಗ್ತಾ ಆಗ್ತಾ ಮುಗ್ಧತೆ ಯಾಕೆ ನಶಿಸ್ತದೆ?
  ಇನ್ನೊಂದು ಮುಖ್ಯ ಅಂಶ ಅಂದರೆ ನಾವು ಅನುಭವಿಸಿಲ್ಲ ಎಂದ ಮಾತ್ರಕ್ಕೆ ಉಳಿದದ್ದು ಚೆನ್ನಾಗಿಲ್ಲ ಅನ್ನಲಾರೆವು.ನಮಗೆ ಪ್ರಕೃತಿ ಹೇಗೆ ಮುದ ನೀಡುತಿತ್ತೊ,
  ಹಾಗೆ ಕಾಂಕ್ರೀಟ್ ಕಾಡಿನಲ್ಲಿ ಬೆಳೆದವರಿಗೆ ಮಾಲ್ ಸಂಸ್ಕೃತಿ, ವೀಡಿಯೊ ಗೇಮ್ಸ್ ಖುಷಿ ಕೊಡುತ್ತಿರಬಹುದು ಅಲ್ಲವಾ?
  ಅಂತಹ ಅನುಭವ ಎಲ್ಲಿಯಾದರೂ ಸಿಗುತ್ತದಾ ಅಂತ ಬ್ಲಾಗು, ಪುಸ್ತಕ ಲೋಕ ಜಾಲಾಡಿದ್ದೇನೆ.
  ಸಿಕ್ಕರೆ ನಂಗೆ ತಿಳಿಸುತ್ತೀರಾ?

 4. neelihoovu ಹೇಳುತ್ತಾರೆ:

  ಹೇಮಾ ಮೇಡಮ್,
  ನಿಜ…:) ವಿಪರ್ಯಾಸಭರಿತ ತಮಾಶೆ..:)
  ಆದರೆ ಅಷ್ಟಾದರೂ ಇದೆಯಲ್ಲ ಅಂತ ಹೆಮ್ಮೆ ಪಟ್ಟುಕೊಳ್ಳಬೇಕು.
  ಅಲ್ಲವೆ?

 5. denice_menace ಹೇಳುತ್ತಾರೆ:

  true…bonsai maragale aguttave adoo himmadiyillade nadedaduva kubja maragalu..:((

 6. ಪಲ್ಲವಿ ಎಸ್‌. ಹೇಳುತ್ತಾರೆ:

  ನಾವು ಕಂಡುಂಡ ಬದುಕು ಇನ್ನೊಬ್ಬರ ಬದುಕಾಗಬೇಕಿಲ್ಲ ರಂಜಿತ್‌. ಅವರಿಗೆ ತಮ್ಮದೇ ಆದ ಇನ್ನೊಂದು ಬದುಕಿರುತ್ತದೆ. ಮತ್ತು, ಅದರ ಬಗ್ಗೆ ನಮಗೆ ಏನೂ ಗೊತ್ತಿರುವುದಿಲ್ಲ. ನಿಮ್ಮ ಪಾಲಿಗೆ ಅಪಾರ್ಟ್‌‌ಮೆಂಟ್‌ ಬದುಕು ಬೋನ್ಸಾಯ್‌ ಆಗಿರಬಹುದು. ಆದರೆ, ಅದೇ ಅನಿವಾರ್ಯವಾಗಿರುವವರ ಮನೆಯ ಕುಂಡದಲ್ಲಿ ಇನ್ಯಾವುದೋ ಕನಸಿನ ಹೂಗಳು ಅರಳುತ್ತಿರುತ್ತವೆ. ಆ ಕನಸನ್ನು ಅಲ್ಲಗಳೆಯುವ ಹಕ್ಕು ನಮಗ್ಯಾರಿಗೂ ಇಲ್ಲ.

  ಅಪಾರ್ಟ್‌‌ಮೆಂಟ್‌ಗಳಲ್ಲೂ ಕನಸುಗಳು ಅರಳುತ್ತವೆ. ಅದರ ಬಗ್ಗೆ ಬಲ್ಲವರೇ ಬರೆಯಬೇಕು.

  – ಪಲ್ಲವಿ ಎಸ್‌.

 7. neelihoovu ಹೇಳುತ್ತಾರೆ:

  ಧನ್ಯವಾದಗಳು ಡೆನ್ನಿಸ್ ಸರ್..:)

  ***************
  ನಿಜ ಪಲ್ಲವಿ ಮೇಡಂ,
  ಅಂತಹಾ ಅನುಭವ, ಕನಸಿನ ಹೂವು ಎಲ್ಲಿ ಅರಳಿದೆ ಅಂತ ತುಂಬಾ ಹುಡುಕಿದ್ದೇನೆ.
  ಅದನ್ನೇ ವಿಜಯರಾಜ್ ಸರ್ ಗೆ ಬರೆದ ಕಾಮೆಂಟ್ ನಲ್ಲಿ ಹಾಕಿರುವೆ ಗಮನಿಸಿ..
  ಅವರ ಪುಳಕ ಎಂತದ್ದು, ನಮ್ಮಗಳಿಗಿಂತ ಅವರ ಪುಟ್ಟ ಪುಟ್ಟ ಖುಷಿಗಳು ಹೇಗೆ ಭಿನ್ನ
  ಎಂದೆಲ್ಲಾ ತಿಳಿದುಕೊಳ್ಳಲು ನಾನೂ ಉತ್ಸುಕನಾಗಿರುವೆ.

  ಧನ್ಯವಾದಗಳು ಮೇಡಂ….:)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s