ಬದುಕು ಬರಹಗಳೇ ಪ್ರೇರಣೆ…

Posted: ಸೆಪ್ಟೆಂಬರ್ 11, 2008 in ಲೇಖನ

ಹಾಗೆ ನೋಡಿದರೆ ಬೇಸರಿಸಿಕೊಳ್ಳಲು ಕಾರಣಗಳೇ ಬೇಕಿಲ್ಲ. ಬೆಳಿಗ್ಗೆ ಹಾಲಿನವನು ಬರದೇ ರಜೆ
ಹಾಕಿದರೂ ಮನಸ್ಸು ಮುದುಡುತದೆ.ಗೋಡೆಗೆ ನೇತು ಹಾಕಿದ ಕ್ಯಾಲೆಂಡರ್ ನ್ನು ಕಂಡರೂ ಸಾಕು,
ಇಷ್ಟು ವಯಸ್ಸಾದರೂ ಎನೂ ಸಾಧಿಸದೇ ಹೋದೆನಲ್ಲಾ ಎಂಬುದು ಕೂಡ ಸಾಕು ಮನಸ್ಸು ಬೇಸರಿಸಿ
 ಮನದ ಚಿಪ್ಪೊಳಗೆ ಅವಿತು ಕುಳಿತುಕೊಳ್ಳಲು!        

ಈ ಥರದ ನಾಸ್ಟಾಲ್ಜಿಯಾ ಗಳು ಬಹುಶಃ ಪ್ರತಿ ವರುಷದ ಹುಟ್ಟುಹಬ್ಬದ ದಿನ ತಪ್ಪದೇ ಕಾಡುತದೆ.
ಹಾಗೆ ಅಲೋಚಿಸಿದರೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬಾರದು,
ಎರಡು ನಿಮಿಷದ ಮೌನ ಆಚರಣೆ ಮಾಡಬೇಕು! 

ಅದೇನೆ ಇರಲಿ. ಇಂತಹ ಮುದುಡಿದ ಮನವ ಅರಳಿಸಲು ನಾನು ಮೊರೆ ಹೋಗುವುದು ಪುಸ್ತಕಗಳಿಗೆ.   ಕೆಲವೊಂದು ವ್ಯಕ್ತಿಗಳಿಗೆ.ಸುಮ್ಮನೆ ಅರೆಗಳಿಗೆ ನೆನೆದುಕೊಂಡರೂ ಸಾಕು ಮನ ಪುಟಿದೆದ್ದ ಚೆಂಡು.
ಪ್ರತಿ ಮನುಷ್ಯನೊಳಗೂ ಅದಮ್ಯ ಪ್ರತಿಭೆಯ ಊಟೆಯಿರುತ್ತದೆ.ಪ್ರತಿದಿನವೂ ಸ್ವಲ್ಪ ಹೆಚ್ಚು ಕಷ್ಟಪಟ್ಟರೆ
ಅದನ್ನು ಹೊರತರಬಹುದು.ಸ್ವರ್ಗ-ನರಕಗಳೆನ್ನುವುದಿದ್ದರೆ ಸತ್ತ ನಂತರದ ಬದುಕೆನ್ನುವುದಿದ್ದರೆ ಅದನ್ನು ನಿರ್ಧರಿಸುವುದು ನಮ್ಮೊಳಗಿನ
 ಪ್ರತಿಭೆಯನ್ನು ಎಷ್ಟರಮಟ್ಟಿಗೆ ಉಪಯೋಗಿಸಿದೆವು ಅನ್ನುವುದರ ಮೇಲೆ ಮಾತ್ರ ಅಂತ ಗಾಢ ವಾಗಿ
ನಂಬುವವನು ನಾನು.  ಹೀಗಾಗಿ ಎನೂ ಸಾಧಿಸಲಿಲ್ಲ ಎಂಬ ವಿಷಯ ಬೇರೆಲ್ಲದಕ್ಕಿಂತ ಹೆಚ್ಚು ಆಳವಾಗಿ ಕಾಡಿಸುವ
 ವಿಚಾರ ನನ್ನ ಪಾಲಿಗೆ. ಆದ್ದರಿಂದ ಈ ವಿಷಯದ ನಾಸ್ಟಾಲ್ಜಿಯ ಆಗಾಗ್ಗೆ ಹಸಿವಿನಂತೆ ಕಾಡುತಿರುತ್ತದೆ.
ಇದಕ್ಕೆ ಮದ್ದಾಗಿ ಕೆಲ ಸಲ ಯಂಡಮೂರಿ ಪುಸ್ತಕಗಳನ್ನು ಓದುತಿರುತ್ತೇನೆ. ಗುರಿ ಏನಂತ ನಿರ್ಧರಿಸುವುದರಲ್ಲಿ,
 ಗುರಿಯತ್ತ ಹೆಜ್ಜೆಯಿಡುವತ್ತ ನಿಜವಾದ ನೆಮ್ಮದಿ ಸಂತೃಪ್ತಿ ಏನೆಂದು ತಿಳಿದುಕೊಳ್ಳಲು ಇದು ಬಹಳ ಸಹಾಯಕಾರಿ.
ಅದೂ ಅಲ್ಲದೇ ಸ್ಟೀಫನ್ ಹಾಕಿಂಗ್, ಹೆಲೆನ್ ಕೆಲ್ಲರ್ ನೀಲ್ ಆರ್ಮ್ ಸ್ಟ್ರಾಂಗ್ ಅಂತವರು ಜೀವನದಲ್ಲಿ ನಡೆದು
ಬಂದ ಹಾದಿಯನ್ನು ನೆನೆದುಕೊಂಡರೂ ನಿಮ್ಮಲ್ಲಿ ಜೀವನದೆಡೆಗೆ ಅನಂತ ಉತ್ಸಾಹ ಉಕ್ಕದಿದ್ದರೆ ನನ್ನಾಣೆ!

ಕಡು ಬಡತನದಲ್ಲಿದ್ದ ಉಪೇಂದ್ರ ಕನ್ನಡ ಚಿತ್ರರಂಗದಲ್ಲಿ ನೆಲೆ ನಿಂತ ಪರಿ, ಪದ್ಮನಾಭನಗರದ ರೂಮೊಂದರಲ್ಲಿ
ಕುಳಿತು ಕನ್ನಡದ ಲಕ್ಷ ಲಕ್ಷ ಜನರಿಗೆ ಪ್ರೇರಣೆ ನೀಡುತಿರುವ ಬೆಳಗೆರೆಯ ಬರಹಗಳು ಇವೆಲ್ಲವೂ ಹೇಳುವುದೊಂದೇ,
“ನೀನು ಏರಬೇಕೆಂದಿರುವ ಎತ್ತರ ನೀನು ಈಗಿರುವ ಸ್ಥಿತಿಯಲ್ಲಿಲ್ಲ… ನಿನ್ನ ಮನದೊಳಗಡೆ ನೀನಿರಿಸಿಕೊಂಡಿರುವ
ಎತ್ತರಕ್ಕಿಂತಲೂ ಮಿಗಿಲಾಗಿ ಎಷ್ಟು ಎತ್ತರ ಏರಬಲ್ಲೆ ಎಂಬುವ ಉತ್ಸಾಹದಲ್ಲಿ ಮತ್ತು ಅದರೆಡೆಗೆ ಹೋಗುವ ಶ್ರಧ್ದೆಯಲ್ಲಿದೆ”

 ಇಂತಹ ಬದುಕು-ಬರಹಗಳು ನಮ್ಮನ್ನು ಒಳಗಿಂದ ದಿನೇ ದಿನೇ ಬೆಳೆಸುತ್ತಿರುವಾಗ ಇನ್ನು ಬೇಸರವೆಲ್ಲಿಯದು?
ಶ್ರಧ್ದೆ ಅಂಕಿತಭಾವಗಳು ತಮ್ಮ ಬ್ರಹ್ಮಾಂಡ ರೂಪ ಪ್ರದರ್ಶಿಸಬೇಕಾದರೆ ಗುಬ್ಬಚ್ಚಿಯಾಕಾರದ ಬೇಸರ ತಾನೆ
ಏನು ಮಾಡಬಲ್ಲದು?!

ಟಿಪ್ಪಣಿಗಳು
 1. ಪಲ್ಲವಿ ಎಸ್‌. ಹೇಳುತ್ತಾರೆ:

  ಖುಷಿ ಕೊಟ್ಟ ಬರಹ ರಂಜಿತ್‌. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೂ ನಮ್ಮ ಕಣ್ಣನ್ನು ಹೊರ ಅಥವಾ ಒಳ ಜಗತ್ತಿನ ಕಡೆ ಪೂರ್ತಿಯಾಗಿ ತಿರುಗಿಸುವುದಿಲ್ಲ ನಾವು. ನಮ್ಮ ನಮ್ಮ ಹಳವಂಡಗಳಲ್ಲೇ ಮುಳುಗಿಬಿಡುತ್ತೇವೆ. ಒಂದು ನಿರಂತರ ತುಡಿತವನ್ನು ಇಲ್ಲವಾಗಿಸಿಕೊಂಡು ಬದುಕುತ್ತೇವೆ. ಅರಿವು ಮೂಡಿದಾಗ, ಬದುಕು ತುಂಬ ಹಿಂದೆಯೇ ನಮ್ಮನ್ನು ಬಿಟ್ಟು ಮುಂದೆ ಹೋಗಿಬಿಟ್ಟಿರುತ್ತದೆ.

  ಒಂಚೂರು ಪ್ರಾಯೋಗಿಕವಾಗಿಯೂ ಯೋಚಿಸದಿದ್ದರೆ, ಕನಸುಗಳು ನಮ್ಮ ಪಾಲಿಗೆ ಬರೀ ಕನಸುಗಳಾಗಿಬಿಡುತ್ತವೆ. ಅಲ್ಲವೆ?

  – ಪಲ್ಲವಿ ಎಸ್‌.

 2. vijayraj ಹೇಳುತ್ತಾರೆ:

  ಈ ಥರದ ನಾಸ್ಟಾಲ್ಜಿಯಾ ಗಳು ಬಹುಶಃ ಪ್ರತಿ ವರುಷದ ಹುಟ್ಟುಹಬ್ಬದ ದಿನ ತಪ್ಪದೇ ಕಾಡುತದೆ..
  yaake gottaglilla…

 3. neelihoovu ಹೇಳುತ್ತಾರೆ:

  ವಿಜಯರಾಜ್ ಸರ್,
  ಮೊದಲ ಪ್ಯಾರಗ್ರಾಫ್ ನಲ್ಲಿ ಅದನ್ನೇ ಹೇಳಿರುವೆ ಸರ್…ವರುಷಗಳು ಉರುಳುತಿದೆ, ಏನನ್ನೂ ಸಾಧಿಸದೇ ಹೋದೆ ಎಂಬುದು
  ತುಂಬಾ ಕಾಡುತದೆ. ನಾವು ಮಾಡಬೇಕೆಂದುಕೊಂಡಿರುವುದಕ್ಕೆ, ಮತ್ತು ನಾವು ಇಷ್ಟು ದಿನ ಸಾಧಿಸಿದ್ದಕ್ಕೆ
  ನಡುವಿನ ಹೆಚ್ಚುವ ಅಂತರ ನೆನಪಾಗಿಸುವುದು ಹುಟ್ಟುಹಬ್ಬ ಅಲ್ಲವಾ?
  ಅದಕ್ಕೇ ಹಾಗೆ ಹೇಳಿದೆ.
  ಬಹುಶಃ ಆ ಅಂತರವೇ ನಮ್ಮನ್ನು ಮತ್ತಷ್ಟು ಸಾಧನೆ ಮಾಡುವ ಹುಮ್ಮಸ್ಸು ನೀಡುವುದು ಅನ್ನಿಸುತ್ತದೆ.

 4. neelihoovu ಹೇಳುತ್ತಾರೆ:

  ಪಲ್ಲವಿ ಮೇಡಂ,
  ನಿಜ,ನೀವು ಹೇಳೋದು.ಅದಕ್ಕೇ ಚಿಕ್ಕಂದಿನಲ್ಲಿ ಚಾಕಲೇಟ್ ಗಳಿಗೆ ತುಂಬಾ ಇಷ್ಟವಾಗುವ ಹುಟ್ಟುಹಬ್ಬಗಳು
  ವಯಸ್ಸು ಓಡುತ್ತಿದ್ದಂತೆ ವಯಸ್ಸಿನ ಅಂಕಿಗೂ ಸಾಧನೆ ಗಳಿಗೆ ಹೋಲಿಸಿಕೊಂಡು ನಾಸ್ಟಾಲ್ಜಿಯ ತರುತ್ತದೆ.
  ಇಷ್ಟಕ್ಕೂ ಸಾಧಿಸೋದು ಅಂದರೇನು? ಅದೂ ಉತ್ತರಿಸಲು ಕಷ್ಟವಾಗುವಂತಹ ಪ್ರಶ್ನೆಯೇ.
  ಇರುವ ತುಡಿತ ಕೂಡ “ಇರದುದರೆಡೆಗೇನಾ” ಎಂಬ ಗುಮಾನಿ ಬೇರೆ.
  ನಮ್ಮ ನಿನ್ನೆಗಿಂತ
  ಇಂದು ಚೆನ್ನಾಗಿರಬೇಕೆಂದು ಹೊರಟರೆ ಮಾತ್ರ ಬಾಳಿನ ಕೂಳು ಹಸನಾಗುತ್ತದೆ ಅನ್ನಿಸುತ್ತದೆ.
  ಧನ್ಯವಾದಗಳು ಮೇಡಮ್ ನಿಮ್ಮ ಅಮೂಲ್ಯ ಅಭಿಪ್ರಾಯಕ್ಕೆ..

 5. neelihoovu ಹೇಳುತ್ತಾರೆ:

  *ಚಾಕಲೇಟ್ ಗಳಿಗಾಗಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s