ಮೌನ….

Posted: ಸೆಪ್ಟೆಂಬರ್ 13, 2008 in ಕವಿತೆ

ಮಾತಾಡಬೇಕಿದ್ದ
ಸಾವಿರ ವಿಷಯಗಳು
ಪದಸ್ಪರ್ಶದಿಂದ
ಅರ್ಥಕಳೆದುಕೊಳ್ಳುವುದೇನೊ
ಎಂಬ ಭೀತಿಯಲ್ಲಿನ ಸ್ಥಿತಿ…

ಅವಳ ಕೈಬೆರಳನು
ನನ್ನ ಅಂಗೈಯೊಳಗೆ
ಹುದುಗಿಸಿಕೊಂಡು ಗಂಟೆಗಟ್ಟಲೆ
ತುಟಿಯಲ್ಲಾಡಿಸದಿದ್ದರೂ
ಎಲ್ಲಾ ಹೇಳುವಂತಹ
ಸಂತೃಪ್ತ ಘಳಿಗೆಗಳು…

ತುಟಿಗೆ ಬೀಗ
ಜಡಿದಿರುವಾಗ
ಕಣ್ಣಿನ ನಾಲಿಗೆ
ಚರ್ಮದ ಬಾಯಿಗೆ
ತುಡಿತವೆಲ್ಲವ
ತೋಡಿಕೊಳ್ಳುವ
ಅವಕಾಶ ಸಿಗುವ
ಅಮೃತ ಸಮಯ..

ಇವತ್ತು ಎಲ್ಲಾ
ಹೇಳಿ ಬಿಡುವೆ
ಎಂದು ಧೈರ್ಯ
ತೋರಿದ ಎದೆಗೆ,
ಅವಳೆದುರಾದ ಕೂಡಲೇ
ಮೆದುಳಿಗೂ, ಬಾಯಿಗೂ
ಲಿಂಕ್ ತಪ್ಪಿ ಹೋಗಿ
ಉಂಟಾದ ಭರ್ಜರಿ
ಸೋಲಿನ ಹೊತ್ತು…

ಟಿಪ್ಪಣಿಗಳು
 1. ಪಲ್ಲವಿ ಎಸ್‌. ಹೇಳುತ್ತಾರೆ:

  ರಂಜಿತ್‌,

  ಆಕೆ ಎದುರಾದಾಗ ಏನೇನು ಹೇಳಬೇಕಿತ್ತೋ ಅದನ್ನೆಲ್ಲ ನಮ್ಮೆದುರು ಚೆನ್ನಾಗಿ ಹೇಳಿದ್ದೀರಿ. ಯಾಕಿಷ್ಟು ಕಷ್ಟ ಮಾರಾಯ್ರೇ. ಆ ಹುಡುಗಿಗೆ ಈ ಕವನವನ್ನು ಕಳಿಸಿಕೊಡಿ, ನಿಮ್ಮ ಕೆಲಸ ಹಗುರವಾಗುತ್ತದೆ.

  ಸೊಗಸಾದ ಕವನ. ಚೆನ್ನಾಗಿ ಮೂಡಿ ಬಂದಿದೆ.

  – ಪಲ್ಲವಿ ಎಸ್‌.

 2. neelihoovu ಹೇಳುತ್ತಾರೆ:

  ಅದಷ್ಟ್ ಸುಲಭ ಅಲ್ರೀ ಮೇಡಂನೋರೆ…
  ಕೈ ಕಾಲ್ ನಡುಕ ಶುರುವಾಗಕ್ಕೆ ಹತ್ತುತ್ತ್ ನೋಡ್ರಿ…

  ಧನ್ಯವಾದಗಳು.. ಎಲ್ಲಿ ಇದು ಕವನ ಅಂತ ಕರೆಸಿಕೊಳ್ಳುತ್ತೋ ಇಲ್ಲವೋ ಎಂಬ ಭಯವಿತ್ತು…
  ಹಗುರಾಗಿಸಿದಿರಿ…

 3. Tejaswini Hegde ಹೇಳುತ್ತಾರೆ:

  ರಂಜಿತ್,

  ಮಾತುಗಳನ್ನೆಲ್ಲಾ ಮೌನಗಳನ್ನಾಗಿಸಿದರೂ ಕೂಡಾ ಎಲ್ಲವನ್ನೂ ಮೌನದಲ್ಲೇ ಹೇಳಿಬಿಡುವ ರೀತಿ ತುಂಬಾ ಇಷ್ಟವಾಯಿತು. ಸುಂದರ ಸರಳ ಕವನ.

  ಮಾತು ಬೆಳ್ಳಿ ಮೌನ ಬಂಗಾರ 🙂

 4. neelihoovu ಹೇಳುತ್ತಾರೆ:

  ಆದರೂ ನೋಡಿ ಮೇಡಂ, ಮೌನದ ಧಿಮಾಕು,ಮಾಡುವ ಅನ್ಯಾಯ.
  ನನ್ನೊಳಗೆ ಮಾತ್ರ ಭಾವನೆಗಳ ಅಲೆಯನ್ನ ಎಬ್ಬಿಸಿ
  ಆಕೆಗೆ ಎನೂ ಅನ್ನಿಸದಂತೆ ಮಾಡಿದೆ..:)

  ಅಂದ ಹಾಗೆ ಮೌನದಲ್ಲೇ, ಮನದಲ್ಲೇ ಎಲ್ಲಾ ಹೇಳುವ
  ಯಂತ್ರ ಯಾವಾಗ ಸೃಷ್ಟಿಸುತ್ತಿದ್ದಾನಂತೆ ಮಾನವ?:)

  ನಿಮ್ಮ ಅಭಿಪ್ರಾಯ, ಇಲ್ಲಿಗೆ ಬಂದು ಕಾಮೆಂಟಿಸಿದ್ದಕ್ಕೆ ನನ್ನ ಧನ್ಯವಾದಗಳು..:)

 5. ಪಲ್ಲವಿ ಎಸ್‌. ಹೇಳುತ್ತಾರೆ:

  ಕೈಕಾಲು ನಡಗಾಕ ಹತ್ಯಾವು ಅಂದ್ರ ಅದು ನಿಜವಾದ ಪ್ರೀತೀನ ಇರಬೇಕು. ಕವನ ಅಂತ ಕರೆಸಿಕೊಳ್ಳುತ್ತೋ ಇಲ್ವೋ ಎಂಬ ಭೀತಿ ಬೇಡ ರಂಜಿತ್‌. ನಿಜಕ್ಕೂ ಇವು ಸೊಗಸಾಗಿ ಮೂಡಿ ಬಂದಿವೆ.

  ಹೀಗೇ ಬರೆಯುತ್ತಿರಿ.

  – ಪಲ್ಲವಿ ಎಸ್‌.

 6. neelihoovu ಹೇಳುತ್ತಾರೆ:

  ವ್ಯಕ್ತಿ ಪ್ರೀತಿಯಲ್ಲಿ ನಂಬಿಕೆ ಇಲ್ಲ ಈಗ..:) ಅಂತ ಪ್ರೀತಿಯ ಪಳೆಯುಳಿಕೆಯಷ್ಟೆ ಕಾಣಸಿಗುವುದು
  ಎದೆಯನ್ನು ಜಾಲಾಡಿದರೆ.
  ಪ್ರಕೃತಿಯನ್ನು ಅದರ ವಿಸ್ಮಯಗಳನ್ನು, ಪುಸ್ತಕವನ್ನು , ಪ್ರಾಣಿಗಳನ್ನು ಪ್ರೀತಿಸೋಣ.
  ಬದಲಿಯಾಗಿ ನಮ್ಮಿಂದೇನೂ ಬಯಸದಲ್ಲವಾ ಅದು?
  ಸಧ್ಯಕ್ಕೆ ಈ ಥಿಯರಿ ನನ್ನದು.

  ಹೀಗೆ ಪ್ರೋತ್ಸಾಹಿಸುತ್ತಿರಿ. ನಿಮ್ಮ ಬೆನ್ತಟ್ಟುವಿಕೆ ನನಗೆ ಇಂಧನ ಇದ್ದಂತೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s