ಹನಿಗಳು ಸಾರ್ ಹನಿಗಳು..

Posted: ಸೆಪ್ಟೆಂಬರ್ 15, 2008 in ಹನಿಗಳು...

ಅವಳಿಲ್ಲದ ರಾತ್ರಿ…

 

ಒಂದು ಸಂಜೆ ಹೇಳಿದೆ ಅವಳಿಗೆ
ನಿನ್ನ ಕಣ್ಣೇ
ದೀಪಾವಳಿ,
ಕೆನ್ನೆ,ಭಾವಕ್ಕೊಮ್ಮೆ ರಂಗು
ಬದಲಿಸುವ
ಹೋಳಿ,

ಅರಳಿದ ಮೊಗವೇ ಉಗಾದಿ,
ನಗು-ಅಳುವೇ ಸಂಕ್ರಾಂತಿಯ
ಬೇವು-ಬೆಲ್ಲ,
ಅಂದಾಗ ನಕ್ಕಳು ಮೆಲ್ಲ
ಹೇಳಿದಳು ಶುಭರಾತ್ರಿ,

ಹೋದ ಮೇಲೆ ಅರ್ಥವಾಯ್ತು

ಅವಳಿಲ್ಲದ ಪ್ರತಿ ರಾತ್ರಿ
ನನಗೆ ನಿದ್ದೆ ಬರದ
ಮಹಾ ಶಿವರಾತ್ರಿ…!

 
**********

ಈ ಹುಡುಗಿಯರು..

 

 ಕೇವಲ ಅಲೆಯಿಂದ
ಸಾಗರದ
ಆಳ,
ಹಿಡಿ ಮಣ್ಣಿಂದ ಇಡೀ
ಪಾತಾಳ,
ಅಳೆಯಬಲ್ಲ
ಆಳಬಲ್ಲ
ಜಾದೂಗಾರರು ಈ
ಹುಡುಗಿಯರು..
ಬರಿಯ ಕಣ್ಣಿಂದ
ಎದೆಯೊಳಗಿಳಿದು
ಆತ್ಮವನೇ
ವಶಪಡಿಸಿಕೊಂಡರು
ಮಾಡಿಕೊಂಡರು ತಮ್ಮ
ತವರು..!

 

***********

ನಕ್ಷತ್ರ…

 

ಆಗುವುದು ಬೇಡ ನಾನು
ಮಿರಿ ಮಿರಿ ಮಿಂಚುವ
ಧೃವ ನಕ್ಷತ್ರ..

ನೀ ಆಗಸ ನೋಡಿ ಪ್ರಾರ್ಥಿಸುವಾಗ
ಕ್ಷಣಕಾಲ ಬದುಕಿದರೂ ಸರಿ,

ನಾ ಆಗಸದಿಂದ ಜಾರಬೇಕು
ನನ್ನ ನಾ ಕಳೆದುಕೊಳ್ಳುತ್ತಾ
ನಿನ್ನ ಕನಸುಗಳೆಲ್ಲವ
ನನಸಾಗಿಸಬೇಕು!


***********

 ನಂಬಲೇಬೇಕಾಯ್ತು ನೋಡು….

 

 

ಕಂಡೆ ನೂರು ಜಲಪಾತ,
ಪ್ರಕೃತಿ ವಿಸ್ಮಯಗಳ
ಎಲ್ಲಾ ಹೂವಿನ ನಗುವನು
ಎಲ್ಲಾ ಹಕ್ಕಿ ಹಾಡು
ಆಗಲೂ ನಂಬಿರಲಿಲ್ಲ

ಅವಳ ಅದ್ಭುತ ಅಂದ ನೋಡಿದೆ

ನಂಬಲೇಬೇಕಾಯಿತು ನೋಡು
ದೇವರ ಇರುವನ್ನು..!

********* 

ನಿನ್ನ ನೆನಪು….

 

ನಿನ್ನ ನೆನಪು ಅಲ್ಲ
ನನ್ನ ಪಾಲಿಗೆ
ಎದೆಪುಟದಲಿ
ಎಂದಿಗೋ ಸಿಗುವ
ನವಿಲುಗರಿ..

ಅದು ಸದಾ
ನನ್ನ ಮನದಲಿ
ಜಿನುಗುವ
ಹನಿ ನೀರಾವರಿ!

*******

 

  ದೇವರಿಗೂ….

 

ನೀನು ನನ್ನ ನಿರ್ದಾಕ್ಷಿಣ್ಯವಾಗಿ
ಬಿಟ್ಟು ಹೋದ ಮೇಲೂ
ನಾನು ಬದುಕಿದ್ದೇನೆಂದರೆ

ದೇವರಿಗೂ ನಾ ಸಾಯುವುದು
ಇಷ್ಟವಿಲ್ಲ ಎಂದಾಯಿತು!

ಟಿಪ್ಪಣಿಗಳು
 1. ಅನಾಮಿಕ ಹೇಳುತ್ತಾರೆ:

  ಬಹಳ ಮುದ್ದಾಗಿದೆ.

 2. ಪಲ್ಲವಿ ಎಸ್‌. ಹೇಳುತ್ತಾರೆ:

  ರಂಜಿತ್‌,

  ಕವನಗಳು ತುಂಬಾ ಚೆನ್ನಾಗಿವೆ. ತುಂಬಾ ಮೆದು, ನವಿರು ಭಾವನೆಗಳನ್ನು ಪದಗಳಾಗಿಸಿ ಪದ್ಯಗಳನ್ನು ಬರೆದಿದ್ದೀರಿ.

  ’ನೀನು ನಿರ್ದಾಕ್ಷಿಣ್ಯವಾಗಿ
  ಬಿಟ್ಟು ಹೋದ ಮೇಲೂ
  ನಾನು ಬದುಕಿದ್ದೇನೆಂದರೆ

  ದೇವರಿಗೂ ನಾ ಸಾಯುವುದು
  ಇಷ್ಟವಿಲ್ಲ ಎಂದಾಯಿತು !’

  ಚುಟುಕು ತುಂಬಾ ಹಿಡಿಸಿತು.

  ಅಂದ್ಹಾಗೆ, ಇದು ಬರೀ ಕವಿತೆಯಾ ಅಥವಾ ಅನುಭವವಾ?

  – ಪಲ್ಲವಿ ಎಸ್‌.

 3. neelihoovu ಹೇಳುತ್ತಾರೆ:

  ಅನಾನಿಮಸ್ ರವರಿಗೆ,

  ನನ್ನ ಫೋಟೋ ಗಮನಿಸಿದ್ದರೂ ನೀವು ಇದನ್ನೇ ಹೇಳುತಿದ್ದಿರಿ ಅನ್ನಿಸುತ್ತದೆ..:)

  ನಿಮ್ಮ ಹೆಸರೂ ಹಾಕಿದ್ದರೆ ತುಂಬ ಖುಷಿಪಡುತ್ತಿದ್ದೆ.

  ಧನ್ಯವಾದಗಳು ನಿಮಗೆ..:)

 4. neelihoovu ಹೇಳುತ್ತಾರೆ:

  ಪಲ್ಲವಿ,

  ಹೊಗಳಿ ಹೊಗಳಿ ನನ್ನನು ಪೆನ್ನ ಶೂಲಕ್ಕೇರಿಸುತ್ತಿದ್ದೀರಿ..:)
  ನಾನು ತುಂಬ ಇಷ್ಟ ಪಡುವ ಕೆಲವೇ ಬರಹಗಾರರಲ್ಲಿ ನೀವೂ ಒಬ್ಬರು.
  ಹಾಗಾಗಿ ನಿಮ್ಮಿಂದ ಹೊಗಳಿಕೆ ಬಂದರೆ ಬಹಳ ಹೆಮ್ಮೆ ಅನ್ನಿಸುತ್ತದೆ..:)

  ಇನ್ನು ನಿಮ್ಮ ಕೊನೆಯ ಸಾಲಿನ ಪ್ರಶ್ನೆಗೆ,

  ಕವಿತೆ ಅಂದರೆ ಅನುಭವಕ್ಕೆ ಮೋಸ ಮಾಡಿದಂತೆ,
  ಅನುಭವ ಅಂದರೆ ಕವಿತೆಗೆ ಮೋಸ ಮಾಡಿದಂತೆ..!
  ಹಾಗಾಗಿ ಮೌನದ ಸಹಾಯ ಪಡೆಯುವೆ..:)

  ತುಂಬಾ ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ. ಋಣಿಯಾಗಿರುವೆ.

 5. satish ಹೇಳುತ್ತಾರೆ:

  http://www.copyscape.com/banners.php?o=f

  use this and put a banner in ur blog to prevent copying. I have done. click and paste the html code in the body of ur html.

 6. vijayraj ಹೇಳುತ್ತಾರೆ:

  ನಾ ಆಗಸದಿಂದ ಜಾರಬೇಕು
  ನನ್ನ ನಾ ಕಳೆದುಕೊಳ್ಳುತ್ತಾ
  ನಿನ್ನ ಕನಸುಗಳೆಲ್ಲವ
  ನನಸಾಗಿಸಬೇಕು!

  beautiful lines………………odi sikkaapaTTe khushi aaytu kaNri

  ಅವಳಿಲ್ಲದ ರಾತ್ರಿ… kooDa chennagide

 7. neelihoovu ಹೇಳುತ್ತಾರೆ:

  ತುಂಬಾ ಥ್ಯಾಂಕ್ಸ್ ವಿಜಯರಾಜ್ ಸರ್,

  ನಿಮ್ಮ ಆಶೀರ್ವಾದ ಹೀಗೆ ನನ್ನ ಮೇಲಿರಲಿ.
  ನಿಮ್ಮ ಅಭಿಪ್ರಾಯ ನೋಡಿದೊಡೆ ನಮ್ಮೂರು ನೆನಪಾಗುತ್ತದೆ.
  ಬೆಂಬಲ, ಕಾಳಜಿ, ಪ್ರೀತಿ ಹೀಗೆ ಇರಲಿ ಸರ್…

 8. neelihoovu ಹೇಳುತ್ತಾರೆ:

  ಸತೀಶ್,
  ಕಾಳಜಿಗೆ ಥ್ಯಾಂಕ್ಸ್ ಗುರುವೆ…
  ಆದ್ರೆ ನಮ್ಮದರಲ್ಲಿ ಯಾಕೋ ಆಗ್ತಿಲ್ಲ.

 9. raveesha ಹೇಳುತ್ತಾರೆ:

  manasige hita koduvatha kavithegalu raveesh from tumkur

 10. geeta bhandar ಹೇಳುತ್ತಾರೆ:

  Niuo breda kavana tumaba chenagide nanage inglish brala idru breuodu kaliutitidene

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s