ನೀ ಹೋದ ಬಳಿಕ….

Posted: ಸೆಪ್ಟೆಂಬರ್ 16, 2008 in ಕವಿತೆ

 

ನೋವುಗಳೆಲ್ಲಾ
ದೋಸ್ತುಗಳಾಗಿಬಿಟ್ಟಿವೆ.
ಅದರ ಗಾಯಗಳೆಲ್ಲ ಮಾಗಿ
ಆರಿಬಿಟ್ಟಿವೆ.

ನೆನಪುಗಳೆಲ್ಲಾ
ಮೊಂಡಾಗಿಬಿಟ್ಟಿವೆ,
ಇನ್ನು ಚುಚ್ಚಿ
ಪ್ರಯೋಜನವಿಲ್ಲವೆಂದು
ಅರಿತುಬಿಟ್ಟಿದೆ.

ಕನಸುಗಳಿಗೆ ನಿನ್ನ
ನೆನಪ ಹಾದಿ
ತಪ್ಪಿಸಿರುವೆ,
ಬದುಕ ದಾರಿ
ತೋರಿಸಿರುವೆ.

ಒಂದು ಮಾತ್ರ ಬಾಕಿಯಿದೆ
ಈಗ,
ಕವಿಯಾದ ಋಣವಷ್ಟೇ
ತೀರಿಸಬೇಕಿದೆ…

ದಯವಿಟ್ಟು ವಿಳಾಸವೊಂದು
ಇತ್ತು ಹೋಗು..

ಸಂಪಾದಕರ ಸಂಭಾವನೆ
ನಿನಗೇ ತಲುಪಿಸಬೇಕಿದೆ!

Advertisements
ಟಿಪ್ಪಣಿಗಳು
 1. ಪಲ್ಲವಿ ಎಸ್‌. ಹೇಳುತ್ತಾರೆ:

  ಇದು ಗಜಲ್ಲಾ? ತುಂಬ ದಿನಗಳಿಂದ ಅದುಮಿಟ್ಟಿದ್ದ ಭಾವನೆಯೊಂದು ಸದ್ದಿಲ್ಲದೇ ಮಾಗಿ, ಹಣ್ಣಾಗಿ, ತಣ್ಣಗೇ ಪರಿಮಳ ಹೊಮ್ಮಿಸುವಂತಿದೆ. ನಿಟ್ಟುಸಿರೊಂದು ಗಮನಕ್ಕೆ ಬಾರದೆ ಹೊರಬಂದು ಮನಸ್ಸು ನಿರಾಳವಾದಂತಿದೆ.

  ’ಒಂದು ಮಾತ್ರ ಬಾಕಿಯಿದೆ
  ಈಗ,
  ಕವಿಯಾದ ಋಣವಷ್ಟೇ
  ತೀರಿಸಬೇಕಿದೆ…

  ದಯವಿಟ್ಟು ವಿಳಾಸವೊಂದು
  ಇತ್ತು ಹೋಗು..

  ಸಂಪಾದಕರ ಸಂಭಾವನೆ
  ನಿನಗೇ ತಲುಪಿಸಬೇಕಿದೆ!’

  ಈ ಸಾಲುಗಳಂತೂ ಮನ ಕಲಕಿದವು. ಏಕಿಷ್ಟು ಭಾವುಕರಾಗುತ್ತಿದ್ದೀರಿ? ನಿಮ್ಮ ಗದ್ಯಕ್ಕಿಂತ ಪದ್ಯಗಳೇ ಹೆಚ್ಚು ಇಷ್ಟವಾಗುತ್ತಿವೆ. ಜೊತೆಗೆ, ಹಾಗೆ ಬರೆಯಲು ಆಗದ್ದಕ್ಕೆ ನನಗೆ ಸಾಕಷ್ಟು ಹೊಟ್ಟೆಕಿಚ್ಚೂ ಆಗುತ್ತಿದೆ.

 2. neelihoovu ಹೇಳುತ್ತಾರೆ:

  ಥ್ಯಾಂಕ್ಸ್ ವಿಜಯರಾಜ್ ಸರ್…

  *********

  ಪಲ್ಲವಿ,

  ನಿಮ್ಮ “ನಿಟ್ಟುಸಿರೊಂದು ಗಮನಕ್ಕೆ ಬಾರದೆ ಹೊರಬಂದು ಮನಸ್ಸು ನಿರಾಳವಾದಂತಿದೆ.” ಈ ವಾಕ್ಯ ನಂಗೆ ಯಂಡಮೂರಿಯ ಮಾತೊಂದು ನೆನಪಿಸಿತು.ಎಲ್ಲೋ ಒಂದು ಕಡೆ ಆ ಲೇಖಕ “ಮೆಂಟಲ್ ಎಜಾಕ್ಯುಲೇಶನ್” ಎಂಬ ಪದ ಉಪಯೋಗಿಸ್ತಾರೆ.
  ಕವಿತೆ ಹುಟ್ಟುವ ಘಳಿಗೆಯಲ್ಲಿ ಕವಿಯ ಮನಸ್ಸಿನಲ್ಲಿ ಒಂದು ಒದ್ದಾಟ ಇರುತ್ತೆ. ಎಲ್ಲಾ ಚಡಪಡಿಕೆಗಳ ನಂತರ ಕವಿತೆಗೊಂದು ಕೊನೆ ಕೊಟ್ಟಾಗ ಒಂದು ರೀತಿಯ ನಿರಮ್ಮಳತೆ,”ನಿಟ್ಟುಸಿರೊಂದು ಗಮನಕ್ಕೆ ಬಾರದೆ ಹೊರಬಂದು ಮನಸ್ಸು ನಿರಾಳವಾಗುವಂತಹಾ” ಭಾವನೆ ಮೂಡುತ್ತದಲ್ಲ.. ಬಹುಶಃ ಅದೇ ಅನ್ನಿಸುತ್ತೆ.. ಯಂಡಮೂರಿ ಹೇಳಿದ ಮಾನಸಿಕ ಸ್ರವಿಕೆ.
  ಆ ಘಳಿಗೆಗೆ, ಆ ಖುಷಿಗೆ, ಆ ಭಾವನೆಗೆ ಬೇರೆ ಸಬ್ ಸ್ಟಿಟ್ಯೂಟ್ ಇಲ್ಲ.ಅದನ್ನು ವಿವರಿಸಲು ಪದಗಳು ಹೀನಾಯವಾಗಿ ಸೋಲುತ್ತದೆ.
  ತೀರ ಖಾಸಗಿಯಾದ ಕವಿ ಸಮಯ ಅದು. ನಿಮಗೂ ತಿಳಿದದ್ದೇ ಅದು. ಯಾಕೊ ಹಂಚಿಕೊಳ್ಳಬೇಕನ್ನಿಸಿತು.

  ತುಂಬಾ ಥ್ಯಾಂಕ್ಸ್!

 3. ನವಿಲಗರಿ ಹೇಳುತ್ತಾರೆ:

  ದಯವಿಟ್ಟು ವಿಳಾಸವೊಂದು
  ಇತ್ತು ಹೋಗು..

  ಸಂಪಾದಕರ ಸಂಭಾವನೆ
  ನಿನಗೇ ತಲುಪಿಸಬೇಕಿದೆ!

  :(… ಗುರುಗಳೇ ನಿಮ್ಮ ಮೇಲಿನ ಹೊಟ್ಟೆ ಕಿಚ್ಚು ಮತಷ್ಟು ಹೆಚ್ಹಾಗುತ್ತಿದೆ.. ಈ ಎರೆಡು ಸಾಲನ್ನ ಅದೆಷ್ಟು ಸಾರಿ ಓದಿಕೊಂಡೆ ಗೊತ್ತ?

 4. neelihoovu ಹೇಳುತ್ತಾರೆ:

  ಸೋಮಣ್ಣಾ,

  ನನಗೆ ಕಂಪ್ಯೂಟರ್ ನಲ್ಲಿ ಅಕ್ಷರ ಹೇಳಿಕೊಟ್ಟು ನನಗೇ “ಗುರುಗಳೇ” ಅಂತೀಯಾ?

  ಆರ್ಕುಟ್ ನ ಯಾವ್ದೋ ಮೂಲೆಯಲ್ಲಿ ಬಾವಿಯಲ್ಲಿನ ಕಪ್ಪೆ ಥರ ಬರೀತ ಇದ್ದವ್ನನ್ನ ಬ್ಲಾಗೆಂಬ ವಿಶಾಲ ಸಾಗರ ಕ್ಕೆ ಹಾಕಿ ಹೊಟ್ಟೆಕಿಚ್ಚು ಅಂತೀಯೆನೊ?

  ನಿನ್ನ ದೈನಿಂದಿನ ಜಂಜಡ, ಸಾವಿರ ಸಮಸ್ಯೆಗಳು, ೧೦ ಶನ್ ಗಳ ನಡುವೆಯೂ ಇಲ್ಲಿ ಬಂದು “ಹೇಳಿಕೊಡಬೇಕಿದೆ ಈಗ” ಮತ್ತು ಚಿಕನ್ ಕವಿತೆಗೆ ತೋರಿಸಿದಷ್ಟೇ ಪ್ರೀತಿ ತೊರಿಸಿದ್ದೀಯ.

  ನೀ ಮಾಡಿದ ಎಲ್ಲಾ ಸಹಾಯಗಳಿಗೆ “ಧನ್ಯವಾದ” ಅನ್ನುವ ಪದಕ್ಕಿಂತ ಜಾಸ್ತಿ ಅರ್ಥ ಕೊಡುವಂತಹಾ ಪದ ಇದ್ದರೆ ಹೇಳಿಕೊಡ್ತೀಯಾ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s