ಲಕ್ಕಿನ ಸಿಕ್ಕುಗಳಲ್ಲಿ ಸಿಲುಕಿ….

Posted: ಸೆಪ್ಟೆಂಬರ್ 17, 2008 in ಲೇಖನ

 

“ದುರದೃಷ್ಟ ಬಾಗಿಲು ಬಡಿಯುತ್ತಲೇ ಇರುತ್ತದೆ.. ಆದರೆ ಅದೃಷ್ಟ ಅನ್ನೊದು ಯಾವಾಗಲೋ ಒಮ್ಮೆ ಮಾತ್ರ ಬಾಗಿಲು ತಟ್ಟುತ್ತದೆ.”
ಲೇಖಕನೊಬ್ಬನ ಸಾಲುಗಳಿವು. ಸಾಮಾನ್ಯವಾಗಿ ಯಾವುದಾದರೊಂದು  ಕ್ಷೇತ್ರ ದಲ್ಲಿ ಯಶಸ್ವಿಯಾದ ವ್ಯಕ್ತಿಯನ್ನು ಕಂಡು ಹಲುಬುವವರೇ ಹೆಚ್ಚು.
“ಪ್ರತಿಭೇನೂ ಇಲ್ಲ.. ಎನೂ ಇಲ್ಲ.ಬರೇ ಲಕ್ಕಿನಿಂದ ಮೇಲೆ ಬಂದ ಮಾರಾಯ..”ಅಂದುಕೊಂಡೋ, ಇಲ್ಲವೇ “ನಾನೂ ಅವನೂ ಇಬ್ಬರೂ ಒಟ್ಟೇ ಕಷ್ಟ ಪಟ್ವಿ.. ಅವನ ಲಕ್ಕು ಚೆನ್ನಾಗಿತ್ತು” ಅಂತ ಯಶಸ್ಸಿನ್ನು ಅದೃಷ್ಟಕ್ಕೇ ಕಟ್ಟಿ ಬಿಡುತ್ತಾರೆ. ದುರದೃಷ್ಟ ಬಾಗಿಲು ಬಡಿಯುತ್ತಲೇ ಇರುವ ಅತಿಥಿ.ಅದಕ್ಕೆ ತಕ್ಷಣವೇ ಯಾರನ್ನಾದರೂ ಅವರಿಸಿಕೊಳ್ಳುವ ತವಕ. ಎಲ್ಲರ ಮನೆ ಬಾಗಿಲ ಬಳಿಯೇ ಅದರ ಕೆಲಸ. ಅಡ್ಡದಾರಿಯ ಸೂತ್ರಕ್ಕೆ, ಕಷ್ಟಪಡದೇ ಸುಲಭ ತುತ್ತಿನ ಆಸೆಗೆ ಬಿದ್ದು ಕೂಡಲೇ ಬಾಗಿಲು ತೆಗೆಯುವವರೆಲ್ಲರೂ ದುರದೃಷ್ಟವಂತರೇ.

ನಿಜಕ್ಕೂ ಅದೃಷ್ಟ ಅಂದರೆ ಏನು?

ಬದುಕಿನಲ್ಲಿ ಅಧಃಪಾತಾಳಕ್ಕಿಳಿದ ವ್ಯಕ್ತಿ ಹಂತ ಹಂತವಾಗಿ ಯಶಸ್ಸಿನ ತುದಿ ಮುಟ್ಟಿದವರನ್ನು ಕೇಳಿ ನೋಡಿ. ಬದುಕನ್ನು ಉನ್ನತ ದೃಷ್ಟಿಕೋನದಿಂದ
ನೋಡಿರುತ್ತಾನಾತ.   ಅವನಿಗೆ ಅದೃಷ್ಟ ಬಾಗಿಲು ಬಡಿವುದೂ ಗೊತ್ತು.  ದುರದೃಷ್ಟದ ಹಟವೂ ಗೊತ್ತು. ಅದೃಷ್ಟ ಅಂದರೆ “ಅವಕಾಶ ಮತ್ತು ಸಿದ್ಧತೆಗಳ ಸಂಗಮ ಅಂತ ಸಕಾರಾತ್ಮಕವಾಗಿ ಸರಿಯಾದ ಡೆಫಿನೇಶನ್ ಹೇಳಬಲ್ಲ. ಅವಕಾಶ ಹೇಳದೇ ಕೇಳದೇ ಯಾವಾಗಲೋ ಒಮ್ಮೆ ಬರುತ್ತದೆ. ಆದರೆ ಆ ಅವಕಾಶಕ್ಕಾಗಿ ಮಾಡಬೇಕಾದ ಸಿದ್ಧತೆಯಿದೆಯಲ್ಲ.. ಅದು ಪ್ರಾರಂಭದಿಂದಲೇ ಹುಟ್ಟಿರಬೇಕು.

ಬೆಳಗಾಗುವುದರೊಳಗೆ ಶ್ರೀಮಂತನಾಗಿ ಬಿಡಬೇಕು. ಎವರೆಸ್ಟ್ ಹತ್ತಿ ಬಿಡಬೇಕು, ಯಶಸ್ಸಿನ ಜುಟ್ಟು ಹಿಡಿದಿರಬೇಕು ಅಂತೆಲ್ಲಾ ಅಲೋಚಿಸುವವರು ಅದಕ್ಕೆ ತನಗೆ ಅರ್ಹತೆ ಉಂಟಾ ಅಂತ ಯೋಚಿಸಿದ್ದಿದೆಯಾ?  ಅಲ್ಲಿಯವರೆಗೂ ಅದೇ ಫೀಲ್ಡಿನಲ್ಲಿರುವ ಸಾವಿರಾರು ಜನರು, ಅನುಭವಸ್ಥರು ಅವರನ್ನೆಲ್ಲಾ ಹಿಂದಿಕ್ಕಿ ಮುನ್ನುಗ್ಗಬಲ್ಲ ಛಾತಿ ಇದೆಯಾ ಅಂತ ತಮ್ಮ ಅಂತರಂಗದ ಕನ್ನಡಿಯಲ್ಲಿ ನೋಡಿದ್ದಿದೆಯಾ?

ದಿಡೀರ್ ಯಶಸ್ಸು ಅಷ್ಟು ಸುಲಭ ಸಾಧ್ಯವಲ್ಲ. ಚೀನಾದಲ್ಲಿ ಒಂದು ಬಗೆಯ ಬಿದಿರು ಮರವಿದೆ. ಸಾಮಾನ್ಯವಾಗಿ ಬೇರೆ ಜಾತಿಯ ಬಿದಿರುಗಳು ವೇಗವಾಗಿ ಬೆಳೆಯುತದೆ. ಆದರೆ ಆ ಚೀನಾದ ಬಿದಿರು ಬೀಜ ಹಾಕಿ ನೀರು ಹಾಕಿ ಪೋಷಿಸಿದರೂ ಗಿಡವಾಗುವುದೇ ಇಲ್ಲ. ಒಂದು ವರ್ಷ.. ಎರಡು ವರ್ಷ.. ಮೂರು ವರ್ಷ… ನಾಲ್ಕು…. ಉಹುಂ.. ಬರೋಬ್ಬರಿ ಏಳು ವರ್ಷದ ತನಕ ಬೀಜ ಹಾಕಿದ ಜಾಗೆಯಲ್ಲಿ ಚಿಕ್ಕ ಸಸಿಯೂ ಏಳುವುದಿಲ್ಲ. ಆದರೆ ಏಳನೆಯ ವರ್ಷವಿದೆಯಲ್ಲ.. ಆಗ ಚಿಕ್ಕದೊಂದು ಸಸಿ ಕುಡಿಯೊಡೆಯುತದೆ. ಮುಂದೆ ಅದರ ಬೆಳವಣಿಗೆ ಬಹಳ ಕ್ಷಿಪ್ರ. ಕೇವಲ ಏಳು – ಎಂಟು ತಿಂಗಳಲ್ಲಿ ತನ್ನ ಎತ್ತರವನ್ನು ಬೆಳೆದುಬಿಡುತ್ತದೆ.

ಯಶಸ್ಸೂ ಹಾಗೆಯೇ ಅಲ್ಲವೆ?

ಏಳು ವರ್ಷಗಳ ನಂತರ ಬೆಳೆವ ವೇಗಕ್ಕಾಗಿ ಶಕ್ತಿಯನ್ನು ಹೊಂದಿಸಿಕೊಳ್ಳುತ್ತಿದೆಯೆನೋ ಎಂಬಂತೆ
ಸುಮ್ಮನಿರುತ್ತದಲ್ಲ ಆ ಬೀಜ, ಹಾಗೆಯೇ ಮನಸ್ಸನ್ನು ಅಣಿಗೊಳಿಸುತ್ತಿರಬೇಕು. ಗುರಿಗೆ ಬೇಕಾಗುವ ಕೌಶಲ್ಯಗಳನ್ನು ಒಟ್ಟುಹಾಕುತ್ತಿರಬೇಕು. ಮುಖ್ಯವಾಗಿ ಯಶಸ್ಸಿನ ತುದಿಮುಟ್ಟಿದ ಮಹಾನುಭಾವರ ಬಗ್ಗೆ ಹಲುಬುವ ಮಾನಸಿಕ ಖಾಯಿಲೆಗೆ ಎಡೆಮಾಡಿಕೊಡಬಾರದು. ಎಷ್ಟೋ ಸಲ ಇದೂ ಒಂದು ಮಾನಸಿಕ ದುರ್ಬಲತೆ ಎಂಬುದನ್ನು ಮರೆತಿರುತ್ತೇವೆ. ಇಂದಿನ ಯುವಕರ ಇಂತಹ ಧೋರಣೆ ಅವರನ್ನು ಪಲಾಯನವಾದದತ್ತ ಕೊಂಡೊಯ್ಯುತ್ತದೆ.

ಇದು ಸ್ಪರ್ಧಾತ್ಮಕ ಯುಗ. ನಿಜವಾಗಿಯೂ ಪ್ರತಿಭೆ ಒಳಗಿದ್ದರೆ ಮುಂದೆ ಬರಲು ಹಲವಾರು ಹಾದಿಗಳೂ ಆಕಾಶದಷ್ಟು ಅವಕಾಶಗಳಿವೆ. ಆದ್ದರಿಂದ ಮನಸ್ಸಿನ ಅಸಂಬದ್ಧ ವಿಚಾರಸರಣಿಗೆ ಸೋಲದೇ ವಿಜಯದ ಸಿದ್ಧತೆಗಳನ್ನು ಆರಂಭಿಸಬೇಕು. “ಇಂಟರ್ವ್ಯೂಗೆ ಕರೆ ಬಂದಾಗ ಓದಿಕೊಂಡರಾಯ್ತು.. ಈಗ್ಲೆ ಏನವಸರ?” ಎಂದುಕೊಂಡು ದಿನಗಳನ್ನು ಜಾರಿಹೋಗಲು ಬಿಟ್ಟು ಉದ್ಯೋಗಕ್ಕಾಗಿ ಪರದಾಡುವ ಯುವಕ-ಯುವತಿಯರೇನು ಕಡಿಮೆ ಇಲ್ಲ. ಇಂಟರ್ವ್ಯೂ ಎಂಬುದು ಅವಕಾಶ.  ಓದು ಅನ್ನುವುದು ಸಿದ್ಧತೆ.

ಸಿದ್ಧತೆ ಮತ್ತು ಅವಕಾಶದ ಸಂಗಮವಾದಾಗ ಮಾತ್ರ ಯಶಸ್ಸು; ಅದೃಷ್ಟ!

ಇನ್ನು ವಿದ್ಯಾರ್ಥಿಗಳಿಗೂ ಅಷ್ಟೇ.  ಪರೀಕ್ಷೆ ಎಂಬುದನ್ನು ತನ್ನ ಪ್ರತಿಭೆ ತೋರಿಸಲು ಅವಕಾಶ ಎಂದುಕೊಂಡು ಖುಷಿಯಾಗಿ ಕಾಲೇಜಿನ ಪ್ರಾರಂಭದ ದಿನದಿಂದಲೇ (ಅರ್ಧ-ಒಂದು ಘಂಟೆಯಾದರೂ ಸರಿ) ಓದುತ್ತಾ ಬಂದರೆ ಯಾವ ಅದೃಷ್ಟ ದ ಮೇಲೂ ಡಿಪೆಂಡ್ ಆಗಬೇಕಿಲ್ಲ…ಲಕ್ಕಿನ ಸಿಕ್ಕುಗಳಲ್ಲಿ ಸಿಲುಕಿ ನರಳಬೇಕಿಲ್ಲ..

ಬದುಕು, ಹೆಗಲಿಗೆ ಕೈ ಹಾಕಿ ಗೆಳೆಯನಂತೆ ಸ್ವಾಗತಿಸುತ್ತದೆ.

ಟಿಪ್ಪಣಿಗಳು
 1. denice_menace ಹೇಳುತ್ತಾರೆ:

  aadroo lakku lakke saar, tumba saari, eshtu odidroo kashta patroo kelavu vishayagalalli annisidahaage aguvadilla adakke helodu..luckflucks nobody checks antha!

  Denny Boi…:)

 2. neelihoovu ಹೇಳುತ್ತಾರೆ:

  ಡೆನ್ನಿಸ್ ಸರ್,
  ಮ್ …. ನನ್ನ ಮನಸ್ಸು ಈಗಲೂ ನೀವು ಹೇಳಿದ್ದಕ್ಕೆ ಒಪ್ಪುತ್ತಿಲ್ಲ.
  ನೀವು ಹೇಳಿದಂತೆ ಕೆಲವೊಂದು ಸಲ ನಡೆವ ಕಾಕತಾಳೀಯದಿಂದ ಹಾಗೆ ಅನ್ನಿಸುವುದು ನಿಜ. ಆಳವಾಗಿ ಗಮನಿಸಿದರೆ ಕಾರಣ ಹೊಳೆದೀತು.
  ಇಂಜಿನಿಯರಿಂಗ್ ನಲ್ಲಿ ಪದೇ ಪದೇ ಗಣಿತದಲ್ಲಿ ಫೇಲಾಗುತ್ತಿದ್ದ ಒಬ್ಬನನ್ನು ಪರೀಕ್ಷೆಗೊಳಪಡಿಸಿದಾಗ ಆತ ಹೇಳಿದ ವಿಷಯ, ಚಿಕ್ಕಂದಿನಲ್ಲಿ ಗಣಿತದ ಮಾಸ್ತರೊಬ್ಬರು ಅವನಿಗೆ ಬೈದಿದ್ದೇ ಗಣಿತದ ಮೇಲಿನ ಆಸಕ್ತಿ ಹೋಗಲು ಕಾರಣವಾಗಿ ದೊಡ್ಡವನಾದ ಮೇಲೂ ಅದು ಪರಿಣಾಮ ಬೀರುತ್ತಿತ್ತು.
  (“ಜೊ-ಹ್ಯಾರಿ ವಿಂಡೋವ್ಸ್” ಅಂತ ಮಾನಸಿಕ ವಿಷ್ಲೇಷಣೆ ಇದೆ, ಸಿಕ್ಕರೆ ಓದಿರಿ)
  ಇದೊಂದು ಉದಾಹರಣೆಯಷ್ಟೆ.
  ಸೋಲು ಅಂದರೆ ನಮ್ಮ ಪ್ರಯತ್ನ ಯಶಸ್ಸಿನ ಮಟ್ಟ ಮುಟ್ಟಿಲ್ಲ ಅಂತಷ್ಟೇ ಅಲೋಚಿಸಿ ಮುಂದುವರೆದರೆ ಚೆನ್ನ ಅಂತ ನನ್ನ ಅಭಿಪ್ರಾಯ.
  ನೀವು ಹೇಳಿದ ಲಕ್ಕಿನಿಂದ ಅಪಜಯದ ಚಾನ್ಸ್ ಎಷ್ಟಿದೆಯೊ ಅಷ್ಟೇ ಚಾನ್ಸ್ ಜಯಕ್ಕೂ ಇದೆ ಅಂತ ಅಂದ್ಕೊತೇನೆ.
  ಅಪಜಯವಾದರೆ ಪ್ರಯತ್ನದೆಡೆಗೆ ಅನುಮಾನ ಬೀರಬೇಕು, ಲೋಪವೆಲ್ಲಿ ಅಂತ ವಿಶ್ಲೇಷಣೆಗಿಳಿಯಬೇಕು, ತಮ್ಮೊಳಗೆ ತಾವು ಇಳಿದು ಮತ್ತಷ್ಟು ಗಟ್ಟಿಗರಾಗಿ ಇನ್ನೊಂದು ಪ್ರಯತ್ನಕ್ಕಿಳಿಯಬೇಕು. ಹಾಗೆಯೇ ಒಂದು ವೇಳೆ ಕೇವಲ ಅದೃಷ್ಟ(!)ದಿಂದ ಯಶ ಲಭಿಸಿದರೆ ಅದನ್ನು ಅಪ್ಪ-ಅಮ್ಮ, ಗುರುಹಿರಿಯರ ಆಶೀರ್ವಾದ, ಒಳ್ಳೆ ಮನಸ್ಸಿನ ಗೆಳೆಯರ ಹಾರೈಕೆ ಅಂತಲೇ ನಂಬಿದರೆ ಚಂದ.
  ಲಕ್ ಅಂತಂದು ಕಾಣದ ಭಾವಕ್ಕೆ ಕೈ ಮುಗಿವ ಬದಲು,ನಮ್ಮ ನಡುವೆ ಇರುವ ಒಳ್ಳೆಮನಸ್ಸುಗಳ ಬಳಿ ಹರಸಿಕೊಳ್ಳುವುದು ಮೇಲಲ್ಲವೆ?
  ಅಫ್ ಕೋರ್ಸ್, ಇದು ನನ್ನ ಅಭಿಪ್ರಾಯ ಮಾತ್ರ.
  ಈ ನಂಬಿಕೆಯಂತೆ ನಡೆದುಕೊಂಡು ಬಂದಿದ್ದೇನೆ, ಅದು ಒಳ್ಳೆಯ ಪರಿಣಾಮ ನೀಡಿದೆ ಎಂದಷ್ಟೇ ಹೇಳಬಲ್ಲೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s