ಕವಿಯೇ.. ಇದು ನಿನಗೆ ತರವೇ..?

Posted: ಸೆಪ್ಟೆಂಬರ್ 18, 2008 in ಕವಿತೆ

ಹಿಂದೆ ಬರೆದ
ಕವಿತೆಯ ಮೋಹ
ಮುಂದೆ ಹೋಗುವ
ದಾಹ ಇಂಗಿಸೀತು..

ಒಡಲೊಳು
ಕಾಯುತಿರುವ
ಸಾವಿರ ಕವನ
ಹಂಗಿಸೀತು..

ಓ… ಕವಿಯೇ…

ಹೊಗಳುವವರು ಆಗಲೇ
ಪದಪುಂಜದ ಥೈಲಿ ಹಿಡಿದು
ಗಾನಗುಂಜನವ ಮಾಡುತಾ
ನಡೆದಿಹರು
ಮುಂದಿನವನ..
ಉಗುಳುವವರು
ಕತ್ತಿಯ ಮಸೆಯುತಲಿಹರು..

ಬರೆದ ಕವನ
ನಡೆದ,ಮಡಿದ
ಹಾದಿಯಲ್ಲವೇ…

ಮೈಲಿಗಲ್ಲುಗಳು
ಕ್ರಮಿಸಬೇಕಾದ
ಸಾಧನೆ ತೋರಿ
ಅಣಕಿಸುತಿರಲು
ಸವೆದ ದಾರಿಯ
ಸವಿಯ ಉಣ್ಣಲು
ಕೂರುವುದು ತರವೇ?

ಪ್ರಕೃತಿಯ ಪ್ರಭುತ್ವವನ್ನೂ
ಮಾನವನ ಅಣುತ್ವವನ್ನೂ
ಮಗುವಿನಂತಹ
ಬೆರಗುಕಂಗಳಿಂದ ದಿಟ್ಟಿಸು..

ಓದಲು ಕೂತ ಮನಗಳಿಗೆ
ನ್ಯಾಯ ಒಪ್ಪಿಸು..

ಹೃದಯ ಅರಳುವಂತಹ
ಪ್ರೀತಿ ಪರಿಮಳಿಸುವಂತಹ
ಹೊಸ ಕವನ ಹುಟ್ಟಿಸು..!

ಟಿಪ್ಪಣಿಗಳು
 1. ಪಲ್ಲವಿ ಎಸ್‌. ಹೇಳುತ್ತಾರೆ:

  ಹಿಂದೆ ಬರೆದ
  ಕವಿತೆಯ ಮೋಹ
  ಮುಂದೆ ಹೋಗುವ
  ದಾಹ ಇಂಗಿಸೀತು..

  ಸೊಗಸಾದ ಪ್ರಾರಂಭ ಇದು ರಂಜಿತ್‌. ಎಷ್ಟೋ ಸಾರಿ ನಾವೆಲ್ಲ ಅಂದುಕೊಳ್ಳುವುದೇ ಹೀಗೆ. ನಮ್ಮ ಬರವಣಿಗೆಗಳ ಮೋಹದಲ್ಲೇ ಮುಳುಗಿ ಇತರರ ಬರವಣಿಗೆಗಳನ್ನು ಗಮನಿಸುವುದೇ ಇಲ್ಲ. ನಿಮ್ಮ ಕವನ ಆ ಮೋಹವನ್ನು ಚೆನ್ನಾಗಿ ವಿವರಿಸಿದೆ.

  ಚೆನ್ನಾಗಿವೆ ನಿಮ್ಮ ಕವನಗಳು. ಹೊಟ್ಟೆಕಿಚ್ಚಾಗುವಷ್ಟು. ಸವಾಲು ಒಡ್ಡುವಷ್ಟು.

  ಬರೀತಿರಿ. ಈ ರೀತಿಯ ಪ್ರತಿಕ್ರಿಯೆಗಳನ್ನು ಪದೆ ಪದೆ ಹಾಕುವ ಭಾಗ್ಯ ನಮಗೂ ದಕ್ಕುತ್ತದೆ.

 2. neelihoovu ಹೇಳುತ್ತಾರೆ:

  ಪಲ್ಲವಿ ಮೇಡಂ,

  “ನಮ್ಮ ಬರವಣಿಗೆಗಳ ಮೋಹದಲ್ಲೇ ಮುಳುಗಿ ಇತರರ ಬರವಣಿಗೆಗಳನ್ನು ಗಮನಿಸುವುದೇ ಇಲ್ಲ. ನಿಮ್ಮ ಕವನ ಆ ಮೋಹವನ್ನು ಚೆನ್ನಾಗಿ ವಿವರಿಸಿದೆ.”
  ನನ್ನ ಈ ಕವನದಲ್ಲಿ ನಾ ಹೇಳ ಹೊರಟಿದ್ದು ಕವಿ ಈ ಹಿಂದೆ ಬರೆದ ಒಳ್ಳೆಯ ಕವನದ ಗುಂಗಿನಲ್ಲೇ ಉಳಿದು, ಹೊಸ ಕವನದೆಡೆಗೆ ಹೆಜ್ಜೆ ಇಡದ ಬಗ್ಗೆ.
  ಆ ಅರ್ಥ ಎಲ್ಲಾದರೂ ಬರದೇ ಮಿಸ್ ಆಯಿತೆ?

  ನಿಮ್ಮ ಅಕ್ಷರದೆಡೆಗಿನ, ನನ್ನ ಮೇಲಿನ ಪ್ರೀತಿಗೆ ಋಣಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s