ಹನಿಗಳು ಸಾರ್ ಹನಿಗಳು! – ಎರಡನೇ ಭಾಗ

Posted: ಸೆಪ್ಟೆಂಬರ್ 20, 2008 in ಹನಿಗಳು...

********

ಬೇಸಿಗೆ ಸುಡುಬಿಸಿಲಾದರೆ
ಚಳಿಗೆ ಸವಿಬಿಸಿಲು
ನೇಸರ ಹಾಡುತಿಹನು
ತನ್ನ ಪಾಡಿಗೆ
ತನ್ನ ಗಾನ,
ಎಲ್ಲಾದರೂ
ಊನವಿದ್ದರೆ ಅದು
ನೋಡುಗನ
ದೃಷ್ಟಿಕೋನ..!

********
 
ಎಲ್ಲಾ ಕಡೆ
ನಿಂತ ಮೇಲೂ
ಬಿಡದೆ ಹನಿಯುತಿದೆ
ಮರದಡಿ ಮಳೆ..
ನೀ ನನ್ನ ಸಂಪೂರ್ಣವಾಗಿ
ಬಿಟ್ಟ ಮೇಲೂ
ಜಗ್ಗಿ ಕಾಡುತಿದೆ
ನಿನ್ನ ನೆನಪಿನೊಂದು ಎಳೆ..!

******

ನಿನ್ನ ಪ್ರೀತಿಸಿದ ತಪ್ಪಿಗೆ,
ತೋಡಿಕೊಳ್ಳಬೇಕು
ಎಲ್ಲಾ ಗುಟ್ಟುಗಳನ್ನು
ಕವನಗಳಿಗೆ..

ಅದುಮಿ ಕುಳಿತ
ಭಾವನೆಗಳ
ಉರಿಗೆ ತಾಕಿ
ನನ್ನೆದೆಯು
ಸಾಯುವುದರೊಳಗೆ..

*****

ಕಣ್ಣಿನ ಮೂಲಕವೇ
ಎಲ್ಲಾ ತಿಳಿಯುವ
ಪ್ರತಿಭೆ ನಿನ್ನಲ್ಲಿದೆ..

ನಿನ್ನ ಮೇಲಿನ ಅಗಾಧ
ಪ್ರೀತಿಯ ಬಚ್ಚಿದಲು
ಜಾಗ ನನ್ನಲ್ಲಿ ಎಲ್ಲಿದೆ?

*******

ಮನಸು ಸದಾ
ಕವನಗಳನ್ನು
ಹೆರುವ
ನಿತ್ಯ ಬಾಣಂತಿ..

ನಿನ್ನ ನೆನಪುಗಳು
ಕವನದ ಹೆರಿಗೆ
ಮಾಡಲೆಂದೇ
ಕಾಯುತಿರುವ
ಸೂಲಗಿತ್ತಿ..!

****

Advertisements
ಟಿಪ್ಪಣಿಗಳು
  1. ಪಲ್ಲವಿ ಎಸ್‌. ಹೇಳುತ್ತಾರೆ:

    ಇದೊಳ್ಳೆ ಕೆಲಸ ಆಯ್ತಲ್ಲ. ನೀವು ಕವನ ಬರೆಯುವುದು. ಅದನ್ನು ಓದಿದ ನಂತರ ಪ್ರತಿಕ್ರಿಯೆ ಹಾಕದಿರಲು ಸಾಧ್ಯವಾಗದಿರುವುದು, ಏನು ಬರೆಯಬೇಕೆಂದು ಗೊತ್ತಾಗದಿರುವುದು ಹಾಗೂ ಹೊಗಳಿಕೆ ಮತ್ತು ಮೆಚ್ಚುಗೆಯ ಮಧ್ಯದ ಎಳೆ ಹುಡುಕಲು ಯತ್ನಿಸಿ ಯತ್ನಿಸಿ ಸುಸ್ತಾಗುತ್ತಿದ್ದೇನೆ ರಂಜಿತ್.

    ಅಷ್ಟೊಂದು ಚೆನ್ನಾಗಿ ಬರೆಯಬೇಡಿ. ಕಳೆದುಹೋದವಳು ವಾಪಸ್‌ ಬಂದು ಬಿಟ್ಟಾಳು. ಅವಳನ್ನು ಹಳೆಯ ಪ್ರೀತಿಯ ಕಣ್ಣಲ್ಲಿ ನೋಡುತ್ತಿರುವ ನೀವು, ಬದಲಾವಣೆ ಒಪ್ಪಿಕೊಳ್ಳಲಾಗದೇ ಬೆಚ್ಚಿ ಬಿದ್ದೀರಿ.
    ’ಎಲ್ಲಾ ಕಡೆ
    ನಿಂತ ಮೇಲೂ
    ಬಿಡದೆ ಹನಿಯುತಿದೆ
    ಮರದಡಿ ಮಳೆ..
    ನೀ ನನ್ನ ಸಂಪೂರ್ಣವಾಗಿ
    ಬಿಟ್ಟ ಮೇಲೂ
    ಜಗ್ಗಿ ಕಾಡುತಿದೆ
    ನಿನ್ನ ನೆನಪಿನೊಂದು ಎಳೆ..!’

    ಈ ಸಾಲುಗಳು ಸೂಪರ್‍.

    ಚೆನ್ನಾಗಿ ಬರೆದಿದ್ದೀರಿ ರಂಜಿತ್‌. ಕಾಫಿ ಆರುತ್ತಿದ್ದರೂ, ಪ್ರತಿಕ್ರಿಯೆ ಹಾಕಲಾಗದೇ ಇರಲಾಗಲಿಲ್ಲ.

  2. neelihoovu ಹೇಳುತ್ತಾರೆ:

    ಪಲ್ಲವೀ,
    ಕಾಫಿ ಆರಿ, ಒಂದು ದಿನ ತೆಣ್ಣಗಿನ ಕಾಫಿ ಕುಡಿಸಿದ ಪಾಪ ನನ್ನ ಮೇಲೆ ಬಂದರೂ ಪರವಾಗಿಲ್ಲ.
    ಪ್ರತಿಕ್ರಿಯೆ ಹಾಕದೇ ಹೋಗದಿರಿ.ತನ್ನೊಳಗೆ ವಿಮರ್ಶಕ ಇಲ್ಲದ ಕವಿ, ಬೇರೆಯವರಿಂದ ವಿಮರ್ಶೆ ಪಡೆಯದ ಕವಿ ಎಂದೂ ಬೆಳೆಯಲಾರ.

    “ಕಳೆದುಹೋದವಳು ವಾಪಸ್‌ ಬಂದು ಬಿಟ್ಟಾಳು. ಅವಳನ್ನು ಹಳೆಯ ಪ್ರೀತಿಯ ಕಣ್ಣಲ್ಲಿ ನೋಡುತ್ತಿರುವ ನೀವು, ಬದಲಾವಣೆ ಒಪ್ಪಿಕೊಳ್ಳಲಾಗದೇ ಬೆಚ್ಚಿ ಬಿದ್ದೀರಿ”

    ವಾಪಸ್ ಬಂದುಬಿಟ್ಟಾಳು ಅಂತಲೇ ಹೆದರಿಸುತ್ತಿರುವಿರಿ..:) ಹಳೆಯ ಪ್ರೀತಿಯ ಪಳೆಯುಳಿಕೆಯಲ್ಲಿ ಅರಳುತ್ತಿರುವ ಕವನಗಳು, ಹೊರಗೆ ಬಾರದೇ ಅಡಗಿಕೊಂಡಾವು!

    ಹಾಗೇ ನಿಮ್ಮ ಗದ್ಯದ ನವಿರುತನವನ್ನು ಸ್ವಲ್ಪ ಸಾಲವಾಗಿ ನೀಡುವಿರಾ ಪಲ್ಲವಿ?

  3. vijayraj ಹೇಳುತ್ತಾರೆ:

    ನಿನ್ನ ಮೇಲಿನ ಅಗಾಧ
    ಪ್ರೀತಿಯ ಬಚ್ಚಿದಲು
    ಜಾಗ ನನ್ನಲ್ಲಿ ಎಲ್ಲಿದೆ?

    ಇದು ಚೆನ್ನಾಗಿದೆ….

    ನೀ ನನ್ನ ಸಂಪೂರ್ಣವಾಗಿ
    ಬಿಟ್ಟ ಮೇಲೂ
    ಜಗ್ಗಿ ಕಾಡುತಿದೆ
    ನಿನ್ನ ನೆನಪಿನೊಂದು ಎಳೆ..!

    ಆದರೆ ಇದರ ಚೆಂದ ಹೋಗಳಲು ನನ್ನಲಿ ಪದಗಳೇ ಇಲ್ಲವಾಗಿದೆ

  4. neelihoovu ಹೇಳುತ್ತಾರೆ:

    “ಆದರೆ ಇದರ ಚೆಂದ ಹೋಗಳಲು ನನ್ನಲಿ ಪದಗಳೇ ಇಲ್ಲವಾಗಿದೆ”

    ಥ್ಯಾಂಕ್ಸ್ ಸರ್… ಹಾಗೆಯೇ ಚೆನ್ನಾಗಿಲ್ಲದಿದ್ದರೆ ತಿಳಿಹೇಳುವ ಹಕ್ಕೂ ನಿಮಗಿದೆ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s