ಹನಿ.. ಹನಿ.. ಪ್ರೇಮ್ ಕಹಾನಿ..:)

Posted: ಸೆಪ್ಟೆಂಬರ್ 23, 2008 in ಹನಿಗಳು...

**********
ಹಗಲ ನೇಗಿಲ
ಹೆಗಲ ಮೇಲೆ
ಹೊತ್ತು ತಂದ ಭಾಸ್ಕರ..

ಮನಸೊಳಗೆ ಕನಸ
ಬೀಜವ ಉತ್ತಿ
ನನಸು ಮಾಡುವುದಕ್ಕೋಸ್ಕರ..!

**********

ಮೋಡದ ಸೆರಗ
ಕದ್ದೊಯ್ದ ಗಾಳಿ,
ಹೂವಿನ ಎದೆ ಕದವ
ಮುರಿದು ಹಾಕಿದ ಗಂಧ,

ನಿನ್ನ ನೆನೆದೊಡೆ
ಮನದಂಗಳಕ್ಕೆ ಬಂದವು,
ವಿರಹದುರಿಗೆ ನಲುಗಿದ ಜೀವಕ್ಕೆ
ಬದುಕಲು ಕಾರಣ ಇತ್ತವು..!

*********

ತನ್ನ ಬೆಳಕಿಂದ
ಸುಡುತಿಹನು
ನೇಸರ,

ಅವನ ಬೆಳಕ ಕದ್ದು
ಅದಕೆ ತಂಪು ಮೆದ್ದು
ಬಡಿಸುತಿಹನು
ಚಂದಿರ..!

********

ಯಾವತ್ತೋ ಮಳೆ ಸುರಿದಾಗ
ಮನದ ಭುವಿಯ ಒಳಸುಳಿಯಲಿ
ನುಸುಳಿ ಹರಿದು, ಮಣ್ಣನ್ನು
ಹೊದ್ದು ತಣ್ಣನೆ
ಮಲಗಿತ್ತು ಭಾವಗಳು..

ಭಾವಿಯ ತೋಡಿ
ರಾಟೆಯ ಹೂಡಿ
ಹೊರತಂದಿತು ಎಲ್ಲವನು
ನಿನ್ನ ಕಣ್ಣ ಕವಿತೆಗಳು…

*******

ಟಿಪ್ಪಣಿಗಳು
 1. vijayraj ಹೇಳುತ್ತಾರೆ:

  last one is gud…
  neeli hoovige saavirada sambhrama…..congrats..
  hoovina saurabha innashTu haradali….

  nimma blog dinada blog nalli kendasampigeyalli bandide nodira?

 2. jomon ಹೇಳುತ್ತಾರೆ:

  ಚೆಂದದ ಕವಿತೆ, ಇಷ್ಟವಾಯಿತು.

 3. neelihoovu ಹೇಳುತ್ತಾರೆ:

  ಸರ್,
  ನಿಮ್ಮ ಪ್ರೀತಿಗೆ ಥ್ಯಾಂಕ್ಸ್.
  ಅದಕ್ಕಿಂತ ನನಗೆ ಹೆಚ್ಚು ಖುಷಿ ನಿಮ್ಮಂತವರ ಅಂಗೈಯ ಅಶೀರ್ವಾದದ ಹುಡಿ ನನ್ನ ಮುಡಿ ತಾಕಿದಾಗ ಆಗುವುದು.
  “ಕೆಂಡ ಸಂಪಿಗೆ”ಯಲ್ಲಿ “ನೀಲಿ ಹೂವು” ನೀವು ಹೇಳಿದ ಬಳಿಕವೇ ನೋಡಿದೆ.
  ಧನ್ಯವಾದಗಳು ಸರ್..!

  ******
  ಜೋಮನ್ ಸರ್,

  ನೀವಿಲ್ಲಿ ಬಂದಿದ್ದು ತೋಟಕ್ಕೆ ಮಳೆಹನಿ ಬಿದ್ದಂತಾಯಿತು..:)
  ಥ್ಯಾಂಕ್ಸ್ ಸರ್…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s