ನೀನಿಲ್ಲದ ಊರು-ತೇರು…

Posted: ಸೆಪ್ಟೆಂಬರ್ 25, 2008 in ಕವಿತೆ

ನನ್ನೊಡನೆ ನೀನಿಲ್ಲದ
ಈ ಊರು,
ಈ ತೇರು,
ಎಂದರೆ ಇನ್ನು ನನಗಾಗದು
ಪ್ರಯತ್ನಿಸಿದರೂ ಇಲ್ಲಿ ಬದುಕಲಾಗದು..

ತೇರ ನಡುವಿಂದ
ಭಜನೆಯ ಬದಲು
ನಿನ್ನ ಜೈಕಾರವೇ
ಕೇಳಿಬರುತಿಹುದು..

ಜಾತ್ರೆ ಗದ್ದಲಗಳ ನಡುವೆ
ಮಧುರ ಕಾಲ್ಗೆಜ್ಜೆ ನಾದ
ಮಾತ್ರ ಚಾಚೂ ತಪ್ಪದೆ
ಕಿವಿ ತಲುಪುತಿಹುದು,
ನೀನೇ ಸನಿಹ ಸುಳಿದಂತಿಹುದು..

ಎಷ್ಟು ತಡೆದರೂ
ನೆನಪುಗಳೆಲ್ಲ ಕನಸ
ಲಾಟೀನು ಹಿಡಿದು
ಅನಾಮತ್ತಾಗಿ ನನ್ನ ಮನೆಯ
ರಸ್ತೆಗೇ ನುಗ್ಗುತಿಹುದು..

 

ನೆನಪ ಆಯುಧದಿಂದಲೇ
ನನ್ನ ಕೊಲ್ಲುವ ಸಂಚಿರಬೇಕು,
ಊರ ಮಂದಿಯೆಲ್ಲಾ
ನಿನ್ನ ಮುಖವಾಡ ಧರಿಸಿಯೇ

ಓಡಾಡುತಿಹರು..

Advertisements
ಟಿಪ್ಪಣಿಗಳು
 1. hema ಹೇಳುತ್ತಾರೆ:

  ನೆನಪ ಆಯುಧದಿಂದಲೇ
  ನನ್ನ ಕೊಲ್ಲುವ ಸಂಚಿರಬೇಕು,
  ಊರ ಮಂದಿಯೆಲ್ಲಾ
  ನಿನ್ನ ಮುಖವಾಡ ಧರಿಸಿಯೇ

  ಓಡಾಡುತಿಹರು
  **** ಎಂತಹ ಕಲ್ಪನೆ ರಂಜಿತ್, Marvelous!!

  (ಊರಲ್ಲಲ್ಲ commentiನಲ್ಲಿ ಹುಡುಕುತ್ತೀರೋ ಹಾಗಿದೆಯಲ್ಲ? 😉 )

 2. ವೈಶಾಲಿ ಹೇಳುತ್ತಾರೆ:

  ನೆನಪ ಆಯುಧದಿಂದಲೇ
  ನನ್ನ ಕೊಲ್ಲುವ ಸಂಚಿರಬೇಕು,
  ಊರ ಮಂದಿಯೆಲ್ಲಾ
  ನಿನ್ನ ಮುಖವಾಡ ಧರಿಸಿಯೇ

  ಓಡಾಡುತಿಹರು..

  ಈ ಸಾಲು ತುಂಬ ಇಷ್ಟವಾಯ್ತು…

 3. neelihoovu ಹೇಳುತ್ತಾರೆ:

  ಹೇಮಾ,

  ಉತ್ತರಿಸಲಾರೆ. ಅಕ್ಷರದಲ್ಲಿ ನನ್ನ ನಾಚಿಕೆ ಕಾಣಿಸುತ್ತದೆಂಬ ಭಯ..:)

  ಥ್ಯಾಂಕ್ಸ್…!

 4. neelihoovu ಹೇಳುತ್ತಾರೆ:

  ವೈಶಾಲಿ ಮೇಡಂ,

  ಬಾಲ್ಕನಿಯವರಿಗೆ ಇಷ್ಟ ಆದರೆ ಚಿತ್ರ ಹಿಟ್ ಆದಂತೆ ಅಲ್ಲವೆ?

  ಕವನ ಹಿಟ್ ಆಯ್ತು ಅಂದುಕೊಳ್ಳುವೆ..:)

  ಖುಷಿಯಾಯ್ತು ನೀವು ಇಲ್ಲಿ ಬಂದಿದ್ದಕ್ಕೆ.

  ಧನ್ಯವಾದಗಳು ಮೇಡಂ…:)

 5. ವೈಶಾಲಿ ಹೇಳುತ್ತಾರೆ:

  ಇಷ್ಟೆಲ್ಲಾ ಹೊಗಳಿಕೆ ಬೇಡ ಕಣ್ರೀ.. ನನ್ನ ಬಾಲ್ಕನಿ ಚಿಕ್ಕದು. ಬಿದ್ದುಬಿಟ್ಟೇನು 😉

  ಅಂದಹಾಗೆ ಬೇಗ ಹೇಳಿ ಆ ಹುಡುಗಿಗೆ, ತೇರಲ್ಲಿ ಕಳೆದು ಹೋದ್ರೆ ಕಷ್ಟ 😉

 6. ಶೆಟ್ಟರು (Shettaru) ಹೇಳುತ್ತಾರೆ:

  ಎಷ್ಟು ತಡೆದರೂ
  ನೆನಪುಗಳೆಲ್ಲ ಕನಸ
  ಲಾಟೀನು ಹಿಡಿದು
  ಅನಾಮತ್ತಾಗಿ ನನ್ನ ಮನೆಯ
  ರಸ್ತೆಗೇ ನುಗ್ಗುತಿಹುದು..

  ಈ ಸಾಲುಗಳಲ್ಲಿ ಹೇಳಲಾಗದ ಅಪ್ತತೆ ಅಡಗಿದೆ, ನನ್ನ ಮನೆಯ ದಾರಿಯಲ್ಲಿ ಕಾದು ನಿಲ್ಲಬೇಕೆನ್ನಿಸುವಷ್ಟು.
  ಇನ್ನೂ ಹೆಚ್ಚು ಹೆಚ್ಚು ಬರೆಯುತ್ತಿರಿ.

  ಪ್ರೀತಿಯಿರಲಿ
  -ಶೆಟ್ಟರು

 7. ಪಲ್ಲವಿ ಎಸ್‌. ಹೇಳುತ್ತಾರೆ:

  ”ನೆನಪ ಆಯುಧದಿಂದಲೇ
  ನನ್ನ ಕೊಲ್ಲುವ ಸಂಚಿರಬೇಕು,
  ಊರ ಮಂದಿಯೆಲ್ಲಾ
  ನಿನ್ನ ಮುಖವಾಡ ಧರಿಸಿಯೇ

  ಓಡಾಡುತಿಹರು..”

  ಈ ಸಾಲುಗಳು ತುಂಬ ಇಷ್ಟವಾದವು.

  ಕನಸುಗಳ ನಡುವೆಯೇ ಮುಳುಗಿರುವ ಜೀವಕ್ಕೆ ಸಿಕ್ಕ ಪ್ರತಿಯೊಂದು ಎಳೆಯೂ ಅವಳ ನೆನಪೇ. ಕಂಡ ಪ್ರತಿಯೊಂದು ಚಿತ್ರವೂ ಆಕೆಯೇ. ಇಲ್ಲದಿದ್ದರೆ, ಇಂತಹ ನವಿರು ಸಾಲುಗಳು ಮನದಲ್ಲಿ ಹೊಳೆಯುತ್ತಿದ್ದವಾದರೂ ಹೇಗೆ? ’ಎಲ್ಲೆಲ್ಲಿ ನೋಡಲಿ, ನಿನ್ನನ್ನೇ ಕಾಣುವೆ…’ ಎಂಬ ಸಿನಿಮಾ ಗೀತೆಯಂತೆ ಮನಸ್ಸು ತುಂಬಿದ ಚಿತ್ರ ಹೊರಗೆಲ್ಲ ಅಚ್ಚಾದಂತೆ, ಸೂಪರ್‌ ರಂಜಿತ್‌.

  ಮತ್ತೆ ಮತ್ತೆ ಹೊಟ್ಟೆಕಿಚ್ಚಾಗುತ್ತಿದೆ ಕಣ್ರೀ. ಎಷ್ಟೋ ಸಾರಿ, ಇಂತಹ ಸಾಲುಗಳನ್ನು ಕವಿತೆಯಾಗಿಸಲು ಹೋಗಿ ಸೋತಿದ್ದೇನೆ. ಈಗ ಆ ಪ್ರಯತ್ನ ಬಿಟ್ಟುಕೊಟ್ಟು ಓದುವುದನ್ನು ಆಸ್ವಾದಿಸುತ್ತಿದ್ದೇನೆ.

  ಸೊಗಸಾದ ಕವನ. ಸೊಗಸಾದ ಅಭಿವ್ಯಕ್ತಿ.

  – ಪಲ್ಲವಿ ಎಸ್‌.

 8. neelihoovu ಹೇಳುತ್ತಾರೆ:

  ವೈಶಾಲಿ ಮೇಡಂ,

  *ಬಾಲ್ಕನಿ ಚಿಕ್ಕದಾದರೇನು?
  ಅದು ತೋರಿಸುವ ನೋಟ ಚಿಕ್ಕದೇ?
  *ಆ ಹುಡುಗಿಗೆ ಬಹಳಷ್ಟು ಕೇರ್ ಟೇಕರ್ ಗಳಿರುವರು. ನಮಗ್ಯಾರು? ಅವಳ ಗುಂಗಿನಲಿ ನಾನು ತೇರಿನ ಚಕ್ರದಡಿ ಬೀಳದಿದ್ದರೆ, ನನ್ನ ನಾ ಸಂಭಾಳಿಸಿದರೆ ಸಾಕೆನಿಸಿದೆ..:)

  *********

  ಪ್ರೀತಿಯ ಶೆಟ್ಟರಿಗೆ,
  ಧನ್ಯವಾದಗಳು ಸರ್… ಹೀಗೆಯೇ ನಿಮ್ಮ ಪ್ರೋತ್ಸಾಹವಿರಲಿ..

  ********

  ಪಲ್ಲವಿ ಮೇಡಂ,

  ತಮ್ಮ ಮೆಚ್ಚುಗೆಯ ಲೇಖಕಿಯ ಬಾಯಿಂದ ಹಾರೈಕೆ, ನಚ್ಚುಗೆ ಪಡೆವ ಅದೃಷ್ಟ ಬಹುಶಃ ನಿಮಗೂ ದೊರೆತಿರಲಾರದು ಅಂತ ಹೆಮ್ಮೆಪಡುತ್ತಾ ನಿಮ್ಮ ಹೊಟ್ಟೆಕಿಚ್ಚಿಗೆ (ನಿಮ್ಮ ಹೊಗಳಿಕೆಯಿಂದಲೇ) ಮತ್ತಷ್ಟು ತುಪ್ಪ ಸುರಿಯುತಿರುವೆ..:)

 9. ನವಿಲಗರಿ ಹೇಳುತ್ತಾರೆ:

  ನನಗೆ ಎಲ್ಲಾ ಸಾಲುಗಳು ಇಷ್ಟವಾದವು..ಒಂದು ಸಾಲಿಗಿಂತ ಮತ್ತೊಂದು ಸಾಲು ಸೂಪರ್…ಅದರಲ್ಲೂ ಎಷ್ಟು ತಡೆದರೂ
  ನೆನಪುಗಳೆಲ್ಲ ಕನಸ
  ಲಾಟೀನು ಹಿಡಿದು
  ಅನಾಮತ್ತಾಗಿ ನನ್ನ ಮನೆಯ
  ರಸ್ತೆಗೇ ನುಗ್ಗುತಿಹುದು..

  ಸಾಲು ಸಕತ್ ಇಷ್ಟವಾದವು..ಈ ಬ್ಲಾಗಿನಲ್ಲಿ ಬಂದ ಕೆಲವು ಅದ್ಭುತ ಕವಿತೆಗಳಲ್ಲಿ ಇದೂ ಒಂದೂ..:)

 10. sunaath ಹೇಳುತ್ತಾರೆ:

  ಚಿಕ್ಕ ಸಾಲುಗಳಲ್ಲಿ ಎಷ್ಟೆಲ್ಲ ಭಾವ ತುಂಬಿಸುತ್ತೀರಿ!
  ಓದುವಾಗ ಖುಶಿಯಾಗುತ್ತೆ.

 11. neelihoovu ಹೇಳುತ್ತಾರೆ:

  ಥ್ಯಾಂಕ್ಸ್ ಸುನಾತ್ .. ನಿಮಗೆಲ್ಲಾ ಖುಷಿಯಾದರಷ್ಟೇ ನನ್ನೊಳಗೆ ತೃಪ್ತಿ !

  ******

  ಥ್ಯಾಂಕ್ಸ್ ಕಣೋ ಚೋಮ…:)

 12. uniquesupri ಹೇಳುತ್ತಾರೆ:

  ಲಲಿತವಾದ ಲಹರಿಯ ಹಾಗೆ ಕವಿತೆ ಬರೆಯುತ್ತೀರಿ ನಿಮ್ಮ *ವಿರಾಮ*ದ ಬಗ್ಗೆ ಹೊಟ್ಟೆ ಕಿಚ್ಚಾಗುತ್ತದೆ.
  ನೀಲಿ ಹೂವಿಗೆ ಹಿಂಗೆಲ್ಲಾ ನಾನಾ ಥರದ ಘಮ ಬೆರೆಸಿ ನಮ್ಮನ್ನು ಗೊಂದಲಕ್ಕೆ ಬೀಳಿಸುವ ಸಂಚು ನಡೆಸುತ್ತಿರುವ ಹಾಗಿದೆ…
  ಅಂದಹಾಗೆ ಆ ಹುಡುಗನಿಗೆ ಹೇಳಿ, ತೇರು ರಸ್ತೆಯ ಮೇಲೆ ಹರಿಯುವಾಗ ಎಚ್ಚರದಲ್ಲಿ ರಸ್ತೆಯ ಪಕ್ಕದ ದಿಬ್ಬದ ಮೇಲೆ ನಿಲ್ಲಲು… ತೇರಿನ ಗಾಲಿಗೆ ನಿಮ್ಮ ಪ್ರೀತಿಯ, ನೆನಪಿನ ಮುಲಾಜು ಇಲ್ಲ… ಒಮ್ಮೆ ಕೆಳಕ್ಕೆ ಬಿದ್ದರೆ ಜೀವಕ್ಕೆ ಇಲಾಜು ಇಲ್ಲ! ( ಅನವಶ್ಯಕ ಪ್ರಾಸ!)

  ಸುಪ್ರೀ

 13. neelihoovu ಹೇಳುತ್ತಾರೆ:

  ಸುಪ್ರೀ,

  ನನ್ನ ವಿರಾಮದ ಮೇಲೆ (ಮಾತ್ರ) ನಿಮ್ಮ ಕಣ್ಣು ಬಿದ್ದಿದ್ದಕ್ಕೆ ಸ್ವಲ್ಪ ಗೊಂದಲವೂ,ಸ್ವಲ್ಪ ಅಚ್ಚರಿಯೂ ಉಂಟಾಯಿತು.

  ಹೆಸರಿನ ಬಗ್ಗೆ ತಲೆ ಕೆಡಿಸಿಕೊಳ್ಳದೇ ಘಮ ಆಸ್ವಾದಿಸಿ ತೋಟದ ಮಾಲಿಕನನ್ನು ಹರಸಿದರೆ ಬಡಪಾಯಿ ಎಲ್ಲೋ ಹೇಗೋ ಬದುಕಿಕೊಳ್ಳುತಾನೆ.

  *ಅಂದಹಾಗೆ ಆ ಹುಡುಗನಿಗೆ ಹೇಳಿ, ತೇರು ರಸ್ತೆಯ ಮೇಲೆ ಹರಿಯುವಾಗ ಎಚ್ಚರದಲ್ಲಿ ರಸ್ತೆಯ ಪಕ್ಕದ ದಿಬ್ಬದ ಮೇಲೆ ನಿಲ್ಲಲು… ತೇರಿನ ಗಾಲಿಗೆ ನಿಮ್ಮ ಪ್ರೀತಿಯ, ನೆನಪಿನ ಮುಲಾಜು ಇಲ್ಲ… ಒಮ್ಮೆ ಕೆಳಕ್ಕೆ ಬಿದ್ದರೆ ಜೀವಕ್ಕೆ ಇಲಾಜು ಇಲ್ಲ! ( ಅನವಶ್ಯಕ ಪ್ರಾಸ!)*

  ಒಮ್ಮೆ “ಆ” ಹುಡುಗ ಅಂತಲೂ ಮತ್ತೊಮ್ಮೆ “ನನ್ನ” ನೆನಪಿನ,ಪ್ರೀತಿಯ ಬಗ್ಗೆ ಹೇಳುತಲೂ ಮತ್ತೆ ಗೊಂದಲ ಹುಟ್ಟಿಸಿಬಿಟ್ಟಿರಿ..:)

  ಆ ಹುಡುಗನೀಗ ಹಳ್ಳಿಯ ತೇರು ಬಿಟ್ಟು, ಪಟ್ಟಣದ ಬದುಕಿನ ವೇಗದ ಗೇರಿಗೆ ಹೊಂದಿಕೊಂಡಿದ್ದಾನೆ..:)
  (ನಂದೂ ಒಂದು ಪ್ರಾಸ ಇರ್ಲಿ ಅಂತ..ಆದರೆ ನಿಮ್ಮ ಪ್ರಾಸ ದಲ್ಲಿ ಅನವಶ್ಯಕ ತ್ರಾಸ,ಅಭಾಸ ಕಾಣುವುದಿಲ್ಲ ಬಿಡಿ…)

 14. ಅನಾಮಿಕ ಹೇಳುತ್ತಾರೆ:

  i like this very much…..

 15. spoorthi ಹೇಳುತ್ತಾರೆ:

  wow nice thing…..

 16. neelihoovu ಹೇಳುತ್ತಾರೆ:

  ಸ್ಪೂರ್ತಿ,

  ನೀವು ಇಲ್ಲಿಗೆ ಬಂದಿದ್ದು ಬಹಳ ಖುಷಿಯಾಯಿತು.

  ಹೀಗೆ ಬರ್ತಾ ಇರಿ.

  ಅನಾನಿಮಸ್,

  ನಿಮ್ಮ ಹೆಸರು ಹಾಕಿದ್ದರೆ ಚೆನ್ನಾಗಿತ್ತು.

 17. ಶಿವು.ಕೆ ಹೇಳುತ್ತಾರೆ:

  ಒಳ್ಳೆ ಕವನದ ದೊರೆಯಾಗಿಬಿಟ್ಟಿದ್ದೀರಿ ನೀವು. ಚಿಕ್ಕ ಚಿಕ್ಕ ಸಾಲುಗಳಲ್ಲಿ ತೂಕ ಹೆಚ್ಚಾಗುತ್ತಾ ಹೋಗುತ್ತದೆ. ಅದಕ್ಕೆ ಸಮನಾಗಿ ಚಿತ್ರ ಮತ್ತಷ್ಟು ತೂಕ ಹೆಚ್ಚಿಸುತ್ತದೆ. good!!
  ಶಿವು.ಕೆ

 18. sharanu hullur ಹೇಳುತ್ತಾರೆ:

  koneya naalku saalugalu channagive. ‘nenapina aayudadinda kolluva’ saalu tumbane hidisidevu.

 19. ರಂಜಿತ್ ಹೇಳುತ್ತಾರೆ:

  ಶರಣು,

  ನಿಮ್ಮಂತಹ ಕವಿ ಹೃದಯದವರಿಗೆ ಇಷ್ಟವಾಗಿದ್ದು ಸಂತಸ ಕೊಡುತ್ತದೆ. ಆದರೆ ಒಂದು ಅನುಮಾನ: ಕವಿತೆ ಅನ್ನುವುದು ಮಾವಿನ ಹಣ್ಣಿನಂತೆ; ಅದು ಇಷ್ಟವಾಗುವುದಾದರೆ ಪೂರ್ತಿಯಾಗಿ ಆಗಬೇಕಲ್ಲವೇ? ಒಂದು ಭಾಗ, ಒಂದು ಸಾಲು ಮಾತ್ರ ಹೇಗೆ ಇಷ್ಟವಾಗುತ್ತೆ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s