“ಕೆಂಡಸಂಪಿಗೆ”ಗೊಂದು ಪುಟಾಣಿ ಥ್ಯಾಂಕ್ಸ್ ಹೇಳುತ್ತಾ….

Posted: ಸೆಪ್ಟೆಂಬರ್ 28, 2008 in ಬ್ಲಾಗ್ ನ ಬಗ್ಗೆ..

 

ಎಲ್ಲೋ ಮೂಲೆಯಲ್ಲಿ ನನ್ನಷ್ಟಕ್ಕೆ ನಾನು ಬರೆಯುತ್ತಿದ್ದವನಿಗೆ ಬ್ಲಾಗ್ ಎಂಬ ಹೊಸದೊಂದು ಪ್ಲಾಟ್ ಫಾರ್ಮ್ ಕೊಟ್ಟವನು, ಇದುವರೆಗೂ ನಾ ನೋಡದ, ಮಾತಾಡದ (ಚಾಟುಬಾಕ್ಸಿನ ಹರಟೆಯೊಂದನ್ನು ಬಿಟ್ಟು!) ಆದರೂ ಮನಕ್ಕೆ ಹತ್ತಿರವಾದ ಗೆಳೆಯ ನವಿಲ್ಗರಿ ಸೋಮ. ಹೇಗೆ ಅಷ್ಟೆಲ್ಲಾ ಬರೆಯಲು ಸಾಧ್ಯ ಅಂತ ಬ್ಲಾಗು ಲೋಕವನ್ನು ಬೆರಗು ಕಂಗಳಿಂದ ಪಿಳಿ ಪಿಳಿ ನೋಡುತ್ತಿದ್ದವನು,  ನೆಟ್ಟಗೆ ಒಂದೂವರೆ ತಿಂಗಳಾಗಿಲ್ಲ ಆಗಲೇ ಹತ್ತಿರ ಹತ್ತಿರ ೩೦ ಪೋಸ್ಟ್ ಮುಟ್ಟಿಸಿಯಾಗಿದೆ.ಅದಕ್ಕೆ ಕಾರಣ ಓದುಗರ ಪ್ರೋತ್ಸಾಹ ಮತ್ತು ಪ್ರೀತಿಯೆಂದಷ್ಟೇ ಹೇಳಬಲ್ಲೆ.

ಈಗ “ಕೆಂಡಸಂಪಿಗೆ” ತನ್ನ ದಿನದ ಬ್ಲಾಗು ಅಂಕಣದಲ್ಲಿ ನೀಲಿಹೂವನ್ನು ತೋರಿಸಿದೆ.

ನನ್ನ ಕವನದೊಳಗಿನ ನೋವನ್ನೆಲ್ಲಾ ಪ್ರೀತಿಯಿಂದ ಹಂಚಿಕೊಳ್ಳುತಿರುವ ಓದುಗ ವೃಂದಕ್ಕೆ ಈ ಖುಷಿಯನ್ನೂ ಒಪ್ಪಿಸದೇ ಹೋದರೆ ಸೀದಾ ನರಕಕ್ಕೆ ಹೋದೇನು.

“ಕೆಂಡಸಂಪಿಗೆ” ಬಳಗದವರಿಗೆಲ್ಲಾ ಪುಟಾಣಿ ಥ್ಯಾಂಕ್ಸ್ ಹೇಳುತ್ತಾ,ಅಲ್ಲಿ ಕೊಟ್ಟಿದ್ದನ್ನು ಇದ್ದದ್ದು ಇದ್ದ ಹಾಗೆ ಇಲ್ಲಿ ಕಾಣಿಸಲಾಗಿದೆ.

******************

ನೀಲಿಹೂವಿನ ತೋಟ

ನೀಲಿಹೂವೆಂದರೆ ಬರೀ ಹೂವಲ್ಲ.  ಭಾವಗಳಿಗೆ ಗಾಳ ಹಾಕಿದಾಗ ಸಿಕ್ಕ ಪ್ರೀತಿ ಎಂಬ ತಿಮಿಂಗಿಲ, ಭೋರೆಂದು ಸುರಿಯುವ ಭಾವಗಳಿಗೆ ಹಿಡಿದ ಬೊಗಸೆ, ಒಲವಿನ ಸಾಲು… ಎಲ್ಲವೂ.  ಅಂತೆಯೇ ಇಲ್ಲಿ ಅದೆಲ್ಲ ಇದೆ.  ತೆರೆದಿಟ್ಟ ಭಾವದ ಪ್ರೇಮಹನಿಗಳು, ನಾಲ್ಕು ಸಾಲಲ್ಲೇ ಮುಗಿದುಹೋಗುವ ಸಾಲುಸಾಲು ಕಥೆಗಳು, ಪ್ರೀತಿಯ ಗಾಳ ಹಾಕುವ ಒಲವಿನೋಲೆಗಳು ಎಲ್ಲ ಸಾಲುಸಾಲಾಗಿ ಹೊರಹೊಮ್ಮುತ್ತಿವೆ.

ಎಲ್ಲಾ ನೋವುಗಳನ್ನ ನಮ್ಮದಾಗಿಸಿಕೊಂಡು ನಲಿವಾಗಿಸಬೇಕು ಅನ್ನುವುದು ಈ ನೀಲಿಹೂವಿನ ಆಶಯ. ಇಂತಿಪ್ಪ ಹೂವಿನ ಬರಹತೋಟ ನೋಡಬಯಸುವವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

******************

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s