ಅಮ್ಮನೊಡನೆ ಕಣ್ಣಲ್ಲಿ
ಕಣ್ಣಿಟ್ಟು ಮಾತನಾಡಲಾಗುತ್ತಿಲ್ಲ,
ಯಾವ ಸ್ಕೂಲಿಗೆ ಹೋಗದಿದ್ದರೂ
ನನ್ನ ಕಣ್ಣನ್ನು ಚೆನ್ನಾಗಿ ಓದಬಲ್ಲಳು…
ಕೈತುತ್ತು ನೀಡುತಿರುವಾಗ
ಅವಳ ಸಾವಿರ ಕಾಳಜಿಯ ಪ್ರಶ್ನೆಗಳು,
ಉತ್ತರಿಸುವಾಗ ಮೂಡಿದ
ಗದ್ಗದತೆಯನ್ನು ಅನ್ನದಗುಳು
ನುಂಗುವ ನೆಪದಲ್ಲಿ ಮರೆಮಾಚುತ್ತಿದ್ದೇನೆ..
ಯಾಕೋ ಸನಿಹ ಸುಳಿಯಲೂ
ಧೈರ್ಯ ಸಾಲುತಿಲ್ಲ..
ಎದೆಬಡಿತ ಎಲ್ಲವನೂ ಚಾಡಿ
ಹೇಳುವ ಸನ್ನಾಹದಲ್ಲಿದೆ…
ಕಣ್ಣೀರಿನಲಿ ಒದ್ದೆಯಾದ
ಕರ್ಚೀಫು ಒಗೆಯುವಾಗ
ಅದರ ಬಿಸಿಯಿಂದಲೇ ಎಲ್ಲಾ
ಅರ್ಥವಾಗಿರಬೇಕು ಅಮ್ಮನಿಗೆ,
ನಿನ್ನೊಡನೆ ಸೇರಿಸುವೆ ಎಂದು
ಆಶ್ವಾಸನೆ ಕೊಟ್ಟು ಭೂಮಿಗೆ ಕಳುಹಿಸಿ,
ಈಗ ತಲೆ ಮರೆಸಿಕೊಂಡಿರುವ
ದೇವರನು ಹುಡುಕಲು ಆಗಲೇ
ದೇವರಕೋಣೆಯಲಿ
ದೀಪ ಹಚ್ಚಿಟ್ಟಿದ್ದಾಳೆ..!
“ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ”. ತಾಯಿಯೇ ಮೊದಲ ದೇವರಾಗಿರುವಾಗ ಯಾವ ದೇವರನ್ನೂ ಹುಡುಕುವ ಅವಶ್ಯಕತೆಯೆ ಇಲ್ಲ ಅಲ್ಲವೇ? ತಾನು ಎಲ್ಲರನ್ನೂ ಒಟ್ಟಿಗೇ ಸಲಹಲು ಸಾಧ್ಯವಾಗದೆಂದೇ ದೇವರು ತಾಯಿಯನ್ನು ಕರುಣಿಸಿರುವನು. ತುಂಬಾ ಇಷ್ಟವಾಯಿತು ಕವನ.
|ಮಾತೃದೇವೋ ಭವ|
Absolutely very goood……
tumba chennaagide..
ನಿನ್ನೊಡನೆ ಸೇರಿಸುವೆ ಎಂದು
ಆಶ್ವಾಸನೆ ಕೊಟ್ಟು ಭೂಮಿಗೆ ಕಳುಹಿಸಿ,
ಈಗ ತಲೆ ಮರೆಸಿಕೊಂಡಿರುವ
ದೇವರನು ಹುಡುಕಲು ಆಗಲೇ
ದೇವರಕೋಣೆಯಲಿ
ದೀಪ ಹಚ್ಚಿಟ್ಟಿದ್ದಾಳೆ..!
this is awesome
nice poem ranjith…
ತೇಜಸ್ವಿನಿಯವರೆ,
ನಿಮ್ಮ ಮಾತಿನಿಂದ ಬಹಳ ಸಂತೋಷ ಆಯ್ತು ನಂಗೆ.
ಆದರೆ ಯಾವ ಅಮ್ಮನೂ ತಾನೇ ದೇವರು ಅಂದುಕೊಳ್ಳುವುದಿಲ್ಲ, ಹಾಗೆಯೇ ಮಗನಿಗಾಗಿ ದೇವರಿಗೆ ದೀಪ ಹಚ್ಚಿ ಪ್ರಾರ್ಥಿಸದೇ ಇರುವುದಿಲ್ಲ ಅಲ್ವೆ? ಇದು ಅಮ್ಮನ ತರ್ಕ. ನಮ್ಮದು ನೀವು ಹೇಳಿದಂತೆ ಇರುತ್ತದೆ.
ಇಲ್ಲಿ ಎಲ್ಲರೂ ನನಗೆ ಕೊಂಬು ಮೂಡಿದೆ ಅಂತಿದ್ದಾರೆ. ನೀವು ಮೆಚ್ಚಿದ್ದಕ್ಕೇ ಇರಬೇಕು ಅಂದುಕೊಳ್ತಾ ಇದ್ದೇನೆ..:-)
ರೂಪಾ,
ತುಂಬಾ ದೂರದಿಂದ ಬಂದು ಹರಸಿದ್ದೀರಿ. ಧನ್ಯವಾದಗಳು..
ಸತೀಶ್,
ಥ್ಯಾಂಕ್ಸ್.. ನಿನ್ನಮ್ಮ ತೋರಿಸಿದ ಪ್ರೀತಿ, ಹಾಕಿದ ಊಟ ನೆನಪಾಗ್ತಿದೆ… ಅಮ್ಮನ್ನ ಕೇಳಿದೆ ಅಂತ ಹೇಳು.
ಹಾಗೆಯೇ ನಿನ್ ಪಿಕ್ಚರ್ ನಲ್ಲಿ ನಂಗೂ ಒಂದು ಚಾನ್ಸ್ ಕೊಡು ಗುರು…:-)
ಚೆನ್ನಾಗಿದೆ ಕವನ ಅನ್ನುತ್ತಿದ್ದೀರಿ…
ಬೇಂದ್ರೆ, ಅಡಿಗರು, ಕುವೆಂಪು ಎಲ್ಲಾರೂ ಕನಸಿನಲ್ಲಿ ಬಂದು “ಛಂದಸ್ಸು, ಗುರು, ಲಘು ಒಂದೂ ಇಲ್ಲ…. ಪದಗಳ ಕೆಳಗೆ ಪದ ಹಾಕಿ ಕವನ ಅಂತಿದ್ದೀಯಾ ” ಅಂತ ಬೈಯುತ್ತಾ ಇದ್ದಾರೆ.
ಈ ಸಲ ಅವರೆಲ್ಲಾ ಬಂದ್ರೆ ನಿಮ್ ಹತ್ರ ಕಳಿಸ್ತೀನಿ…:-)
ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್ ಸರ್..
Mother is like akshya pathra, it never goes empty and to bestow so much love to all children equally only a mother can do. God himself can’t do it.
nin barithirodu mathe nina fans nodidre u have earned ur chance.
ಪ್ರೀತಿಯ ರಂಜಿತ್,
ಸಿಕ್ಸರ್ ನಿರೀಕ್ಷಿಸಿದ್ದೆ, ಆದರೆ, ಪರವಾಗಿಲ್ಲ. ಬೌಂಡರಿ ದಕ್ಕಿದೆ.
”ಯಾಕೋ ಸನಿಹ ಸುಳಿಯಲೂ
ಧೈರ್ಯ ಸಾಲುತಿಲ್ಲ..
ಎದೆಬಡಿತ ಎಲ್ಲವನೂ ಚಾಡಿ
ಹೇಳುವ ಸನ್ನಾಹದಲ್ಲಿದೆ…”
ಈ ಸಾಲುಗಳು ಇಷ್ಟವಾದವು.
ಯಾರು ಆ ಹುಡುಗಿ? ಅಮ್ಮನ ಮುಂದೆ ಹೇಳಲು ಆಗದಷ್ಟು, ಆಗದೇ ಇರಲಾರದಷ್ಟು ನಿಮ್ಮ ಮನಸ್ಸು ಸೆಳೆದವಳು? ಕಾವ್ಯ ಕನ್ನಿಕೆಯಾ ಅಥವಾ ದಿಟದ ಕನ್ಯೆಯಾ?
ಅದನ್ನೂ ಕವಿತೆಯ ಮೂಲಕ ಹೇಳುತ್ತೀರಿ ತಾನೆ?
– ಪಲ್ಲವಿ ಎಸ್.
ಸತೀಶ್,
ಅಮ್ಮನಂತೆ ಎಲ್ಲ ಮಕ್ಕಳಿಗೂ ಸಮನಾದ ಪ್ರೀತಿ ಕೊಡುವುದು ಸ್ವತಹ ದೇವರಿಗೇ ಅಸಾಧ್ಯವಾದದ್ದು ಅನ್ನುತ್ತಿದ್ದಿ. ೧೦೦% ಒಪ್ಪಬೇಕಾದ ಮಾತು.
ಸುಮ್ಮನೆ ತಮಾಷೆ ಮಾಡಿದೆ. ಸಧ್ಯಕ್ಕೆ ಯಾವ ಪ್ರೊಡ್ಯೂಸರ್ ನ ಬದುಕು ಹಾಳು ಮಾಡಲು ಮನಸ್ಸಾಗುತಿಲ್ಲ..:-)
ಪಲ್ಲವಿ,
ಯಾಕೋ ಇದನ್ನೆಲ್ಲಾ ಕವಿತೆ ಅನ್ನಲು ಭಯ ಆಗ್ತಿದೆ. ಮೇಲೆ ವಿಜಯ ರಾಜ್ ರವರಿಗೆ ನೀಡಿದ ಕಾಮೆಂಟ್ ಗಮನಿಸಿ. ಸುಮ್ಮನೆ “ಪದಗುಚ್ಚ” ಅನ್ನುವುದೇ ಲೇಸು ಅನ್ನಿಸುತಿದೆ. ಇದನ್ನು ನೀವು ಕವಿತೆ ಅನ್ನುವುದಾದರೆ ಹೇಳಿ, ಕವಿಗುರುಗಳಾದ ಬೇಂದ್ರೆ ಧಾರವಾಡದವರೇ.. ನಿಮ್ಮಲ್ಲಿ ಕಳಿಸುವೆ !:-)
ಇದ್ದಬದ್ದ ಶಕ್ತಿ ಎಲ್ಲ ಹಾಕಿ ಹೊಡೆದದ್ದು… ಬೌಂಡರಿಯಾದರೂ ದೊರಕಿದ್ದು ಸಂತೋಷ !
ನಿಮ್ಮ ಪ್ರಶ್ನೆಗಳಿಗೆ ಕವಿತೆ (ಪದಗುಚ್ಚ) ಮೂಲಕವೇ ಉತ್ತರಿಸಿ ಎಂದಿರಿ. ನೋಡುವ, ಅಂಥದ್ದು ನನ್ನೊಳಗಿನ ಬರಹಗಾರ ಬರೆಯುವನಾ ಅಂತ..!
ನಾನೂ ಬಂದೆ! ಆದ್ರೆ ನೋ ಕಾಮೆಂಟ್ಸ್….
ಯಾಕಂದ್ರೆ ನೀಲಿ ಹೂವಿನ ಪರಿಮಳದಲ್ಲಿ ಯಾವುದೂ ಇಷ್ಟ ಆಗ್ಲಿಲ್ಲ ಅಂತ ಹೇಳೋಕಾಗಲ್ಲ ನಂಗೆ. ಇದೇನು ಅಂಥಾ ಖಾಸ್ ಇಲ್ಲ ಬಿಡು ಅಂದ್ಕೊತಿರೋವಾಗ್ಲೇ ವಾಹ್! ಅನಿಸೋ ಒಂದೆರಡು ಸಾಲುಗಳಾದ್ರೂ ಕಂಡುಬಿಡುತ್ವೆ ! 🙂
so……
ವೈಶಾಲಿ,
ತಾವು ಮೌನವನ್ನು ತುಂಬಾ ಇಷ್ಟಪಡ್ತಾ ಇರುವ ಹಾಗಿದೆ.
ಚೆನ್ನಾಗಿದ್ರೆ ಚೆನ್ನಾಗಿದೆ ಅನ್ನುತ್ತಲೂ ಚೆನ್ನಾಗಿಲ್ಲದೇ ಹೋದರೆ ಮೆಲ್ಲಗೆ ನೋವಾಗದ ಹಾಗೆ ತಿಳಿಹೇಳುತ್ತಲೂ ಇದ್ದೀರಿ. ಅದಕ್ಕೆ ಬರೇ ಧನ್ಯವಾದ ಅಂದು ಕೈ ತೊಳೆದುಕೊಳ್ಳಲಾರೆ.ಆದರೂ ಸಧ್ಯಕ್ಕೆ ಒಂದು ಥ್ಯಾಂಕ್ಸು ಇಟ್ಟುಕೊಳ್ಳಿ.
ಸೋ.. ನಂತರದ ಪದಗಳನ್ನು ಹೇಗೆ ತುಂಬಿಕೊಳ್ಳಲಿ?
ಖಂಡಿತ ಬರೆಯಬಲ್ಲಿರಿ ರಂಜಿತ್. ಇದುವರೆಗೆ ಬರೆದಿದ್ದು ಸಾಲದಾ? ಮತ್ತೇಕೆ ಅನುಮಾನ?
’ಎದೆಯೊಳಗಿನ ಮಾತು
ಮೊಗೆಮೊಗೆದು ಹೊರಬರಲಿ
ಹನಿಯಲಿ, ಸುರಿಯಲಿ, ಅಬ್ಬರದಿ ಅಪ್ಪಳಿಸಲಿ
ಎಲೆ, ಗಿಡ, ಮರ, ಬೆಟ್ಟ ಚುಂಬಿಸಿ ಇಳಿದು
ಹಳ್ಳ ಹೊಳೆಯಾಗಿ ಹರಿದು
ಕಡಲ ಸೇರಿ ಶಾಂತವಾಗಲಿ’
ಎಂದಷ್ಟೇ ಹಾರೈಸಬಲ್ಲೆ.
ಅಬ್ಬಾ..:-) ಏನಿದು ಪಲ್ಲವಿ…ಕಾಮೆಂಟ್ ನಲ್ಲೆ ಕವಿಯತ್ರಿ ಆಗಿ ಬಿಟ್ರಿ?!:-)
ತುಂಬಾ ಜನರ ಹಾರೈಕೆಯಿಂದಲೇ ಬೆಳೆದವನು ನಾನು.
ನಿಮ್ಮದೂ ದೊರೆತಿದೆ, ಯಾಕೋ ಕಾಲು ಭೂಮಿ ಮೇಲಿಲ್ಲ..ಹಾರುತ್ತಾ ಇದ್ದೇನೇನೊ ಎಂಬ ಅನುಮಾನ !:-)
Namasthe Ranjith,
Amma kavana thumbane chennagide, Baduko dhairya kalisi kotta amma, elle hodru ene paristhithi bandru edurisodanna helikotta ammanigagi enu madalagade iro nanna asahayakathe nimma kavana odi mattashtu dattavaithu,
thanks nimma barahagalu manasinaalakke iliyutthe,
ಮ್…………… ಹೌದು. ಮಾತು ಮಾಡದ್ದನ್ನೇನಾದರೂ ಮೌನ ಮಾಡುತ್ತಾ ಅಂತ…..
ಮೌನ ಇಷ್ಟಪಡುವವರೊಂದಿಗೆ ಮೌನವನ್ನೇ ಮಾತಾಗಿಸುವ ಪ್ರಯತ್ನ…. 🙂
ಸೊ………….. ( ಕವನ ಚೆನ್ನಾಗಿದೆ ಅಂತ ತುಂಬಿಕೊಳ್ಳಿ)
ಶ್ರೀ ಯವರೆ,
ಧನ್ಯವಾದಗಳು.
ಏನೂ ಮಾಡಲಾಗದೇ ಹೋಗುದೆಂಬುದಿಲ್ಲ.
ಜಗತ್ತಿನಲ್ಲಿ ತುಂಬಾ ಬೆಲೆಯುಳ್ಳದ್ದು ಪ್ರೀತಿ. ಆದರೆ ಅದು ಇಲ್ಲಿ ಫುಲ್ ಫ್ರೀ. ಹಾಗಾಗಿ ಪ್ರೀತಿಯನ್ನು ನೀಡಿ. ಯಾರೂ ಅದಕ್ಕಿಂತ ಹೆಚ್ಚು ನಿರೀಕ್ಷಿಸಲಾರರೇನೋ ಅಲ್ಲವೆ?
ವೈಶಾಲಿ,
ನಿಮ್ಮ ಜೋಳಿಗೆ ನನ್ನ ಥ್ಯಾಂಕ್ಸುಗಳಿಂದ ಭರ್ತಿಯಾಗುತಿದೆ ಅನ್ನಿಸುತ್ತಿದೆ:-)
its really heart touching…