ಒನ್ ಲೈನ್ ಕತೆಗಳು…!

Posted: ಅಕ್ಟೋಬರ್ 9, 2008 in ಒಂದು ಸಾಲಿನ ಕತೆಗಳು..

1. ಇವತ್ತು ಪಾದ್ರಿಗೆ ಬಿದ್ದ ಕನಸಿನಲ್ಲಿ ಅವನ ಹಿಂದಿನ ಜನ್ಮದ ನೆನಪಾಗಿತ್ತು.  ಅದರಲ್ಲಿ ಆತ ದೇವಸ್ಥಾನವೊಂದರ ಭಟ್ಟ ಆಗಿದ್ದನಂತೆ..!

 

2. ಆಗಷ್ಟೇ ಸೈನಿಕನೊಬ್ಬನ ಶೌರ್ಯಕ್ಕೆ ಮೆಚ್ಚಿ “ಪರಮವೀರ ಚಕ್ರ” ಕೊಟ್ಟು ಮನೆಗೆ ಬಂದ ರಾಷ್ಟ್ರಪತಿ ಮೊಮ್ಮಗನಿಗೆ ಚೆನ್ನಾಗಿ ಬಾರಿಸಿದನು. ಮೊಮ್ಮಗು “ನಾ ಸೈನಿಕ ಆಗ್ತೀನಿ” ಅಂತ ರಚ್ಚೆ ಹಿಡಿದು ಅಳ್ತಿತ್ತು!

 

3. ಅವನ ಒಳಗೆ ಹರಿಯುತ್ತಿದ್ದ ನದಿಯ ಬಗ್ಗೆ, ಅವನಿಗೆ ಅವಳು ಹಾಗೆ ಕೈಕೊಟ್ಟು ಹೋಗುವವರೆಗೆ ಅರಿವೇ ಇರಲಿಲ್ಲ!

 

4. ಮೌನದ ಕುರಿತು ಅವತ್ತಿನ ಪ್ರವಚನದಲ್ಲಿ ಗುರೂಜಿ ಹೇಳುತ್ತಾ ಹೋದಂತೆ, ಕೇಳುವವರಿಗೂ,ಜತೆಗೆ ಸ್ವತಃ ಗುರೂಜಿ ಗೂ ಮಾತುಗಳೆಲ್ಲ ಪೇಲವವನ್ನಿಸತೊಡಗಿತ್ತು!

 

5. “ನಾನು ನಿನ್ನ ಎಷ್ಟು ಪ್ರೀತಿಸ್ತೀನಿ ಗೊತ್ತಾ?” ಅಂತ ಆತ ಎಲ್ಲಾ ವಿವರಿಸುತ್ತಿದ್ದ. ಅವಳು ಮೌನವಾಗಿ ಕೇಳುತ್ತಾ ತಾನೆಷ್ಟು ಪ್ರೀತಿಸುತ್ತಿದ್ದೇನೆಂದು ಅವನಿಗಿಂತ ಪರಿಣಾಮಕಾರಿಯಾಗಿ ಹೇಳುತ್ತಾ ಇದ್ದಳು!

 

6. “ಇಷ್ಟು ದಿನ ಸತ್ತಿದ್ದು ಸಾಕು, ಇನ್ಮೇಲಾದ್ರೂ ಬದುಕ್ಬೇಕು” ಅಂತ ಅವನು ಕೊನೆಗೂ ತೀರ್ಮಾನ ಮಾಡಿದ…

 

7. “ಎಷ್ಟ್ ಬೇಕಾದ್ರೂ ಕುಡೀತೀನಿ ಗೊತ್ತಾ” ಅಂತ ಗೆಳೆಯರ ಮುಂದೆ ಉಕ್ಕಿದ ಶೌರ್ಯ, ಸ್ವಲ್ಪ ಹೊತ್ತಿನ ನಂತರ ವಾಶ್ ಬೇಸಿನ್ ನೊಳಗೆ ಸಂಪೂರ್ಣ ಇಳಿಯಿತು!

 

8. ಈ ಸಲ ಸಂಬಳ ಕೊಡಲು ತಡವಾಗುವ ವಿಷಯ ಮಾಲಿಕ, ಕೆಲಸದವನಾದ ರಾಮುವಿಗೆ ಕನ್ವಿನ್ಸ್ ಮಾಡಿದ.  ಆದರೆ ರಾಮುವಿಗೆ ಮಾತ್ರ ತನ್ನ ಮಗನಿಗೆ ದೀಪಾವಳಿಗೆ ಪಟಾಕಿ ತರಲಾಗುವುದಿಲ್ಲ ಎಂಬುದನ್ನು ಹೇಗೆ ಕನ್ವಿನ್ಸ್   ಮಾಡಬೇಕೋ  ತಿಳಿಯದೇ ಒದ್ದಾಡುತಿದ್ದ!

 

9. ಲಾಫಿಂಗ್ ಕ್ಲಬ್ಬಿನ ರೂವಾರಿ ತನ್ನನು ಸರಿಯಾಗಿ ನಗುತಿಲ್ಲ ಅಂತ ಎಚ್ಚರಿಸುತಿರುವಾಗಲೂ, ಅವನ ಮನದಲ್ಲಿ, ಕಿಡ್ನಿ ನೋವಿನಿಂದ ಬಳಲುತ್ತಿದ್ದ ಮಗನ ಚಿತ್ರವೇ ಮೂಡುತಿತ್ತು!

 

10. ಅವನು ಮೊದಲ ಬಾರಿಗೆ ಅವನ ಹೆಂಡತಿಗೆ “ಐ ಲವ್ ಯೂ ಸುಕನ್ಯಾ” ಅಂದರೂ ಪಟ್ ಅಂತ ಲಟ್ಟಣಿಗೆಯಿಂದ ತಲೆ ಮೇಲೆ ಬಿತ್ತು ಪೆಟ್ಟು..
     ನಂತರ ಅವಳ ಹೆಸರು ಸುಪ್ರಿಯಾ ಅಂತ ನೆನಪಾಯ್ತು!

ಟಿಪ್ಪಣಿಗಳು
 1. ವೈಶಾಲಿ ಹೇಳುತ್ತಾರೆ:

  ಸೂಪರೋ ಸೂಪರು!
  ನೂರ್ಕಾಲ ಬಾಳು 🙂

 2. vijayraj ಹೇಳುತ್ತಾರೆ:

  1, 6, 5 – nice
  2, 7 , 9 – super
  4 , 11 – superro super

  neevu ee tarahada putta putta kavitheyanthaha kathegaLannu eshtu chennaagi bareeteerandre…..
  neevu baree ee tarahaddanne bareeri antha kELovashtu….

  thanks for such a wonderful bunch of lines

 3. ಶೆಟ್ಟರು (Shettaru) ಹೇಳುತ್ತಾರೆ:

  ಚೆನ್ನಾಗಿವೆ – ಚೆನ್ನಾಗಿವೆ

  -ಶೆಟ್ಟರು

 4. neelihoovu ಹೇಳುತ್ತಾರೆ:

  ಮುತ್ತುಮಣಿಯವರೇ,

  ಪ್ರೀತಿಯ ಸ್ವಾಗತ ನನ್ನ ತೋಟಕ್ಕೆ.

  ವೈಶಾಲಿ,

  ಥ್ಯಾಂಕ್ಸ್.

  ಆದ್ರೆ ನೂರ್ಕಾಲ ತುಂಬಾ ಕಷ್ಟ ರೀ, ಸ್ವಲ್ಪ ಕಡಿಮೆ ಮಾಡಿಕೊಳ್ಳಿ.:-)
  ಇರುವಷ್ಟು ದಿನ ಸೂಪರ್ ಆಗಿ ಬಾಳೋಣ ಅಲ್ವೆ?

  ಶೆಟ್ಟರೇ,

  ಥ್ಯಾಂಕ್ಸು, ಥ್ಯಾಂಕ್ಸು!

 5. neelihoovu ಹೇಳುತ್ತಾರೆ:

  ವಿಜಯರಾಜ್,

  ಕಟು ಸತ್ಯ ಆದರೂ ಅರಗಿಸಿಕೊಳ್ಳುವುದಕ್ಕೆ ತುಂಬಾ ಕಷ್ಟ ಆಗ್ತಿರೋದ್ರಿಂದ ಮಧ್ಯೆ ಒಂದು ಕತೆಯನ್ನು ತೆಗೆದುಹಾಕಿರುವೆ.
  ಅದು ನಿಮಗೂ ಇಷ್ಟವಾಗದೇ ಹೋಗಿದ್ದು ಕಾಕತಾಳೀಯ.
  ನಿಮ್ಮ ಅನಿಸಿಕೆಯನ್ನು ಈ ರೀತಿಯ ಬದಲಾವಣೆಗಳೊಂದಿಗೆ ಓದಿಕೊಳ್ಳುವೆ. ನನ್ನ ತಪ್ಪಿಗೆ ಕ್ಷಮೆ ಇರಲಿ.

  1, 6, 5 – nice
  2, 7 , 8 – super
  4 , 10 – superro super

  ಕೊನೆಯದನ್ನು ಸೂಪರ್ ಅಂತಿದ್ದೀರಿ?!…:-):-)

  ಧನ್ಯವಾದಗಳು ಸರ್..

 6. devi ಹೇಳುತ್ತಾರೆ:

  ಸೂಪರ್

 7. neelihoovu ಹೇಳುತ್ತಾರೆ:

  ದೇವಿಯವರೇ,

  ನಿಮಗೊಂದು ಸೂಪರ್‍ಸ್ವಾಗತ !:-)

 8. mayflower ಹೇಳುತ್ತಾರೆ:

  ಸಕ್ಕತ್ ಆಗಿದೆ ರ್ರೀ. ಮಿಂಚು ಬಂದು ಹೋದ ಹಾಗೆ. ಈ ರೀತಿಯೂ ಬರೆಯಬಹುದು ಅಂತ ನನ್ಗೆ ತಿಳಿದಿದ್ದು. ಈ ಬ್ಲಾಗಿಗೆ ಬಂದಾಗಲೇ !

  ಹೀಗೆ ಇನ್ನಷ್ಟು ಮಿಂಚು ಬರುತ್ತಿರಲಿ, ಮಳೆ ಮಾತ್ರ ಬೇಡ!
  ನನ್ನ ಬ್ಲಾಗ್ ಮನೆಗೊಮ್ಮೆ ಬನ್ನಿ.

  ಶಿವು.ಕೆ

 9. ಶಿವು.ಕೆ ಹೇಳುತ್ತಾರೆ:

  ಸಕ್ಕತ್ ಆಗಿದೆ ರ್ರೀ. ಮಿಂಚು ಬಂದು ಹೋದ ಹಾಗೆ. ಈ ರೀತಿಯೂ ಬರೆಯಬಹುದು ಅಂತ ನನ್ಗೆ ತಿಳಿದಿದ್ದು. ಈ ಬ್ಲಾಗಿಗೆ ಬಂದಾಗಲೇ !

  ಹೀಗೆ ಇನ್ನಷ್ಟು ಮಿಂಚು ಬರುತ್ತಿರಲಿ, ಮಳೆ ಮಾತ್ರ ಬೇಡ!
  ನನ್ನ ಬ್ಲಾಗ್ ಮನೆಗೊಮ್ಮೆ ಬನ್ನಿ.

  ಶಿವು.ಕೆ

 10. neelihoovu ಹೇಳುತ್ತಾರೆ:

  ಶಿವು ಸರ್,

  ಚಿಕ್ಕ ಕತೆಗಳು ನಿಮಗೆ ತುಂಬಾ ಇಷ್ಟ ಅನ್ನಿಸುತ್ತೆ. ಇದು ನಾಲ್ಕನೇ ಭಾಗ ಸರ್. ಮೊದಲು ಮೂರು ಬರೆದಿರುವೆ, ಸಮಯ ಸಿಕ್ಕರೆ ಗಮನಿಸಿ.
  ಹಾಗೇ ಮಳೆ, ಬಿರುಗಾಳಿ, ಮಿಂಚು, ಬೆಳ್ಳಿ ಮೋಡ, ಖಾಲಿ ಗಗನ ಎಲ್ಲಾ ಇದ್ದರೇನೆ ಚಂದ.

  ದುಃಖ ಇದ್ದರೇನೆ ಸುಖದ ಬೆಲೆ ಸರಿಯಾಗಿ ಅರಿವಾಗುವ ಹಾಗೆ ಅಲ್ಲವೆ?

  ನಿಮ್ಮ ಬ್ಲಾಗಿಗೆ ಖಂಡಿತಾ ಬರುತ್ತೇನೆ. ನೀವಿಲ್ಲಿ ಬಂದದ್ದು ಸಂತಸ ತಂದಿತು..:-)

 11. Nag ಹೇಳುತ್ತಾರೆ:

  ಅಪ್ಪಿ ತಪ್ಪಿ ಈ ಬ್ಲಾಗ್ ನೋಡಿ ತಪ್ಪು ಮಾಡಿದ್ನಾ ಅನ್ನಿಸ್ತು..
  ಮಗನೇ ಅದ್ ನಿನ್ ಹೊಟ್ಟೆಕಿಚ್ಚಿನ ಕೋಳಿಯ ಮೊಟ್ಟೆ ಕಣೋ ಅಂತ ಮನಸು ಹೇಳ್ತು…!!

 12. ರಂಜಿತ್ ಹೇಳುತ್ತಾರೆ:

  ನಾಗ್,

  ನಿಮ್ಮ ಹೊಟ್ಟೆಕಿಚ್ಚಿನಲ್ಲಿ ಪ್ರೀತಿ ಇಣುಕುತಿದೆ.

  ನಿಮ್ಮ ತಮ್ಮ ಚೆನ್ನಾಗಿ ಬರೆದಲ್ಲಿ ನಿಮಗೆ ಮತ್ಸರವಾಗುವುದೇ? ಅಂತದ್ದೇ ಪ್ರೀತಿ ನನ್ನ ಮೇಲಿರಲಿ..:)

 13. Naag ಹೇಳುತ್ತಾರೆ:

  Hold On…!!

  Tamma yaaru..?

  Anno naan esht chikkonu gotta…? Just nw am in BE 1st Year..

  u hav mistaken.. naan nimma tamma.. neev nange Anna..

  enagintha kiriyarilla
  enagintha hiriyare ella…!!

 14. Rohini ಹೇಳುತ್ತಾರೆ:

  ರಂಜಿತ್ ಸರ್
  ಈ ಒನ್ ಲೈನ್ ಕತೆಗಳಲ್ಲಿ ಹಾಸ್ಯನು ಬೆರೆತಂತಿದೆ
  ಎಷ್ಟ್ ಬೇಕಾದ್ರೂ ಕುಡೀತೀನಿ ಗೊತ್ತಾ ಅಂತ ಗೆಳೆಯರ ಮುಂದೆ ಉಕ್ಕಿದ ಶೌರ್ಯ ಸ್ವಲ್ಪ ಹೊತ್ತಿನನಂತರ ವಾಶ್ ಬೇಸಿನ್ ನೊಳಗೆ ಸಂಪೂರ್ಣ ಇಳಿಯಿತು!
  ಅವನು ಮೊದಲ ಬಾರಿಗೆ ಅವನ ಹೆಂಡತಿಗೆ ಐ ಲವ್ ಯೂ ಸುಕನ್ಯಾ ಅಂದರೂ ಪಟ್ ಅಂತ ಲಟ್ಟಣಿಗೆಯಿಂದ ತಲೆ ಮೇಲೆ ಬಿತ್ತು ಪೆಟ್ಟು..ನಂತರ ಅವಳ ಹೆಸರು ಸುಪ್ರಿಯಾ ಅಂತ ನೆನಪಾಯ್ತು ಇವುಗಳನ್ನ ಓದಿ ಬಿಗ್ ಸ್ಮೈಲ್ ಕೊಟ್ಟೆ .

  ಆಗಷ್ಟೇ ಸೈನಿಕನೊಬ್ಬನ ಶೌರ್ಯಕ್ಕೆ ಮೆಚ್ಚಿ “ಪರಮವೀರ ಚಕ್ರ” ಕೊಟ್ಟು ಮನೆಗೆ ಬಂದ ರಾಷ್ಟ್ರಪತಿ ಮೊಮ್ಮಗನಿಗೆ ಚೆನ್ನಾಗಿ ಬಾರಿಸಿದನು. ಮೊಮ್ಮಗು “ನಾ ಸೈನಿಕ ಆಗ್ತೀನಿ” ಅಂತ ರಚ್ಚೆ ಹಿಡಿದು ಅಳ್ತಿತ್ತು
  ಎಂತಹ ಜನರಿದ್ದರಲ್ಲ ಬಾಷಣ ಬಿಗಿತಾರೆ ಆದ್ರೆ ಅದು ಕಾರ್ಯ ರೂಪಕ್ಕೆ ಬರಲ್ಲ. ಚೆನ್ನಾಗಿ ಬರೆದಿದಿರ.

  ಈ ಸಲ ಸಂಬಳ ಕೊಡಲು ತಡವಾಗುವ ವಿಷಯ ಮಾಲಿಕ, ಕೆಲಸದವನಾದ ರಾಮುವಿಗೆ ಕನ್ವಿನ್ಸ್ ಮಾಡಿದ. ಆದರೆ ರಾಮುವಿಗೆ ಮಾತ್ರ ತನ್ನ ಮಗನಿಗೆ ದೀಪಾವಳಿಗೆ ಪಟಾಕಿ ತರಲಾಗುವುದಿಲ್ಲ ಎಂಬುದನ್ನು ಹೇಗೆ ಕನ್ವಿನ್ಸ್ ಮಾಡಬೇಕೋ ತಿಳಿಯದೇ ಒದ್ದಾಡುತಿದ್ದ
  ಲಾಫಿಂಗ್ ಕ್ಲಬ್ಬಿನ ರೂವಾರಿ ತನ್ನನು ಸರಿಯಾಗಿ ನಗುತಿಲ್ಲ ಅಂತ ಎಚ್ಚರಿಸುತಿರುವಾಗಲೂ, ಅವನ ಮನದಲ್ಲಿ, ಕಿಡ್ನಿ ನೋವಿನಿಂದ ಬಳಲುತ್ತಿದ್ದ ಮಗನ ಚಿತ್ರವೇ ಮೂಡುತಿತ್ತು!
  ನಮಗೆ ಕಷ್ಟ ಅದ್ರೂ ಇತರರಿಗೆ ನೋವು ಕೊಡಬಾರದು ಅಂತ ತಿಳಿಸಿದ್ದಿರಾ

  ಅವನ ಒಳಗೆ ಹರಿಯುತ್ತಿದ್ದ ನದಿಯ ಬಗ್ಗೆ, ಅವನಿಗೆ ಅವಳು ಹಾಗೆ ಕೈಕೊಟ್ಟು ಹೋಗುವವರೆಗೆ ಅರಿವೇ ಇರಲಿಲ್ಲ!
  ನಾನು ನಿನ್ನ ಎಷ್ಟು ಪ್ರೀತಿಸ್ತೀನಿ ಗೊತ್ತಾ?” ಅಂತ ಆತ ಎಲ್ಲಾ ವಿವರಿಸುತ್ತಿದ್ದ. ಅವಳು ಮೌನವಾಗಿ ಕೇಳುತ್ತಾ ತಾನೆಷ್ಟು ಪ್ರೀತಿಸುತ್ತಿದ್ದೇನೆಂದು ಅವನಿಗಿಂತ ಪರಿಣಾಮಕಾರಿಯಾಗಿ ಹೇಳುತ್ತಾ ಇದ್ದಳು!
  ಈ ಎರಡು ಕತೆಗಳು ತುಂಬಾ ಇಷ್ಟವಾಯಿತು ಮನಸ್ಸಿಗೆ ತುಂಬಾ ಹಿತವಾಯಿತು.

 15. ರಂಜಿತ್ ಹೇಳುತ್ತಾರೆ:

  ನಾಗ್,

  ಕ್ಷಮಿಸಿ, ಗೊತ್ತಿರಲಿಲ್ಲ .

  ಆದರೂ ಇಷ್ಟು ಚಿಕ್ಕ ವಯಸಿನಲ್ಲಿ ಬ್ಲಾಗ್ ಮಾಡುವಂತಹ, ನೋಡುವಂತಹ ಅವಕಾಶಗಳು ನನಗಿರಲಿಲ್ಲವಲ್ಲ ಎಂಬ ಹೊಟ್ಟೆಕಿಚ್ಚೂ ಉಂಟಾಗಿದೆ..:-)

 16. ರಂಜಿತ್ ಹೇಳುತ್ತಾರೆ:

  ರೋಹಿಣಿ,

  ನಿಜ.. ಒಂದೇ ಸಾಲಿನಲ್ಲಿ ಭಾವಲೋಪವಾಗದಂತೆ, ೫-೬ ಪುಟಗಳ ಕತೆ ಕೊಡುವಂತಹ ಕಚಗುಳಿ, ಪಂಚ್ ನೀಡುವುದು ಪ್ರಯಾಸದ ಕೆಲಸವೇ.

  ಆಗ ನಾನು ಬರೆಯುತ್ತಿದ್ದ ಇಂಥ ಕತೆಗಳೆಲ್ಲ ಸಾವಿನ ಸುತ್ತಲೇ ಗಿರಕಿ ಹೊಡೆಯುತಿತ್ತು. ಎಲ್ಲವೂ ಸೀರಿಯಸ್ ಆಗಿದ್ದವು. ಈ ಎಕತಾನತೆ ಮುರಿಯುವ ಸಲುವಾಗಿ ಹಾಸ್ಯ ಕೂಡ ಬರೆವ ಪ್ರಯತ್ನ ಮಾಡಿದ್ದೆ.

  ನಿಮಗಿಷ್ಟವಾಗಿದ್ದಕ್ಕೆ ಖುಷಿಯಾಯಿತು.

  ಥ್ಯಾಂಕ್ಸ್..:)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s