ಹೀಗೇ ಸುಮ್ಮನೆ…

Posted: ಅಕ್ಟೋಬರ್ 11, 2008 in ಹನಿಗಳು...

 

 

******

 

 

ನನ್ನಮ್ಮ…

 

ನನ್ನಜ್ಜಿಗೆ

ಮಗಳು,

 

ಅಪ್ಪಂಗೆ

ಹೆಂಡತಿ,

 

ನನ್ನ ಹೆಂಡ್ತಿಗೆ

ಅತ್ತೆ,

 

ಅಣ್ಣಂಗೆ

ಅಮ್ಮ,

 

ನಂಗೆ ಮಾತ್ರ

……..

 

……..

 

ಬದುಕು!

 

*******

 

ಅರ್ಥವಾಗದಿದ್ದರೂ

ಇಷ್ಟವಾಗುವುದು

ಅವಳ ಮನಸ್ಸು,

ಹುಸಿ ಮುನಿಸು,

ಮತ್ತು

ನನ್ನ ಕವಿತೆಗಳು..!

 

 

*********

 

ಕಾಳ ರಾತ್ರಿಗೆ ಸೋತು

ಸೂರ್ಯ ಒಪ್ಪಿಸಿದ ಕಪ್ಪ

ಈ ಬೆಳದಿಂಗಳು..

 

ಕದ್ದ ಬೆಳಕು ಎಂದು ಹಂಗಿಸಿದರೆ

ತುಂಬಿ ಬರದೇ ಇದ್ದೀತೆ

ಚಂದ್ರನ ಕಂಗಳು..?

 

 

*********

Advertisements
ಟಿಪ್ಪಣಿಗಳು
 1. ವೈಶಾಲಿ ಹೇಳುತ್ತಾರೆ:

  marvelous….!
  ಎಷ್ಟು ಚಂದದ ಸಾಲುಗಳು ರಂಜಿತ್… hats off !

 2. ಪಲ್ಲವಿ ಎಸ್‌. ಹೇಳುತ್ತಾರೆ:

  ಮತ್ತೆ ಸಿಕ್ಸರ್‌ ಬಾರಿಸಿದ್ದೀರಿ ರಂಜಿತ್‌.

  ವ್ಯಾಖ್ಯೆಗೆ ಸಿಗದ್ದೇ ನಿಜವಾದ ಪ್ರೀತಿ. ಅದು ಅಮ್ಮನ ಕುರಿತ ಚುಟುಕದಲ್ಲಿ ಚೆನ್ನಾಗಿ ವ್ಯಕ್ತವಾಗಿದೆ.

  ” ಕಾಳ ರಾತ್ರಿಗೆ ಸೋತು
  ಸೂರ್ಯ ಒಪ್ಪಿಸಿದ ಕಪ್ಪ
  ಈ ಬೆಳದಿಂಗಳು..

  ಕದ್ದ ಬೆಳಕು ಎಂದು ಹಂಗಿಸಿದರೆ
  ತುಂಬಿ ಬರದೇ ಇದ್ದೀತೆ
  ಚಂದ್ರನ ಕಂಗಳು..?”

  ಈ ಸಾಲುಗಳು ತುಂಬಾ ಇಷ್ಟವಾದವು.

  ನನಗೂ ಕವಿತೆ ಬರೆಯುವ ಉಮೇದು ಬರತೊಡಗಿದೆ.

  ”ಅದು ಹಾಗೇನೇ
  ಅದು ಇರುವುದೇ ಹಾಗೆ
  ಹೇಗೆ
  ಎಂದು ಕೇಳಿದರೆ
  ಏನು ಹೇಳಲಿ?”

  ಪರವಾಗಿಲ್ವಾ? ಇದನ್ನು ಮುಂದುವರೆಸಬಹುದಾ?

  – ಪಲ್ಲವಿ ಎಸ್‌.

 3. neelihoovu ಹೇಳುತ್ತಾರೆ:

  “ಆ ಮರ” “ಒಂಚೂರು ಕೋಗಿಲೆ” “ನಮ್ಮೂರಲ್ಲಿ” ಅಂಥ ಕವಿತೆ ಬರೆದವರು ನೀವು. ಸ್ಟ್ರೈಟ್ ಡ್ರೈವ್ ಹೊಡೆಯುವುದು ಹೀಗೇನಾ ಅಂತ ಸಚಿನ್, ಹರ್ಭಜನ್ ಗೆ ಕೇಳಿದ ಹಾಗಿದೆ !
  ಆದರೂ ನಿಮ್ಮ ಕವಿತೆಗೆ ಪಕ್ಕನೆ ಮೂಡಿದ ಭಾವಗಳಿವು.

  ಅದು ಹಾಗೇನೇ
  ಅದು ಇರುವುದೇ ಹಾಗೆ
  ಹೇಗೆ
  ಎಂದು ಕೇಳಿದರೆ
  ಏನು ಹೇಳಲಿ?

  ಅದಕೆ ಪದಗಳ
  ಆರೋಪ
  ಹಾಕುವ ಪ್ರಯತ್ನ ಬಿಟ್ಟು,
  ನಿನ್ನೆಲ್ಲಾ ಇಂದ್ರಿಯಗಳಿಂದ
  ನೋಡು,

  ಎದೆಯೊಳಗೆ
  ಅನುಭೂತಿಯ ಹೂವೊಂದು
  ಅರಳುವ ಬಗೆಯನ್ನು
  ಮೌನವಾಗಿ
  ಅನುಭವಿಸು!

  ನಿಮ್ಮ ಪೂರ್ಣಕವಿತೆಯ ನಿರೀಕ್ಷೆಯಲ್ಲಿದ್ದೇನೆ.

 4. neelihoovu ಹೇಳುತ್ತಾರೆ:

  ವೈಶಾಲಿ,

  ಜಾಸ್ತಿ ಹೊಗಳಿದರೆ ಮುಂದೆ ಮೂಡಲಿರುವ ಕವನಗಳಿಗೆ ತೊಂದರೆಯಾದೀತು. ಈಗಿನ್ನೂ ಇಪ್ಪತೈದು ವರ್ಷ. ಇನ್ನೂ ಎಪ್ಪತೈದು ವರ್ಷ ಬರೆಯುವುದಿದೆ ! 🙂

  ಸುಮ್ಮನೆ ತಮಾಶೆ ಮಾಡಿದೆ.:-)

  ತುಂಬಾ ಥ್ಯಾಂಕ್ಸ್ ಮೇಡಂ!

 5. sunaath ಹೇಳುತ್ತಾರೆ:

  ಕವನ ಇಷ್ಟವಾಯಿತು. ಭಾವನೆಯ ಜೊತೆಗೆ ಚಾತುರ್ಯವೂ ಬೆರೆತಿದೆ.

 6. neelihoovu ಹೇಳುತ್ತಾರೆ:

  ಥ್ಯಾಂಕ್ಸ್ ಸುನಾತ್,

  ಯಾವ ಕವನ ಅಂತ ಹೇಳಿದ್ದರೆ ಚೆನ್ನಾಗಿತ್ತೆನಿಸಿತು.

 7. vijayraj ಹೇಳುತ್ತಾರೆ:

  modalaneyadu….nice…. kaaLaraatri maatra… beLadingaLa raatriya tampinashte sogasaagide

 8. supreeth ಹೇಳುತ್ತಾರೆ:

  ಗುರುಗಳೇ,
  ಚಂದಿರನ ಬೆಳದಿಂದಳಿನ ಕವನ ನಿಜಕ್ಕೂ ಅದ್ಭುತ. ಇಂತ glimpses ಹೆಚ್ಚೆಚ್ಚು ಮೂಡಿ ಬರಲಿ ಎಂದು ಆಶಿಸುವೆ…

  ಸುಪ್

 9. neelihoovu ಹೇಳುತ್ತಾರೆ:

  ವಿಜಯರಾಜ್,

  ನಿಮ್ಮ ಅನಿಸಿಕೆಯಲ್ಲಿನ ಪ್ರೀತಿಗೆ ಸೋತು, ಥ್ಯಾಂಕ್ಸ್ ನ್ನು ಕಪ್ಪವಾಗಿ ಕೊಡ್ತಿದ್ದೇನೆ ಸರ್..:-)

  ಸುಪ್,

  ಸ್ಟೂಡೆಂಟ್ ಅಂತ ನಿಮ್ಮ ಮೈಲ್ ನಲ್ಲಿ ನೀವು ಹೆಸರಿಟ್ಟುಕೊಂಡರೂ, ನನ್ನಂತಹ ತುಂಬಾ ಜನರಿಂದ ಗುರುಗಳೇ ಅಂತ ಕರೆಸಿಕೊಳ್ಳುವವರು ತಾವು,
  “ಸುಪ್ ತ” ವಾಗಿಯಾದರೂ ನಿಮ್ಮ ಪ್ರೀತಿ ನನ್ನೆಡೆಗೆ ಹರಿಯುತಿರಲಿ, ಆಗ ಮಾತ್ರ ನನ್ನ ಬರವಣಿಗೆ ಹರಿತವಾಗುತ್ತದೆ..:-)!

 10. ರಾಜೇಶ ಹೆಗಡೆ ಹೇಳುತ್ತಾರೆ:

  ಅಮ್ಮನ ಬಗ್ಗೆ ಬರೆದ ಕವನ ತುಂಬಾ ಚೆನ್ನಾಗಿದೆ. ನಿಮ್ಮೀ ಬ್ಲಾಗ್ ನ ಡಿಸೈನ ಚೆನ್ನಾಗಿದೆ.

  ವಂದನೆಗಳೊಂದಿಗೆ
  –ರಾಜೇಶ ಹೆಗಡೆ

 11. neelihoovu ಹೇಳುತ್ತಾರೆ:

  ರಾಜೇಶ್ ಹೆಗಡೆಯವರೆ,

  ಡಿಸೈನ್ ಚೆನ್ನಾಗಿದೆ ಅಂತ ನಿಮ್ಮಂತೆಯೇ ತುಂಬಾ ಜನ ಹೇಳಿದ್ದಾರೆ. ಇಲ್ಲಿನ ಬರಹಗಳನ್ನು ಬಿಟ್ಟು ಬಾಕಿ ಎಲ್ಲಾ ನಮ್ಮ ನವಿಲುಗರಿ ಸೋಮನ ಕೃಪೆ. ಕ್ರೆಡಿಟ್ಟು ಅವನಿಗೆ ತಲುಪಿಸುವೆ.

  ವರ್ಷಾನುಗಟ್ಟಲೆ ಮನೆಯಿಂದ ದೂರವಿದ್ದುದರಿಂದಲೋ ಏನೋ, ಅಮ್ಮನ ಕುರಿತು ವಿಶೇಷ ಪ್ರೀತಿ, ಸೆಂಟಿಮೆಂಟಿದೆ ನನಗೆ. ಅದು ಹೀಗೆ ಹೊರಬರುತ್ತಿದೆಯಿರಬೇಕು.

  ಥ್ಯಾಂಕ್ಸ್ !

 12. ಶೆಟ್ಟರು (Shettaru) ಹೇಳುತ್ತಾರೆ:

  ಭಲೇ.. ಭಲೆ.., ಛಂದದ.. ಚಂದಾದ.. ಹನಿಗಳು

  ಮನ ತುಂಬಿದವು

  -ಶೆಟ್ಟರು

 13. neelihoovu ಹೇಳುತ್ತಾರೆ:

  ಥ್ಯಾಂಕ್ಸ್ ಶೆಟ್ಟರೇ,

  ಹೀಗೆ ಬಂದು ಹೋಗುತ್ತಾ ಇರಿ.
  ಪ್ರೀತಿಯ ಜತೆ ಸ್ವಲ್ಪ ಆಶೀರ್ವಾದವೂ ಇರಲಿ ನನ್ನ ಮೇಲೆ…

 14. ಶಿವು.ಕೆ ಹೇಳುತ್ತಾರೆ:

  ಸೊಗಸಾದ, ಚಿಕ್ಕ ಚೊಕ್ಕ ಸಾಲುಗಳು!
  ಶಿವು.ಕೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s