ನನ್ನ ಪ್ರೀತಿಯ ರೀತಿ…

Posted: ಅಕ್ಟೋಬರ್ 18, 2008 in ಕವಿತೆ

 

 

ಸಕ್ಕರೆಯಿಲ್ಲದ ಕಾಫಿಯಷ್ಟನ್ನೇ
ಕುಡಿಯುತ್ತಿರುತ್ತೇನೆ.
ದೇಹಕ್ಕೆ ನೀನಿತ್ತ
ಮುತ್ತುಗಳ ಸಿಹಿಯನ್ನೇ
ಅರಗಿಸಿಕೊಳ್ಳಲಾಗುವುದಿಲ್ಲ..

ನೀ ಕೈತುತ್ತು ನೀಡುವಿ
ಎಂಬ ಕಾರಣಕ್ಕಾಗಿ
ಬಲಗೈ ಗೆ ಯಾವಾಗಲೂ
ಗಾಯ ಮಾಡಿಕೊಳ್ಳುತ್ತಿರುತ್ತೇನೆ

ತಿನ್ನುವಾಗ ಅಕಸ್ಮಾತ್ ನಿನ್ನ
ಗಲ್ಲಕ್ಕಂಟಿಕೊಂಡ ಕೇಸರಿಬಾತನ್ನು
ಒರೆಸಲು ಟವಲನ್ನೋ,
ಕೈಯನ್ನೋ ಬಳಸುವ
ಮೂರ್ಖತನವ ಎಂದೂ ಮಾಡೋಲ್ಲ…

ಮೈಗೆಲ್ಲಾ ಎಣ್ಣೆ ಹಚ್ಚಿ
ಮಸ್ಸಾಜ್ ಮಾಡುತ್ತಿ
ಎಂಬ ಒಂದೇ ಕಾರಣಕ್ಕೆ
ವರ್ಷವಿಡೀ ದೀಪಾವಳಿಗಾಗಿ
ಕಾಯುತ್ತಿರುತ್ತೇನೆ..

ಲೆಕ್ಕದ ಮಾಸ್ತರಿಗೆ ಸುಳ್ಳಿಗೇ
ಬೈದುಕೊಳ್ಳುತ್ತಾ,
ಮಚ್ಚೆ ಲೆಕ್ಕ ಹಾಕುವ ಆಟದಲ್ಲಿ
ಬೇಕಂತಲೇ ಮತ್ತೆ ಮತ್ತೆ
ಸೋಲುತ್ತಿರುತ್ತೇನೆ..

ನೀ ನಿದಿರಿಸುವಾಗ
ಕದ್ದ ಮುತ್ತುಗಳ ಲೆಕ್ಕ
ಒಪ್ಪಿಸದೇ, ಹಗಲೆಲ್ಲ
ದಿನದ ಖೋಟಾಕ್ಕಾಗಿ
ಬೇಡುತ್ತಿರುತ್ತೇನೆ..

Advertisements
ಟಿಪ್ಪಣಿಗಳು
 1. navilgari ಹೇಳುತ್ತಾರೆ:

  idu sabya tunta tana…swalpa Yaamaaridru jana poli kavaite andubidtaare..elli haagaagalikke avakashavanne kottilla..odida koodale tutiyanhchallli summane ondu naguvina gere mooodutte..:) kavitege bekagirodu ade alva?

  ತಿನ್ನುವಾಗ ಅಕಸ್ಮಾತ್ ನಿನ್ನ
  ಗಲ್ಲಕ್ಕಂಟಿಕೊಂಡ ಕೇಸರಿಬಾತನ್ನು
  ಒರೆಸಲು ಟವಲನ್ನೋ,
  ಕೈಯನ್ನೋ ಬಳಸುವ
  ಮೂರ್ಖತನವ ಎಂದೂ ಮಾಡೋಲ್ಲ…

  plz kandita anta tappu maadlik hogle beda oke?

 2. hema ಹೇಳುತ್ತಾರೆ:

  ಮೈಗೆಲ್ಲಾ ಎಣ್ಣೆ ಹಚ್ಚಿ
  ಮಸ್ಸಾಜ್ ಮಾಡುತ್ತಿ
  ಎಂಬ ಒಂದೇ ಕಾರಣಕ್ಕೆ
  ವರ್ಷವಿಡೀ ದೀಪಾವಳಿಗಾಗಿ
  ಕಾಯುತ್ತಿರುತ್ತೇನೆ..

  ನೀವು ದೀಪಾವಳಿಗೆ ಊರಿಗೆ ಬರ್ತಿರೋದಕ್ಕೆ ಏನು ಕಾರಣ ಅಂತ ಯೋಚಿಸುತ್ತಿದ್ದೆ. ಈಗ ಗೊತ್ತಾಯ್ತು. 😉

 3. navilugari ಹೇಳುತ್ತಾರೆ:

  hema avarge inta vishya bega artha maadkotaare…

  nanage yenu artane aagillappa 😉

 4. supreeth ಹೇಳುತ್ತಾರೆ:

  ನಿಮ್ಮ ಪ್ರೀತಿಯ ರೀತಿ ವಿಶಿಷ್ಟವಾಗಿದೆ. ಪ್ರೀತಿ ಇರುವುದೇ ಅಥವಾ ಇರಬೇಕಾದ್ದೇ ಹೀಗೆ ಅಲ್ಲವೇ? ನಮ್ಮ ಬದುಕಿನ ಸಣ್ಣ ಸಣ್ಣ ಕೆಲಸಗಳಲ್ಲಿ, ಸಂಭ್ರಮಗಳಲ್ಲಿ ಹಾಸುಹೊಕ್ಕಾಗಿ?

  ಸುಪ್ರೀ

 5. ಪಲ್ಲವಿ ಎಸ್‌. ಹೇಳುತ್ತಾರೆ:

  ಎಲ್ಲೋ ಏನೋ ಕಳೆದುಕೊಂಡಂತಿದೆ
  ಅದನ್ನು ಹುಡುಕಲು ಕವಿತೆ ಹೊರಟಿದೆ
  ಕಳೆದಿದ್ದು ಇದೆಯಲ್ಲ ಅಲ್ಲೇ ಎದೆಯೊಳಗೆ
  ಅದ ತಿಳಿಯದೇ ಕವನ ಮಿಡುಕುತ್ತಿದೆ

  ಕಿಚ್ಚು ಬಚ್ಚಿಡುವಲ್ಲಿ ಸೊಗಸುಂಟೆ ಮಿತ್ರ?
  ಸುಟ್ಟೀತು ಎದೆಯ, ಕಟ್ಟಿಹಾಕೀತು ಕನಸ
  ಮನದಳಲು ತಳೆಯಲಿ ಕವಿತೆ ಯಾ ಚಿತ್ರ
  ದೂರ ತೀರಕೂ ಹರಿದು ತಾಕಲಿ ಮನಸ

 6. Gururaj ಹೇಳುತ್ತಾರೆ:

  Simple but sweet n beautiful!

 7. neelihoovu ಹೇಳುತ್ತಾರೆ:

  ಥ್ಯಾಂಕ್ಸ್ ಕಣೋ ಸೋಮಾ…

  ಅದು ಅದೃಷ್ಟವಶಾತ್ ಸಿಗುವ ಅವಕಾಶ ಕಣೋ…ಅಂಥ ಅವಕಾಶ ಸಿಗೋಕೆ ಪುಣ್ಯ ಮಾಡಿರ್ಬೇಕು..:-)
  ಆ ತರಹದ ದೊಡ್ಡ ತಪ್ಪು ಯಾಕೆ ಮಾಡಲಿ ಹೇಳು..;-)

 8. neelihoovu ಹೇಳುತ್ತಾರೆ:

  *ಅಯ್ಯೋ.. ಏನು ಹೇಮಾ ಮೇಡಂ, ನಾನು ತಿಂಗಳುಗಟ್ಟಲೆ ನಿಮ್ಮ ಕಾಲೆಳೆದದ್ದಕ್ಕೆಲ್ಲಾ ಒಂದೇ ಸಾಲಿನಲ್ಲಿ ಸೇಡು ತೀರಿಸಿಕೊಂಡುಬಿಟ್ಟಿರಿ..! 🙂

  ನಾನೂ ಅದೇ ಅಂದುಕೊಳ್ತಾ ಇದ್ದೆ, ಯಾಕೆ ಇಷ್ಟು ದಿನ ಹೇಮಾ ಮೇಡಂ ಈ ಬ್ಲಾಗ್ ನತ್ತ ತಲೆ ಹಾಕಿಲ್ಲ ಅಂತ. ಇಂಥ ಅವಕಾಶಕ್ಕಾಗಿ ಎಷ್ಟು ದಿನದಿಂದ ಕಾಯ್ತಾ ಇದ್ರೋ..:-)

  ಈ ಸಲದ ದೀಪಾವಳಿ ತುಂಬಾ ನಿಮ್ಮ ಕಾಮೆಂಟ್ ನೆನೆನೆನೆದು ಮುಗುಳ್ನಗುತ್ತಿರುತ್ತೇನೆ ಅನ್ನಿಸುತ್ತಿದೆ.

  * ಇಷ್ಟಕ್ಕೂ ಅಂತಹ ಕಾರಣವೇನಾದರೂ ಇದ್ದರೆ ಅದು ಮೊದಲು ಗೊತ್ತಾಗೋದು ನಿಮಗೇ ಅಲ್ಲವೆ ಹೇಮಾ?

 9. neelihoovu ಹೇಳುತ್ತಾರೆ:

  ಹೌದು ಸೋಮಾ.. ನಿಂಗೇನೂ ಅರ್ಥ ಆಗಲ್ಲಪ್ಪ…. ಪುಟ್ಟ ಪಾಪು ನೀನು..:-)

  ನಾನು ಊರಿಗೆ ಬಂದಾಗ ಸಿಗೋ…ಇಲ್ಲಿಂದ ನಿಂಗೆ ಉಡುಗೊರೆಯಾಗಿ ಹಾಲಿನ ಬಾಟಲ್ ತಗೊಂಡಿದ್ದೀನಿ..;-)

 10. neelihoovu ಹೇಳುತ್ತಾರೆ:

  ಸುಪ್ರೀ,

  ನಿಜ ಸುಪ್ರೀ…ಪ್ರೀತಿ ಅನ್ನುವುದು ಭಾವನೆಯಲ್ಲ, ಅದೊಂದು ಕ್ರಿಯಾಪದ ಅಂದ್ಕೊಂಡ್ರೆ ಚೆಂದ ಅಲ್ವೆ?

  ’ನಾನು ನಿನ್ನನ್ನು ತುಂಬಾ ಪ್ರೀತಿಸ್ತೀನಿ’ ಅನ್ನುವುದರ ಬದಲು ಅದನ್ನ ಹೀಗೆ ಚಿಕ್ಕ ಚಿಕ್ಕ ವಿಷಯಗಳಲ್ಲಿ ಅದನ್ನು ತೋರ್ಪಡಿಸಿಕೊಂಡರೆ ಸಾಕಲ್ಲವೆ..?

  ಗಂಡ ಹೆಂಡತಿ ನಡುವೆ ಸಮಯ ಕಳೆದಂತೆ ಯಾಕೆ ಪ್ರೀತಿ ಕಡಿಮೆಯಾಗುತ್ತೋ ಗೊತ್ತಿಲ್ಲ… ಜೀವನಪೂರ್ತಿ ಒಟ್ಟಿಗೇ ಇರ್ಬೇಕಾದವರು ಅದ್ಯಾಕೆ ಮುನಿಸ್ಕೋತಾರೋ ಅರಿವಾಗಲ್ಲ.

  ನಾನು ಚಿಕ್ಕವನು. ಅನುಭವವಿಲ್ಲದೇ ಹೀಗೆಲ್ಲಾ ಹೇಳಬಾರದು 🙂

  ನೀರಿಗಿಳಿದ್ರೇನೇ ಆಳ ಗೊತ್ತಾಗೋದು ಅಂತಾರೆ…

  ನೋಡ್ಬೇಕು..;-)

 11. neelihoovu ಹೇಳುತ್ತಾರೆ:

  ಪಲ್ಲವೀ,

  “ಕಿಚ್ಚು ಬಚ್ಚಿಡುವಲ್ಲಿ ಸೊಗಸುಂಟೆ ಮಿತ್ರ?
  ಸುಟ್ಟೀತು ಎದೆಯ, ಕಟ್ಟಿಹಾಕೀತು ಕನಸ
  ಮನದಳಲು ತಳೆಯಲಿ ಕವಿತೆ ಯಾ ಚಿತ್ರ
  ದೂರ ತೀರಕೂ ಹರಿದು ತಾಕಲಿ ಮನಸ”

  ಜಾಸ್ತಿ ಏನೂ ಹೇಳೋಲ್ಲ… ನಾನು ನಿಮ್ಮ ಅಭಿಮಾನಿ ಅನ್ನೊಕೆ ಹೆಮ್ಮೆ ಪಡ್ತೀನಿ ಅಷ್ಟೇ.

  ಗುರುರಾಜ್,

  ನೀವು ಹೇಳಿದ ಮೇಲೆ ಎಲ್ಲರಿಗೂ ಸರ್, ಮೇಡಂ ಅನ್ನುವುದನ್ನು ಕಡಿಮೆ ಮಾಡಿದೀನಿ. ಹೀಗೆ ನನ್ನನ್ನು ತಿದ್ದುತ್ತಾ ಇರಿ..

  ಥ್ಯಾಂಕ್ಸ್..

 12. ನವಿಲುಗರಿ ಹುಡುಗ ಹೇಳುತ್ತಾರೆ:

  ಖಂಡಿತ ಅಲ್ಲಿಂದ ಬರೋವಾಗ ಮರೆಯದೇ ತನ್ನಿ…ಅದನ್ನ ಜೋಪಾನವಾಗಿ ಹೇಮಾ ಗೆ ತಲುಪಿಸ್ತೀನಿ ಅಂತ ಈ ಸಂಧರ್ಭದಲ್ಲಿ ಬರವಸೆ ಕೊಡ್ತ ಇದ್ದೀನಿ…

 13. Gururaj ಹೇಳುತ್ತಾರೆ:

  Thanks!!! I’m glad you didn’t ignore my comments :)…

  And about correcting you I can say – You can correct things which are not correct, but you can’t improve (near) perfection, so are you…

  Well, on the contrary thanks for adding my blog to your blogroll. Apart from that I also expect the same courtesy to help me attain good writing techniques like you do; Leave your comments on my writing too.

 14. Roopa Satish ಹೇಳುತ್ತಾರೆ:

  hi ranjit,
  nimma baravanige nanage tumba ishtavaagtide.
  itteechegashte naanu odalu shuru maadide.
  i think “am on a process to become your FAN”…!!:-))
  Neevu bareda saalugalu tumba chennagive.
  onderadu saalugalu 3K nallu post maadi.
  aaa community goo swalpa merugu bandeetu.

 15. ವೈಶಾಲಿ ಹೇಳುತ್ತಾರೆ:

  ನೀ ನಿದಿರಿಸುವಾಗ
  ಕದ್ದ ಮುತ್ತುಗಳ ಲೆಕ್ಕ
  ಒಪ್ಪಿಸದೇ, ಹಗಲೆಲ್ಲ
  ದಿನದ ಖೋಟಾಕ್ಕಾಗಿ
  ಬೇಡುತ್ತಿರುತ್ತೇನೆ..

  ಇಷ್ಟು ಚಂದ ಬರೆಯೋಕೆ ನಿಮಗೆ ಮಾತ್ರ ಬರುತ್ತೇನೋ! super…ಎಲ್ಲವೂ.

 16. ವಿಜಯರಾಜ್ ಕನ್ನಂತ ಹೇಳುತ್ತಾರೆ:

  somanna heLdange idu poli mattu sabhyateya naduvina gere mele nintide…
  chooru aacheeche aadge… hange saryaag ninthu bittide…
  heng tiLkobodo hannge….

  adirli somuge haalu bottle koDteeni andralla…
  avnige saryaagi clarification kottu chitra sdameta hEli
  ilklandre sumne yeneno nireekshe iTkondu bittanu… alveno somanna…;)

  vaishaali avru hElida haage nimage maatra bayoke aaguvanthaha kelavu saalugaLive….
  nam somunoo ommomme e taraha bareetha irtaane….
  nange Helkodo hange baryoke antha avanna keltha iddeeni…

  naanoo iddeeni noDi…. baryoke baarde idroo hani hani antha yeneno geechi…ond pustka yella bardu… nim taraha, somanna na taraha baryokaadru nange baro hangidre … 🙂

 17. Ranjith ಹೇಳುತ್ತಾರೆ:

  ಗುರುರಾಜ್,

  ಎಲ್ಲರಿಗೂ ಅವರವರ ಸಮಯ ಅಮೂಲ್ಯ. ಬದುಕಿನ ಎಲ್ಲ ಜಂಜಡಗಳ ನಡುವೆ ನೀವೆಲ್ಲಾ ಬ್ಲಾಗಿಗೆ ಬರುತ್ತೀರಿ, ತಾಳ್ಮೆಯಿಂದ ಓದುತ್ತೀರಿ.. ಪ್ರೀತಿಯಿಂದ ಕಾಮೆಂಟಿಸುತ್ತೀರಿ…

  ಪ್ರೀತಿಯನ್ನು ignore ಮಾಡುವಷ್ಟು ತಾಕತ್ತಿಲ್ಲ ಮನಸ್ಸಿಗೆ..:-)

  ನಿಮ್ಮ ಬ್ಲಾಗಿನ ಬರಹಗಳನ್ನು ಓದುತ್ತಿದ್ದೇನೆ, ಕಾಮೆಂಟ್ ಬರೆಯದ ಕಾರಣ ನನ್ನ ಇಂಗ್ಲೀಷ್ ನ ಬಗೆಗಿನ ಆತ್ಮವಿಶ್ವಾಸದ ಕೊರತೆಯಷ್ಟೇ. ನನ್ನ ಅನಿಸಿಕೆಗಳನ್ನು ಇನ್ನು ಮುಂದೆ ಬರೆಯುತ್ತೇನೆ, ಪ್ರಯತ್ನ ಪಟ್ಟರೆ ಮಾತ್ರ ಆತ್ಮವಿಶ್ವಾಸ ಕುಡಿಯೊಡೆಯುವುದಲ್ಲವೆ?

 18. Ranjith ಹೇಳುತ್ತಾರೆ:

  ರೂಪಾ ಸತೀಶ್,

  ಥ್ಯಾಂಕ್ಸ್.

  ನೀವೂ ಚಂದಕೆ ಬರೀತೀರಿ.

  ಗೆಳೆಯರನೇಕರು ಓರ್ಕುಟ್ ತೊರೆದದ್ದರಿಂದ ಕೊಂಚ ಆಸಕ್ತಿ ಕಡಿಮೆಯಾಯ್ತು ಆ ಕಡೆ.
  ಮತ್ತೆ ನಿಮ್ಮನ್ನು ಈ ತರಹ ಕೇಳಿಕೊಳ್ಳುವಂತೆ ಮಾಡಿದ್ದಕ್ಕೆ ಕ್ಷಮೆಯಾಚಿಸ್ತೇನೆ.

  ಹಾಗೆ ಆ ಕಡೆ ಬಂದಾಗಲೆಲ್ಲಾ ಖಂಡಿತಾ ಬರೆಯುವ ಪ್ರಯತ್ನ ಮಾಡ್ತೇನೆ..

 19. Ranjith ಹೇಳುತ್ತಾರೆ:

  ವೈಶಾಲಿ,

  ಬ್ಲಾಗಿನ ತುಂಬಾ ವಿರಹದ ಕುರುಹೇ ತುಂಬಿಹೋಗಿವೆ, ಕೊಂಚ ಹೊರಬಂದು ರೋಮಾಂಟಿಕ್ ಆಗಿ ಬರೆವ ಪ್ರಯತ್ನ ಮಾಡಿದೆ.

  ಪ್ರಯತ್ನ ಫಲಪ್ರದವಾಗಿದೆ ಅಂತ ನಿಮ್ಮ ಅಭಿಪ್ರಾಯ ನೋಡಿ ಅನ್ನಿಸ್ತಿದೆ.

  ಥ್ಯಾಂಕ್ಸ್ ವೈಶಾಲಿ..(ಹೀಗೆ ಅನ್ನುವುದಕ್ಕೆ ತುಂಬಾ ಕಷ್ಟ ಆಗ್ತಿದೆ ಮೇಡಂ..:-))

 20. Ranjith ಹೇಳುತ್ತಾರೆ:

  ವಿಜಯರಾಜ್ ರವರೆ,

  ಯಾಕೆ ಹಾಗಂತೀರಿ? ನೀವೂ ಚಂದಗೆ ಬರೆಯುತ್ತೀರಲ್ಲ. ಅದರಲ್ಲೂ ನಿಮ್ಮ ಕುಂದಾಪ್ರ ಕನ್ನಡದ ಬ್ಲಾಗ್ ಎಷ್ಟು ಚಂದಗಿದೆ! ನಾನು ಕುಂದಾಪುರದವನಾದರೂ ಬ್ಲಾಗು ಮಾಡುವಷ್ಟು ಆತ್ಮವಿಶ್ವಾಸವಿಲ್ಲ ನನ್ನಲ್ಲಿ.

  ಸೋಮನ ಹತ್ರ ಪ್ರೇಮ ಪತ್ರ ಬರೆಯುವ ಕಲೆ ಕಲಿಯಬೇಕಿದೆ ನನಗೂ.

  ಅವನಿಗೆ ಗೊತ್ತಿಲ್ಲದ್ದೇನು? ಬಾಯಲ್ಲಿ ಬೆರಳಿಟ್ಟರೆ, ಬೆರಳೇನು? ಕೊರಳೇ ನುಂಗುತ್ತಾನೆ..:-)
  ಪಾಪ…ಹೇಮಾಳನ್ನು ಕಾಡುತ್ತಾನೆ. ಸಿಗಲಿ ಈ ಸಲ..:-)

 21. Gururaj ಹೇಳುತ್ತಾರೆ:

  Ranjith – I like your frankness 🙂

  I’m also sailing in the same boat as you are.

  Thought I’m from karnataka I find it difficult writing Kannada (due to long gap) so I started expressing in English rather. Also I don’t have options to type in Kannada at workplace and had to stick to English (I know I can use English transcript rather) 😦

  Having said that, it’s not obligatory to comment on my posts, but don’t hesitate to say what you feel when you read any of my blog posts be it a praise or criticism – both are welcome.

  Always feel free to use our native language and that should all be fine with me. Or even I can translate it for you 🙂

  Alas! I can see that you’ve very well implemented the suggestion on Name/Hyperlink – Thanks!

 22. satish ಹೇಳುತ್ತಾರೆ:

  its very good, subtle and nice.

 23. ರಂಜಿತ್ ಹೇಳುತ್ತಾರೆ:

  ಸತೀಶ್,

  ಇದು ನಿಂಗಿಷ್ಟ ಆಗಿರಲೇಬೇಕು..;-)

 24. ರಂಜಿತ್ ಹೇಳುತ್ತಾರೆ:

  ಗುರುರಾಜ್,

  ನಮ್ಮವರಿಗೆ ಎಲ್ಲಾ ಗೊತ್ತಿರುತ್ತೆ, ಸುಳ್ಳು ಹೇಳಿ ಅವರೆಲ್ಲಾ ನನ್ನ ಮೇಲೆ ನಗುವಂತೆ ಮಾಡಿಕೊಳ್ಳಲಾಗದು ಅಲ್ವೆ ?

  ಹೊಗಳಿಕೆ- ತೆಗಳಿಕೆ ಎರಡನ್ನೂ ಸ್ವಾಗತಿಸುವುದು ನಿಮ್ಮ ಮನೋವೈಶಾಲ್ಯತೆ ತೋರಿಸುತ್ತದೆ..

  ಬೇಕಿದ್ದರೆ ಅನುವಾದ ಮಾಡಿಕೊಡುವೆ ಅನ್ನುತ್ತಾ ಪ್ರೀತಿ ತೋರಿ ನನ್ನನ್ನು ಭಾವುಕನನ್ನಾಗಿ ಮಾಡಿದಿರಿ.

  ಆದರೆ ಪ್ರಯತ್ನ ಮಾಡದೇ ಏನೂ ಫಲ ಸಿಗದು. ಈಗ ಇಂಗ್ಲೀಷರ, ಚೈನೀಸರ ಜತೆ ಕೆಲಸ ಮಾಡುತ್ತಿರುವುದರಿಂದ ಇಂಗ್ಲೀಷ್ ಮಟ್ಟ ಸ್ವಲ್ಪ ಹೆಚ್ಚಾಗಿಯೇ ಸುಧಾರಿಸಿದೆ ಅನಿಸುತ್ತಿದೆ..:-)

  ಅಷ್ಟು ವಿವರವಾಗಿ ತಿಳಿಹೇಳಿದ್ದೀರಿ….ಥ್ಯಾಂಕ್ಸ್..!

 25. Gururaj ಹೇಳುತ್ತಾರೆ:

  ನನಗೂ ಕನ್ನದಲ್ಲಿ ಬರಿಯಬೇಕು ಅಂತ ತುಂಬಾ ಆಸೆ ಆದರೆ ನನ್ನ ಆಫೀಸ್ನಲ್ಲಿ ಕನ್ನಡ ಫಾಂಟ್ ಬರಲ್ಲ, ಹಾಗಂತ ನನಗೆ ಆಂಗ್ಲ ಲಿಪಿಯಲ್ಲಿ ಕನ್ನಡ ಬರಿಯೋದು ಇಷ್ಟವಿಲ್ಲ. ಅದಕ್ಕೆ ನಾನು ಸ್ವಚ್ಚ ಆಂಗ್ಲ ಬಾಷೆಯಲ್ಲಿ ನೆ ಬರಿತಿರೋದು… 🙂

 26. ಪ್ರದೀಪ್ ಹೇಳುತ್ತಾರೆ:

  “……..ಒರೆಸಲು ಟವಲನ್ನೋ,
  ಕೈಯನ್ನೋ ಬಳಸುವ
  ಮೂರ್ಖತನವ ಎಂದೂ ಮಾಡೋಲ್ಲ…”

  ನಿಮ್ಮ fan ಆಗ್ಬಿಟ್ಟಿದ್ದೀನಿ ನೋಡಿ… ಎಲ್ಲಾ ಕವಿತೆಗಳೂ ಇಷ್ಟವಾಗಿವೆ.. ಹೀಗೇನೇ ಬರೀತಾ ಇರಿ…
  🙂

 27. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಸ್ ಪ್ರದೀಪ್…

  ಆದರೆ ಫ್ಯಾನ್ ಬೇಡ.. ಚಳಿಯಲ್ವೆ?

  ಪ್ರೀತಿಯಿರಲಿ..:)

 28. M G Harish ಹೇಳುತ್ತಾರೆ:

  ಮಸ್ತ್ ಕವನ!! ಬರೀತಾ ಇರಿ 🙂

 29. ರಂಜಿತ್ ಹೇಳುತ್ತಾರೆ:

  ಎಂ.ಜಿ. ಹರೀಶ್,

  ನೀವು ಬ್ಲಾಗಿಗೆ ಬರುತ್ತಿರಿ… ನಾವು ಖುಷಿಯಿಂದ ಬರೀತಾ ಇರ್ತೇವೆ..:)

  ಥ್ಯಾಂಕ್ಸ್ ಸರ್‍.

 30. Niveditha ಹೇಳುತ್ತಾರೆ:

  very cute.. loved it.

 31. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಸ್ ನಿವೇದಿತಾ,

  ಬ್ಲಾಗಿಗೆ ಬರುತ್ತಿರಿ ಹೀಗೆ..:)

 32. Datta ಹೇಳುತ್ತಾರೆ:

  Not bad, Just I like it……..

 33. kavya ಹೇಳುತ್ತಾರೆ:

  This nice and i like this.
  THANKS.U R RITING.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s