ಈ ರಾತ್ರಿ..!

Posted: ಅಕ್ಟೋಬರ್ 21, 2008 in ಕವಿತೆ

 

ನಿನ್ನ ದ್ರೋಹದ ಬಿರುಗಾಳಿಗೆ
ಮನದ ಗುಡಿಸಲು ತತ್ತರಿಸಿದರೂ

ಈ ರಾತ್ರಿಯ ಕತ್ತಲು
ನನ್ನ ಪರ ವಹಿಸಿ
ಏನನ್ನೂ ಕಾಣಿಸದೇ
ಎಲ್ಲವನ್ನೂ ಮರೆಮಾಚಲು
ಯತ್ನಿಸುತ
ಸಂತೈಸುತ್ತಿದೆ.

ಹಳೆಯ ಸುಂದರ
ನೆನಪೊಂದು ನಿದಿರೆಯ
ಜತೆ ರಮಿಸಿ
ಕನಸು ಮೂಡುವ
ಮುನ್ಸೂಚನೆಯಿದೆ

ದೇವರೇ,
ದಯವಿಟ್ಟು ಈ ರಾತ್ರಿ
ಹುಟ್ಟುವ ಕನಸು ಎಂದಿಗೂ
ಮುಗಿಯದಿರಲಿ,
ಹೆದರಿಸುವ
ಬೆಳಗೆಂದೂ ಆಗದಿರಲಿ..

ಏಕೆಂದರೆ
ಏಳುತ್ತಲೇ ಕಾಣುವ
ವಾಸ್ತವದ ಭೂತಕ್ಕೆ
ಈ ಕನಸುಗಳೇ
ರಾಮನಾಮವಾಗಬೇಕಿದೆ…

ಟಿಪ್ಪಣಿಗಳು
 1. Gururaj ಹೇಳುತ್ತಾರೆ:

  Very beautiful!!!

  You’ve giving a new meaning for darkness which generally represents something bad, or depression or even failure.

 2. ShashiKiran ಹೇಳುತ್ತಾರೆ:

  ಹಲೋ ರಂಜಿತ್ (ನಿಮ್ಮ ವಯಸ್ಸು ನನಗೆ ಗೊತ್ತಿಲ್ಲ)
  ನೀವು ಬರೆದಿರೋ ಕವನದ ಸಾಲುಗಳನ್ನು ಓದ್ತಾ ಇದ್ರೆ ನಮ್ಮ ಭಾವನೆಗಳನ್ನೆ ಕದ್ದು ಬರೆದಿದೆರೆನೊ ಅನ್ನಿಸುತ್ತೆ….
  ನಿಜವಾಗಲು ಬಹಳ ಖುಷಿಯಾಗುತ್ತೆ ರಂಜಿತ್….

 3. ವೈಶಾಲಿ ಹೇಳುತ್ತಾರೆ:

  ……………………………………….

 4. Bala ಹೇಳುತ್ತಾರೆ:

  Ranjit,
  nice Poem.

 5. ಪಲ್ಲವಿ ಎಸ್‌. ಹೇಳುತ್ತಾರೆ:

  ಮತ್ತೆ ಅರ್ಜೆಂಟಾಗಿ ಬರೆಯಲು ಯತ್ನಿಸಿದಿರಾ ರಂಜಿತ್‌? ಭಾವನೆಗಳನ್ನು ಒಂಚೂರು ಮಾಗಲು ಬಿಡಬೇಕಿತ್ತಲ್ವಾ?

  ಏನೋ ತಾಗಿತೇನೋ, ಚುಚ್ಚಿತೇನೋ
  ಘಾಸಿಗೊಂಡಿದೆ ಸವಿಗನಸು
  ಎಲ್ಲವನೂ ಹೇಳಲು, ಹಗುರವಾಗಲು
  ತವಕಿಸುತ್ತಿದೆ ಮನಸು

  ಅದು ಒಂಚೂರು ಇರಲಿ ಹಾಗೇ ಮಿತ್ರಾ
  ನಿನ್ನ ಎದೆಯ ಗೂಡಿನೊಳಗೆ
  ಕನಸ ಬಿಸಿಯನಿತ್ತು ಪೋಷಿಸು, ಬೆಳೆಸು
  ಬಲಗೊಳಿಸಿ, ಬಿಡು ಹೊರಗೆ

  ಜಗವ ಬೆಚ್ಚಿಸಲಿ, ತಲ್ಲಣಿಸಲಿ
  ಉಕ್ಕಿಸಲಿ ಈ ಭಾವನಾ ಪ್ರವಾಹ
  ಎಲ್ಲ ನಯವಂಚಕತನವ ಗುಡಿಸಿ
  ಒರೆಸಿ, ಮಾಡಲಿ ಕಣ್ಣಂಚ ತೇವ

  ಅಂಥದೊಂದು ಪ್ರವಾಹಕ್ಕಾಗಿ ಕಾಯುತ್ತಿದ್ದೇನೆ.

 6. ವಿಜಯರಾಜ್ ಕನ್ನಂತ ಹೇಳುತ್ತಾರೆ:

  chennagide…..

  ಈ ಕನಸುಗಳೇ
  ರಾಮನಾಮವಾಗಬೇಕಿದೆ…

  raamabaaNavaagabEkide anta idre innoo chennittEnO

 7. ರಂಜಿತ್ ಹೇಳುತ್ತಾರೆ:

  ಗುರುರಾಜ್,

  ಧನ್ಯವಾದಗಳು..:-)

  ಶಶಿಕಿರಣ್,

  ಪರವಾಗಿಲ್ಲ. ಹೇಗೆ ಕರೆದರೂ ಸರಿಯೇ.

  ಹೌದು, ಇದು ನಿಮ್ಮ ಮನಸ್ಸಿಂದ ಕದ್ದಿದ್ದೇ ಇರಬೇಕು. ಪ್ರೀತಿಯ ಕೋರ್ಟಿನಲ್ಲಿ ದಾವೆ ಹೂಡಿ. ನಾ ಸೋಲಲು ತುದಿಗಾಲಲ್ಲಿ ನಿಂತಿರುವೆ..:-)

  ತುಂಬಾ ಥ್ಯಾಂಕ್ಸ್ ಶಶಿಕಿರಣ್…

 8. ರಂಜಿತ್ ಹೇಳುತ್ತಾರೆ:

  ವೈಶಾಲಿ,

  ಯಾಕೆ ಮೌನ ? ಇನ್ನೂ ಸಿಟ್ಟಿದೆಯೆ ? ಮೇಡಂ ಅನ್ನುವುದನ್ನು ಆಗಲೇ ಬಿಟ್ಟಾಯ್ತಲ್ಲ…:-)

  ಬಾಲಕೃಷ್ಣ,

  ನೀವಿಲ್ಲಿ ಬಂದಿದ್ದು ಖುಷಿಕೊಟ್ಟಿತು. ಬಂದುಹೋಗುತ್ತಿರಿ ಆಗಾಗ್ಗೆ.

 9. sambhavami ಹೇಳುತ್ತಾರೆ:

  ಕವಿತೆ ಚೆನ್ನಾಗಿದೆ. ನಾನೂ ಒಂದು ಬ್ಲಾಗ್ ಆರಂಭಿಸಿದ್ದೇನೆ. ಸಂಭವಾಮಿ ಯುಗೇ ಎಂದು ಹೆಸರು. ಬಿಡುವಾದಾಗ ಓದಿ

 10. ರಂಜಿತ್ ಹೇಳುತ್ತಾರೆ:

  ಪಲ್ಲವೀ,

  “ಏನೋ ತಾಗಿತೇನೋ, ಚುಚ್ಚಿತೇನೋ
  ಘಾಸಿಗೊಂಡಿದೆ ಸವಿಗನಸು
  ಎಲ್ಲವನೂ ಹೇಳಲು, ಹಗುರವಾಗಲು
  ತವಕಿಸುತ್ತಿದೆ ಮನಸು

  ಅದು ಒಂಚೂರು ಇರಲಿ ಹಾಗೇ ಮಿತ್ರಾ
  ನಿನ್ನ ಎದೆಯ ಗೂಡಿನೊಳಗೆ
  ಕನಸ ಬಿಸಿಯನಿತ್ತು ಪೋಷಿಸು, ಬೆಳೆಸು
  ಬಲಗೊಳಿಸಿ, ಬಿಡು ಹೊರಗೆ

  ಜಗವ ಬೆಚ್ಚಿಸಲಿ, ತಲ್ಲಣಿಸಲಿ
  ಉಕ್ಕಿಸಲಿ ಈ ಭಾವನಾ ಪ್ರವಾಹ
  ಎಲ್ಲ ನಯವಂಚಕತನವ ಗುಡಿಸಿ
  ಒರೆಸಿ, ಮಾಡಲಿ ಕಣ್ಣಂಚ ತೇವ”

  ಎಷ್ಟು ಮುದ್ದಾಗಿದೆ ಕವನ. ಇದನ್ನು ಕಾಮೆಂಟ್ ನಲ್ಲಿ ಯಾಕೆ ಹಾಕಿದಿರಿ ?

  ಹೌದು, ಮಾಗಿದ್ದರೆ ಕವಿತೆಯ ಹಣ್ಣು ಇನ್ನೂ ಪಸಂದಾಗಿರುತ್ತಿತ್ತು. ಅಲ್ಲದೇ ಕೊನೆಯ ಪ್ಯಾರದಲ್ಲಿ ’ಏಕೆಂದರೆ’ ಪದ ಓದುವ ಹರಿವಿಗೆ ಅಡ್ಡಿಯಾಯಿತೆನ್ನಿಸಿತು.

  ಮುಂದಿನ ಸಲ ಸರಿಪಡಿಸಿಕೊಳ್ಳುವೆ. ಹೇಗಿದ್ದರೂ ಇನ್ನೂ ೭೫ ವರ್ಷ ಬರೆಯುವುದಿದೆಯಲ್ಲಾ..:-)

  ಹಾಗೆಯೇ ಪ್ರವಾಹಕ್ಕೂ ಅಣಿಯಾಗಿ…;-)

 11. ರಂಜಿತ್ ಹೇಳುತ್ತಾರೆ:

  ವಿಜಯರಾಜ್,

  ಆ ಹುಡುಗ ಪಾಪ… ಆ ಸ್ಥಿತಿಯಲ್ಲಿ ವಾಸ್ತವದ ಜತೆ ಹೇಗೆ ಯುದ್ದ ಮಾಡುತಾನೆ?!

  ಅವನಿಗೆ ಹೇಗೋ ತಾನು ಉಳಿದರೆ ಸಾಕಾಗಿದೆ…. ಅದಕ್ಕೇ ರಾಮನಾಮ..:-)

  ಥ್ಯಾಂಕ್ಸ್ ಸರ್…

  ಸಂಭವಾಮಿ,

  ಖಂಡಿತಾ ಬರುವೆ. ಕೃಷ್ಣ ನ ಉವಾಚವನ್ನೇ ಹೆಸರಿಟ್ಟಿದ್ದೀರಿ. ಬ್ಲಾಗು ಲೋಕವನ್ನೂ ಅಧರ್ಮಗಳಿಂದ ರಕ್ಷಿಸಿ..:-)

 12. ಶಿವು.ಕೆ ಹೇಳುತ್ತಾರೆ:

  ಕವನ ಚೆನ್ನಾಗಿದೆ.

  ಶಿವು.ಕೆ.

 13. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಸ್ ಶಿವು …

 14. ಪಲ್ಲವಿ ಎಸ್‌ ಹೇಳುತ್ತಾರೆ:

  ಎಪ್ಪತ್ತೈದು ವರ್ಷಗಳ ಕಾಲ ನೀವು ಬರೆಯುವಂತಾಗಲಿ.

  ಹಾಗೇ, ನಾವೂ ಅದನ್ನು ಓದಿ ಪ್ರತಿಕ್ರಿಯೆ ನೀಡುವಂತಾಗಲಿ 🙂

 15. ರಂಜಿತ್ ಹೇಳುತ್ತಾರೆ:

  ಅಯ್ಯೋ ಪಲ್ಲವೀ.. ಸುಮ್ಮನೆ ಹೇಳಿದೆ…

  ೭೫ ವರ್ಷ ಬೇಡವೇ ಬೇಡ… ಇರುವಷ್ಟು ದಿನ ನಾನು ಈಗ ಇರುವ ಹಾಗೆ ನಗುತ್ತಾ ಇರು ಕಣೋ ಅನ್ನಿ ಸಾಕು..:-)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s