ಮುತ್ತಾದೀತಾ ಈ ಹನಿಗಳು?

Posted: ಅಕ್ಟೋಬರ್ 25, 2008 in ಹನಿಗಳು...

*********

ಎಷ್ಟೊಂದು ಶುಭ್ರವಿತ್ತು
ನೀಲ ನಭ,
ಕತ್ತಲಾದೊಡೆ
ಬಣ್ಣ ಬಯಲಾಯಿತು,

ಬಾನು
ತೂತು ಚಪ್ಪರವಾಯಿತು.

******

ಅದ್ಭುತ ಮುನ್ನುಡಿ,
ಆಕರ್ಷಕ ಬೆನ್ನುಡಿ,
ಮಧ್ಯೆ ಅರ್ಥವಾಗದ
ಭಾಷೆಯ ಸಾಲುಗಳು,

ಇವು ಹೆಣ್ಣೆಂಬ ಪುಸ್ತಕ !

*******

ಹೇಗೆ ಬಣ್ಣಿಸಲಿ
ಹುಡುಗಿಯರ ಹಿರಿಮೆ,

ಹಗಲಲ್ಲೇ
ಕಣ್ಣಲ್ಲೇ
ಹೊತ್ತು ತಿರುಗುವರಲ್ಲ
ಹುಣ್ಣಿಮೆ..!

 

*********

ಬೆಟ್ಟದ ನಡುವೆ ಇಳಿವ
ನೇಸರನಂತೆ
ನೊಸಲ ಬಿಂದಿ,

ಹಣೆಯ ಕಣಿವೆಯಲಿ
ಹುಬ್ಬಿನ ಬೇಲಿ,

ಕಾಡಿಗೆ ಕಾಡೊಳಗೆ
ರೆಪ್ಪೆಯ ಸಾಲುಮರ,

ಮಧ್ಯೆ ಚಂಗನೆ
ನೆಗೆದಾಡುತಿರುವ
ಜೋಡಿ ಜಿಂಕೆ !

**********

ನೀನಿದ್ದರೆ ನನ್ನ ಪಕ್ಕ,
ಕಾಳಿದಾಸನೇ ಯಾವ ಲೆಕ್ಕ?!

ಮೀರಿಸುತ ಅವನನ್ನು,
ಬಣ್ಣಿಸುವೆ ನಿನ್ನನ್ನು

ನಿನ್ನ ಗೆದ್ದರೆ ಸರಸದಿ
ಕವಿಯಾಗುವೆ..

ನೀನು ಒದ್ದರೆ ವಿರಹದಿ ಅನು
-ಭವಿಯಾಗುವೆ!

 

********

Advertisements
ಟಿಪ್ಪಣಿಗಳು
 1. ಬಾಲ ಹೇಳುತ್ತಾರೆ:

  ಖಂಡಿತವಾಗಿ, ಮುತ್ತುಗಳಾಗಿವೆ ನಿಮ್ಮ ಎಲ್ಲಾ ಹನಿಗಳು.
  ಇವು ಹೆಣ್ಣೆಂಬ ಪುಸ್ತಕ ! ಮೆಚ್ಚುಗೆಯಾಯಿತು.

  ಇದರ ಬದಲಿಗೆ “ಇದು ಬದುಕೆಂಬ ಪುಸ್ತಕ !” ಎಂದಿದ್ದರೆ?

 2. ರಂಜಿತ್ ಹೇಳುತ್ತಾರೆ:

  ಧನ್ಯವಾದಗಳು ಬಾಲಕೃಷ್ಣ …

  ಬದುಕಾದರೆ ಅರ್ಥಮಾಡಿಕೊಳ್ಳಬಹುದು….

  ಆದರೆ ಹುಡುಗಿಯರ ಮನ ಅರ್ಥವಾಗುವುದು ಹೇಗೆ?

  ನಿಮಗೆಲ್ಲಾದರೂ ಆ ಕಲೆ ಸಿದ್ದಿಸಿದ್ದರೆ ತಿಳಿಸಿ…

  ಅರ್ಜೆಂಟಾಗಿ ನಿಮ್ಮನು ಭೇಟಿಯಾಗಬೇಕಾಗುತ್ತದೆ!:-).:-)

 3. sunaath ಹೇಳುತ್ತಾರೆ:

  ಖಂಡಿತವಾಗಿಯೂ ಇವು ಮುತ್ತುಗಳೇ!

 4. ಪಲ್ಲವಿ ಎಸ್‌ ಹೇಳುತ್ತಾರೆ:

  ಪ್ರೀತಿಯ ರಂಜಿತ್‌,

  ಹೇಗಿದೆ ದೀಪಾವಳಿ? ಹಬ್ಬ ಮುಗಿಸಿಕೊಂಡು ವಾಪಸ್‌ ಹೋಗವವರೆಗೆ ಸಾಕಾಗುವಷ್ಟು ಉತ್ತಮ ಊಟವನ್ನು ಬಡಿಸಿಯೇ ಬ್ಲಾಗ್‌ಗೆ ಬೀಗ ಹಾಕಿ ಹೋಗಿದ್ದೀರಿ.

  ”ಹೇಗೆ ಬಣ್ಣಿಸಲಿ
  ಹುಡುಗಿಯರ ಹಿರಿಮೆ,

  ಹಗಲಲ್ಲೇ
  ಕಣ್ಣಲ್ಲೇ
  ಹೊತ್ತು ತಿರುಗುವರಲ್ಲ
  ಹುಣ್ಣಿಮೆ..!”

  ಸಕತ್ತಾಗಿವೆ ಸಾಲುಗಳು.

  ಹಗಲು ದೀಪದ ಬೆಳಕು ಮಂಕು ಎಂಬುದನ್ನು ಮರೆತಿರಾ? ಅದನ್ನು ಮರೆತು ಓದಿದ್ದಕ್ಕೇ ನನಗೆ ಕವನ ಇಷ್ಟವಾಯಿತು.

  ಹಗಲಿಗೆ ಸೂರ್ಯ
  ರಾತ್ರಿಗೆ ಚಂದ್ರಮ

  ಪಾಪ ವಸುಂಧರೆ

  ಅವಳ ಗೋಳು ಕಂಡರೂ
  ಕಣ್ಣು ಮಿಟುಕಿಸುತ್ತಿವೆ ನಕ್ಷತ್ರ

  ಇನ್ನು ಹುಣ್ಣಿಮೆ ಕಣ್ಣಲ್ಲಿ ಹೊತ್ತು
  ತಿರುಗುವ ಹುಡುಗಿಯರ ಕಷ್ಟ
  ಪಾಪ, ನಿಮಗೇನು ಗೊತ್ತು?

  – ಪಲ್ಲವಿ ಎಸ್‌.

 5. ರಂಜಿತ್ ಹೇಳುತ್ತಾರೆ:

  ಪಲ್ಲವೀ,

  ದೀಪಾವಳಿ ಮಸ್ತ್ ಆಗಿದೆ.. ಗೆಳೆಯರು, ಊರು ಇವೆಲ್ಲಾ ಎಷ್ಟು ಇಷ್ಟ ಆಗ್ತಿದೆ ಅಂದ್ರೆ ಮತ್ತೆ ಹೊರಡಬೇಕಲ್ಲ ಅನ್ನುವ ಚಿಕ್ಕ ಬೇಜಾರೊಂದು ಮನದ ಮೂಲೆಯಲ್ಲಿ ಆಗಲೇ ಹೊಂಚು ಹಾಕ್ತಿದೆ…

  ಬೆಳದಿಂಗಳು ಅಂದ್ರೆ ಬರೀ ಬೆಳಕಲ್ಲ …. ಇನ್ನು ಏನೆಲ್ಲಾ ಇದೆ ಅದರಲ್ಲಿ .. ಹುಡುಗೀರ ಕಣ್ಣು ನನಗೆ ಅದೆಲ್ಲ ಹೇಳ್ತಾವಪ್ಪ..;-)

  ಪಲ್ಲವಿ, ನಿಮ್ಮ ಕವನ ನಿಜವಾಗಲೂ ಚೆನ್ನಾಗಿದೆ… ಅಷ್ಟು ಕಷ್ಟ ಆಗ್ತವೇನ್ರಿ ಹುಡುಗೀರಿಗೆ ಪಾಪ ?

  ಅಂದ ಹಾಗೆ ಬ್ಲಾಗಿಗೆ ಬೀಗ ಹಾಕಿಲ್ಲ…:-)

 6. ರಂಜಿತ್ ಹೇಳುತ್ತಾರೆ:

  ಸುನಾತ್,

  ಧನ್ಯವಾದಗಳು..

 7. ಪಲ್ಲವಿ ಎಸ್‌. ಹೇಳುತ್ತಾರೆ:

  ಪ್ರೀತಿಯ ರಂಜಿತ್‌,

  ಢಾಳ ಬೆಳಕಿನ ನಡುವೆಯೂ ಹುಣ್ಣಿಮೆಯ ಮೆದು ಬೆಳಕನ್ನು ಹುಡುಕುವ ನಿಮ್ಮದು ನಿಜಕ್ಕೂ ಕವಿತೆಯ ಕಣ್ಣುಗಳು. ಅದಕ್ಕೆಂದೇ ಕವಿತೆ ನಿಮಗೆ ಒಲಿದಿದೆ. ಯಥಾಪ್ರಕಾರ ನನಗೆ ಅಸೂಯೆ 🙂

  ದೀಪಾವಳಿ ಹೇಗೆ ಆಚರಿಸಿದಿರಿ? ಅದರ ಬಗ್ಗೆಯೂ ಬರೀರಿ.

 8. Kallare ಹೇಳುತ್ತಾರೆ:

  modala mooroo barahagaloo ishta aadvu…. nice

 9. ರಂಜಿತ್ ಹೇಳುತ್ತಾರೆ:

  ಪಲ್ಲವೀ,

  ಈಗಾಗಲೇ ಚಳಿಯ ಬಗ್ಗೆ ಬರೆಯಿರಿ ಎಂಬ ನಿಮ್ಮ ಮಾತನ್ನು ಇನ್ನೂ ಪೂರೈಸಿಲ್ಲ ನಾನು. ನಮ್ಮೂರಲ್ಲಿ ಚಳಿ ಇನ್ನೂ ಕಾಲಿಟ್ಟಿಲ್ಲ. ನೀವು ಒಂದು ಮುಟಿಕೆ ಚಳಿ ಕಳುಹಿಸಿದರೆ ಆ ಸಾಲವನ್ನು ಮೊದಲು ತೀರಿಸುವೆ..:-)

  ದೀಪಾವಳಿ ಬಗ್ಗೆ ಖಂಡಿತ ಬರೆಯುವೆ. ಬೆಂಗಳೂರಿಗೆ ಕಾಲಿಟ್ಟೊಡೆ ಇಂಜಿನೀರಿಂಗ್ ಮಿತ್ರರೆಲ್ಲ ತಮ್ಮ ತಮ್ಮ ಖುಷಿ ಹಂಚಿಕೊಂಡರು..ಸುಪ್ರೀತ್ ಆಗಲೇ ಬ್ಲಾಗು ಬರಹ ಮತ್ತೆ ಶುರು ಮಾಡಿದ್ದಾನೆ , ಹೇಮಾ ಗು ಜ್ಞಾನೋದಯ ಆದ ಹಾಗಿದೆ.. ಸೋಮ ಹೊಸ ಬದುಕು ಆರಂಭಿಸಿದ್ದಾನೆ … ನಿಮ್ಮದೂ ಖಿನ್ನತೆ ಓಡಿಹೋದ ಹಾಗಿದೆ..ಕುಂದಾಪುರದ ಗೆಳೆಯರಿಗೆಲ್ಲ ತಮ್ಮ ವ್ಯವಹಾರದಲ್ಲಿ ಲಾಭ ಆಗುತ್ತಿದೆ. ..

  ಅಮ್ಮ ನ ಅಡುಗೆಮನೆಯಲಿ ಈಗೆಲ್ಲ ಬಲು ಕೆಲಸ! ಅಣ್ಣ ಹೊಸ ಲ್ಯಾಪ್‌ಟೋಪ್ ನ ಸಂತಸದಲ್ಲಿದ್ದಾನೆ…

  ಖುಷಿಯ ಕ್ಷಣಗಳ ಅಮಲಿನಲ್ಲೇ ಇರುವ ಕಾರಣ ಬರೆಯುವುದನ್ನು ಮುಂದೆ ಹಾಕುತ್ತಿದ್ದೇನೆ.

 10. ರಂಜಿತ್ ಹೇಳುತ್ತಾರೆ:

  ಕಲ್ಲಾರೆ,

  ತುಂಬಾ ಧನ್ಯವಾದಗಳು..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s