ನಡುಗುವ ಚಳಿಯಲಿ ತುಸು ತುಂತುರು …

Posted: ನವೆಂಬರ್ 2, 2008 in ಹನಿಗಳು...

 

ಬೆರಳಲಿ ಬೆರಳು ಹುದುಗಿಸಿ
ಸುಮ್ಮನೊಂದು
ವಾಕಿಂಗಿಗೆ ಹೋಗಿ ಬರೋಣ..
ಚಳಿಯೆಂದು ಒದ್ದಾಡುತಿರುವ
ಊರ ಜನರು ನಮ್ಮ ಪ್ರೀತಿ ನೋಡಿ
ಹೊಟ್ಟೆ ಕಿಚ್ಚಿನಿಂದಾದರೂ
ಬದುಕಿಕೊಳ್ಳಲಿ..

********

 

ಪ್ರೀತಿ ತೋರದ ನಿರ್ಜೀವ ಕೌದಿ
ಕಂಬಳಿ ಯೆಲ್ಲವ ಒದ್ದು
ನಿದಿರೆ ಬರಲೇ ಬೇಕಾದರೆ
ಮಲಗಬೇಕಿದೆ ನಿನ್ನನ್ನಷ್ಟೇ ಹೊದ್ದು..!

 

************

 

ಮರೆತು ಎಲ್ಲಾ ವೈಮನಸ್ಸನ್ನು
ಹುಸಿಮುನಿಸನ್ನು
ನಾವಿಬ್ಬರೂ  ಜತೆಯಾಗಿಯೇ
ಜಯಿಸಬೇಕಿದೆ
ಈ ಚುಮು ಚುಮು ಚಳಿಯನ್ನು !

 

************

 

ಸಂಕಟ ವೆಲ್ಲ ಅರ್ಥವಾಗುತದೆ
ಬಾಸಿಗೆ
ಈ ನಾಕು ತಿಂಗಳು
ತಡ ವಾಗಿ ಬಂದರೂ
ಪರವಾಗಿಲ್ಲ
ಆಫೀಸಿಗೆ!

Advertisements
ಟಿಪ್ಪಣಿಗಳು
 1. ಪಲ್ಲವಿ ಎಸ್‌ ಹೇಳುತ್ತಾರೆ:

  ಪ್ರೀತಿಯ ರಂಜಿತ್‌,

  ಪಟಾಕಿಗಳೆಲ್ಲ ದೀಪಾವಳಿಗೇ ಖಾಲಿಯಾದವು ಅಂತ ತಪ್ಪು ತಿಳಿದುಕೊಂಡಿದ್ದೆ.

  ಆದರೆ,
  ”ಬೆರಳಲಿ ಬೆರಳು ಹುದುಗಿಸಿ
  ಸುಮ್ಮನೊಂದು
  ವಾಕಿಂಗಿಗೆ ಹೋಗಿ ಬರೋಣ..
  ಚಳಿಯೆಂದು ಒದ್ದಾಡುತಿರುವ
  ಊರ ಜನರು ನಮ್ಮ ಪ್ರೀತಿ ನೋಡಿ
  ಹೊಟ್ಟೆ ಕಿಚ್ಚಿನಿಂದಾದರೂ
  ಬದುಕಿಕೊಳ್ಳಲಿ..”

  ಎಂದು ಬರೆಯುವ ಮೂಲಕ, ಇನ್ನೂ ಲಕ್ಷ್ಮೀ ಪಟಾಕಿಗಳು, ಆನೆ ಪಟಾಕಿಗಳು ಸಾಕಷ್ಟಿವೆ ಎಂಬುದನ್ನು ತೋರಿಸಿಕೊಟ್ಟಿದ್ದೀರಿ.

  ಬೆಳಗುತ್ತಲೇ ಇರಲಿ ನಿಮ್ಮ ಕವನಗಳು. ಚಳಿಗಾಲದುದ್ದಕ್ಕೂ ಬೆಳಕಿನ ಜೊತೆಗೆ ಬಿಸಿಯನ್ನೂ ನೀಡುತ್ತಿರಲಿ.

 2. uniquesupri ಹೇಳುತ್ತಾರೆ:

  ಅಡಿಗರೇ
  ಬೆಂಗಳೂರಿನ ಚಳಿಯಲ್ಲಿ ನಡುಗುತ್ತಾ, ಕಟಕಟನೇ ಹಲ್ಲು ಕಡಿಯುತ್ತಾ ನಿಮ್ಮ ಕವಿತೆಗಳನ್ನು ಓದಿದರೆ ಹೊಟ್ಟೆ ಕಿಚ್ಚಾಗಿ ಮೈ ಸ್ವಲ್ಪ ಬೆಚ್ಚಗಾಗುವುದು ಖರೆ!

  ಸುಪ್ರೀ

 3. ವೈಶಾಲಿ ಹೇಳುತ್ತಾರೆ:

  ಚಳಿಗಾಲ ಬಂದದ್ದಕ್ಕೂ ಸಾರ್ಥಕವಾಯ್ತು! 😉

 4. Bhargavi ಹೇಳುತ್ತಾರೆ:

  Namaskara Ranjith avre nijavaglu chalegala da bagge thumba changi varnisidera e galakku mahatva ede antha nijavaglu egle gottagiddu
  Thumba chanage ede

 5. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ರಂಜಿತ್,
  ಕುಂದಾಪುರದಲ್ಲಿ ಚಳಿ ಇದೆಯಾ, ಬರೀ ಸೆಕೆ ಅಂತ ಕೇಳಿದ್ದೆ 🙂 ತುಂಬ ಚನಾಗಿದೆ ಕಣ್ರೀ ಚುಟುಕುಗಳು. ಊರ ಪರಿಸರ ನೋಡಿ ಹೇಗೆ ನಿಮ್ಮೊಳಗಿರೋ ಕವಿನ ಎಚ್ಚರಿಸುತ್ತೆ ಅಂತ 🙂

 6. Kallare ಹೇಳುತ್ತಾರೆ:

  ಚಳಿಗೂ ಹೊಟ್ಟೆಕಿಚ್ಹಾಗ್ತಿದ್ಯೇನೋ ಆಲ್ವಾ??

 7. ವಿಜಯರಾಜ್ ಕನ್ನಂತ ಹೇಳುತ್ತಾರೆ:

  Nice ones…modalaneyadu typical Ranjith Style….

 8. sunaath ಹೇಳುತ್ತಾರೆ:

  ನಿಮ್ಮ ಶಾಯರಿ ಓದಿ ಮೈಯೆಲ್ಲಾ ಬೆಚ್ಚಗಾಯ್ತು. ಚಳಿ ಎಲ್ಲಿಂದ ಬರಬೇಕು?

 9. Roopa Satish ಹೇಳುತ್ತಾರೆ:

  tumba chennagide ranjith…

  padagalu, saalugalu, bhaavagalu…
  yellavu nidhaanavaagi
  chaliya kampannu soosuvantide..

  :-))

 10. ರಂಜಿತ್ ಹೇಳುತ್ತಾರೆ:

  ಪ್ರೀತಿಯ ಪಲ್ಲವಿ,

  ನನಗೆ ಚಳಿಯ ಬಗ್ಗೆ ಬರೆಯಲು ಹೇಳಿ ಪ್ರೇರೇಪಿಸಿದವರು ನೀವಲ್ಲವೇ?

  ಅದಕ್ಕೆ ನಿಮಗೆ ಧನ್ಯವಾದಗಳು.

 11. ರಂಜಿತ್ ಹೇಳುತ್ತಾರೆ:

  ಸುಪ್ರೀತ್,

  ಅಂತೂ ನೀವು ಕೂಡ ನನ್ನ ಮತ್ತು ಹೊಟ್ಟೆಹುಣ್ಣಿನ ವೈದ್ಯರ ಬಲೆಗೆ ಬಿದ್ದಿರಿ ಎಂದಾಯ್ತು..:-)

  ವೈಶಾಲಿ,

  ಚಳಿ ಇಲ್ಲಿ ನಿಮ್ಮೂರಿನಷ್ಟಿಲ್ಲ ಮೇಡಂ… ಬಹುಶಃ ನೀವು ಹಾಕಿಕೊಂಡ ಫೋಟೋಗಳ ಪ್ರಭಾವದಿಂದಲೇ ಬರೆಯಲು ಸಾಧ್ಯವಾಯ್ತೊ ಎನೋ.. 🙂

  ಥ್ಯಾಂಕ್ಸ್ ಭಾರ್ಗವಿ..:-)

 12. ರಂಜಿತ್ ಹೇಳುತ್ತಾರೆ:

  ಕಲ್ಮನೆಯವರೆ,

  ಇಲ್ಲಾರಿ.. ಚಳಿನೇ ಇಲ್ಲ ಊರಲ್ಲಿ. ಹೇಗೆ ಕಲ್ಪನೆಯಲ್ಲಿ ಕಾವ್ಯಕನ್ನಿಕೆ ಅರಳುವಳೋ ಹಾಗೆ ಅಷ್ಟೇ… ಪರಿಸರ ಸಹಕರಿಸಿಲ್ಲ..:-)

  ********
  ಕಲ್ಲಾರೆ,

  ನಿಜ ನಿಜ..:-) ನಾನೂ, ನನ್ನಾಕೆ ಹೀಗೆ ವಾಕಿಂಗಿಗೆ ಹೋಗುತ್ತಿದ್ದರೆ, ಸುತ್ತಮುತ್ತ ಮುತ್ತಿದ ಚಳಿಗೂ ಹೊಟ್ಟೆಕಿಚ್ಚು..:-)

 13. ರಂಜಿತ್ ಹೇಳುತ್ತಾರೆ:

  ವಿಜಯರಾಜ್,

  ಥ್ಯಾಂಕ್ಯೂ ಸರ್…

  *******

  ಸುನಾತ್,

  “ಏನು ಮಾಡೀತು
  ಚಳಿಯ
  ಉಳಿ..
  ಇರುವಾಗ ಪ್ರೀತಿಯ
  ಕವನದ ಕಂಬಳಿ
  ಕವಚದಂತೆ
  ನಮ್ಮ ಬಳಿ..”
  🙂

 14. ರಂಜಿತ್ ಹೇಳುತ್ತಾರೆ:

  ರೂಪ ಮೇಡಂ,

  ನೀವೂ ಚಂದಗೆ ಬರೀತೀರಿ.
  ನಿಮ್ಮಲ್ಲಿ ಚಳಿಯ ಪೆಟ್ಟು ಉಳಿಯಂತೆ ತಟ್ಟುತ್ತದಲ್ಲವೆ? ಅದರ ಬಗ್ಗೆ ಬರೆವ ಪ್ರಯತ್ನ ಮಾಡಿ..
  ನಿಮ್ಮ ಪ್ರೀತಿಗೆ ಥ್ಯಾಂಕ್ಸ್..

 15. ಶಿವು.ಕೆ ಹೇಳುತ್ತಾರೆ:

  ಚಳಿ ಕವನಗಳು ಚೆನ್ನಾಗಿವೆ ಮಾರಾಯ್ರೇ…. ಓದಿ ಮತ್ತಷ್ಟು ಚಳಿಯಾಯ್ತು!! ಹಾಗೆ ನನ್ನ ಬ್ಲಾಗಿನಲ್ಲಿ ಚಳಿ ಟೋಪಿಗಳೂ ಸೇರಿದಂತೆ ಹೊಸ ಟೋಪಿ ವಿಚಾರವೊಂದಿದೆ ಬನ್ನಿ.

 16. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಯೂ ಶಿವು…

  ಟೋಪಿ ವಿಚಾರಗಳೇ? ಖಂಡಿತ ಬರ್ತೀನಿ ಹಾಗಾದ್ರೆ…

 17. Manjunatha ಹೇಳುತ್ತಾರೆ:

  ಚಳಿಯೆಂದು ಒದ್ದಾಡುತಿರುವ
  ಊರ ಜನರು ನಮ್ಮ ಪ್ರೀತಿ ನೋಡಿ
  ಹೊಟ್ಟೆ ಕಿಚ್ಚಿನಿಂದಾದರೂ
  ಬದುಕಿಕೊಳ್ಳಲಿ..

  Good imagination

 18. svatimuttu ಹೇಳುತ್ತಾರೆ:

  anna 1st & last one tumba chennagide..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s