ನನ್ನವಳಿಗೆ…

Posted: ನವೆಂಬರ್ 8, 2008 in ಕವಿತೆ

1935578256_4d433da28d1

ನೀನೇನೂ ಸುರ
ಸುಂದರಿಯಾಗಿರುವ
ಅಗತ್ಯವಿಲ್ಲ,
ಎಂಥ ಸೌಂದರ್ಯವೂ
ಹತ್ತು ವರ್ಷದ ಬಳಿಕ
ಫ್ರೇಮಿನೊಳಗಿನ
ಚಿತ್ರವಾಗುತದೆ..

ಪಾಕಶಾಸ್ತ್ರ ತಿಳಿದಿರಬೇಕೆಂದಿಲ್ಲ,
ಅಕ್ಕಿಗೆ ನೀರು ಹಾಕಿ ಪ್ರೀತಿಯಿಂದ
ಕದಡಿದರೆ ಮೂಡುವ ಗಂಜಿಯಿಂದಲೂ
ಹೊಟ್ಟೆ ತುಂಬೀತು…

ವೀಣೆ, ಸಂಗೀತ ಗೊತ್ತಿರಬೇಕೆಂದಿಲ್ಲ,
ನೀ ಹಾಗೆ ಸುಮ್ಮನೆ ಮಾತಾಡುತ್ತಿದ್ದರೆ
ಸ್ವರಗಳೆಲ್ಲಾ ತೇಲಿ ಬಂದಂತೆ ಅಂದುಕೊಳ್ಳುವೆ,
ಮಾತು ಮಾತಿಗೂ ಹೊಸ ರಾಗವ
ಕಲ್ಪಿಸಿಕೊಳ್ಳುವೆ…

ಬದುಕಿನಲ್ಲಿ ಬಿದ್ದಿದ್ದೇನೆ, ಎದ್ದಿದ್ದೇನೆ,
ಗಾಯಗಳೊಂದಿಗೆ ಸಂಧಾನ
ಮಾಡಿಕೊಂಡಿದ್ದೇನೆ.
ಕ್ಷಣ ಕ್ಷಣವೂ ಕಲಿತುಕೊಳ್ಳುತ್ತಾ
ಇಪ್ಪತ್ತೈದು ವರ್ಷಗಳ ಅನುಭವ
ಕಲೆಹಾಕಿಕೊಂಡಿರುವೆ,

ಬಹುಶಃ ನನ್ನ ಹಾಗೆಯೇ ನೀನೂ ಕೂಡ.

ಇಂಥ ಬದುಕನ್ನು ನಿನಗೆ ನಾನು,
ನನಗೆ ನೀನು ಉಡುಗೊರೆಯಾಗಿ
ನೀಡುತಿರುವಾಗ

ನಮ್ಮಯ ಮನಸ್ಸನ್ನು
ಅದಕ್ಕೆ ತಕ್ಕುದಾಗಿಸಿಕೊಳ್ಳೋಣ..
ಇನ್ನೂ ಮುಕ್ಕಾಲು ಜೀವಿತ
ಸವಿಯುತ ಸವೆಯಿಸಬೇಕಿದೆ
ಬದುಕನ್ನು ಒಪ್ಪವಾಗಿಸಿಕೊಳ್ಳೋಣ..!

Advertisements
ಟಿಪ್ಪಣಿಗಳು
 1. Gururaj ಹೇಳುತ್ತಾರೆ:

  Ranjith – You strike again, very beautiful one… Keep it up!

  ನೀನೇನೂ ಸುರ
  ಸುಂದರಿಯಾಗಿರುವ
  ಅಗತ್ಯವಿಲ್ಲ,
  ಎಂಥ ಸೌಂದರ್ಯವೂ
  ಹತ್ತು ವರ್ಷದ ಬಳಿಕ
  ಫ್ರೇಮಿನೊಳಗಿನ
  ಚಿತ್ರವಾಗುತದೆ..

  Very well said, beauty is not till eternity and it lies in the eyes of the beholder.

 2. chetana chaitanya ಹೇಳುತ್ತಾರೆ:

  ಇಷ್ಟವಾಯ್ತು

 3. ಅನಾಮಿಕ ಹೇಳುತ್ತಾರೆ:

  ಕವನ ತುಂಬಾ ಚೆನ್ನಾಗಿದೆ.

  ಏನೆ ಹೇಳಿದರೂ..ವಾಸ್ತವದಲ್ಲಿ..
  .ಹತ್ತು ವರ್ಷ ಮೊದಲು…
  ಸ್ವಲ್ಪ ಸೌಂದರ್ಯ ಬೇಕೆ ಬೇಕು..
  ಅನಿಸುತ್ತದೆ….

 4. ಶಿವು.ಕೆ ಹೇಳುತ್ತಾರೆ:

  ರಂಜಿತ್,
  ಕವನ ತುಂಬಾ ಹಿತವಾಗಿದೆ ಮತ್ತು ಸರಳವಾಗಿದೆ. ಒಟ್ಟಾರೆ ಚೆನ್ನಾಗಿದೆ. ನನಗೆ ಮೊದಲನೆ ಭಾಗ ತುಂಭಾ ಇಷ್ಟವಾಯಿತು ಅದರಲ್ಲೂ “ಹತ್ತು ವರ್ಷಗಳ ಬಳಿಕ ಪ್ರೇಮಿನ ಚಿತ್ರವಾಗುತ್ತದೆ” ಪದ ಪ್ರಯೋಗವಂತೂ ಸೂಪರ್!

 5. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಸ್ ಗುರುರಾಜ್,

  ***

  ಚೇತನಾ,

  ನನಗೆ ನಿಮ್ಮಂಥವರು ಈ ಪುಟ್ಟ ಬ್ಲಾಗಿಗೆ ಬಂದಿದ್ದೂ ಇಷ್ಟವಾಯ್ತು..:-)

 6. ರಂಜಿತ್ ಹೇಳುತ್ತಾರೆ:

  *******

  ಅನಾನಿಮಸ್,

  ನಿಮ್ಮ ಹೆಸರು ಸೂಚಿಸಿದ್ದಿದ್ದರೆ ಇದರ ಕುರಿತು ಚರ್ಚಿಸಬಹುದಿತ್ತು…

  ********

  ಥ್ಯಾಂಕ್ಸ್ ಶಿವು,

  ಮೊದಲ ಭಾಗ ಇಷ್ಟವಾಯಿತೆ?

  ನನ್ನುದ್ದೇಶ ಪ್ರೀತಿಸುವ ಮೊದಲು ಪ್ರತಿ ಹೃದಯವೂ ಕೊನೆಯ ಪ್ಯಾರಾದಲ್ಲಿದ್ದಂತೆ ಪ್ರಶ್ನಿಸಿಕೊಳ್ಳಬೇಕು, ತನ್ನ ಬದುಕನ್ನು ವಿಮರ್ಶಿಸಿ ಉತ್ತಮಪಡಿಸಿಕೊಳ್ಳಬೇಕು ಎಂಬುದಾಗಿತ್ತು.

 7. ಪಲ್ಲವಿ ಎಸ್‌. ಹೇಳುತ್ತಾರೆ:

  ಮನಸಿನೊಳಗೆ ಮೂಡಿದ ಮಾತು ಸ್ವಗತದಂತೆ ಕವಿತೆಯಾಗಿ ಮೂಡಿ ಬಂದಿದೆ.

  ಮತ್ತೇನೂ ತೋಚುತ್ತಿಲ್ಲ 🙂

 8. ವಿಜಯರಾಜ್ ಕನ್ನಂತ ಹೇಳುತ್ತಾರೆ:

  nice….
  dil ko dekho… cheharaa na dekho….
  cheharOn ne laakhon ko looTaa…. 🙂

 9. Rohini ಹೇಳುತ್ತಾರೆ:

  ranjithavare
  niv helidante preethi vishayadalli roopa agathyavalla
  hagene ninu hegiddaru ninu nannavale antha chennagi tilisiddira
  ಬದುಕಿನಲ್ಲಿ ಬಿದ್ದಿದ್ದೇನೆ, ಎದ್ದಿದ್ದೇನೆ,
  ಗಾಯಗಳೊಂದಿಗೆ ಸಂಧಾನ
  ಮಾಡಿಕೊಂಡಿದ್ದೇನೆ.
  ಕ್ಷಣ ಕ್ಷಣವೂ ಕಲಿತುಕೊಳ್ಳುತ್ತಾ
  ಇಪ್ಪತ್ತೈದು ವರ್ಷಗಳ ಅನುಭವ
  ಕಲೆಹಾಕಿಕೊಂಡಿರುವೆ,
  swantha anubhavana matalli helodanna kavitheli baredidira

  chennagide

 10. ರಂಜಿತ್ ಹೇಳುತ್ತಾರೆ:

  ವಿಜಯ್ರಾಜ್ ಜಿ,

  ರವಿಚಂದ್ರನ್ ರ ಹಠವಾದಿ ಚಿತ್ರದ “ಮುಖದಲ್ಲೇನಿದೆ, ಮನಸಲ್ಲೆಲ್ಲಾ ಇದೆ” ಗೀತೆ ಕೂಡ ನೆನಪಾಗುತ್ತೆ:)

 11. ರಂಜಿತ್ ಹೇಳುತ್ತಾರೆ:

  ರೋಹಿಣಿ,

  ಧನ್ಯವಾದಗಳು.

  ಪ್ರೀತಿಸುವವರೆಲ್ಲಾ ಈ ಥಿಯರಿ ಅರ್ಥೈಸಿಕೊಂಡರೆ ಬದುಕು, ಸಮಾಜ ಎಲ್ಲವೂ ಚೆನ್ನಾಗಾಗುತ್ತದೆಂಬ ಆಸೆ ಅಷ್ಟೇ.

 12. ಪ್ರದೀಪ್ ಹೇಳುತ್ತಾರೆ:

  ನೀಲಿ ಹೂವಿಗೆ ಜೈ ಜೈ ! 😀

 13. ರಂಜಿತ್ ಹೇಳುತ್ತಾರೆ:

  ನಿಮ್ಮ ಮನದಲ್ಲಿ ಮೂಡಿದ ಜೈಕಾರ…

  ಹೂವಿನೆದೆಯಲಿ ನಲಿವಿನ ಝೇಂಕಾರ..:)

 14. ರೇಶ್ಮಾ ಹೇಳುತ್ತಾರೆ:

  ಚೆನ್ನಾಗಿದೆ… ಇಷ್ಟವಾಯ್ತು…:)

 15. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಸ್ ರೇಶ್ಮಾ,

  ನಿಮ್ಮ ವಿವರಗಳನ್ನು ಅಡಗಿರಿಸಿಕೊಂಡಿದ್ದೀರಿ….

  ನನ್ನ ಗೆಳೆಯರ ವಲಯದಲ್ಲಿ ನಾನು ತುಂಬಾ ನಿರಪಾಯಕಾರಿ ಅಂತಲೇ ಪ್ರಸಿದ್ದ..;-)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s