ಮತ್ತಷ್ಟು ಒಂದು ಸಾಲಿನ ಕತೆಗಳು..

Posted: ನವೆಂಬರ್ 11, 2008 in ಒಂದು ಸಾಲಿನ ಕತೆಗಳು..

೧. ಪರ್ಸಿನಲ್ಲಿದ್ದ ದುಡ್ಡೆಲ್ಲಾ ದೋಚಿಕೋ, ಕ್ರೆಡಿಟ್ ಕಾರ್ಡ್ ಎತ್ತಿಟ್ಟುಕೋ, ಆದರೆ ಅದರಲ್ಲಿರುವ ಅಮ್ಮನ ಫೋಟೋ ಮಾತ್ರ ಕೊಟ್ಟುಬಿಡು ಅಂತ ಕಳ್ಳನನ್ನು ಆತ ಅಂಗಲಾಚುತ್ತಿದ್ದ!

೨. ಆಗಷ್ಟೇ ದೃಶ್ಯವೊಂದರಲ್ಲಿ ನಟಿಗೆ ಚುಂಬಿಸಿ ಬಂದಿದ್ದ ನಟ,ತನ್ನ ಹೆಂಡತಿ ಫೋನ್ ನಲ್ಲಿ ಯಾರೊಂದಿಗೋ ನಗುತ್ತಾ ಮಾತಾಡುತ್ತಿದ್ದುದನ್ನು ಸಹಿಸದಾದ..

೩. ದಾರಿಯಲ್ಲಿ ಹೋಗಿಬರುವವರ ಬಾಯಿಯಲ್ಲಿ ನೀರೂರಿಸುತ್ತಿರುವ ಅಂಗಡಿಯಲ್ಲಿನ ಡಬ್ಬಿಯೊಳಗಿನ ಮಿಠಾಯಿ ಬಗ್ಗೆ, ಮಾರಲು ಕೂತವನಿಗೆ ಎಳ್ಳಷ್ಟೂ ಆಸಕ್ತಿಯಿಲ್ಲ..

೪. ನೇಣು ಹಾಕಿಕೊಳ್ಳಲು ಹೋದ,ಹಗ್ಗ ಕಡಿಯಿತು… ವಿಷ ಕುಡಿದ, ಕಲಬೆರಕೆಯಿಂದ ಕೂಡಿತ್ತು.. ಕ್ಷಣಗಳುರುಳಿದಾಗ ಸಾಯುವ ಅಮಲು ಇಳಿಯಿತು.. ನಗುತ್ತಾ ಬಾಳಬೇಕೆಂದುಕೊಂಡ… ಅವತ್ತೇ ಅವನಿಗೆ ಭೀಕರ ಆಕ್ಸಿಡೆಂಟ್ ಆಯಿತು.

೫. ನಾಸ್ತಿಕತೆಯ ಬಗ್ಗೆ ಭಾಷಣ ಬಿಗಿಯಲು ಬಂದವನಿಗೆ ಮೈಕ್ ಹಿಡಿದೊಡನೆ ಶಾಕ್ ಹೊಡೆಯಿತು,ಅಯಾಚಿತವಾಗಿ “ಓಹ್! ಮೈ ಗಾಡ್ ” ಎಂದು ಉದ್ಗರಿಸಿದನು..

೬. ಯಕ್ಷಗಾನದ ರಾಕ್ಷಸ ಪಾತ್ರಧಾರಿ ಎಷ್ಟು ಪ್ರಯತ್ನಿಸಿದರೂ ಆತನ ನಗುವಿಗೆ ಅಂದ ದೊರೆಯುತ್ತಿಲ್ಲ…

೭. ಚಲನಚಿತ್ರದಲ್ಲಿ ಬಹಳ ದೊಡ್ಡ ವಿಲನ್ ಆದ ನಟ ತನ್ನನ್ನು ನೋಡುತ್ತಲೇ ಭಯ ಬಿದ್ದು ಓಡಿಹೋಗುವ ಮಗನಿಂದ ಮುತ್ತು ಸಿಕ್ಕಿಲ್ಲವೆಂದು ಬೇಸರಿಸಿಕೊಂಡಿದ್ದಾನೆ.

೮. ತಾನು ಹೆಜ್ಜೆಯಿಟ್ಟ ಮರಳನ್ನು ಕೂಡ ಚಿನ್ನವೆಂಬಂತೆ ಕಾಪಿಡುತ್ತಿದ್ದವ ಮದುವೆಯಾದ ಮೇಲೀಗ ಉಪ್ಪಿಟ್ಟಿನಲ್ಲಿ ಅಪ್ಪಿತಪ್ಪಿ ಬಿದ್ದ ಕೂದಲನ್ನು ಕಂಡು ರೇಗಾಡುತ್ತಿದ್ದಾನೆ…

ಟಿಪ್ಪಣಿಗಳು
 1. ಶಿವು.ಕೆ ಹೇಳುತ್ತಾರೆ:

  ರಂಜಿತ್ ಸಾರ್,
  ನಿಮ್ಮ ಒಂದು ಸಾಲಿನ ಕಥೆಗಳು ನನ್ನ ಫೇವರೇಟ್. ಓದಿದ ಮೇಲೆ ಇನ್ನಷ್ಟು ಬೇಕಿತ್ತು ಅನ್ನಿಸುತ್ತಿತ್ತು. ಹೀಗೆ ಬರುತ್ತಿರಲಿ……….

 2. ಪಲ್ಲವಿ ಎಸ್‌. ಹೇಳುತ್ತಾರೆ:

  ರಂಜಿತ್‌,

  ಇನ್ನಷ್ಟು ಬೇಕೆನ್ನುವವ, ಸಿಕ್ಕ ಕೂಡಲೇ ವಿರಾಗಿಯಾದ.

  ಮನಸ್ಸಿನೊಳಗೆ ಚೆಂದದ ಭಾವನೆಯೊಂದು ಕೂತಿತ್ತು. ಅದನ್ನು ಬರಹವಾಗಿಸಲು ಪೇಚಾಡುತ್ತಿದ್ದ. ಹೊರ ಬಂತು ನೋಡಿ, ಅವ ಖಾಲಿಯಾದ.

  ಏನೋ ಓದುವಾಗ, ಇನ್ನೇನೋ ಹೊಳೆಯುತ್ತದೆ. ಅದನ್ನು ಇಳಿಸಲು ಹೋದಾಗ, ಎಲ್ಲೋ ಜಾರಿಹೋಗುತ್ತದೆ.

  ಇರಲಿ ಬಿಡಿ.

  ನನಗನಿಸುತ್ತದೆ: ನೀವು ಭಾರಿ ಕವಿತೆಯೊಂದಕ್ಕೆ ಸ್ಕೆಚ್ ಹಾಕುತ್ತಿರುವಂತಿದೆ. ಅದಕ್ಕೂ ಮುನ್ನ ಇವೊಂದಿಷ್ಟು ಟಿಟ್‌ಬಿಟ್‌ಗಳು. ಅಲ್ಲವೆ?

 3. Rohini ಹೇಳುತ್ತಾರೆ:

  ರಂಜಿತ್ ಸರ್
  ನೀವು ಬರೆದ ಒಂದು ಸಾಲಿನ ಕತೆ ತುಂಬಾನೇ ಚೆನ್ನಾಗಿದೆ

  ನೇಣು ಹಾಕಿಕೊಳ್ಳಲು ಹೋದ,ಹಗ್ಗ ಕಡಿಯಿತು… ವಿಷ ಕುಡಿದ, ಕಲಬೆರಕೆಯಿಂದ ಕೂಡಿತ್ತು.. ಕ್ಷಣಗಳುರುಳಿದಾಗ ಸಾಯುವ ಅಮಲು ಇಳಿಯಿತು.. ನಗುತ್ತಾ ಬಾಳಬೇಕೆಂದುಕೊಂಡ… ಅವತ್ತೇ ಅವನಿಗೆ ಭೀಕರ ಆಕ್ಸಿಡೆಂಟ್ ಆಯಿತು
  ತಾನೊಂದು ಬಗೆದರೆ ದೈವ ಒಂದು ಬಗೆಯುವುದು ಅನ್ನೋದು ಇದಕ್ಕೆ ಅಲ್ವ?

  ಪರ್ಸಿನಲ್ಲಿದ್ದ ದುಡ್ಡೆಲ್ಲಾ ದೋಚಿಕೋ, ಕ್ರೆಡಿಟ್ ಕಾರ್ಡ್ ಎತ್ತಿಟ್ಟುಕೋ, ಆದರೆ ಅದರಲ್ಲಿರುವ ಅಮ್ಮನ ಫೋಟೋ ಮಾತ್ರ ಕೊಟ್ಟುಬಿಡು ಅಂತ ಕಳ್ಳನನ್ನು ಆತ ಅಂಗಲಾಚುತ್ತಿದ್ದ!
  ವಾವ್ ಸೂಪರ್ ಸರ್ ಎಷ್ಟು ಚೆನ್ನಾಗ್ ಬರೆದಿದ್ದೀರ ಒಂದು ಸಾಲಲ್ಲೇ ಅಳಿಸ್ಬಿಟ್ರಿ

  ಇನ್ನೂ ಹೆಚ್ಚು ಹೆಚ್ಚು ಬರೆಯಿರಿ

 4. ವಿಜಯರಾಜ್ ಕನ್ನಂತ ಹೇಳುತ್ತಾರೆ:

  3,5,8 I Liked these

 5. Prakash ಹೇಳುತ್ತಾರೆ:

  ಚಲನಚಿತ್ರದಲ್ಲಿ ಬಹಳ ದೊಡ್ಡ ವಿಲನ್ ಆದ ನಟ ತನ್ನನ್ನು ನೋಡುತ್ತಲೇ ಭಯ ಬಿದ್ದು ಓಡಿಹೋಗುವ ಮಗನಿಂದ ಮುತ್ತು ಸಿಕ್ಕಿಲ್ಲವೆಂದು ಬೇಸರಿಸಿಕೊಂಡಿದ್ದಾನೆ.

  idu ..swathaha ..KannaDada khyaatha khaLanaayaka ..Vajramuni avru ondu kaDe interview nalli heLiddaare.

  Ella…ondu saalina kathegalu iSta vaayithu… ele mareya kai anthe…naanu nimma theremareya abhimaani..

 6. ರಂಜಿತ್ ಹೇಳುತ್ತಾರೆ:

  ಶಿವು,

  ದಯವಿಟ್ಟು ಸರ್‍ ಅನ್ನದಿರಿ.

  ಇದು ಒಂಥರ ೨೦-೨೦ ಮ್ಯಾಚ್ ಇದ್ದಂತೆ ಅಲ್ಲವೇ?:)

 7. ರಂಜಿತ್ ಹೇಳುತ್ತಾರೆ:

  ಪಲ್ಲವೀ,

  ನೋಡಿದಿರಾ… ಇದು ಬರೆಯುವುದು ಸುಲಭ. ನೀವೂ ಪ್ರಯತ್ನಿಸಿ. ನಮಗೂ ಒಳ್ಳೇ ಸಾಲುಗಳು ಸಿಗಬಹುದು ಓದಿ ಸವಿಯಲು..:)

  ಸ್ಕೆಚ್ ಹಾಕಿಕೊಂಡು ಕುಂತರೆ ಕವಿತೆ ಒಲಿಯದು. ಮರ್ಡರ್ ಮಾಡಬಹುದು ಅನ್ನಿಸುತ್ತೆ..:)

  (ಎತ್ತಲಾಗದಷ್ಟು) ಭಾರಿ ಕವಿತೆ ಬರೆಯಬೇಕಿದೆ.. ಬದುಕಿ ಉಳಿಯಬೇಕಲ್ಲ..:)

 8. ರಂಜಿತ್ ಹೇಳುತ್ತಾರೆ:

  ರೋಹಿಣಿ,

  ಆ ಸಾಲು ನಿಮ್ಮನ್ನು ಅಳಿಸಿತೇ? ಕ್ಷಮಿಸಿ…
  ಬರೆದಾಗ ನನ್ನನ್ನೂ ತುಂಬಾ ಕಾಡಿತ್ತು ಆ ಕತೆ.

  ತುಂಬಾ ಧನ್ಯವಾದಗಳು…

 9. ರಂಜಿತ್ ಹೇಳುತ್ತಾರೆ:

  ವಿಜಯ್ ರಾಜ್,

  ಥ್ಯಾಂಕ್ಸ್ ಸರ್‍.

  ಉಳಿದದ್ದು ಹಿಡಿಸಲಿಲ್ಲವೇ?:)

 10. ರಂಜಿತ್ ಹೇಳುತ್ತಾರೆ:

  ಪ್ರಕಾಶ್,

  ಅದ್ಯಾಕೆ ತೆರೆಮರೆಯಾಗಿರ್ತೀರಿ? ಹೃದಯ ಪ್ರತಿಕ್ಷಣ ಪ್ರೀತಿಯನ್ನು ಒಸರುತ್ತಿರುತ್ತದಂತೆ. ಹಾಗೆ ತೋರಿಸಿಕೊಳ್ಳದೇ, ತೋಡಿಕೊಳ್ಳದೇ ಹೋದರೆ ಒಳಗೆ ಸ್ಟಾಕ್ ಹೆಚ್ಚಾಗಿ ಅರೋಗ್ಯಕ್ಕೆ ತೊಂದರೆಯಾಗುತ್ತದೇನೊ:-)

  ನಿಜ,ಇಲ್ಲಿ ಪೋಸ್ಟ್ ಮಾಡುವ ಮೊದಲು ಗೆಳೆಯರೊಬ್ಬರಿಗೆ ತೋರಿಸಿದಾಗ ಅವರೂ ಹಾಗೆಯೇ ಹೇಳಿದರು. ಎಂಥ ಮೇರುನಟ ಅಲ್ಲವೇ ಅವರು. ಎಷ್ಟು ನೋವಿನಿಂದ ಹೇಳಿರಬೇಕಲ್ಲವೆ……

  ಆದರೆ ಅಮ್ಮ ಹೇಳಿದ್ದು, ಚಿಕ್ಕಂದಿನಲಿ ವಿ.ಸಿ.ಪಿ.ಯಲ್ಲಿ ಕನ್ನಡ ಚಲನಚಿತ್ರ ನೋಡುತ್ತಿದ್ದಾಗ ವಜ್ರಮುನಿ ಬಂದೊಡನೆ ನಾನು ಓಡಿಹೋಗುತ್ತಿದ್ದೆನಂತೆ:)

 11. ರಂಜಿತ್ ಹೇಳುತ್ತಾರೆ:

  ನೀವು ನನ್ನ ಪುಟ್ಟ ತೋಟಕ್ಕೆ ಕಾಲಿಟ್ಟಿದ್ದು ಸಂತಸ ತಂದಿತು ವಿಕಾಸ್.

  ಧನ್ಯವಾದಗಳು.

 12. Roopa Satish ಹೇಳುತ್ತಾರೆ:

  Hi Ranjith,

  Superbb…….. esp. the one below:

  ನೇಣು ಹಾಕಿಕೊಳ್ಳಲು ಹೋದ,ಹಗ್ಗ ಕಡಿಯಿತು… ವಿಷ ಕುಡಿದ, ಕಲಬೆರಕೆಯಿಂದ ಕೂಡಿತ್ತು.. ಕ್ಷಣಗಳುರುಳಿದಾಗ ಸಾಯುವ ಅಮಲು ಇಳಿಯಿತು.. ನಗುತ್ತಾ ಬಾಳಬೇಕೆಂದುಕೊಂಡ… ಅವತ್ತೇ ಅವನಿಗೆ ಭೀಕರ ಆಕ್ಸಿಡೆಂಟ್ ಆಯಿತು….

  Tumba chennagide.,….

 13. Sharashchandra Kalmane ಹೇಳುತ್ತಾರೆ:

  ತುಂಬಾ ಚಂದದ ಕತೆಗಳು ರಂಜಿತ್.

  ಪರ್ಸಿನಲ್ಲಿದ್ದ ದುಡ್ಡೆಲ್ಲಾ ದೋಚಿಕೋ, ಕ್ರೆಡಿಟ್ ಕಾರ್ಡ್ ಎತ್ತಿಟ್ಟುಕೋ, ಆದರೆ ಅದರಲ್ಲಿರುವ ಅಮ್ಮನ ಫೋಟೋ ಮಾತ್ರ ಕೊಟ್ಟುಬಿಡು ಅಂತ ಕಳ್ಳನನ್ನು ಆತ ಅಂಗಲಾಚುತ್ತಿದ್ದ!

  ೩. ದಾರಿಯಲ್ಲಿ ಹೋಗಿಬರುವವರ ಬಾಯಿಯಲ್ಲಿ ನೀರೂರಿಸುತ್ತಿರುವ ಅಂಗಡಿಯಲ್ಲಿನ ಡಬ್ಬಿಯೊಳಗಿನ ಮಿಠಾಯಿ ಬಗ್ಗೆ, ಮಾರಲು ಕೂತವನಿಗೆ ಎಳ್ಳಷ್ಟೂ ಆಸಕ್ತಿಯಿಲ್ಲ..

  ೪. ನೇಣು ಹಾಕಿಕೊಳ್ಳಲು ಹೋದ,ಹಗ್ಗ ಕಡಿಯಿತು… ವಿಷ ಕುಡಿದ, ಕಲಬೆರಕೆಯಿಂದ ಕೂಡಿತ್ತು.. ಕ್ಷಣಗಳುರುಳಿದಾಗ ಸಾಯುವ ಅಮಲು ಇಳಿಯಿತು.. ನಗುತ್ತಾ ಬಾಳಬೇಕೆಂದುಕೊಂಡ… ಅವತ್ತೇ ಅವನಿಗೆ ಭೀಕರ ಆಕ್ಸಿಡೆಂಟ್ ಆಯಿತು.

  ಇವು ಮೂರು ತುಂಬ ಚನ್ನಾಗಿವೆ. ಇನ್ನು ಬರೀರಿ ಒಂದು ಸಾಲಿನ ಕತೆಗಳನ್ನ 🙂

 14. Roopa Satish ಹೇಳುತ್ತಾರೆ:

  Ranjith,

  Yaako mattomme nimma ondu saalina kathegalanna odabekannistu.
  So I revisited your blog.
  Esp. this one : ನೇಣು ಹಾಕಿಕೊಳ್ಳಲು ಹೋದ,ಹಗ್ಗ ಕಡಿಯಿತು… ವಿಷ ಕುಡಿದ, ಕಲಬೆರಕೆಯಿಂದ ಕೂಡಿತ್ತು.. ಕ್ಷಣಗಳುರುಳಿದಾಗ ಸಾಯುವ ಅಮಲು ಇಳಿಯಿತು.. ನಗುತ್ತಾ ಬಾಳಬೇಕೆಂದುಕೊಂಡ… ಅವತ್ತೇ ಅವನಿಗೆ ಭೀಕರ ಆಕ್ಸಿಡೆಂಟ್ ಆಯಿತು….
  Nimma e-saalugalu tumba kaadutide.
  It is so evident that iro ashtudina naavu yaake chennagiro prayathna madolla…. namma benna hinde namme apthamitra I mean namma saavu idde irutte…. eega yene aagali iro ondu sanna jeevanana santoshavaagirisikondu baalabeku antha realise madikollo hottige, kaala meeri hogirutte….
  (Bittu hogya samaya puranadhara vithala dhyaana odagadayya…!! antha daasara haadinante)
  Hudukikondu hodare Idi Jeevanada saramsha nimma e-saalina katheyallide.
  Swalpa bhaavukalu Naanu….. yeneno barede ansutte..
  aadru helodanna helbittre yeno nemmadi nodi..

 15. Nag ಹೇಳುತ್ತಾರೆ:

  Simply Superb Boss…!!

  heege saagali nimma payana..

 16. ರಂಜಿತ್ ಹೇಳುತ್ತಾರೆ:

  ಪವರ್‍ ಮೇಡಂ,

  ಹೌದೇನ್ರೀ..:-)

  ಅದಕ್ಕಾಗಿ ಒಂದು ಸಾಲಿನ ಕತೆಗಳಿಗೆ ಒಂದು ಸಾಲಿನ ಕಾಮೆಂಟ್ ಕೊಡೋದೇನ್ರೀ…?;-)

 17. ರಂಜಿತ್ ಹೇಳುತ್ತಾರೆ:

  ರೂಪ,

  ಥ್ಯಾಂಕ್ಸ್.

  ನೀವು ಹೇಳೋದು ನಿಜ. ನನ್ನ ಮತ್ತೊಬ್ಬ ಪ್ರೀತಿಯ ಲೇಖಕರಾದ ನಾಗತಿಹಳ್ಳಿ ಚಂದ್ರಶೇಖರ್ ಮೊದಲು ತಮ್ಮ ಸ್ಕೂಟರಿನ ಹಿಂಭಾಗ “ಸಾವು” ಅಂತ ಬರೆದುಕೊಂಡೇ ಸುತ್ತುತ್ತಿದ್ದರಂತೆ!

  ನಮ್ಮ ಇಂದು ಒಂದನ್ನು ಚೆನ್ನಾಗಿ ಕಳೆದರೆ, ಹೋಗುತ್ತ ಹೋಗುತ್ತ ನಮ್ಮ ನಿನ್ನೆ ನಾಳೆಗಳೆಲ್ಲ ಚೆನ್ನಾಗಾಗುವುದಲ್ಲವೆ?

  ನಾನು ತೀರಿಹೋದ ಒಂದು ವರ್ಷದ ಬಳಿಕ ಕೊನೆ ಪಕ್ಷ ೪ ಜನ ” ಛೇ! ರಂಜಿತ್ ಇದ್ದಿದ್ರೆ ಚೆನ್ನಾಗಿತ್ತು…” ಅಂತ ಅಂದುಕೊಳ್ಳುವ ಹಾಗೆ ಬದುಕಿದರೆ ಸಾಕು ಅನ್ನಿಸುತ್ತಿದೆ.

  ಯಮ ಎದುರಾದರೆ “ಸ್ವಲ್ಪ ನಿಲ್ಲು ಮಾರಾಯ…ನನ್ನವಳಿಂದ ಒಂದೇ ಒಂದು ಸಲ ’ನಿನ್ನನ್ನು ತುಂಬಾ ಪ್ರೀತಿಸ್ತೀನಿ’ ಅಂತ ಸುಳ್ಳಿಗಾದರೂ ಹೇಳಿಸಿಕೊಂಡು ಬರ್ತೇನೆ…”ಅನ್ನುವೆ..:)

  ಪ್ರೀತಿ ಮತ್ತು ಸಾವು ಎರಡೂ ಬಿಡದೇ ಕಾಡುವಂತಹ ವಿಷಯಗಳು ಅಲ್ಲವಾ?….

  ನೋಡಿ… ನೀವು ನನ್ನನ್ನೂ ಭಾವುಕನನ್ನಾಗಿ ಮಾಡಿಬಿಟ್ಟಿರಿ…

 18. ರಂಜಿತ್ ಹೇಳುತ್ತಾರೆ:

  ಕಲ್ಮನೆಯವರೇ,

  ಧನ್ಯವಾದಗಳು…

  ಅಮ್ಮನ ಕತೆ ನನಗೂ ಇಷ್ಟವಾದದ್ದು.

  ಕಾಲೇಜು ಹುಡುಗರು ನೀವು… ಕೊನೆಯ ಕತೆಯನ್ನು ನೆನಪಿಟ್ಟುಕೊಳ್ಳಿ..;-)

 19. ರಂಜಿತ್ ಹೇಳುತ್ತಾರೆ:

  ನಾಗ್,

  ನೀವು ಬಂದಿದ್ದಕ್ಕೆ ಖುಷಿಯಾಯ್ತು.

  ನಿಮ್ಮ ಮೆಚ್ಚುಗೆಯ ಇಂಧನವೇ ಬರಹದ ಪಯಣಕ್ಕೆ ಕಾರಣವಲ್ಲವೇ?

  ಧನ್ಯವಾದಗಳು..

 20. Ganesh K ಹೇಳುತ್ತಾರೆ:

  Ranjit,
  Your one line stories are making a HAWA in kannada blog loka..!
  Your stories are simply superb.

  the success of these stories lies in the time limit it requires for reading. As some of the readers said, they liked some and some not. It again depends on the taste, view and many other factors. But, its efficiency lies in its effect it creates when read. You, certainly can make difference by your shortest short stories.

  Then, Thank you for visiting my Punchline blog. I will add your blog link in my blog.

  Good luck. Keep writing. 🙂

  Ganesh

 21. ರಂಜಿತ್ ಹೇಳುತ್ತಾರೆ:

  ಗಣೇಶ್,

  ನಿಜ. ಇಷ್ಟಗಳು ವ್ಯಕ್ತಿಯ ಅಳವಿಗೆ ಸಂಬಂಧಿಸಿದ್ದು ಅಲ್ವೆ?

  ಪಂಚ್ ಲೈನ್ ಅಂತ ಬ್ಲಾಗನ್ನೇ ತೆರೆದಿರುವ ನಿಮಗೆ ನನ್ನ ಪುಟ್ಟ ಪಂಚ್ ಕತೆಗಳು ಇಷ್ಟವಾಗಿದ್ದು ಸಂತಸ ತಂದಿತು…

  ಒಂದು ಸಾಲಿನಲ್ಲಿ, ೪-೫ ಪುಟದ ಕತೆಗಳು ಕೊಡುವ ಮುದ, ಖುಷಿ, ವಿವರ ಎಲ್ಲ ನೀಡುವುದು ಸ್ವಲ್ಪ ಪ್ರಯಾಸಕರ.
  ಆದರೆ ಬರೆದಾದ ಮೇಲೆ ಸಿಗುವ ಖುಷಿಗೆ ಹೋಲಿಸಿದರೆ ಅದೆಲ್ಲಾ ಏನೂ ಅಲ್ಲ.

  ಹವಾ ಅಂತ ಏನಿಲ್ಲ… ನಮನ್ನೆಲ್ಲ ನಾಚಿಸುವಂತಹ ಬರಹಗಾರರಿರುವರು ಬ್ಲಾಗ್ ಲೋಕದಲ್ಲಿ ಅಲ್ವೆ?

  ಒಟ್ಟಾರೆ ತುಂಬಾ ಥ್ಯಾಂಕ್ಸ್ ನನ್ನ ಪುಟ್ಟ ಬ್ಲಾಗಿಗೆ ಬಂದು ಹರಸಿದ್ದಕ್ಕೆ..:)

 22. ರೇಶ್ಮಾ ಹೇಳುತ್ತಾರೆ:

  ತುಂಬಾನೇ ಚೆನ್ನಾಗಿದೆ ಸರ್.. 🙂
  ಮನಸ್ಸಿನ ಭಾವನೆಗಳನ್ನು ಪುಟ್ಟ ಚಿನ್ನದ ಚೌಕಟ್ಟಿನಲ್ಲಿ ಸುಂದರವಾಗಿ ಹಿಡಿದಿಟ್ಟಿದ್ದೀರ….

 23. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಸ್ ರೇಶ್ಮಾ ಮೇಡಂ,

  ಹೀಗೇ ಬರುತ್ತಿರಿ….

 24. Susankritha ಹೇಳುತ್ತಾರೆ:

  ಸೂಪರ್!
  ಇದು ನನ್ ಐಡಿಯಾ ಕೂಡಾ…(ನನ್ನೆಲ್ಲ ಒಂದ್ಸಾಲು ಕತೆಗಳು ಇನ್ನೂ ಡ್ರಾಫ್ಟ್ ಆಗಿ ನನ್ನ ಬ್ಲಾಗಲ್ಲಿ ಬೆಚ್ಚಗೆ ಕೂತಿವೆ..ನಿಮ್ಮದು ಆಗಲೇ ಸ್ವಚ್ಚಂದವಾಗಿ ಆಕಾಶದ ತುಂಬಾ ಹಾರಾಡ್ತಿವೆ… 🙂

  ಹಾಫ್ ಸೆಂಚುರಿಗೆ ಅಭಿನಂದನೆಗಳು…ಬರವಣಿಗೆ ಮುಂದುವರೀಲಿ…ಹಾಗೇ ನಿಮ್ಮೆದೆ ದುಗುಡದ ಕಾರ್ಮೋಡ ಕರಗಿ ಮಳೆನೀರಾಗಿ ಬ್ಲಾಗಿನ ತುಂಬಾ ಕೋಡಿಯಾಗಿ ಹರಿಯಲಿ 🙂

 25. ರಂಜಿತ್ ಹೇಳುತ್ತಾರೆ:

  ಸುಶೀಲ್ ಸಂದೀಪ್,

  ನನ್ನ ಬರಹಗಳು ನಿಮ್ಮದರೆದುರು ಏನೂ ಅಲ್ಲವೆಂಬ ಕೀಳರಿಮೆ ನನ್ನಲ್ಲಿದೆ…

  ನನಗೆ ಒಂದ್ಸಾಲು ಕತೆಗಳನ್ನು ಬರೆಯಲು ಹುರುಪು ಮೂಡಿದ್ದು ನಿಮ್ಮ ಓರ್ಕುಟ್ ಕಮ್ಯೂನಿಟಿಯಿಂದ್ಲೇ ಅಲ್ವೇ?

  ಬೇಗ ಡ್ರಾಫ್ಟಿನ ಪಂಜರದಿಂದ ಬಿಡಿಸಿ,
  ನಮಗೊಳ್ಳೆ ಕತೆಗಳನ್ನು ಬಡಿಸಿ…

  ನೀವಿಲ್ಲಿ ಬಂದಿದ್ದು ಖುಷಿಕೊಟ್ಟಿತು… ಥಾಂಕ್ಸ್ ಸರ್‍..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s