ಹಾರುವ ಪಾಠ…

Posted: ನವೆಂಬರ್ 13, 2008 in ಕವಿತೆ

larusatricillapelecanusoccidentalisoccidentalis1

ಇಡೀ ಭೂಮಿಯ
ತಲೆಕೆಳಗಾಗಿಸುತ
ರೆಕ್ಕೆ ಬಡಿ,
ಗಾಳಿಗೆ ಚೂರೂ
ನೋವಾಗದಂತೆ
ತಲೆಗೆ ಹೊಡಿ…

ಇಷ್ಟೇ ನಮ್ಮಯ ಹಾರಾಟ…
ಬಾಳ ದಾರಿಯ ಹೋರಾಟ..

ಅತ್ತ ಹಾರದಿರು,
ಮಾನವನ ರೆಕ್ಕೆ ಬಡಿಯದ
ಲೋಹಪಕ್ಷಿಗಳು ಹಾರುವ ಜಾಗ..
ನಮ್ಮ ಸ್ವಾತಂತ್ರ್ಯಕ್ಕಲ್ಲಿ ನಿಷೇಧ!

ಆ ಕಾಡಿನತ್ತ ಹೋಗುವಾಗ
ಜಾಗರೂಕತೆ..
ಅಲ್ಲಿನ ಮರಮರಗಳೂ
ಹೇಳುವವು ಷೋಕಿ ಜನರ,
ಸಿನೆಮಾ ನಟರ
ಶಿಕಾರಿ ಕತೆ…!

ಸುಲಭವಾಗಿ  ಸಿಗುವ
ಅಕ್ಕಿಕಾಳು ಹೆಕ್ಕುವಾಗ ಹುಷಾರು..
ಮರೆಯಲ್ಲಿದ್ದೀತು ಸ್ವಾರ್ಥಿ
ಮಾನವನ ಕುತಂತ್ರದ ಕಾರುಬಾರು..

ನೆಲದಲ್ಲಿ ಹೆಚ್ಚು ನಿಲ್ಲದಿರು
ಅಲ್ಲೆಲ್ಲಾ ಕಡೆ ನಮಗೆಂದೂ
ಅರ್ಥವಾಗದ ಸರಹದ್ದುಗಳು..

ಅದನ್ನೆಲ್ಲಾ ಮೀರು..
ಶುಭ್ರ ಆಗಸಕ್ಕೆ ಹಾರು..!

Advertisements
ಟಿಪ್ಪಣಿಗಳು
 1. Rohini ಹೇಳುತ್ತಾರೆ:

  ಸುಲಭವಾಗಿ ಸಿಗುವ
  ಅಕ್ಕಿಕಾಳು ಹೆಕ್ಕುವಾಗ ಹುಷಾರು..
  ಮರೆಯಲ್ಲಿದ್ದೀತು ಸ್ವಾರ್ಥಿ
  ಮಾನವನ ಕುತಂತ್ರದ ಕಾರುಬಾರು
  yeshtu chennagi barediddira manavana vishwaroopavanne teredittidira

 2. ಶಿವು.ಕೆ ಹೇಳುತ್ತಾರೆ:

  ಅದನ್ನೆಲ್ಲಾ ಮೀರು
  ಶುಭ್ರ ಆಗಸಕ್ಕೆ ಹಾರು..!

  ಬಲು ಇಷ್ಟವಾದ ಸಾಲು. ಕವನ ಚೆನ್ನಾಗಿದೆ. ಬರೆಯುತ್ತಿರಿ.

 3. ಅನಿಲ್ ರಮೇಶ್. ಹೇಳುತ್ತಾರೆ:

  ಬಹಳ ಚೆನ್ನಾಗಿದೆ ರಂಜಿತ್… ಹೇಗೇ ಬರೆಯುತ್ತಿರಿ.

 4. ಅನಿಲ್ ರಮೇಶ್. ಹೇಳುತ್ತಾರೆ:

  ಬಹಳ ಚೆನ್ನಾಗಿದೆ ರಂಜಿತ್… ಹೀಗೇ ಬರೆಯುತ್ತಿರಿ.

 5. uniquesupri ಹೇಳುತ್ತಾರೆ:

  simply superb 🙂

 6. Roopa Satish ಹೇಳುತ್ತಾರೆ:

  Too gud…
  Esp. the last two lines…:-))

 7. sushmasindhu ಹೇಳುತ್ತಾರೆ:

  Hii,
  nice, meaningfull lines… very nice..

 8. ರಂಜಿತ್ ಹೇಳುತ್ತಾರೆ:

  ರೋಹಿಣಿ,

  ನನಗೆ ಚಿಕ್ಕಂದಿನಿಂದಲೂ ಒಂದು ಅನುಮಾನ. ಬೆಕ್ಕುಗಳು,ದನ ಇವೆಲ್ಲ ಮನುಷ್ಯರೊಡನೆ ಪ್ರೀತಿಯ ಸಂಬಂಧ ಬೆಳೆಸಿಕೊಂಡಷ್ಟು ಹಕ್ಕಿಗಳು ಯಾಕೆ ಬಾಂಧವ್ಯ ಬೆಳೆಸಿಕೊಳ್ಳಲಾರವು?

  ಮನುಷ್ಯರನ್ನು ನೋಡಿದ ಕೂಡಲೆ ಓಡಿಹೋಗುವ ಹಕ್ಕಿಗಳನ್ನು ಎಷ್ಟು ಕಾಡಿರಬೇಕಲ್ಲವೆ, ಭೀತಿಗೊಳಪಡಿಸಿರಬೇಕಲ್ಲವೆ ಈ ಮಾನವ ಜಾತಿ ?

 9. ರಂಜಿತ್ ಹೇಳುತ್ತಾರೆ:

  ಶಿವು ಸರ್,

  ನೀವು ಹಕ್ಕಿಗಳನ್ನು ತಾಳ್ಮೆಯಿಂದ ಅದಕ್ಕೂ ಅರಿವಾಗದಂತೆ ಫ್ರೇಮಿನೊಳಗೆ ಸೆರೆಹಿಡಿವವರು, ನನ್ನದು ಅದರ ಪುಟ್ಟ ಮನವನ್ನು ಪದಗಳಲ್ಲಿ ಸೆರೆಹಿಡಿವ ಪ್ರಯತ್ನ. ನಿಮಗಿಷ್ಟವಾಗಿದ್ದಕ್ಕೆ ಖುಶಿಯಾಯಿತು…:)

 10. ರಂಜಿತ್ ಹೇಳುತ್ತಾರೆ:

  ಅನಿಲ್ ರಮೇಶ್,

  ನನ್ನ ಪುಟ್ಟ ತೋಟಕ್ಕೆ ಆತ್ಮೀಯ ಸ್ವಾಗತ..:)

  ಪ್ರೀತಿಯ ಸುಪ್,

  ಕವನವನ್ನು ನನ್ನ ಶೈಲಿ ಅಲ್ಲದೇ ಬೇರೆ ರೀತಿಯಲ್ಲಿ ಬರೆಯಬೇಕೆಂದು ಹೊರಟಿದ್ದೆ. ನಿಮಗೆ ಇಷ್ಟವಾಗಿದ್ದು ಪತ್ರಿಕೆಯಲ್ಲಿ ಪ್ರಕಟವಾದಷ್ಟೇ ಖುಷಿ ಕೊಟ್ಟಿತು…

 11. ರಂಜಿತ್ ಹೇಳುತ್ತಾರೆ:

  ರೂಪ ಸತೀಶ್,

  ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್…. ನೀವು ಅಷ್ಟು ದೂರದಲ್ಲಿದ್ದೂ ತೋರುತ್ತಿರುವ ಕನ್ನಡಪ್ರೀತಿಗೆ ಶರಣು…

  ಸುಷ್ಮಸಿಂಧು,

  ನಿಮ್ಮ ಹೆಸರು ಚೆನ್ನಾಗಿದೆ. ಇಲ್ಲಿ ಬಂದಿದ್ದಕ್ಕೆ ಧನ್ಯವಾದಗಳು…

 12. ಪ್ರದೀಪ್ ಹೇಳುತ್ತಾರೆ:

  ವಾಹ್! ಬಲು ಚೆನಾಗಿದೆ 😀 😀

 13. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಸ್ ಕವಿಗಳೇ..:)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s