ಕವಿ….

Posted: ನವೆಂಬರ್ 19, 2008 in ಕವಿತೆ

 

writer

ಕನಸಿನ ಫೇಡೆಗಳನ್ನು
ಪದಗಳ ಪ್ಯಾಕೆಟ್ಟುಗಳಲ್ಲಿರಿಸಿ
ಮಾರುವವನು…

ನೋವುಗಳ ಮಾತ್ರೆಯನು
ಕಲ್ಪನೆಯ ಜೇನು ಸವರಿ
ತಿನ್ನಿಸುವವನು….

ಒಲವಿನ ಅಂಟುರೋಗವನು
ಪದಗಳ ಚೌಕಟ್ಟಿನಲ್ಲಿ
ಹಬ್ಬಿಸುವವನು…

ನೆನಪುಗಳ ಜಾತ್ರೆಯಲಿ
ಮನವನ್ನು
ಹುಚ್ಚಲೆಸುವವನು…
 
ವಿರಹದುರಿಯಲಿ ತಾನುರಿಯುತ
ಭಾವದ ಬೆಳಕೊಂದು
ಹಬ್ಬುವವನು…

ಕೊನೆಗೆ ಸಾವು
ಒಂದು ಕ್ಷಣದ ಭಿಕ್ಷೆ ಇತ್ತರೆ
ಉಸಿರ ಮರೆತು
ನೆನಪೊಂದನ್ನು
ಒಳಗೆಳೆದುಕೊಳ್ಳುವವನು…

 

(ನೀಲಿಹೂವು ಬ್ಲಾಗು ತೆರೆದು ನಿನ್ನೆಗೆ ೩ ತಿಂಗಳು, ಇದು ೫೦ ನೇ ಪೋಸ್ಟ್..! )

Advertisements
ಟಿಪ್ಪಣಿಗಳು
 1. rohini ಹೇಳುತ್ತಾರೆ:

  ನೋವುಗಳ ಮಾತ್ರೆಯನು
  ಕಲ್ಪನೆಯ ಜೇನು ಸವರಿ
  ತಿನ್ನಿಸುವವನು….

  ii salugalu ishta adavu nimma 50ne post tumbane chennagide kavi andare yaru yendu chennagi tilididdira. adashtu bega 100ne post barali yendu ashistivi hagu kayta irtivi.

 2. shivuu.k ಹೇಳುತ್ತಾರೆ:

  ರಂಜಿತ್,

  ನಿಮ್ಮ ೫೦ ನೇ ಪೋಸ್ಟಿಗೆ ಅಭಿನಂದನೆಗಳು. ಈ ಕವನದ ಮೊದಲ
  ಕನಸಿನ ಪೇಡೆಗಳನ್ನು
  ಪದಗಳ ಪ್ಯಾಕೆಟ್ಟುಗಳಲ್ಲಿರಿಸಿ
  ಮಾರುವವನು
  ನನಗೆ ತುಂಬಾ ಇಷ್ಟವಾಯಿತು.
  ನಿಮ್ಮ ಈ ಬರವಣಿಗೆ ೧೦೦……೧೦೦೦ ಹೀಗೆ ಮುಂದುವರಿಯಲಿ…

 3. ಪ್ರದೀಪ್ ಹೇಳುತ್ತಾರೆ:

  ಕವಿಯನ್ನು ಚೆನ್ನಾಗಿ ವರ್ಣಿಸಿದ್ದೀರ….. 😉

 4. Gururaj ಹೇಳುತ್ತಾರೆ:

  Kaviya varnane balu chanda…

  hunnimeya chandranannu nimma preyasiya mogadalli
  beladinagala belakannu nimma maguvina naguvalli torisaballa kavi…

  Ranjith – Kavithe tumba channagide, and congrats on your 50th post. Keep going…

 5. Roopa Satish ಹೇಳುತ್ತಾರೆ:

  Hi Ranjith,

  ಕೊನೆಗೆ ಸಾವು
  ಒಂದು ಕ್ಷಣದ ಭಿಕ್ಷೆ ಇತ್ತರೆ
  Saavigu saha ondu kshanada bikshe kodalu sadhyava?
  Kalpanege meerida kalpanegalu nimmavu.
  Tumba, andre Tumbane chennagide….
  Keep going… and congrats on ur 50th post.

  Also, time sikre 3K nalli ondu kavana post maadideeni… any comments and suggestions please.

 6. Tina ಹೇಳುತ್ತಾರೆ:

  ನೀಲಿ,
  ಬರೆ ಮೂರು ತಿಂಗಳಿಗೇ ಐವತ್ತು ಪೋಸ್ಟಾ? ಅಬ್ಬಬ್ಬ!! ಮೆಚ್ಚದೇ ಇರಲಾಗದು.
  ಬರೀತಾ ಇರಿ, ಎಲ್ಲ ರೆಕಾರ್ಡುಗಳೂ ಮುರಿಯುವ ಹಾಗೆ. Way to go!!
  -ಟೀನಾ

 7. sundaranadu ಹೇಳುತ್ತಾರೆ:

  Idu nimma aivattane post endu keli santhoshavayitu. Nimma prayatna, rachane heege sagali.
  Savu nimage ondu kshanavalla, mattondu avakashavanne needali. aaga nenapugalu matravalla hosadondu jeevitave nimage doreyali.

  Abhimani,
  Rajanna

 8. satish ಹೇಳುತ್ತಾರೆ:

  neelibaanalli teluva neeli hoovu…!
  nina preethi alli yeshtu hita ideyo ashte ide novu…

  how is it ranjit… kavi

 9. chetana chaitanya ಹೇಳುತ್ತಾರೆ:

  ಹಾಫ್ ಸೆಂಚುರಿಗೆ ಶುಭಾಶ್ಸಯಗಳು.
  ಇದೇ ನೆವವಾಗಿಟ್ಟುಕೊಂಡು them ಬದಲಿಸಿಬಿಡಿ. ಕವಿತೆಗಳು ಚೆನ್ನಾಗಿವೆ. ಈ ಕಲರ್ ನಿಮ್ಮ ನವಿರು ಭಾವಗಳಿಗೆ ಗಾಡಿ ಆಗಿ ಕಾಣಿಸುತ್ತೆ.

  ನಲ್ಮೆ,
  ಚೇತನಾ

 10. ನವಿಲುಗರಿ ಹೇಳುತ್ತಾರೆ:

  ೩ ತಿಂಗಳಿಗೆ ೫೦ ಪೋಸ್ಟ್..ನನ್ನ ಹೊಟ್ಟೆ ಉರಿಸೋದಕ್ಕಂತಾನೆ ಈ ತರ ಹಾಕಿದ್ದೀರ ಗುರುಗಳೇ?…೨ ವರ್ಷದಿಂದ ಬರೆದರೂ( ಅಥವ ಬರಿಲಿಕ್ಕೆ ಟ್ರೈ ಮಾಡುತ್ತಿದ್ದರೂ) ೫೦ ಪೋಸ್ಟ್ ಮಾಡೋಕೆ ಆಗಲಿಲ್ಲ…ನಿಮ್ಮ ೫೦ ಪೋಸ್ಟ್ಗಳೂ ೫೦ ಮೈಸೂರುಪಾಕಿನಷ್ಟೇ ಸಿಹಿ ಸಿಹಿಯಾಗಿದ್ದಾವೆ..ಒಂದನ್ನೂ ಬಿಡದೇ ತಿಂದು ತೇಗಿದ್ದೇನೆ..ಮತ್ತಷ್ಟು ಮೈಸೂರು ಪಾಕುಗಳು ಜಿಲೇಬಿಗಳೂ ಜಹಂಗೀರುಗಳು ಬ್ಲಾಗಿನಲ್ಲಿ ಕಾಣಿಸಿಕೊಳ್ಳುತ್ತಿರಲಿ…ತಿನ್ನೋದಕ್ಕಂತು ನಾವು ಇದ್ದೇ ಇದ್ದೇವೆ… ಮತ್ತೆ ೫೦ ನೆ ಪೋಸ್ಟ್ ಕೂಡ ಸೂಪರ್ ಇದೆ..

  ಕೊನೆಗೆ ಸಾವು
  ಒಂದು ಕ್ಷಣದ ಭಿಕ್ಷೆ ಇತ್ತರೆ
  ಉಸಿರ ಮರೆತು
  ನೆನಪೊಂದನ್ನು
  ಒಳಗೆಳೆದುಕೊಳ್ಳುವವನು

  ಒಂದು ಸಲ ನೀವೆ ಓದಿಕೊಳ್ಳಿ ಅದೆಷ್ಟು ಸೂಪರ್ ಬರ್ದಿದ್ದೀರಿ ಅಂತ ನಿಮಗೇ ಗೊತ್ತಾಗುತ್ತೆ..:)

  ಬೇಗ ನೂರಾಗಲಿ ನೂರು ಇನ್ನೂರಾಗಲಿ..

  ಸಾವಿರ ಆಗೊ ದಿನ ಕೂಡ ದೂರ ಇಲ್ಲ ಅನ್ನಿಸ್ತ ಇದೆ…

  ನಿಮ್ಮುಡುಗ
  ನವಿಲ್ಗರಿ

 11. ರಂಜಿತ್ ಹೇಳುತ್ತಾರೆ:

  ರೋಹಿಣಿಯವರೇ,

  ನಿಮ್ಮ ಪ್ರೋತ್ಸಾಹ ಹೀಗೇ ಇರಲಿ ನನ್ನ ಮೇಲೆ…

  *********

  ಶಿವು,

  ನಿಮ್ಮ ಪ್ರೀತಿ, ಪ್ರೋತ್ಸಾಹ ಇಲ್ಲದೇ ೫ ಪೋಸ್ಟ್ ಕೂಡ ಆಗ್ತಿರ್ಲಿಲ್ಲ.
  ಥ್ಯಾಂಕ್ಸ್.

  ***********

  ಪ್ರದೀಪ್,

  ನೀವು ಕವಿಗಳು.. ನೀವೇ ಮೆಚ್ಚಿಕೊಂಡದ್ದು ಖುಷಿಯಾಯ್ತು..:)
  ಬರ್ತಾ ಇರಿ ಹೀಗೇ..

 12. ರಂಜಿತ್ ಹೇಳುತ್ತಾರೆ:

  ಗುರುರಾಜ್,

  ತುಂಬಾ ಥ್ಯಾಂಕ್ಸ್ ಸರ್‍.. ನಿಮ್ಮ ಸಹಾಯ ಇಲ್ಲದೇ ಇದ್ದರೆ ಇದು ಯಾರ ಬ್ಲಾಗು ಅಂತಲೇ ಯಾರಿಗೂ ತಿಳಿಯುತಿರಲಿಲ್ಲ ಅಲ್ವೆ..

  ಥ್ಯಾಂಕ್ಸ್. ಹೀಗೆ ನನ್ನ ಮೇಲೆ ನಿಮ್ಮ ಪ್ರೀತಿಯಿರಲಿ.

 13. ರಂಜಿತ್ ಹೇಳುತ್ತಾರೆ:

  ರೂಪ,

  ನಾವು ಬದುಕುತಿರುವ ಕ್ಷಣ ಕ್ಷಣವೂ ಸಾವಿನ ಭಿಕ್ಷೆಯೇ ಅಲ್ಲವೆ?!:-)

  ೩-ಕೆ ಗೆ ಖಂಡಿತಾ ಬರ್ತಾ ಇರ್ತೇನೆ.

  ಥ್ಯಾಂಕ್ಸ್ ಮೇಡಂ…

 14. ರಂಜಿತ್ ಹೇಳುತ್ತಾರೆ:

  ಟೀನಾ ಮೇಡಂ,

  ತುಂಬಾ ಜಾಸ್ತಿಯಾಗಿ ಬಿಡ್ತೆ?:-)

  ಪ್ರೋತ್ಸಾಹ ಇಲ್ಲದಿದ್ದರೆ ಉಮೇದು ಎಲ್ಲಿರುತ್ತಿತ್ತು ನನ್ನಲ್ಲಿ ಅಲ್ವೇ?

  ಯಾವ ರೆಕಾರ್ಡೂ ಬೇಡ… ಎದೆಯ ಅಕ್ಷಯಪಾತ್ರೆಯಲಿ ಪ್ರೀತಿ ಒಟ್ಟು ಹಾಕುತ್ತಿದ್ದೇನೆ. ಅದರಿಂದಲೇ ಇನ್ನೊಂದು ೫೦ ವರ್ಷ ಬದುಕೋಣ ಅಂತ..:)

  ಥ್ಯಾಂಕ್ಸ್.. ಪ್ರೀತಿಯಿರಲಿ… ಬರ್ತಾ ಇರಿ ನೀಲಿ ಹೂವಿನ ತೋಟಕ್ಕೆ.

 15. ರಂಜಿತ್ ಹೇಳುತ್ತಾರೆ:

  ಸುಂದರನಾಡಿನ ರಾಜಣ್ಣ,

  ನೀವು ತುಂಬಾ ಪ್ರೀತಿ ತೋರಿಸ್ತಿದೀರಿ. ಪ್ರೀತಿ ಅಂದ್ರೆ ನಾ ತುಂಬಾ ಭಾವುಕನಾಗ್ತೇನೆ. ಅದಕ್ಕೆ ನಾನು ಲಾಯಕ್ಕಿದ್ದೇನಾ ಅನ್ನಿಸುತ್ತದೆ.

  ನಾನು ಋಣಿ ಸರ್‍ ನಿಮಗೆ.. ಪ್ರೀತಿಯಿರಲಿ..

 16. ರಂಜಿತ್ ಹೇಳುತ್ತಾರೆ:

  ಸತೀಶ್,

  ಅದೇನು ಗುರುವೇ…ಅಷ್ಟು ಸೂಪರ್ರಾಗಿ ಬರೆದುಬಿಟ್ಟೆ? ಕನ್ನಡದಲ್ಲಿ ಬ್ಲಾಗು ತೆರೆವ ಇರಾದೆ ಇದೆಯಾ ಹೇಗೆ?

  ನಿನ್ನ ಇಂಗ್ಲೀಷ್ ಪದ್ಯಗಳ ಹಾಗೆ ನಂಗೆ ಬರೆಯೋಕೆ ಹೇಳಿಕೊಡು…

  ಅಂದ ಹಾಗೆ ಪ್ರೀತಿಯಲ್ಲಿ ನೋವೂ ಹಿತ ಅಲ್ಲವೇ?:-)

 17. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಸ್ ಚೇತನಾ ಮೇಡಂ..

  ಈ ಥೀಮ್ ನಲ್ಲಿ ಬರಹ ಎದ್ದು ಕಾಣುತ್ತದೆ ಎಂಬ ನಿಟ್ಟಿನಲ್ಲಿ ಹಾಕಿದ್ದು. ತುಂಬಾ ದಿನವಾಯ್ತಲ್ಲ.. ಬೇರೆದ್ದು ಪ್ರಯತ್ನ ಮಾಡಿ ನೋಡ್ತೇನೆ..

  ನಿಮ್ಮ ಪ್ರೋತ್ಸಾಹಕ್ಕೆ ಥ್ಯಾಂಕ್ಸ್..:)

 18. ರಂಜಿತ್ ಹೇಳುತ್ತಾರೆ:

  ಪ್ರೀತಿಯ ಸೋಮ,

  ನಿನ್ನಿಂದಾನೇ ಬ್ಲಾಗು ಶುರು ಮಾಡಿದ್ದಲ್ವ ಗುರೂ? ನಾನು ಬರೆದಿದ್ದು ಸ್ವಲ್ಪನಾದ್ರೂ ಚೆನ್ನಾಗಿದ್ದರೆ ಅದರಲ್ಲಿ ನಿನ್ನ ಪಾಲೂ ಇದೆಯಲ್ಲವಾ?

  ಸಿಹಿ ಜಾಸ್ತಿಯಾದರೆ ಡಯಾಬಿಟಿಸ್ ಆದೀತು, ನಿನ್ನ ಅಭಿಮಾನಿ(ನಿ)ಯರೆಲ್ಲಾ ನನ್ನ ಬಿಟ್ಟಾರೆಯೇ ಆಮೇಲೆ?;-)

  ಹೋದ ಜನ್ಮದಲ್ಲಿ ನನ್ನ ತಮ್ಮನಾಗಿದ್ದಿ ಅನ್ನಿಸುತ್ತೆ ಕಣೋ. ನಿನ್ನ ಋಣ ತುಂಬಾ ಇದೆ ನನ್ನ ಮೇಲೆ.

  ತುಂಬಾ ಥ್ಯಾಂಕ್ಸ್.

 19. bala ಹೇಳುತ್ತಾರೆ:

  Ranjit,
  congratulations, nice poem.

 20. ರಂಜಿತ್ ಹೇಳುತ್ತಾರೆ:

  ಬಾಲಕೃಷ್ಣರವರೇ,

  ಧನ್ಯವಾದಗಳು…

  ನನ್ನ ಮೇಲೆ ಪ್ರೀತಿ, ಪ್ರೋತ್ಸಾಹ ಇರಲಿ ಸರ್‍..:)

 21. Gururaj ಹೇಳುತ್ತಾರೆ:

  enri estu comments barutte nimma blogalli, full super star agidira 🙂 – Hats off!

 22. Avi ಹೇಳುತ್ತಾರೆ:

  ಓಹ್… 3 ತಿಂಗಳಿಗೆ 50 ಪೋಸ್ಟ್…
  ಬರೆದೂ ಬರೆದೂ ತಾನೇ ನಮ್ಮ ಬರೆವಣಿಗೆಯನ್ನು ನಾವು ಎತ್ತರಕ್ಕೇರಿಸಿಕೊಳ್ಳುವುದು…. ಈ ಮೂಲಕ ಪರಿಪಕ್ವತೆ ಬೆಳೆಯುವುದು… ? ಮತ್ತಷ್ಟು ಬರೀರಿ… ಎತ್ತರೆತ್ತರಕ್ಕೇರಿರಿ….
  -ಅವಿನಾಶ್

 23. ರಂಜಿತ್ ಹೇಳುತ್ತಾರೆ:

  ಗುರುರಾಜ್,

  ಕಾಮೆಂಟ್ ಎಷ್ಟಿದೆ ಎಂಬುದರ ಮೇಲೆ ಬರಹದ ಮೌಲ್ಯ ಅಳೆಯುವುದು ಸರಿಯಾ ಸರ್‍?
  ಬರೆಯುವಾಗ ನನಗಾಗುವ ಖುಷಿ, ಓದುವಾಗ ಓದುಗನಿಗಾಗುವ ತೃಪ್ತಿ ಇದೇ ಅಂತಿಮವಾಗಿ ಬರಹದ ಹಣೆ’ಬರಹ’ ನಿರ್ಧರಿಸುವುದಲ್ಲವೆ?

  ಕಾಮೆಂಟ್ ಹಾಕದೇ ಪ್ರೀತಿ ತೋರಿಸುವ ಬಹಳ ಮಂದಿಯಿದ್ದಾರೆ. ಅವರಿಗೂ ನಾನು ಧನ್ಯವಾದ ಹೇಳಬೇಕಲ್ಲವೆ?

 24. ರಂಜಿತ್ ಹೇಳುತ್ತಾರೆ:

  ಅವಿ,

  ಪ್ರೋತ್ಸಾಹ ದ ಪೆಟ್ರೋಲ್ ಇದ್ದರೇನೆ ನಮ್ಮೊಳಗಿನ ಉಮೇದಿನ ಗಾಡಿ ಚಲಿಸುವುದು… 🙂

  ಬರವಣಿಗೆಯಲಿ ಪರಿಪಕ್ವತೆ ಬೆಳೆದಿದೆಯೋ ಇಲ್ಲವೋ ನೀವೇ ತಿಳಿಸಬೇಕು, ಆದರೆ ನಾನು ಬೆಳೆದಿರುವುದು ನಿಜ… ಗೆಳೆಯರೆಲ್ಲ ಆಗಲೇ ನನ್ನನ್ನು ಕೇಳುತ್ತಿದ್ದಾರೆ ” ಏನಪ್ಪಾ…೪೦- ೫೦ ವರ್ಷ ಆದವರ ಥರ ಮಾತಾಡುತ್ತಿದ್ದಿ ” ಅಂತ..:)

  ಥ್ಯಾಂಕ್ಸ್..

 25. ಶೆಟ್ಟರು (Shettaru) ಹೇಳುತ್ತಾರೆ:

  ರಂಜಿತ್,

  ನಿಮ್ಮ ೫೦ ನೇ ಪೋಸ್ಟಿಗೆ ಅಭಿನಂದನೆಗಳು.

 26. ಶ್ರೀ ಹೇಳುತ್ತಾರೆ:

  ನನ್ನ ಮೊದಲ ಭೇಟಿ ಇಲ್ಲಿಗೆ, ಓದುತ್ತಿದ್ದಂತೆ ಇಷ್ಟು ದಿನ ಎಲ್ಲಿತ್ತು ಈ ಬ್ಲಾಗು ಅನಿಸಿತು… ಚೆನ್ನಾಗಿದೆ, keep going.

 27. ರಂಜಿತ್ ಹೇಳುತ್ತಾರೆ:

  ಶೆಟ್ರೇ,

  ಥ್ಯಾಂಕ್ಯೂ, ಥ್ಯಾಂಕ್ಯೂ…

  ಶ್ರೀ,

  ಧನ್ಯವಾದಗಳು.. ಬರ್ತಾ ಇರಿ..:)

 28. ವೈಶಾಲಿ ಹೇಳುತ್ತಾರೆ:

  ಅರ್ಧ ಸೆಂಚುರಿಯ ಶುಭಾಶಯಗಳು…!!
  ಮುಂದಿನ ದಿನಗಳಲ್ಲಿ ಕ್ವಾಲಿಟಿ, ಕ್ವಾ0ಟಿಟಿ ಎಲ್ಲ ಇನ್ನೂ ಹೆಚ್ಚುತ್ತ ಸಾಗಲಿ.. ಇನ್ನಷ್ಟು ಖುಷಿಯ, ಚಂದದ ಬರಹಗಳು ನಿಮ್ಮಿಂದ ಸಿಗಲಿ… ಶುಭವಾಗಲಿ…
  ವೈಶಾಲಿ

 29. ರೇಶ್ಮಾ ಹೇಳುತ್ತಾರೆ:

  ಶುಭಾಶಯಗಳು.. 🙂
  ಬಹಳ ಚೆನ್ನಾಗಿದೆ ಕವನ… ಹೀಗೆ ಬರೆಯುತ್ತಿರಿ….

 30. ರಂಜಿತ್ ಹೇಳುತ್ತಾರೆ:

  ವೈಶಾಲಿ,

  ಕ್ವಾಂಟಿಟಿಗೆ ನಾನು ಭರವಸೆ ನೀಡುವೆ…

  ಕ್ವಾಲಿಟಿಗೆ ನೀವು ಬೈದೋ, ತಿಳಿಹೇಳಿಯೋ ತಿದ್ದಿ ಬೆಳೆಸಬೇಕು…

  ನಿಮ್ಮ ಪ್ರೀತಿಗೆ ಥ್ಯಾಂಕ್ಸ್..

 31. ರಂಜಿತ್ ಹೇಳುತ್ತಾರೆ:

  ರೇಶ್ಮಾ,

  ನಿಮ್ಮ ಶುಭಾಶಯಕ್ಕೆ ಧನ್ಯವಾದಗಳು..

  ಬರುತ್ತಿರಿ ನೀಲಿ ಹೂವಿನ ತೋಟಕ್ಕೆ..

 32. kallare ಹೇಳುತ್ತಾರೆ:

  Gr8 going sirrrrr…. 50 ne post ishta aaytu. (kone naalku saalugalu masth) :)… baaki ella chennagilla antalla… omme kootkondu ella odbeku innu. heege bareetaa iri.

 33. ರಂಜಿತ್ ಹೇಳುತ್ತಾರೆ:

  ಕಲ್ಲರೆಮನೆಯವರೆ,

  ನಿಧಾನವಾಗಿ ಪುರುಸೊತ್ತಾದಾಗಲಾದರೂ ಓದಿ…. ಚೆನ್ನಾಗಿದ್ದರೆ ಹೀಗೆಯೇ ಬೆನ್ತಟ್ಟಿ..

  ಥ್ಯಾಂಕ್ಯೂ..;)

 34. uniquesupri ಹೇಳುತ್ತಾರೆ:

  ತಡವಾಗಿಯಾದರೂ ನನ್ನ ಶುಭಾಶಯಗಳನ್ನು ಒಪ್ಪಿಕೊಳ್ಳಿ… ನಮ್ಮ ಕವಿಗೆ ಜಯವಾಗಲಿ

 35. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಸ್ ಸರ್‍…:)

 36. Sunil ಹೇಳುತ್ತಾರೆ:

  Kavana tumba chennagi moodi bandide..
  neeli hoovina taraha….
  houdoo e neeli hoovu antane hesareke ittiddu taavu

 37. Elba Nix ಹೇಳುತ್ತಾರೆ:

  Incredibly great read! Truely..

 38. Ava Vernon ಹೇಳುತ್ತಾರೆ:

  Really great post! Honest..

 39. Prathibha.M.Gowda ಹೇಳುತ್ತಾರೆ:

  Nanna geleyana ottaseyamerege njmma blogannu therede,mukhaputadalle modimadibittide nimma kavithe……….

 40. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಸ್ ಪ್ರತಿಭಾ! ಆದರೆ ಇದು ಮುಖಪುಟ ಅಲ್ಲ.. ಬಹುಶಃ ವರುಷವಾಯ್ತು ಬರೆದು. ಒತ್ತಾಸೆಯಿಂದ ಬಂದಿದ್ದರೂ ಓದಿದ್ದು ಇಷ್ಟವಾದರೆ ಬರೆದದ್ದು ಸಾರ್ಥಕ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s