“ಸುಖೇ ದುಃಖೇ ಸಮೇಕೃತ್ವ……”

Posted: ನವೆಂಬರ್ 23, 2008 in ಲೇಖನ

ಜಗತ್ತಿನಲ್ಲಿ ಅತ್ಯಂತ ಕಷ್ಟಕರ ಪರಿಸ್ಥಿತಿ ಯಾವುದು?

ಹೆಗಲ ಮ್ಯಾಲೆ ತಲೆ ಇರೊದು..!

ನಗು ಬಂತೆ? ನಿಜ ಸ್ವಾಮಿ.  ಹೆಗಲ ಮ್ಯಾಲೆ ತಲೆ ಇರೊದೇ ತುಂಬಾ ಕಷ್ಟ. ನೀವೂ ನೋಡುತ್ತಿರುತ್ತೀರಿ. ಕೆಲವರು ಸಿಕ್ಕ ಚಿಕ್ಕ ಯಶಸ್ಸನ್ನೇ ತಿಂದು ತೇಗಿ ಉಬ್ಬಿದ ಬಲೂನಾಗಿ ಎತ್ತರ ಹಾರಾಡುತ್ತಿರುತ್ತಾರೆ. ಅವರಿಗೆ ಅರಿವಿಲ್ಲದಂತೆ ತಲೆ ಮೇಲೆ ಕೊಂಬು ಬೆಳೆದುಬಿಟ್ಟಿರುತ್ತದೆ. ಎದುರಿಗ್ಯಾರು ಸಿಕ್ಕರೂ ಅವರ ಯಶಸ್ಸಿನದೇ ಮಾತು. ನಿಧಾನವಾಗಿ ಬೇರೆಯವರನ್ನು ತೃಣವಾಗಿ ಕಾಣಲು ಪ್ರಾರಂಭಿಸುತ್ತಾರೆ. ಅವರ ಮನದ ಬಲೂನ ತುಂಬಾ ಅಹಮಿಕೆಯ ಗಾಳಿ. ಒಟ್ಟಾರೆ ಸಿಕ್ಕ ಚಿಕ್ಕ ಯಶಸ್ಸು ಅವರ ತಲೆಗೇರಿರುತ್ತದೆ. ಹೆಗಲ ಮೇಲೆ ತಲೆ ಇರಲ್ಲ!

ಇನ್ನೊಂದು ಬಗೆಯವರದು ಬೇರೆ ತರದ ಕತೆ. ಸಣ್ಣ ಸೋಲಿಗೇ ನಡುಗಿ ಬಿಡುತ್ತಾರೆ. ಸೋಲಿನ ಭೂತ ವಿಪರೀತ ಕಾಡುತ್ತಿರುತ್ತದೆ. ಸೋತೊಡನೆ ಇಡೀ ಜಗತ್ತೇ ತಮ್ಮ ಮೇಲೆ ತಿರುಗಿ ಬೀಳುತ್ತದೆಂಬ ಭಾವ. ಅರ್ಧ ಗ್ಲಾಸು ನೀರಿದ್ದರೂ “ಇರೋದು ಅರ್ಧ ಗ್ಲಾಸು ಮಾತ್ರ ಎಂಬ ನಿರಾಶೆ. ಅವರಿಗೆ ಬದುಕೇ ನಿಸ್ಸಾರ, ನೀರಸ.

ಇವರದೂ ಅದೇ ಸಮಸ್ಯೆ! ಹೆಗಲ ಮೇಲೆ ತಲೆ ಇಲ್ಲದಿರೋದು.

ನಿಜ. ಗೆದ್ದಾಗ ಬೀಗುತ್ತೇವೆ. ಸೋತಾಗ ಕುಗ್ಗುತ್ತೇವೆ. ಇದು ಸಹಜ ಪ್ರಕ್ರಿಯೆ. ಆದರೆ ಒಂದು ವಿಷಯ ನೆನಪಿಡಬೇಕು. ಯಾವುದೂ ಶಾಶ್ವತವಲ್ಲ. ಈ ಕ್ಷಣಕ್ಕೆ ಮಾತ್ರ ಅದು ಸತ್ಯ. ಮುಂದಿನ ಕ್ಷಣದಲ್ಲೇ ಏನು ಬೇಕಾದರೂ ನಡೆಯಬಹುದು. ಯಾವ ಸೋಲೂ ಶಾಶ್ವತವಲ್ಲ; ಅಂತೆಯೇ ಗೆಲುವೂ!

18_7_2008_3_07_6051_krishna

ಗೀತೆಯಲ್ಲಿ ಶ್ರೀಕೃಷ್ಣನ ಮಾತೊಂದಿದೆ.”ಸುಖೇ ದುಖೇ ಸಮೇಕೃತ್ವ….” ಎಂಬ ಶ್ಲೋಕವದು. ಅದರ ಸಾರಾಂಶವಿಷ್ಟೇ. ಜೀವನದಲ್ಲಿ ಸುಖ, ದುಃಖ ಬರುತ್ತಿರುತ್ತದೆ, ಹೋಗುತ್ತಿರುತ್ತದೆ. ಆದರೆ ಯಾವಾಗಲೂ ಸ್ಥಿತಪ್ರಜ್ಞತೆಯನ್ನ ಕಾಯ್ದಿಟ್ಟುಕೊಂಡಿರಬೇಕೆಂದು. ಎಲ್ಲರ ಬದುಕಿನ ಅಂತಿಮ ಉದ್ದೇಶ ಒಂದೇ. ಅದು ತೃಪ್ತಿ, ನೆಮ್ಮದಿ. ಯಾವ ದಿಕ್ಕಿನಿಂದ ನುಗ್ಗಿದರೂ, ಯಾವ ದಾರಿ ಉಪಕ್ರಮಿಸಿದರೂ ಗುರಿ ಮಾತ್ರ ತೃಪ್ತಿಗಾಗೇ. ಈ ಸೋಲು ಗೆಲುವುಗಳೆಲ್ಲಾ ರಸ್ತೆಯಲ್ಲಿ ಎದುರಾಗುವ ಹಳ್ಳಕೊಳ್ಳಗಳು. ಒಟ್ಟಾರೆ ಗುರಿಸಾಧನೆಗೆ ಯಾವುದೂ ಅಡ್ಡಿಪಡಿಸುವುದಿಲ್ಲ ಎಂಬುದು ಗುರಿಯೆಡೆಗೆ ಶೃದ್ದೆಯಿಂದ ಸಾಗುವವನಿಗೆ ತಿಳಿದೇ ಇರುತ್ತದೆ.

ತನ್ನೊಳಗಿನ ಅಹಂ ನ್ನು ಇಗೋವನ್ನು ಕೆಳಮಟ್ಟದಲ್ಲಿರಿಸಿಕೊಂಡಿದ್ದರೆ ನಿರಾಶೆ, ದುಃಖ, ಹತಾಶೆ ಹೆಚ್ಚಾಗಿ ಬಾಧಿಸದು. ಚಿಕ್ಕ ಗೆಲುವಿಗೇ ಮನದ ಬಲೂನಿನಲ್ಲಿ ಅಹಮಿಕೆಯ ಗಾಳಿ ತುಂಬಿಸಿಕೊಂಡವ ಎದುರಾದ ಚಿಕ್ಕ ಸೋಲಿಗೇ ಸೂಜಿ ಚುಚ್ಚಿಸಿಕೊಂಡು ನೆಲಕ್ಕೆ ಕುಸಿಯುತ್ತಾನೆ. ಅಲ್ಲಿಗೆ ನೆಮ್ಮದಿ ನಿರ್ನಾಮ!

ಅದೇ ರೀತಿ ನಿರಾಶೆ ಕೂಪದಲ್ಲಿ ಬಿದ್ದವನದ್ದೂ ಪರಿಸ್ಥಿತಿ ಅದರಂತೆಯೇ. ಅದೃಷ್ಟ ಕೂಡಿ ಬಂದೊಡೆ ತಲೆ ಹೆಗಲ ಮೇಲಿರಲ್ಲ, ಕಾಲು ನೆಲದ ಮೇಲಿರಲ್ಲ. ಮತ್ತೆ ಅದೇ ಚಕ್ರಪಥ… ಅದೇ ಪಾತಾಳ.

ಜೀವನದ ಸಂಧ್ಯೆಯಲ್ಲಿ ಬಾಳಿಡೀ ದೊರೆತ ಸುಖ ಮತ್ತು ದುಃಖ ಎರಡನ್ನೂ ಪಟ್ಟಿ ಮಾಡಿದರೆ ಎರಡೂ ಸಮನಾಗಿರುತ್ತದೆ. ಹುಟ್ಟುವಾಗ ಅತ್ತಷ್ಟೇ ಬಾಲ್ಯದಲ್ಲಿ ನಕ್ಕಿರುತ್ತೇವೆ. ಬಾಲ್ಯದಲ್ಲಿ ಪಟ್ಟ ಸಂತಸದಷ್ಟೇ ವೃದ್ದಾಪ್ಯದಲ್ಲಿ ನೋವು ಪಡುತ್ತೇವೆ. ಹಾಗಾಗಿ ಬದುಕು ಸಿಹಿ ಕಹಿಗಳನ್ನು ಸಮನಾಗಿ ಹಂಚುತ್ತದೆ.

ಯಾವ ಕೆಲಸದಲ್ಲಿಯೂ ಅದರ ಸುಖ ದುಃಖ ಬಾಧಿಸದಿರಲಿ. ಗೆದ್ದಾಗಲೂ ಬಿದ್ದಾಗಲೂ ಪ್ರಾರಂಭದಲ್ಲಿದ್ದಷ್ಟೇ ಉತ್ಸಾಹ, ಶ್ರಧ್ದೆ, ಸಂಯಮದಿಂದ ಪುನಃ ಆರಂಭಿಸುವ ಮನಸ್ಸು ನಮ್ಮದಾಗಲಿ.

ಎಂಥ ಯಶಸ್ಸು ದೊರೆತಗಲೂ ಯಾವುದೇ ಅವಮಾನ ಇದಿರಾದಾಗಲೂ,
ನಮ್ಮ ತಲೆ ಹೆಗಲ ಮ್ಯಾಲೆ ಇರಲಿ!

Advertisements
ಟಿಪ್ಪಣಿಗಳು
 1. Gururaj ಹೇಳುತ್ತಾರೆ:

  ನನ್ನ ಒಬ್ಬ ಸ್ನೇಹಿತನು ಮೊದಲನೇ ವಿಭಾಗಕ್ಕೆ ಸೇರಿದವ… ಯಾವಾಗಲು ತನ್ನ ಬಗ್ಗೆ ನೇ ಹೇಳಿ ಕೊಲ್ಲುತ್ತಿರುತ್ತಾನೆ… ಅವನ office ಕಥೆಗಳು ಯಾವಾಗಲೂ ಅವನ ತುಟಿ ಅಂಚಿನಲ್ಲಿ… ಬಹುಶ ತಾನು ಮಾಡಿರೋದು ಯಾರಿಗೂ ಆಗಲಾರದು ಅಂತ ಅಹಂ ಇರಬೇಕು… ದೇವರೇ ಕಾಪಾಡಬೇಕು ನಮ್ಮನ್ನು 😦

 2. rohini ಹೇಳುತ್ತಾರೆ:

  shubha vandanegalu ranjith sirge
  ಎಂಥ ಯಶಸ್ಸು ದೊರೆತಗಲೂ ಯಾವುದೇ ಅವಮಾನ ಇದಿರಾದಾಗಲೂ,
  ನಮ್ಮ ತಲೆ ಹೆಗಲ ಮ್ಯಾಲೆ ಇರಲಿ!

  nija svarga naraka yeradu ide ii prapanchadalle ide yendu tilidavaru heltare kandita namma jeevanadalli ondu dina sukha bandare. innondu dina dhukka baruttade iveradannu samanagi kandu kolluvavaru matra yavagalu nemmadi inda iruttare alva ranjith sir

 3. ವಿಜಯರಾಜ್ ಕನ್ನಂತ ಹೇಳುತ್ತಾರೆ:

  nimma uLida barahagaLige vibhinnavaada baraha….
  dinadinda dinakke nimma lekhanagaLa tooka hecchaagtaa ide….
  nandu body weight hecchaada haage:-)

  anyways…very nice write-up….. aagaaga badalaavaNegaagi intaha lekhana bareetha iri

 4. ರಂಜಿತ್ ಹೇಳುತ್ತಾರೆ:

  ನಿಜ ಸರ್‍. ಆದರೆ ಅನುಭವಗಳು ಎಲ್ಲರಿಗೂ ತಕ್ಕ ಪಾಠ ಕಲಿಸುತದೆ. ಬದುಕು ಬೆಳೆದಂತೆ ನಡೆಯೂ ಮಾಗುತ್ತದೆ.

  ಬೇರೆಯರಲ್ಲಿರುವಂತೆ ನಮ್ಮಲ್ಲೂ ಹುಳುಕುಗಳಿರುತ್ತವೆ. ನೋಡಿ, ಕೇಳಿ ಅರಿತು ಕ್ಷಣ ಕ್ಷಣವೂ ಕಲಿಯುತಿರಬೇಕಲ್ಲವೆ ? ಆಗಲೇ ಬಾಳಬಂಡಿಯ ದಾರಿ ಸಲೀಸು..

  ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್ ಸರ್‍..

 5. ರಂಜಿತ್ ಹೇಳುತ್ತಾರೆ:

  ರೋಹಿಣಿ,

  ನಮಸ್ತೆ ನಿಮಗೂ.

  ಅದಕ್ಕೆ ಬದುಕಿನ ಸಮಾನತೆಯ ತತ್ವ ಅನ್ನುತ್ತಾರೆ. ಕೆಲವರಿಗೆ ಅದು ಪೂರ್ಣನಿಜವಲ್ಲದೇ ಹೋಗಬಹುದು. ಆದರೆ ಅದನ್ನು ನಂಬುವುದರಿಂದ ನೆಮ್ಮದಿ ಸಿಗುವುದಾದರೆ ಯಾಕೆ ನಂಬಬಾರದು ಅಲ್ಲವೆ?

  ಆದರೆ ಈ ಸ್ಥಿತಪೃಜ್ಞತೆ ಅಷ್ಟು ಸುಲಭವಲ್ಲ. ದುಃಖಕ್ಕೆ ಮನಸ್ಸನ್ನು ಜಡ ಮಾಡಿಕೊಂಡರೆ ಸುಖವನ್ನು ಅನುಭವಿಸಲು ಕಷ್ಟವಾದೀತು. ಅಲ್ಲವೇ?

 6. ರಂಜಿತ್ ಹೇಳುತ್ತಾರೆ:

  ವಿಜಯ್ ರಾಜ್,

  ನೀವು ನನ್ನನ್ನು ನೋಡದೇ ಹೋಗಿದ್ದರಿಂದ ಲೇಖನದ ತೂಕವನ್ನು ನಿಮ್ಮ ಭಾರಕ್ಕೆ ಹೋಲಿಸಿಕೊಂಡಿರಿ.

  ಇಲ್ಲವಾದರೆ ನನ್ನ ಮರ್ಯಾದೆ ಹೋಗುತ್ತಿತ್ತು..:)

  ಥ್ಯಾಂಕ್ಯೂ ಸರ್ ನಿಮ್ಮ ಅನಿಸಿಕೆಗೆ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s