ನಿನ್ನನು ತುಂಬಾ ಮಿಸ್ ಮಾಡಿಕೊಳ್ಳುತ್ತಾ….

Posted: ನವೆಂಬರ್ 25, 2008 in ಹನಿಗಳು...

 

ನೋವುಗಳ ಮೇಲಾಣೆ..!

ನಿನ್ನನ್ನು ಒಂಚೂರೂ
ಮಿಸ್ ಮಾಡ್ಕೋತಾ ಇಲ್ಲ..

ನೀನು ಸ್ವಲ್ಪಾನೂ
ನನಪಾಗ್ತಾ ಇಲ್ಲ..

ನಿಜ ಹೇಳಬೇಕಂದ್ರೆ
ನಿನ್ನನ್ನು ಕೊಂಚ ಕೂಡ
ಪ್ರೀತಿಸ್ತಿಲ್ಲ…

ಇದೆಲ್ಲಾ ನಿಜ ಕಣೇ..

ನಿನ್ನ ಸಮಸ್ತ ನೋವಿನ,

ದುಃಖದ ಮೇಲಾಣೆ !

 

************

ಗೆಲುವು…

’ನಿನ್ನನ್ನು ನನಗಿಂತ
ಜಾಸ್ತಿ ಯಾರು ಪ್ರೀತಿಸಲ್ಲ’
ಅಂತ ದೇವರ ಹತ್ತಿರ
ಬೆಟ್ ಕಟ್ಟಿ ಗೆಲ್ತೀನಿ..

ನಿಂಗೆ ಖುಷಿಯಾಗುತ್ತೆ
ಅನ್ನುವ ಕಾರಣಕ್ಕೆ
ನಿಮ್ಮಪ್ಪ ಅಮ್ಮನೆದುರು
ಬೇಕಂತಲೇ
ಸೋಲ್ತೀನಿ…:)

ಟಿಪ್ಪಣಿಗಳು
 1. Gururaj ಹೇಳುತ್ತಾರೆ:

  I like the title – ನೋವುಗಳ ಮೇಲಾಣೆ..! and the promises are just opposite to that. Brilliantly crafted!

 2. Roopa Satish ಹೇಳುತ್ತಾರೆ:

  :-((
  Painful kavanagalanna chennagide annoke kashta aagutte..
  Its PAINFULLLLL !!

 3. chetana chaitanya ಹೇಳುತ್ತಾರೆ:

  hitavAda nOvu

 4. rohini ಹೇಳುತ್ತಾರೆ:

  namaste ranjith sir
  ನಿನ್ನ ಸಮಸ್ತ ನೋವಿನ,ದುಃಖದ ಮೇಲಾಣೆ
  novu tumbi bareda hagide adu avala novu hagu dhukkhada melane andiddiralla tumba ishta ayitu

  ನಿಮ್ಮಪ್ಪ ಅಮ್ಮನೆದುರು ಬೇಕಂತಲೇ ಸೋಲ್ತೀನಿ

  preetisuva avaligagi avala khushigagi yenu bekadaru madalu siddha anda hagide.

 5. shivuu.k ಹೇಳುತ್ತಾರೆ:

  ನೋವಿನ ಮೇಲಾಣೆ ! ಆಹಾ ! ಎಲ್ಲಿ ಸಿಗುತ್ತೆ ರಂಜಿತ್ ನಿಮಗೆ ಇಂಥ ಪದಗಳು. ನಿಜಕ್ಕೂ ನಾನು ನಿಮ್ಮ ಕವನದ ಸಾಲಿನಲ್ಲಿ ಬರುವ ಪದಗಳ ಆಭಿಮಾನಿಯಾಗಿಬಿಟ್ತಿದ್ದೇನೆ… ಹೀಗೆ ಬರೆಯುತ್ತಿರಿ !
  ಆಹಾ! ನನ್ನ ಬ್ಲಾಗಿನಲ್ಲಿ ಇಬ್ಬನಿಗಳ ಅರಮನೆಯನ್ನು ನೋಡಲು ಬಿಡುವು ಮಾಡಿಕೊಂಡು ಬನ್ನಿ !

 6. ಪ್ರದೀಪ್ ಹೇಳುತ್ತಾರೆ:

  ನಿಜವಾದ ಕವಿಗಳು ಅಂದ್ರೆ ನೀವೇ ಕಣ್ರೀ.. !! :oD

 7. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ಮತ್ತೊಮ್ಮೆ ಸುಂದರ ಕವಿತೆಗಳು, ರಂಜಿತ್ ನಿಮ್ಮ ಮೇಲಂತೂ ಹೊಟ್ಟೆ ಕಿಚ್ಚು ದಿನೇ ದಿನೇ ಹೆಚ್ಚುತ್ತಿದೆ.. ಒಂದಕ್ಕೊಂದು ತದ್ವಿರುದ್ದ ಕವಿತೆಗಳು……ತುಂಬ ಸುಂದರವಾಗಿವೆ.

 8. ವಿಜಯರಾಜ್ ಕನ್ನಂತ ಹೇಳುತ್ತಾರೆ:

  eradoo kavithegaLu ishta aaythu…. adara hindiruva novinindaagi manasige kashta aaythu….
  nijavaada kavithe huttodu bhaavateevrateyalliye alwa…

 9. ರಂಜಿತ್ ಹೇಳುತ್ತಾರೆ:

  ಗುರುರಾಜ್,

  ಥ್ಯಾಂಕ್ಯೂ ಸರ್‍…

  ********

  ರೂಪಾ,

  ನೋಡಿ ನಾನೆಂಥ ಕೆಲಸ ಮಾಡುತ್ತಿದ್ದೇನೆ, ಕವನದ ಹೆಸರಲ್ಲಿ ನೋವನ್ನು ಹಬ್ಬಿಸುತ್ತಿದ್ದೇನೆ…

  ನೋವುಗಳುಳ್ಳ ಕವನವನ್ನು ಚೆನ್ನಾಗಿದೆ ಅನ್ನಲೂ ಸಂಕಟವಾಗುವುದು ನಿಜ.

  ಆದರೆ ಸಾಮೀಪ್ಯದ ಬೆಲೆಯನ್ನು ನಮಗೆ ಚೆನ್ನಾಗಿ ಅರಿವು ಮಾಡಿಸುವುದು ಈ ಮಿಸ್ ಮಾಡಿಕೊಳ್ಳುವ ಪ್ರಕ್ರಿಯೆಗಳೇ ಅಲ್ಲವೇ?

 10. ರಂಜಿತ್ ಹೇಳುತ್ತಾರೆ:

  ಚೇತನಾ,

  ಏನೋ ಹುಡುಗ, ಮಾಮೂಲಾಗಿ ಪ್ರೀತಿ , ವಿರಹ ಅಂತೆಲ್ಲಾ ಬಡಬಡಿಸಿಕೊಳ್ಳುತ್ತಿದ್ದಾನೆ ಎಂದುಕೊಳ್ಳದೇ ಬಂದು ಪ್ರತಿಕ್ರಯಿಸಿರುವಿರಿ..

  ಥ್ಯಾಂಕ್ಸ್ ಮೇಡಂ..

  ************

  ರೋಹಿಣಿ,

  ಆಕೆಯ ನೋವಿನ ಮೇಲೆ ಆಣೆ ಹಾಕಿ ಸುಳ್ಳು ಹೇಳಿದರೆ, ಆಕೆಯ ನೋವೆಲ್ಲಾ ತೀರುತ್ತದೇನೋ ಎಂಬ ಆಶಯ..:)

  ಪ್ರೀತಿಸುವ ಹುಡುಗಿ ಖುಷಿಯಿಲ್ಲದೇ ಹೋದರೆ, ಪ್ರೀತಿ ಅರಳುವ ಬದಲು ನರಳುವುದಲ್ಲವೇ..

  ಅಂದ ಹಾಗೆ ನನ್ನನ್ನು ಸರ್‍ ಅನ್ನದಿರಲು ಏನು ತಗೊಳ್ಳುತ್ತೀರಿ?:)

  ಥ್ಯಾಂಕ್ಸ್ ಅನಿಸಿಕೆಗೆ…

 11. ರಂಜಿತ್ ಹೇಳುತ್ತಾರೆ:

  ಶಿವು,

  ಎದೆಯ ಸಂತೆಯಲ್ಲಿ ವಿರಹದ ರೂಪಾಯಿ ಇತ್ತರೆ ಬೇಕಾದಷ್ಟು ಪದಗಳು ಸಿಗ್ತವೆ ಶಿವು…
  ಪ್ರಯತ್ನಿಸಿ ನೋಡಿ..:)

  ಥ್ಯಾಂಕ್ಸ್..

  ***********

  ಪ್ರಕವಿಗಳೇ,

  ಗೆಳೆಯರೆಲ್ಲಾ ನನ್ನನ್ನು ದೇವದಾಸ ಅನ್ನುತ್ತಿದ್ದರು, ನೀವು ಕಾಳಿದಾಸ ಎಂದು ಮರ್ಯಾದೆ ಉಳಿಸಿದಿರಿ..:)

  ಥ್ಯಾಂಕ್ಸ್..

 12. ರಂಜಿತ್ ಹೇಳುತ್ತಾರೆ:

  ಶರಶ್,

  ಥ್ಯಾಂಕ್ಸ್..

  ಹೊಟ್ಟೆಯ ಕಿಚ್ಚು ಎದೆಯಬಯಲಿಗೂ ಹಬ್ಬಲಿ,

  ನೋವ ಕಳೆಗಳೆಲ್ಲಾ ನಶಿಸಿ , ಪ್ರೀತಿ ಬೆಳೆಯು ಬೆಳೆಯಲಿ..:)

 13. ರಂಜಿತ್ ಹೇಳುತ್ತಾರೆ:

  ವಿಜಯ್ ರಾಜ್,

  ಸಂತೋಷದ ಬೆಲೆ ತಿಳಿಯಲು ನೋವು ಬೇಕೇ ಬೇಕಲ್ವಾ?

  ಆದರೆ ನೋಡಿ ವಿಜಯ್ ರಾಜ್..

  ಈ ಭಾವತೀವ್ರತೆಯಿಂದಾಗಿ ಚಂದನೆಯ ಗದ್ಯ ಬರೆಯಲು ಅಡ್ಡಿಯಾಗುತಿದೆ…:(

 14. ರಾಜೇಶ್ ಮಂಜುನಾಥ್ ಹೇಳುತ್ತಾರೆ:

  ಪ್ರೀತಿಯ ರಂಜಿತ್,

  ನೋವನ್ನು ನೋವಾಗದಂತೆ ಚಿತ್ರಿಸಿದ ಬಗೆ ನಿಜಕ್ಕೂ ಮನೋಹರ, ನೋವ ಯಾತನೆ ಅದೆಂತಹುದೋ ಅಮಲು ತರುವಂತಹುದಲ್ಲವೆ, ಹಿತವೆನಿಸಿತು ನಿಮ್ಮ ಎಲ್ಲಾ ಸಾಲುಗಳು…

  “ಮನದ ವಿಷಾದ-ವಿರಹಗಳನ್ನೆಲ್ಲ ತಳ್ಳಿ
  ಹಬ್ಬಲಿ ಈ ನಿಮ್ಮ ನೀಲಿ ಹೂವಿನ ಬಳ್ಳಿ
  ಕಟ್ಟಿ ನಿಮ್ಮ ಈ ಹೂ ಬಳ್ಳಿಗೊಂದು ಚಪ್ಪರ
  ಹರಡಲಿದು ಮನದಾಳದಷ್ಟು ವಿಸ್ತಾರ
  ಬೆಳೆಯಲಿ ನಿಮ್ಮ ಓದುಗ ಪರಿವಾರ”

  ಪ್ರೀತಿಯಿಂದ
  -ರಾಜೇಶ್ ಮಂಜುನಾಥ್

 15. srujancartoonist ಹೇಳುತ್ತಾರೆ:

  sOtha preethi nijavaada arthadalli geddantheye..
  padya oduthiddanthe..

  khushiyaguthhade..

  srujan

 16. ನೀಲಾಂಜಲ ಹೇಳುತ್ತಾರೆ:

  ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?

 17. ರಂಜಿತ್ ಹೇಳುತ್ತಾರೆ:

  ರಾಜೇಶ್,

  ಥ್ಯಾಂಕ್ಸ್ ನನ್ನ ಮನದಂಗಳಕ್ಕೆ ಬಂದಿದ್ದಕ್ಕೆ.

  ನಿಮ್ಮ ಆಶಯಕ್ಕೂ ಕೂಡ..

  ಸೃಜನ್,

  ಅಂತಾದ್ರೆ ನನ್ನ ಕವನ ಗೆದ್ದಿತೇ?
  ನನಗ್ಯಾಕೋ ಪದಗಳ ಶಕ್ತಿಯ ಮೇಲೆ ನಂಬಿಕೆ ಇಲ್ಲ… ಅಷ್ಟೊಂದು ಭಾರವಾದ ಭಾವವನ್ನು ಸರಿಯಾಗಿ ವ್ಯಕ್ತಪಡಿಸುತ್ತದಾ ?

  ಥ್ಯಾಂಕ್ಸ್…

 18. ರಂಜಿತ್ ಹೇಳುತ್ತಾರೆ:

  ನೀಲಾಂಜಲ ಅವರೇ,

  ನಿಮಗೆ ನಾನು ಥ್ಯಾಂಕ್ಸ್ ಹೇಳಬೇಕಿದೆ… ಒಂದು ಒಳ್ಳೆ ಉದ್ದೇಶಕ್ಕಾಗಿ ಎಲ್ಲರನ್ನೂ ಒಟ್ಟುಗೂಡಿಸುತ್ತಿದ್ದೀರಿ…

  ನಾನು ನಿಮ್ಮೊಂದಿಗಿದ್ದೇನೆ..

 19. ಅನಾಮಿಕ ಹೇಳುತ್ತಾರೆ:

  Ranjit..nimma kavana odide..enanta helali?
  idu kevala nimma bhaavaneyaagiye uliyali..anubhavakke baaradirali anta aashisale?

  Usha

 20. Usha ಹೇಳುತ್ತಾರೆ:

  Ranjit..nimma kavana odide..enanta helali?
  ee novu kevala nimma kavanada bhaavanegalalliye irali..badukinallendu anubhavakke baaradiralendu aashisuve !!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s