ಮಿಸ್ಸಿಂಗ್ ಯೂ….

Posted: ಡಿಸೆಂಬರ್ 3, 2008 in ಕವಿತೆ

 

385980350_b9dfe731c5

ನೀನಿಲ್ಲದೆಯೂ ಖುಷಿಯಾಗಿರಲು ಸಾಧ್ಯ
ಎಂಬ ಪಾಠವನು ಕಲಿಯಲಾಗದೇ
ಸುಮ್ಮನೆ ಹಟ ಮಾಡುತಿಹುದು
ಪುಂಡ ಹುಡುಗನಂತಹ ಸಂಜೆ…

ಯಾವಾಗಲೂ ತನ್ನನ್ನು
ನಿನ್ನ ಮುದ್ದು ಮೊಗಕೆ ಹೋಲಿಸಿ
ನಿರ್ಲಕ್ಷ್ಯ ಮಾಡುತ್ತೇನೆಂದು ನೊಂದು
ಮುನಿಸಿಕೊಂಡಿಹನು ಚಂದಿರ…

ನೀನೆಲ್ಲೋ ದೂರದಲ್ಲಿ
ನಾನೆಲ್ಲೋ ಈ ಮೂಲೆಯಲ್ಲಿ 
ನಡುವಿನ ದೂರದಂತಷ್ಟಿರುವ
ಪ್ರೀತಿಯನು ಕಂಡು
ಏನೂ ಮಾಡಲಾಗದೇ ಇಬ್ಬರನೂ
ಪಿಳಿ ಪಿಳಿ ನೋಡುತಿಹುದು ನಕ್ಷತ್ರ…

ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿಲ್ಲ
ಎಂದು ಹೇಳಬಯಸುವ ಬಾಯನ್ನು
ಮೌನದಲೆ ಅಪಹಾಸ್ಯ ಮಾಡಿ
ಕಟ್ಟಿಹಾಕುತಿದೆ ಆತ್ಮಸಾಕ್ಷಿ..

ನೀನಿಲ್ಲದಿದ್ದರೂ ನಾ ಜೀವಂತವಾಗಿದ್ದೇನೆ
ಅನ್ನುತಲಿಹರು ಇಲ್ಲಿನ ಜನರು,
ಉಸಿರಾಡುತ್ತಿದ್ದರೆ ಸಾಕು ಬದುಕಿದ್ದಾನೆ
ಅಂದುಕೊಳ್ಳುವ ಮೂಢರು..

ಟಿಪ್ಪಣಿಗಳು
 1. Rajesh Manjunath ಹೇಳುತ್ತಾರೆ:

  ರಂಜಿತ್,
  ನಿಮ್ಮ ಕವನದ ಕೊನೆಯ 4 ಸಾಲುಗಳಲ್ಲಿ ಅಭಿವ್ಯಕ್ತಿಸಿರುವ ಪ್ರೇಮಿಯೊಬ್ಬನ ಅಸಹಾಯಕತೆ ಎಂತಹವರನ್ನು ಕಣ್ಣೀರಾಗಿಸುತ್ತದೆ. ಇದರ ಬಗ್ಗೆ ಏನನ್ನು ಬರಯಬೇಕೆಂದೇ ತೋಚುತ್ತಿಲ್ಲ, ನೀವು ತುಂಬಾ ನೊಂದು ಬರೆದಂತಿದೆ, ಮನದಲ್ಲಿ ಧೈರ್ಯವಿರಲಿ ಗೆಳೆಯ.
  -ರಾಜೇಶ್ ಮಂಜುನಾಥ್

 2. ವಿಜಯರಾಜ್ ಕನ್ನಂತ ಹೇಳುತ್ತಾರೆ:

  naDuvina dooradaShTiruva preeti…..
  entaha olleya kalapane….

  nimma novu kavanadalli haniyaagi uduruttiddre
  kavana nodi madhura yaataneyennalO illa
  nimma nOvige sahaanubhooti heLalO gottagtilla

 3. rohini ಹೇಳುತ್ತಾರೆ:

  tumba nondu baredantide
  apahasyamadi katti hakutide athma sakshi yestu chennagiro kalpane dairyavagigiri ranjith sir

 4. ಪ್ರದೀಪ್ ಹೇಳುತ್ತಾರೆ:

  ನಿಮ್ಮನ್ನು ಹೋಗಳಲು ಶಬ್ದಗಳೇ ಸಿಗುತ್ತಿಲ್ಲ ಕಣ್ರೀ 🙂

 5. ರಂಜಿತ್ ಹೇಳುತ್ತಾರೆ:

  ರಾಜೇಶ್ ಮಂಜುನಾಥ್,

  ನಿಮ್ಮ ಪ್ರೀತಿಗೆ ಥ್ಯಾಂಕ್ಸ್. ಅದು ಕವಿ ಸಮಯ ಅಷ್ಟೇ. ಇಷ್ಟೊಂದು ಸುಂದರ ಬದುಕನ್ನು ನೋವಿನ ಕೈಗೆ ಯಾಕೆ ನೀಡಲಿ?

  ವಿಜಯ್ ರಾಜ್,

  ವೈಯುಕ್ತಿಕವಾದ ನೋವೇನಿಲ್ಲ. ಕವಿತೆಯೊಂದು ಬರೆಯುವಾಗ ದಟ್ಟ ಭಾವವನ್ನು ಪದದೊಳಗೆ ಕಟ್ಟಿಹಾಕಬೇಕಾಗುತ್ತದೆ. ಅಷ್ಟೇ.

  ಬೇರೆ ರೀತಿಯ ಕವಿತೆಗಳನ್ನು ಹಿಂದೆಯೂ ಬರೆದಿದ್ದೇನೆ.

  ನಿಮ್ಮ ಅನಿಸಿಕೆಗಳನ್ನು ನೋಡಿ ಇನ್ನು ಮುಂದೆ ವಿಭಿನ್ನವಾಗಿ ಹೆಚ್ಚು ಬರೆಯಬೇಕನ್ನಿಸುತ್ತಿದೆ.

  ಅನಿಸಿಕೆಗೆ ಥ್ಯಾಂಕ್ಸ್ ಸರ್‍…

 6. ರಂಜಿತ್ ಹೇಳುತ್ತಾರೆ:

  ರೋಹಿಣಿ,

  ನಿಮ್ಮ ಪ್ರೀತಿಗೆ ಥ್ಯಾಂಕ್ಸ್ ಮೇಡಂ..

  ಪ್ರದೀಪ್,

  ಥ್ಯಾಂಕ್ಸ್ ಕಣ್ರೀ..:)

 7. SHWETHA ಹೇಳುತ್ತಾರೆ:

  Super!

 8. Rashmi ಹೇಳುತ್ತಾರೆ:

  tumba channagide…

 9. Rashmi ಹೇಳುತ್ತಾರೆ:

  tumba sogasagide .. i can feel the pain.

 10. Ruth ಹೇಳುತ್ತಾರೆ:

  thumba chennagide Ranjith..:)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s