ಬಾಂಬಿಟ್ಟುಕೊಂಡು ತಿರುಗುವವರು…

Posted: ಡಿಸೆಂಬರ್ 4, 2008 in ಕವಿತೆ

p1in

ಹೋಟೇಲಿನ ಒಳಗಿನಿಂದ ಧುಮ್ಮಿಕ್ಕಿದ ಹೊಗೆ
ದೇವರಿಗೆ ಕಂಪ್ಲೇಂಟು ನೀಡಲು ಹೋಗಿದೆ..

ಅಲ್ಲಿ ಉಕ್ಕಿದ ಆಕ್ರಂದನಗಳು, ನೋವಿನ ಹಾಡುಗಳು
ಇನ್ನೂ ಎದೆಯ ಬಾಗಿಲ ಹೊರಗೆ ಕಾಯುತಿವೆ
ಒಳಗಿನ ನಮ್ಮ ಗೊರಕೆಯಲಿ ಕೇಳದಾಗುತಿವೆ

ದಡಬಡಿಸಿ ಏಳುವೆವು ಆಗಲೋ ಈಗಲೋ ಒಮ್ಮೆ
ಅವರಿವರಿಗೆ ಬೆರಳು ತೋರಿಸಿ ಬೆಚ್ಚಗೆ ಹೊದ್ದು ಮಲಗುವೆವು ಮತ್ತೆ
ಏಳಲು ಇನ್ನೊಂದು ಆಗಬೇಕು..

ಭಯವಿಲ್ಲ ನಮಗೀಗ ಉಗ್ರಗಾಮಿಗಳ ಮೇಲೆ
ದಿಟ್ಟ ಮನಸ್ಸಿನ ಸೈನ್ಯವಿಹುದು ನೋಡಿಕೊಳ್ಳಲು,

ಭಯವೇನಿದ್ದರೂ
ಜೇಬು ತುಂಬಿಸಿಕೊಳ್ಳಲೋಸುಗ
ಅಲ್ಲೇ ಪಕ್ಕ ಒಳಗಿರುವ ಹೃದಯದಲಿ
ಬಾಂಬಿಟ್ಟುಕೊಂಡು ತಿರುಗುವ ರಾಜಕಾರಣಿಗಳ ಮೇಲಷ್ಟೇ,

ಯಾರ ಮೇಲೆಯೂ ಅಸಹ್ಯವಿಲ್ಲ ನಮಗೆ,
ಇದ್ದರೆ ಅವರನ್ನು ಆರಿಸಿ ಏರಿಸಿ ಕೂರಿಸುವ ನಮ್ಮ ಮೇಲೆ ನಮಗಷ್ಟೇ..

Advertisements
ಟಿಪ್ಪಣಿಗಳು
 1. rohini ಹೇಳುತ್ತಾರೆ:

  innu yedeya bagila horage kayutive
  olagina namma gorakeyali keladagide

  bhayavilla namagiga ugragamigala mele
  ditta manassina sainyavihudu nodikollalu

  iddare avarannu arisi yerisi kurisuva namma mele namagashte
  arthapoorna vagide ranjith sir

 2. ಪ್ರದೀಪ್ ಹೇಳುತ್ತಾರೆ:

  ಎಷ್ಟು ಚೆನ್ನಾಗಿ ಹೇಳಿದ್ದೀರಿ ರಂಜಿತ್ ಅವರೇ…
  “ಒಳಗಿನ ನಮ್ಮ ಗೊರಕೆಯಲಿ ಕೇಳದಾಗುತಿವೆ”
  “ದಡಬಡಿಸಿ ಏಳುವೆವು ಆಗಲೋ ಈಗಲೋ ಒಮ್ಮೆ
  ಅವರಿವರಿಗೆ ಬೆರಳು ತೋರಿಸಿ ಬೆಚ್ಚಗೆ ಹೊದ್ದು ಮಲಗುವೆವು ಮತ್ತೆ
  ಏಳಲು ಇನ್ನೊಂದು ಆಗಬೇಕು..”
  ನೂರಕ್ಕೆ ನೂರು ಸತ್ಯದ ಮಾತಿವು…

 3. shreedevi kalasad ಹೇಳುತ್ತಾರೆ:

  ಮೊದಲೆರಡು ಸಾಲುಗಳು ಹಿಡಿದಿಟ್ಟುಬಿಡುತ್ತವೆ. ನಿಮ್ಮ ಬಲೂನ್ ಕವನ ಚೆನ್ನಾಗಿದೆ

 4. ಚಾಮರಾಜ ಸವಡಿ ಹೇಳುತ್ತಾರೆ:

  ರಂಜಿತ್‌,

  ನಾನು ತುಂಬ ಇಷ್ಟಪಟ್ಟ ಸಾಲುಗಳಿವು:

  ’ದಡಬಡಿಸಿ ಏಳುವೆವು ಆಗಲೋ ಈಗಲೋ ಒಮ್ಮೆ
  ಅವರಿವರಿಗೆ ಬೆರಳು ತೋರಿಸಿ ಬೆಚ್ಚಗೆ ಹೊದ್ದು ಮಲಗುವೆವು ಮತ್ತೆ
  ಏಳಲು ಇನ್ನೊಂದು ಆಗಬೇಕು..’

  ಚೆನ್ನಾಗಿ ಬರೆದಿದ್ದೀರಿ. ದುರಂತದ ತೀವ್ರತೆಯನ್ನು ಕಟ್ಟಿಕೊಟ್ಟಿದೆ ಕವನ. ಇದ್ದದ್ದನ್ನು ಇದ್ದಂತೆ ಬಿಚ್ಚಿಟ್ಟಿದೆ.

 5. shivu. ಹೇಳುತ್ತಾರೆ:

  ದುಮ್ಮಿಕ್ಕಿದ ಹೊಗೆ ದೇವರಿಗೆ ಕಂಪ್ಲೇಂಟು ಕೊಡುಲು ಹೋಗಿದೆ !
  ನನಗಿಷ್ಟವಾದ ಸಾಲು…. ಚಿನ್ನಾಗಿದೆ ಕವನ.

 6. ರಂಜಿತ್ ಹೇಳುತ್ತಾರೆ:

  ಪ್ರದೀಪ್, ರೋಹಿಣಿ,

  ಇಷ್ಟವಾಯ್ತೆ ಕಲ್ಪನೆ?

  ಈಗ ಹಾಗೆಯೇ ನಡೆಯುತ್ತಿದೆ ಅಲ್ಲವೆ? ಮತ್ತೆ ನಿದಿರೆ ಹೋಗುತ್ತೇವೆ.:(

  ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು..

 7. ರಂಜಿತ್ ಹೇಳುತ್ತಾರೆ:

  ಶ್ರೀದೇವಿ ಕಳಸದ,

  ನನ್ನ ಪುಟ್ಟ ತೋಟಕ್ಕೆ ಕಾಲಿಟ್ಟಿದ್ದಕ್ಕೆ ಧನ್ಯವಾದಗಳು ಮೇಡಂ…

  ಚಾಮರಾಜ ಸವಡಿ,

  ನಿಮಗೂ ಸ್ವಾಗತ ಸರ್‍.

  ಶಿವು,

  ಥ್ಯಾಂಕ್ಸ್.

 8. Tejaswini ಹೇಳುತ್ತಾರೆ:

  ವಾಸ್ತವಿಕತೆಗೆ ಕನ್ನಡಿ ಹಿಡಿಯುವ ಕವನ..ಇಷ್ಟವಾಯಿತು.

 9. Roopa Satish ಹೇಳುತ್ತಾರೆ:

  Nija, Namma mele namage bejaaru / ashya ashte, aarisi koorisida tappige:-(

 10. ರೇಶ್ಮಾ ಹೇಳುತ್ತಾರೆ:

  ಧುಮ್ಮಿಕ್ಕಿದ ಹೊಗೆ ಕಂಪ್ಲೇಟು ಕೊಡಲು ಹೋಗಿದೆ.. ಸುಂದರ ಕಲ್ಪನೆ ರಂಜಿತ್….
  ಕವನ ಇಷ್ಟವಾಯ್ತು..

 11. ರಂಜಿತ್ ಹೇಳುತ್ತಾರೆ:

  ತೇಜಸ್ವಿನಿ, ರೂಪ, ರೇಶ್ಮಾ,

  ನಿಮಗೆ ಇಷ್ಟವಾಯಿತೆಂದರೆ ಕವಿತೆ ಯಶಸ್ವಿಯಾಯಿತೆಂಬ ಧನ್ಯತಾಭಾವ ಮೂಡಿದೆ.

  ತುಂಬಾ ಥ್ಯಾಂಕ್ಸ್..

 12. Santhosh Chidambar ಹೇಳುತ್ತಾರೆ:

  nijakku tumba chennagide.. hrudayasparshi kavana..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s