ಒಂದು ಸಾಲಿನ ಕತೆಗಳು..!

Posted: ಡಿಸೆಂಬರ್ 18, 2008 in ಒಂದು ಸಾಲಿನ ಕತೆಗಳು..

 

೧. ಜಗಳಾಡಿಕೊಂಡು ಮಾತು ಬಿಟ್ಟ ರಾತ್ರಿ ಪವರ್‍ ಹೋಯಿತು. ಅವನಿಗೆ ಮೇಣದ ಬತ್ತಿ, ಆಕೆಗೆ ಅಡುಗೆಮನೆಯಲಿ ಬೆಂಕಿಪೊಟ್ಟಣ ಇರುವ ಜಾಗ ಗೊತ್ತಿತ್ತು. ಜೊತೆಯಾಗಿ ದೀಪ ಹಚ್ಚಿದರು…

೨. ತನಗೆ ಆಕ್ಸಿಡೆಂಟ್ ಆದಾಗ ರಕ್ತ ಕೊಟ್ಟಿದ್ದು ಹೊಲೆಯರ ರಂಗ ಅನ್ನುವುದು ರಾಮಾ ಜೋಯೀಸರಿಗೆ ತಾನು ಬದುಕಿದ್ದಾಗ ಗೊತ್ತಾಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೇನೋ…

೩. ನನ್ನ ಮೊದಲ ಮಗ ಬಿ.ಇ. ಓದಿ ಇಂಜಿನಿಯರ್‍ ಆಗಿದಾನೆ, ಎರಡನೆಯವ ಅಕೌಂಟೆಂಟ್, ಮೂರನೆಯವ ಯಾಕೋ ಎಸ್ಸೆಸ್ಸೆಲ್ಸಿಯಲ್ಲಿ ಮೂರ್ ಸಲ ಡುಮ್ಕಿ ಹೊಡೆದಿದ್ದಾನೆ… ರಾಜಕಾರಣಕ್ಕೆ ಇಳಿಸೋಣ ಅಂತಿದೀನಿ… ಅಲ್ಲಿ ಹೋದ್ರೆ ಉಳಿದವರಿಗಿಂತ ಚೆನ್ನಾಗಿ ಬದುಕ್ಕೋತಾನೆ..

೪. ಡಿಗ್ರಿ ಮುಗಿಯುತ್ತಿದ್ದ ಹಾಗೆ ಮನೆ ಬಿಟ್ಟು ಓಡಿಹೋಗಿ ಮದುವೆಯಾಗುವ ಪ್ಲಾನ್ ಹಾಕುತ್ತಿದ್ದ ಮಗ ಕೊನೆಯ ಸೆಮಿಸ್ಟರ್ ನಲ್ಲಿ ಫೇಲ್ ಆದ. ಕೆಲಸ ಇಲ್ಲದವನನ್ನು ಹೇಗೆ ಮದುವೆಯಾಗಲಿ ಅನ್ನುತ್ತಾ ಅವಳು ಹೊರಟು ಬೇರೆ ಮದುವೆಯಾದಳು.  ತನ್ನ ರಿಟೈರ್ ಮೆಂಟ್ ಹಣವಿದೆ.. ಸ್ವಂತ ಬಿಸಿನೆಸ್ಸ್ ಮಾಡಿದರಾಯಿತು…ಮುಂದಿನ ಎಕ್ಸಾಮ್ ಗೆ ಚೆನ್ನಾಗಿ ಓದಿಕೋ ಎಂದ ಅಪ್ಪ.

೫. ಆಗಷ್ಟೇ ತುಂಬು ಜನಸಂದಣಿಯ ಮಾರ್ಕೆಟ್ ನಲ್ಲಿ ಬಾಂಬಿಟ್ಟು ಮನೆಗೆ ಬಂದ ಉಗ್ರಗಾಮಿ ಸುಸ್ತಾಗಿ “ಅಮ್ಮಾ.. ಒಂದು ಲೋಟ ಕಾಫಿ ಕೊಡಮ್ಮಾ” ಅಂದ.. ಒಳಗಿನಿಂದ ತಂಗಿ ” ಅಮ್ಮ ತರಕಾರಿ ತರಲು ಮಾರ್ಕೆಟ್ ಗೆ ಹೋಗಿದಾಳೆ” ಅಂದಳು..

೬. ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಆಕೆ ಬಹಳ ವರ್ಷಗಳ ನಂತರ ಸಿಕ್ಕಾಗ ಮಗ್ಗುಲಲ್ಲಿ ಮಗುವೊಂದಿತ್ತು,ಬೇಸರಗೊಂಡು ಹೊರಡಲನುವಾದಾಗ ಮಗು” ಆಂಟಿ.. ಈ ಅಂಕಲ್ ನಿಮ್ಗೆ ಪರಿಚಯಾನಾ?”ಅಂತ  ಕೇಳಿದಾಗ ಅವನ ಮೊಗದಲ್ಲಿ ನಗುವರಳಿತು..

೭. ಅವಳು ತನ್ನ ಮೊಡವೆ ಬಗ್ಗೆ ಮುದ್ದಾಗಿ ವ್ಯಥೆಪಡುತ್ತಿದ್ದರೆ ಆ ದುಃಖದಲ್ಲಿ ಭಾಗಿಯಾದ..ತನಗಿರುವ ಕಿಡ್ನಿ ವಿಫಲತೆ ಕುರಿತು ಹೇಳುವುದು ಮರೆತುಹೋಗಿತ್ತು…

೮. ರಿಸಲ್ಟ್ ದಿನ ಪಾಸಾದ್ರೆ ಉರುಳುಸೇವೆ ಮಾಡ್ತೀನಿ ಅಂತ ಹರಕೆ ಹೊತ್ತವನಿಗೆ “ಡಿಸ್ಟಿಂಕ್ಷನ್” ಬಂದದ್ದು ಗೊತ್ತಾದ ಕೂಡಲೇ ಇದರಲ್ಲಿ ದೇವರದ್ದೇನಿದೆ ಎಲ್ಲ ನಾನು ಕಷ್ಟಪಟ್ಟದ್ದರ ಫಲವೇ ಅಲ್ಲವಾ ಅನ್ನಿಸತೊಡಗಿತು…

೯. ಅವತ್ತು ಅವನಿಗೆ ಹಾಲಿನಲ್ಲಿ ಸ್ನಾನ ಮಾಡುವ ಕನಸು ಬಿದ್ದಿತ್ತು.. ಏಳುವಾಗ ತಡವಾಗಿ ಕಾರ್ಪೋರೇಷನ್ ನೀರು ಬರುವ ಸಮಯ ಆಗಿಹೋಗಿತ್ತು..

೧೦. ಮಾರುವವನ ಬಳಿ ಬಾರ್ಗೈನ್ ಮಾಡಿ ಅರ್ಧಕ್ಕರ್ಧ ಬೆಲೆಗೆ ತಂದ ಆಕಾಶಬುಟ್ಟಿ, ಹೊರಗೆ ಒಬ್ಬಂಟಿಯಾಗಿ ಮನೆಯ(ಜನರ)ಕತ್ತಲನ್ನು ಕಾಯುತ್ತಿದೆ..
 

ಕೊನೆಯ ಸಾಲು:  ಐದು ಪೇಜಿನ ಕತೆಯೊಂದು ತನ್ನನ್ನ ಒಂದೇ ಸಾಲಿಗೆ ಕೊಲ್ಲುವ ಪ್ರಯತ್ನ ಮಾಡಿದ್ದಕ್ಕೆ, ನನ್ನ ಮೇಲೆ “ಅಟೆಂಪ್ಟ್ ಟು ಮರ್ಡರ್” ಕೇಸ್ ಹಾಕಿದೆ..!

Advertisements
ಟಿಪ್ಪಣಿಗಳು
 1. Shivanandana ಹೇಳುತ್ತಾರೆ:

  ನನ್ನ ಮೊದಲ ಮಗ ಬಿ.ಇ. ಓದಿ ಇಂಜಿನಿಯರ್‍ ಆಗಿದಾನೆ, ಎರಡನೆಯವ ಅಕೌಂಟೆಂಟ್, ಮೂರನೆಯವ ಯಾಕೋ ಎಸ್ಸೆಸ್ಸೆಲ್ಸಿಯಲ್ಲಿ ಮೂರ್ ಸಲ ಡುಮ್ಕಿ ಹೊಡೆದಿದ್ದಾನೆ… ರಾಜಕಾರಣಕ್ಕೆ ಇಳಿಸೋಣ ಅಂತಿದೀನಿ… ಅಲ್ಲಿ ಹೋದ್ರೆ ಉಳಿದವರಿಗಿಂತ ಚೆನ್ನಾಗಿ ಬದುಕ್ಕೋತಾನೆ.. idu tumba hidstu nange, yellavu chenagide…

 2. rohini ಹೇಳುತ್ತಾರೆ:

  ನಮಸ್ತೆ ಫ್ರೆಂಡು

  ಜಗಳಾಡಿಕೊಂಡು ಮಾತು ಬಿಟ್ಟ ರಾತ್ರಿ ಪವರ್‍ ಹೋಯಿತು. ಅವನಿಗೆ ಮೇಣದ ಬತ್ತಿ, ಆಕೆಗೆ ಅಡುಗೆಮನೆಯಲಿ ಬೆಂಕಿಪೊಟ್ಟಣ ಇರುವ ಜಾಗ ಗೊತ್ತಿತ್ತು. ಜೊತೆಯಾಗಿ ದೀಪ ಹಚ್ಚಿದರು

  ಆಗಷ್ಟೇ ತುಂಬು ಜನಸಂದಣಿಯ ಮಾರ್ಕೆಟ್ ನಲ್ಲಿ ಬಾಂಬಿಟ್ಟು ಮನೆಗೆ ಬಂದ ಉಗ್ರಗಾಮಿ ಸುಸ್ತಾಗಿ “ಅಮ್ಮಾ.. ಒಂದು ಲೋಟ ಕಾಫಿ ಕೊಡಮ್ಮಾ” ಅಂದ.. ಒಳಗಿನಿಂದ ತಂಗಿ ” ಅಮ್ಮ ತರಕಾರಿ ತರಲು ಮಾರ್ಕೆಟ್ ಗೆ ಹೋಗಿದಾಳೆ” ಅಂದಳು..

  ಈ ಸಾಲುಗಳು ತುಂಬಾ ಇಷ್ಟವಾದವು

 3. shivu. ಹೇಳುತ್ತಾರೆ:

  ರಂಜಿತ್ ಸಾರ್,

  ಮತ್ತೆ ಬಂತಲ್ಲ ನನ್ನ ಫೇವರೇಟ್ ಒಂದು ಸಾಲಿನ ಕತೆಗಳು ನಿಮಗೆ ತುಂಬಾ ಥ್ರ್ಯಾಂಕ್ಸ್. ೫ನೆಯದು ನನ್ನ ಫೇವರೇಟ್.

 4. Rajesh Manjunath ಹೇಳುತ್ತಾರೆ:

  Ranjith,
  No words sir… Nice one liners…
  -Rajesh Manjunath

 5. Roopa Satish ಹೇಳುತ್ತಾರೆ:

  Ranjith,
  Ella kathegaLu tumba chennaagive…
  Fact is katheya final lines odidamele naavu adara modala putagalanna without reading imagine maadkolteevi. Idonthara namma brainge sanna kelsa kodutte.
  Its an awesome feeling.
  U keep going 🙂
  Roopa

 6. sunaath ಹೇಳುತ್ತಾರೆ:

  ಪುಟದುದ್ದ ಕತೆ ಯಾಕೆ ಬೇಕು?
  one linerಏ ಸಾಕು.

 7. ರೇಶ್ಮಾ ಹೇಳುತ್ತಾರೆ:

  nice lines….
  tumbaa ishtavaaytu… ellavu chennaagive… koneya saalu saha..:)
  ivugalanna odidmele dodda kathegalanna odbeku anisthaane illa kanri…:)

 8. ರಂಜಿತ್ ಹೇಳುತ್ತಾರೆ:

  ಶಿವನಂದನ,

  ಅದೇ ಈಗಿನ ಪರಿಸ್ಥಿತಿ ಆಗಿದೆ.ಬೇಸಿಕ್ ನಿಂದ ಒಂದು ಬದಲಾವಣೆ ಆಗದೇ ಹೋದರೆ ಯುವಕರಿಗೆ ರಾಜಕೀಯದ ಮೇಲೆ ಆಸಕ್ತಿ ಎಲ್ಲಿ ಉಳಿಯುತ್ತೆ?:)

  ********

  ರೋಹಿಣಿ ಫ್ರೆಂಡ್,

  ಎರಡೂ ತುಂಬಾ ಕಾಡುವ ಸಾಲುಗಳಲ್ವಾ?

  *******

  ಶಿವು ಸರ್‍,

  ನಿಮಗಿಷ್ಟ ಆಗೇ ಆಗುತ್ತೆ ಅಂತ ಗೊತ್ತಿತ್ತು..:)

  *********

  ರಾಜೇಶ್,

  ಒಂದು ಸಾಲಿನ ಕತೆಗಳಿಗೆ ಒಂದು ಸಾಲಿನ ಕಾಮೆಂಟ್?:)

  ********

 9. ರಂಜಿತ್ ಹೇಳುತ್ತಾರೆ:

  ರೂಪ,

  ಓದಲು ನಿಮ್ಮ ಮೆದುಳಿಗೆ ಕೆಲಸಕೊಡುತ್ತೋ ಇಲ್ಲವೋ ಗೊತ್ತಿಲ್ಲ.ಬರೆಯಲು ಮೆದುಳಿಗೆ ಒಳ್ಳೆಯ ಕಸರತ್ತು ಕೊಡುತ್ತೆ ಅನ್ನೋದು ಮಾತ್ರ ನಿಜ.

  ಹಾಗೆಯೇ ಬಹಳ ತೃಪ್ತಿ ಕೂಡ ಕೊಡುತ್ತೆ..:)

  ********

  ಸುನಾತ್,

  ಇದೊಂಥರ ಟ್ವೆಂಟಿ-ಟ್ವೆಂಟಿ ಕ್ರಿಕೆಟ್ ಮ್ಯಾಚ್ ಇದ್ದ ಹಾಗೆ ಅಲ್ವಾ ಸರ್‍?:)

  *******

  ರೇಶ್ಮಾ,

  ನಿಮಗೆ ಕೊನೆಯ ಸಾಲಿನ ಪಂಚ್ ಇಷ್ಟವಾಗಿದ್ದು ಬಹಳ ಖುಷಿಕೊಟ್ಟಿತು:)

  ****

  ಮೆಚ್ಚಿಕೊಂಡ ಎಲ್ಲರಿಗೂ ಥ್ಯಾಂಕ್ಸ್..:)

 10. jagadish ಹೇಳುತ್ತಾರೆ:

  Good concept.

 11. ranjanahegde ಹೇಳುತ್ತಾರೆ:

  ಮಾರ್ಕೆಟ್‌ನಲ್ಲಿ ಮಗುವನ್ನೆತ್ತಿಕೊಂಡು ಬಂದ ಆಕೆ… ಮಾರ್ಕೆಟ್‌ನಲ್ಲಿ ಬಾಂಬ್, ಇಬ್ಬರು ಒಟ್ಟಿಗೆ ದೀಪ ಹಚ್ಚಿದರು ಇವು ನನಗೆ ಫೆವರೇಟ್ ಆಗಿವೆ..ಎಲ್ಲವೂ ಚೆನ್ನಾಗಿವೆ…

 12. Athmiya ಹೇಳುತ್ತಾರೆ:

  YENRI EDANELLA ODTHA EDRE KELSA MADO MANASE ERALLARI. PARTICULARAGI EDE CHENNAGIDE ANTHA HELOKE AGALLARI NIV BAREDIRODU NAN ODIRODU YELLA THUMBA CHENNAGIDE.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s