ಬಡಜೋಗಿಯ ಪ್ರೀತಿ…

Posted: ಡಿಸೆಂಬರ್ 24, 2008 in ಕವಿತೆ

beggar

ದುಃಖವನು ಬದುಕಿಡೀ
ಹೊರೆಯಂತೆ ಹೊತ್ತವ ನಾ,
ಹೆತ್ತವರ ಕನಸುಗಳಲ್ಲಿ
ಸುಪ್ಪತ್ತಿಗೆಯಲಿ ಹೊತ್ತು
ಕಳೆವವಳು ನೀ

ದುಃಖ ಸುಖ ಎಂದೂ
ರಾಜಿಯಾಗಿಲ್ಲವಂತೆ ಗೆಳತೀ..

ಹಣ ಇಲ್ಲದವ ಹೆಣ,
ಕೆಲಸವಿಲ್ಲದವ ಕಸ,
ರಾಜಕೀಯ ಕ್ರೂರಮೃಗಗಳಾಡುವ
ವನದಲ್ಲಿ ಹಸಿವೆಯಿಂದ
ನರಳುವವನೇ ಹಸು ಇಲ್ಲಿ..

ಸೌಖ್ಯಕ್ಕೆ ಮರುಳಾಗುವ
ಹುಡುಗಿಯರೇ ಇರುವ
ಜಗದಲ್ಲಿ ನಿನಗ್ಯಾಕೆ
ಹೊಟ್ಟೆಗೆ ಹಿಟ್ಟಿಲ್ಲದವನ ಹಾಡು
ಬಡಜೋಗಿಯ ಪ್ರೀತಿ?

ನಿನ್ನ ಒಂದು ಕಣ್ಣಹನಿಯನು ತಡೆಯಲು
ಒಂದು ಮುದ್ದು ಕನಸನೂ ಅರಳಿಸಲು
ಚೈತನ್ಯವಿಲ್ಲದೇ ನಲುಗುತಿರುವಾಗ

ಹೀಗೆ ನನ್ನಲ್ಲಿ ಒಂದಾಗುವ
ಖುಷಿಯನ್ನು ಕಣ್ಣಲ್ಲಿ ಹೊತ್ತು
ನನ್ನೆದುರು ನಿಂದರೆ,

ನಿರ್ಲಕ್ಷಿಸುವ ಶಕ್ತಿಯೆಲ್ಲಿಂದ
ತರಲಿ ಹೇಳು?

ಟಿಪ್ಪಣಿಗಳು
 1. Rajesh Manjunath ಹೇಳುತ್ತಾರೆ:

  ರಂಜಿತ್,

  “ನಿರ್ಲಕ್ಷಿಸುವ ಮಾತನಾಡದಿರು ಗೆಳೆಯ
  ತಡೆಯ ಬಲ್ಲೆಯೇನು ನಾ ಸುರಿವ ಪ್ರೀತಿ ಮಳೆಯ
  ಜಗದ ದೃಷ್ಟಿಯಲಿ ನೀ ಬರಿಯ ಬಡ ಜೋಗಿಯಾಗಿರಬಹುದು
  ಪ್ರೀತಿ ಲೋಕದ ಕಿಂದರಿ ಜೋಗಿ ನೀನೆಂದು ನನ್ನೆದೆಯು ನುಡಿದಿಹುದು”
  ನಿಮ್ಮ ಹುಡುಗಿ ಹೀಗೆಂದರೆ ಏನ್ಮಾಡ್ತೀರಾ ಸರ್???

  ನಿಮ್ಮ ಎಲ್ಲಾ ಸಾಲುಗಳು ತುಂಬಾ ಹಿಡಿಸಿದವು. ಅದರಲ್ಲೂ
  “ಸೌಖ್ಯಕ್ಕೆ ಮರುಳಾಗುವ
  ಹುಡುಗಿಯರೇ ಇರುವ
  ಜಗದಲ್ಲಿ ನಿನಗ್ಯಾಕೆ
  ಹೊಟ್ಟೆಗೆ ಹಿಟ್ಟಿಲ್ಲದವನ ಹಾಡು
  ಬಡಜೋಗಿಯ ಪ್ರೀತಿ?” ಈ ನಾಲ್ಕು ಸಾಲು ತುಂಬಾ ಇಷ್ಟ ಆಯ್ತು.

  ಇನ್ನೂ ಒಳ್ಳೊಳ್ಳೆ ಕವನಗಳು ಬರಲಿ ನಿಮ್ಮಿಂದ, ನಾನು ಒಂದು ಸಾಲಿನ ಕತೆಗೆ ಕಾಯ್ತಾ ಇದ್ದೀನಿ.

  -ರಾಜೇಶ್ ಮಂಜುನಾಥ್

 2. rohini ಹೇಳುತ್ತಾರೆ:

  Namaste frendu
  ದುಃಖವನು ಬದುಕಿಡೀ
  ಹೊರೆಯಂತೆ ಹೊತ್ತವ ನಾ,
  ಹೆತ್ತವರ ಕನಸುಗಳಲ್ಲಿ
  ಸುಪ್ಪತ್ತಿಗೆಯಲಿ ಹೊತ್ತು
  ಕಳೆವವಳು ನೀ

  ನಿನ್ನ ಒಂದು ಕಣ್ಣಹನಿಯನು ತಡೆಯಲು
  ಒಂದು ಮುದ್ದು ಕನಸನೂ ಅರಳಿಸಲು
  ಚೈತನ್ಯವಿಲ್ಲದೇ ನಲುಗುತಿರುವಾಗ

  ಹೀಗೆ ನನ್ನಲ್ಲಿ ಒಂದಾಗುವ
  ಖುಷಿಯನ್ನು ಕಣ್ಣಲ್ಲಿ ಹೊತ್ತು
  ನನ್ನೆದುರು ನಿಂದರೆ,
  ನಿರ್ಲಕ್ಷಿಸುವ ಶಕ್ತಿಯೆಲ್ಲಿಂದ
  ತರಲಿ ಹೇಳು?
  tumba ishta ayturi nimage trpti kottide ankotini

 3. ಶೆಟ್ಟರು (Shettaru) ಹೇಳುತ್ತಾರೆ:

  ಜಗದಲ್ಲಿ ನಿನಗ್ಯಾಕೆ
  ಹೊಟ್ಟೆಗೆ ಹಿಟ್ಟಿಲ್ಲದವನ ಹಾಡು
  ಬಡಜೋಗಿಯ ಪ್ರೀತಿ?

  saalugalu eko hidisidavu

  -shettaru

 4. ರಂಜಿತ್ ಹೇಳುತ್ತಾರೆ:

  ಸಲ್ಲಾಪದ ಸುನಾಥ್,

  ನಿಮಗಿಷ್ಟವಾಗಿದ್ದು ಖುಷಿಯಾಯಿತು ಕಣ್ರೀ:)

  ********

  ರಾಜೇಶ್,

  ಹಾಗನ್ನುವ ಹುಡುಗೀರು ಇದಾರಾ? 😉

  ಕವಿತೆಯ ಹುಡುಗಿಗೆ ಬಡಜೋಗಿಯ ಹಾಡೇ ಇಷ್ಟ.ಸುಪ್ಪತ್ತಿಗೆಯಲಿ ಮೆರೆದ ಹುಡುಗಿಯನು ಪ್ರೀತಿಯ ನೆಪದಲಿ ಸೌಖ್ಯವಿಲ್ಲದ ಬದುಕು ನೀಡಲು ಮನಸ್ಸೊಪ್ಪದ ಹುಡುಗನ ಪಾ(ಹಾ)ಡು ಇದು.

  ಫಕೀರನೊಬ್ಬನ ಫರ್ಮಾಯಿಶ್ ನಿಮಗಿಷ್ಟವಾದದ್ದು ಖುಷಿಯಾಯಿತು.

  ***********

  ರೋಹಿಣಿ,

  ಮತ್ತೆ ಸರ್‍ ಅಂತಿದ್ದೀರಿ..:(

  ಬರೆದಾದ ಕೂಡಲೇ ಕೊಂಚ ತೃಪ್ತಿ ಇತ್ತರೂ ಪೂರ್ಣವಾಗಿ ಅಲ್ಲ.ಇನ್ನೂ ಚೆನ್ನಾಗಿ ಬರೆಯಬಹುದು.( ಹೀಗಂದುಕೊಂಡರೆ ಮಾತ್ರ ಇನ್ನೂ ಬರೆಯಲು ಉಮೇದು ಅಲ್ವೆನ್ರಿ?)

  ***********

  ಶೆಟ್ಟರೇ,

  ಥ್ಯಾಂಕ್ಸು..:)

 5. naviluagri ಹೇಳುತ್ತಾರೆ:

  ಬೇಡ ಬೇಡ ಅಂತಾನೆ ಬೇಕೇ ಬೇಕು ಅನುವ ಭಾವನೆ ತುಂಬ ಚಂದವಾಗಿ ಮೂಡಿ ಬಂದಿದೆ ಗುರುಗಳೇ..

  ನಿರ್ಲಕ್ಷಿಸುವ ಶಕ್ತಿಯೆಲ್ಲಿಂದ
  ತರಲಿ ಹೇಳು

  ಇದು ಓದಿದ ಮೇಲೆ ಯಾಕೋ ನನ್ನ ಸ್ವಂತ ಕವಿತೆ ಅಂತ ಅನ್ನಿಸೋಕೆ ಶುರುವಾಗಿದೆ 😦

 6. shivu. ಹೇಳುತ್ತಾರೆ:

  ರಂಜಿತ್,

  ದುಃಖ ಸುಖ ಎಂದು ರಾಜಿಯಾಗಿಲ್ಲವಂತೆ ಗೆಳತಿ ಸಾಲು ಬಲು ಇಷ್ಟವಾಯಿತು……ಕವನ ತುಂಬಾ ಸೊಗಸಾಗಿದೆ…..

 7. bhargavi ಹೇಳುತ್ತಾರೆ:

  Namaskara Ranjith
  Thumba chennagi bardidya nange thumba ishta aythu kano
  Mansige thumba hatra agide ee kavana

 8. ಪ್ರದೀಪ್ ಹೇಳುತ್ತಾರೆ:

  ಹೊಗಳಲು ಶಬ್ದಗಳೇ ಸಿಗುತ್ತಿಲ್ಲ! ತುಂಬಾ ಚೆನ್ನಾಗಿದೆ.. 🙂

 9. ರಂಜಿತ್ ಹೇಳುತ್ತಾರೆ:

  ಸೋಮಣ್ಣ,

  ಹುಡುಗಿಯರ ಮನಸ್ಸನ್ನು ಅರೆದು ಕುಡಿದವನು ನೀನು..ನಿನ್ನ ಕವಿತೆ ಅಂತ ನಿನಗೇ ಅನ್ನಿಸೋಕೆ ಶುರುವಾಗಿದೆ ಅಂದ ಮೇಲೆ ಈ ಕವಿತೆ ಯಶಸ್ವಿ ಅಂತಾನೇ ಭಾವಿಸ್ತೇನೆ…:)

  ***********

  ಶಿವು ಸರ್‍,

  ನಿಮ್ಮ ಪ್ರೋತ್ಸಾಹಕ್ಕೆ ಥ್ಯಾಂಕ್ಸ್..

  ******

  ಭಾರ್ಗವಿ ಮೇಡಮ್,

  ಹೀಗೆ ಆಗಾಗವಾದ್ರೂ ಬ್ಲಾಗಿನತ್ತ ಕಣ್ಣು ಹಾಯಿಸುತ್ತಿರಿ…

  *****

  ತುಂಬಾ ಥ್ಯಾಂಕ್ಸ್ ಪ್ರದೀಪ್..:)

 10. ಪಲ್ಲವಿ ಎಸ್‌. ಹೇಳುತ್ತಾರೆ:

  ಪ್ರೀತಿಯ ರಂಜಿತ್‌,

  ಮನಸು ಕಳೆದುಹೋಗುವುದು ಕನಸಿನ ಹಿಂದೆ
  ಅಷ್ಟಾವಕ್ರನಿಗೆ ಅಮೃತಮತಿ ಸೋತು ಹೋದಂತೆ
  ಜೋಗಿಯ ಹಿಂದೆ ತಾನೇ ಮುಗುದೆ ಹೋಗಿದ್ದು
  ಗಂಡನ ಮನೆಯತ್ತ ಹಿಂತಿರುಗಿ ನೋಡದಂತೆ

  ಪ್ರೀತಿ ಥೇಟ್‌ ನದಿಯಂತೆ, ಅದರ ನಡಿಗೆಯಂತೆ
  ಹುಟ್ಟುತ್ತಲೇ ಹರಿಯತೊಡಗುವುದು ಹುಡುಗಿಯಂತೆ
  ಅದ ತಡೆಯುವುದಾವುದು? ಅದ ನಿಲಿಸಲಾಗದು
  ಹಬ್ಬುವುದು ಒಣ ಬಣವೆಗೆ ಬಿದ್ದ ಕಿಚ್ಚಿನಂತೆ

  ಚೆನ್ನಾಗಿದೆ ಕವಿತೆ.

 11. ರಂಜಿತ್ ಹೇಳುತ್ತಾರೆ:

  ನಿಮ್ಮ ಕಾಮೆಂಟಿನ ಸೂರ್ಯನೆದುರು ನನ್ನ ಕವನದ ಮಿಣುಕು ಹುಳು ಕೀಳರಿಮೆಯಿಂದ ಓಡಿಹೋಗಿದೆ..:)

  ನನ್ನ ಕವಿತೆಯನ್ನು ನಾಚಿಕೊಳ್ಳುವಂತೆ ಮಾಡಿದೆ.

  ಒಳ್ಳೆಯ ಕವಿತೆಯನ್ನು ಹೀಗೆ ಕಾಮೆಂಟಿನಲ್ಲೇ ಯಾಕೆ ಮುಗಿಸಿಬಿಡುತ್ತಿರುವಿರಿ?

  ನೀವು ಮತ್ತೆ ಫಾರಮ್ ಗೆ ಬಂದಿದ್ದು ಬಹಳ ಸಂತಸ ತಂದಿತು.

  ಥ್ಯಾಂಕ್ಸ್ ಪಲ್ಲವಿ.

 12. Roopa Satish ಹೇಳುತ್ತಾರೆ:

  hey ranjith,
  tumba chennagide 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s