ಪ್ರೀತಿ-ದ್ವೇಷ

Posted: ಡಿಸೆಂಬರ್ 29, 2008 in ಕವಿತೆ

ನೀ ಸಿಗಲಿಲ್ಲ ಎಂಬ ವಿಷಯವೇ
ಧಗ ಧಗಿಸುತಿದೆ ಎದೆಯಲಿ
ಅದರಿಂದ ನಿನ್ನ ಮೇಲಿನ ಪ್ರೀತಿಯೆಲ್ಲ
ಸಾಯುತ್ತದಾ ಎಂದು ಆಸೆಯಿಂದ
ಕಾಣುತ್ತಿದ್ದರೆ
ದ್ವೇಷ ಪ್ರೀತಿ ಎಲ್ಲಾ
ತನ್ನ ಸ್ಥಾನವನ್ನು
ಬದಲಿಸಿಕೊಳ್ಳುತ್ತಿದೆ

ಇವನನ್ನು ಎಷ್ಟು ಗಾಢ ವಾಗಿ
ಪ್ರೀತಿಸಲು ಯತ್ನಿಸಿದರೂ
ಅದೆಲ್ಲಾ ನಿನ್ನ ಮೇಲಿನ ದ್ವೇಷ ವಷ್ಟೇ
ಇವನ ಮೇಲಿನ ಪ್ರೀತಿಯಲ್ಲ !

ಈಗ ಅರಿವಾಗುತ್ತಿದೆ
ನಿನ್ನನ್ನು ಎಷ್ಟು ಪ್ರೀತಿಸುತ್ತಿದ್ದೆನೆಂದರೆ
ದ್ವೇಷವನ್ನೂ
ಪ್ರೀತಿಯಿಂದಷ್ಟೆ ಮಾಡಲು
ಸಾಧ್ಯವಾಗುತ್ತಿದೆ!

ಟಿಪ್ಪಣಿಗಳು
 1. rohini ಹೇಳುತ್ತಾರೆ:

  ನಮಸ್ತೆ ಫ್ರೆಂಡು

  ಈಗ ಅರಿವಾಗುತ್ತಿದೆ
  ನಿನ್ನನ್ನು ಎಷ್ಟು ಪ್ರೀತಿಸುತ್ತಿದ್ದೆನೆಂದರೆ
  ದ್ವೇಷವನ್ನೂ
  ಪ್ರೀತಿಯಿಂದಷ್ಟೆ ಮಾಡಲು
  ಸಾಧ್ಯವಾಗುತ್ತಿದೆ!

  ಈ ಪಾತೆರ ಮಸ್ತು ಇಷ್ಟ ಆಂಡ್
  ನನಲ ಶೋಕು ಬರೆಲೆ

 2. shivu. ಹೇಳುತ್ತಾರೆ:

  ದ್ವೇಷ ಪ್ರೀತಿ ಎಲ್ಲಾ ತನ್ನ ಸ್ಥಾನವನ್ನು ಬದಲಿಸಿಕೊಳ್ಳುತ್ತಿದೆ.

  ವಾಹ್ ! ತುಂಬಾ ಇಷ್ಟವಾಯುತು. ಮತ್ತು ವಾಸ್ತವಕ್ಕೆ ಹತ್ತಿರವಾದದ್ದು ಅನಿಸಿತು.

 3. ಸುನಾಥ ಹೇಳುತ್ತಾರೆ:

  ದ್ವೇಷ ಪ್ರೀತಿಯಾಗಿ ಬದಲಾದರೆ ಸ್ವಾಗತ!

 4. ಪಲ್ಲವಿ ಎಸ್‌. ಹೇಳುತ್ತಾರೆ:

  ಪ್ರೀತಿಯ ರಂಜಿತ್‌,

  ಕವಿತೆಯ ಕೊನೆಯ ನುಡಿಯಲ್ಲಿ ನೀವಿದ್ದೀರಿ. ಉಳಿದ ಕಡೆ ಮಿಸ್‌ ಆಗಿದ್ದೀರಿ. ನಿಮಗೂ ಹೀಗೆ ಅನ್ನಿಸಿದೆಯೇ?

  ಏನೋ ಹೇಳಲು ಹೋಗಿ, ಇನ್ನೇನೋ ಹೇಳುತ್ತ, ಅರೆರೆ ಮನಸ್ಸಿನ ಭಾವ ಈಗ ಸರಿಯಾಗಿ ಉಕ್ಕುತ್ತಿದೆ ಅನಿಸುವಷ್ಟರಲ್ಲಿ ಕವಿತೆ ಮುಗಿದೇ ಹೋಗಿದೆ.

  ಎಷ್ಟೋ ಸಾರಿ ನನಗೂ ಹೀಗಾಗಿದೆ. ಆದರೆ, ಅನಿಸಿದ್ದನ್ನು ಕವಿತೆಯಾಗಿ ಬರೆಯಲು ನನಗೆ ಸಾಧ್ಯವಾಗುತ್ತಿಲ್ಲ. ಅದನ್ನು ಸಾಧ್ಯವಾಗಿಸುತ್ತಿರುವ ನಿಮ್ಮ ಬಗ್ಗೆ ನನಗೆ ಅಭಿಮಾನಪೂರಿತ ಅಸೂಯೆಯಿದೆ. ಹಾಗೆ ನೋಡಿದರೆ ನಾನು ಕವಿತೆಗಳ ಕಡೆ ಆಕರ್ಷಣೆ ಬೆಳೆಸಿಕೊಂಡಿದ್ದೇ ನಿಮ್ಮ ಸೊಗಸಾದ ಕವಿತೆಗಳನ್ನು ಪದೆ ಪದೆ ಓದುವ ಮೂಲಕ.

  ಕಳೆದುಹೋಗಿರುವ ಕವಿ ರಂಜಿತ್‌ ಮತ್ತೆ ಮತ್ತೆ ವಿಜೃಂಭಿಸಲಿ. ಕೊಡಗಟ್ಟಲೆ ಭಾವನೆಗಳನ್ನು ಬೊಗಸೆಯಲ್ಲಿ ಹನಿಸುವ ಮೂಲಕ.

  ನಿಜಕ್ಕೂ ನಿಮ್ಮ ಸೊಗಸಾದ ಕವಿತೆಗಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ರಂಜಿತ್‌.

 5. ರಂಜಿತ್ ಹೇಳುತ್ತಾರೆ:

  ರೋಹಿಣಿ,

  ಇಂಕ್ಲೆಗ್ ಇಷ್ಟ ಆತ್ನ ಎಡ್ಡೆ ಬೊಂಡ ಪರ್ನ ಲಕ ಖುಷಿ ಆಂಡ್ ಯೆ…

  ಈರ್ನ ಅಭಿಮಾನೊಂಕೊಂಜಿ ಮಲ್ಲೊ ಥ್ಯಾಂಕ್ಸ್ ಗೆತ್ತೋನ್ಲೆ..:)

 6. ರಂಜಿತ್ ಹೇಳುತ್ತಾರೆ:

  ಶಿವು ಸರ್‍,

  ನಿಜವಾದ ಪ್ರೀತಿ ಅಂದ್ರೆ ಹಾಗೇ ಅಲ್ಲವ?

  ಅನಿಸಿಕೆಗೆ ಥ್ಯಾಂಕ್ಸ್!

 7. ರಂಜಿತ್ ಹೇಳುತ್ತಾರೆ:

  ಸುನಾಥ್,

  ನಿಮ್ಮ ಅಭಿಮತಕ್ಕೆ ನನ್ನ ಸಂಪೂರ್ಣ ಒಪ್ಪಿಗೆ.

  ನದಿ ಕೊನೆಗೆ ಕಡಲಿಗೆ ಹರಿವಂತೆ ನಮ್ಮೆಡೆಗೆ ಎಲ್ಲರ ಭಾವನೆಗಳು ಅಂತಿಮವಾಗಿ ಪ್ರೀತಿಯಾಗಿ ಬದಲಾದರೆ ಬದುಕು ಚಂದ.

 8. ರಂಜಿತ್ ಹೇಳುತ್ತಾರೆ:

  ಪ್ರೀತಿಯ ಪಲ್ಲವೀ,

  ಮದುವೆ ಊಟದಲ್ಲಿ ಗಮನಿಸಿದ್ದೀರಾ?ಮೊದಲು ಅನ್ನ,ಸಾರು,ಖಾರ ಎಲ್ಲಾ ಬಡಿಸಿ ನಂತರ ಕೊನೆಯಲ್ಲಿ ಮೊಸರನ್ನಕ್ಕೆ ಮುನ್ನ ಪಾಯಸ ಬಡಿಸುವ ಪರಿಪಾಟವಿದೆ. ಮೊದಲಿಗೇ ಪಾಯಸ ಹಾಕಿದರೆ ಚೆನ್ನಾಗಿ ಉಂಡು ಕೈತೊಳೆದು ಹೊರಡುತಾರಷ್ಟೇ..:)

  ಓದುಗನಿಗೆ ದಟ್ಟವಾದ ಭಾವವೊಂದನ್ನು ನೀಡಲು ಮಾನಸಿಕವಾದ ಸಿದ್ಧತೆ ನೀಡುವುದಕ್ಕೋಸ್ಕರವಷ್ಟೇ ಮೊದಲೆರಡು ಪ್ಯಾರಾಗಳು. ನನಗೆ ಹೇಳಬೇಕಿದ್ದಿದು ಕೊನೆಯ ಸಾಲುಗಳು ಮಾತ್ರ..

  ಇಷ್ಟಕ್ಕೂ ಈ ಕವಿತೆ ಎಂದೋ ಒಮ್ಮೆ ಬರೆದು ಮೂಲೆಯಲ್ಲಿಟ್ಟಿದ್ದು…ಈಗ ಮತ್ತೆ ಓದಿದಾಗ ಚೆನ್ನಾಗಿದೆಯೆನ್ನಿಸಿ ಹಾಕಿದೆ. ವರ್ಷಾಂತ್ಯದ ಸ್ಟಾಕ್ ಕ್ಲಿಯರೆನ್ಸ್ ಇದ್ದ ಹಾಗೆ:)

  ನಿಮಗೆ ನನ್ನ ಕವಿತೆಗಳ ಕುರಿತು ಹೇಗೆ ಅಸೂಯೆಯಿದೆಯೋ ಅಷ್ಟೇ ಅಸೂಯೆ,ಪ್ರೀತಿ ನಿಮ್ಮ ಗದ್ಯದ ಮೇಲೆ ನನಗಿದೆ.

  ಹೊಸ ವರ್ಷದಲ್ಲಿ ನಿಮ್ಮ ಅಸೂಯೆಯ ಕಿಚ್ಚಿಗೆ ತುಪ್ಪ ಸುರಿಯುವ ಪ್ರಯತ್ನ ಮಾಡುತ್ತಿರುತ್ತೇನೆ..;)

  ಥ್ಯಾಂಕ್ಸ್ ಪಲ್ಲವಿ.

 9. ಪಲ್ಲವಿ ಎಸ್‌. ಹೇಳುತ್ತಾರೆ:

  ನಿಜ ರಂಜಿತ್‌,

  ಪಾಯಸದ ರುಚಿಗೆ ಸೋತ ಮನ ಪದೆ ಪದೆ ಅದಕ್ಕೇ ಹಂಬಲಿಸುತ್ತಿದೆ. ಹಾಕಿದ ನಂತರ, ಪ್ರತಿಕ್ರಿಯೆ ಕಟುವಾಯಿತೇನೋ ಎಂದು ಮನ ಹಳಹಳಿಸಿತು. ನಿಮ್ಮ ಮರು ಪ್ರತಿಕ್ರಿಯೆ ನೋಡಿದ ನಂತರವೇ ಸಮಾಧಾನ.

  ಅಡಿಗರ ಹೊಸ ವರ್ಷದ ಪಾಕಕ್ಕಾಗಿ ಕಾಯುತ್ತಿದ್ದೇನೆ.

 10. hemapowar123 ಹೇಳುತ್ತಾರೆ:

  ಇವನನ್ನು ಎಷ್ಟು ಗಾಢ ವಾಗಿ
  ಪ್ರೀತಿಸಲು ಯತ್ನಿಸಿದರೂ
  ಅದೆಲ್ಲಾ ನಿನ್ನ ಮೇಲಿನ ದ್ವೇಷ ವಷ್ಟೇ
  ಇವನ ಮೇಲಿನ ಪ್ರೀತಿಯಲ್ಲ !

  ಇದಿಷ್ಟವಾಯ್ತು. ಈ ಸಾಲುಗಳಿಲ್ಲದೆ ಹೋಗಿದ್ದರೆ ಕವಿತೆಯ ಭಾವ ಬದಲಾಗಿಬಿಡುತಿತ್ತೇ? overall ಕವಿತೆಯ ಭಾವಕ್ಕೂ ಈ ಸಾಲುಗಳಿಗೂ ಏನೋ confusion ಇದ್ದಂತಿದೆ. ಆದರೂ ಕವಿತೆ ಚೆನ್ನಾಗಿದೆ, ಕಡೆಯ ಸಾಲುಗಳಂತೂ touchy 🙂

 11. ರಂಜಿತ್ ಹೇಳುತ್ತಾರೆ:

  ಪಲ್ಲವೀ,

  ಪ್ರತಿಕ್ರಿಯೆ ಕಟುವಾಗಿಲ್ಲ ಪಲ್ಲವಿ.ಮುಕ್ತವಾಗಿ ಅನಿಸಿಕೆ ನೀಡಿ ಪರವಾಗಿಲ್ಲ.ನನ್ನಲ್ಲಿ ತಪ್ಪಿದ್ದರೆ ಈ ಹಿಂದೆ “ಈ ರಾತ್ರಿ” ಕವನದಲ್ಲಿ ಮತ್ತೆ ಗದ್ಯದ ಶೈಲಿಯಲ್ಲಿ ಬದಲಾವಣೆ ತಂದಂತೆ ತಿದ್ದಿಕೊಳ್ಳುವೆ.

  ಉಡುಪಿ ಊಟದ ಉದಾಹರಣೆ ಫೇಡದ (ಈಗ ಮಿರ್ಚಿಯ?!) ಊರಿನವರಿಗೆ ಅರ್ಥವಾಗಿದ್ದು ಖುಷಿಯಾಯಿತು..;)

  ನೀವಿಲ್ಲಿ ಬಂದಿದ್ದಕ್ಕೇ ಥ್ಯಾಂಕ್ಸ್ ಅನ್ನಬೇಕು ನಾನು..:)

 12. ರಂಜಿತ್ ಹೇಳುತ್ತಾರೆ:

  ಹೇಮಾ,

  ಆ confusion ಇದೆ ಅಂತ ನಂಗ್ಯಾಕೋ ಅನ್ನಿಸ್ತಿಲ್ಲ.

  ಆ ಸಾಲಲ್ಲ, ಬೇರೆ ಯಾವ ಸಾಲು ತೆಗೆದರೂ ಕವಿತೆಯ ಭಾವ ಬದಲಾಗುತ್ತದೆ. ಒಂದ್ಸಲ ಒಂದೊಂದೇ ಸಾಲು ತೆಗೆದು ಓದಿ ಪ್ರಯೋಗ ಮಾಡಿ ನೋಡಿ..:)

  ನಿಮ್ಮ ಅನಿಸಿಕೆಗೆ ಥ್ಯಾಂಕ್ಸು..:)

 13. chetana chaitanya ಹೇಳುತ್ತಾರೆ:

  ಚೆಂದದ ಕವಿತೆಗಳಿಗೆ ಧನ್ಯವಾದ

 14. ರಂಜಿತ್ ಹೇಳುತ್ತಾರೆ:

  ಚೇತನಾ,

  ಚಂದದ ಕವಿತೆಗಳಿಗೆ ಮಾತ್ರವೇ?

  ಬರೆದ ಬಡಪಾಯಿಗೂ ಚೂರು ಕೊಟ್ಟಿದ್ದರೆ ಚೆನ್ನಿತ್ತು..:)

  ಥ್ಯಾಂಕ್ಸ್.

 15. ಅನಾಮಿಕ ಹೇಳುತ್ತಾರೆ:

  ದ್ವೇಷ-ಪ್ರೀತಿಗಳ ಸೇತುವೆಯನ್ನ ಚೆನ್ನಾಗಿ ಕಟ್ಟಿದ್ದೀರಿ…

  inthi,
  nimma haagesummane puneeth

  http://www.haagesummane.wordpress.com

 16. ರಂಜಿತ್ ಹೇಳುತ್ತಾರೆ:

  ನಿಮ್ಮ ಬ್ಲಾಗ್ ಗಮನಿಸಿದ್ದೇನೆ, ಚೆನ್ನಾಗಿದೆ.

  ಅನಿಸಿಕೆಗೆ ಥ್ಯಾಂಕ್ಸ್ ಪುನೀತ್..

 17. ವಿಜಯರಾಜ್ ಕನ್ನಂತ ಹೇಳುತ್ತಾರೆ:

  ireg enna onji thanks unDu…
  padya bhaari eDDe unDu…

 18. ರಂಜಿತ್ ಹೇಳುತ್ತಾರೆ:

  ವಿಜಯರಾಜ್,

  ಥ್ಯಾಂಕ್ಸ್ ಬೊಡ್ಚಿಯೇ… ಈರ್ ನ ಆಶೀರ್ವಾದ ಇತ್ತಂಡ ಪಾಪ್..:)

 19. Roopa Satish ಹೇಳುತ್ತಾರೆ:

  awesome, esp… last few lines…
  too gud Ranjith.

 20. Inchara ಹೇಳುತ್ತಾರೆ:

  ನನ್ನ ಜೀವನದಲ್ಲಿ ನಡೆದ ಹಾಗೆ ಇದೆ. ನಿಮ್ಮ ಬ್ಲಾಗ್ಸ್ ಓದಿ ನಾನು ನಿಮ್ಮ ಅಭಿಮಾನಿ ಆಗಿದ್ದೀನಿ.

 21. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಸ್ ರೂಪ ಮೇಡಮ್..

  ಇತ್ತೀಚೆಗೆ ನೀವು ಬರೆಯುವುದೂ ಕಡಿಮೆಯಾದಂತಿದೆ ?

  *****

  ಇಂಚರ,

  ಇಂತಹ ಕೋಟಿಗಟ್ಟಲೆ ಕವಿತೆಗಳು ನಡೆಯುವ ಜೀವನಕ್ಕೇ, ನಾವೆಲ್ಲಾ ಅಭಿಮಾನಿಗಳಾದರೆ ಹೇಗೆ?:)
  ಥ್ಯಾಂಕ್ಸ್, ಹೀಗೇ ಬರುತ್ತಿರಿ ನೀಲಿಹೂವಿಗೆ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s