ಅವಳು ಮತ್ತು ಡಿಸೆಂಬರ್‍…

Posted: ಡಿಸೆಂಬರ್ 31, 2008 in ಕವಿತೆ

dx-winter-snow-screensaver

ಒಂದ್ವಾರ ತವರಿಗೆ ಹೋಗ್ಬೇಕು
ನಾಳೇನೇ ಹೊರಡ್ತೀನಿ ಅಂದಳು
ಅವನ ಕಣ್ಣು ಜೂನ್ ಆಯಿತು..

ಯಾಕೋ ಬೇಜಾರು?
ಎಂದು ಮುದ್ದು ಮಾಡುತ ಕೇಳಿದಳು
“ನೀನಿಲ್ದೆ ನನ್ನೆದೆ ಖಾಲಿ
ಖಾಲಿ “ಅಂದ.
ದನಿಯಲ್ಲಿ ವಿರಹದ ಬೇಗೆ,
ಏಪ್ರಿಲ್ ಧಗೆ.

ನಗುತ್ತಾ ’ಹೋಗ್ಲಿ ಬಿಡೋ,
ಈಗ ಡಿಸೆಂಬರ್‍ ಅಲ್ವಾ?’
ಅಂತ ಕಣ್ಣುಹೊಡೆದು ಅವನ ದುಃಖ
ಕಡಿಮೆ ಮಾಡಲು ನೋಡಿದಳು..

ಕಿಟಕಿಯಾಚೆ ಕೂಡ
ಚಳಿಯಿಂದ ಮರದಿಂದ
ಎಲೆಗಳುರುಳಿದವು!

 

( ಓದುಗರಿಗೆಲ್ಲಾ ಹೊಸವರ್ಷದ ಶುಭಾಶಯಗಳು..:) )

Advertisements
ಟಿಪ್ಪಣಿಗಳು
  1. ಸುನಾಥ ಹೇಳುತ್ತಾರೆ:

    ನಿಮ್ಮ ಮನಮೋಹಕ ಕವನ ಓದಿ ಮನಸ್ಸು spring ಆಯಿತು.
    ಹೊಸ ವರ್ಷದ ಶುಭಾಶಯಗಳು

  2. rohini ಹೇಳುತ್ತಾರೆ:

    sakat undu marayare

  3. Gururaj ಹೇಳುತ್ತಾರೆ:

    Wishing you a Happy New Year 2009!

  4. kallare ಹೇಳುತ್ತಾರೆ:

    chennaagide ranjith…

    kone eradu saaalugalna helteera??
    chaliyonda maradinda- elegaluduridavu
    (chaliyinda elegaluduridavu
    maradinda elegaluduridavu…. hege nodteera adnna neevu? )

  5. ಶೆಟ್ಟರು (Shettaru) ಹೇಳುತ್ತಾರೆ:

    ಎಲ್ಲರಿಗೂ ಹೋಸ ವರುಷದ ಶುಭಾಷಯಗಳು…

  6. ರೇಶ್ಮಾ ಹೇಳುತ್ತಾರೆ:

    chennagide…

  7. ರಂಜಿತ್ ಹೇಳುತ್ತಾರೆ:

    ನಿಮಗೂ ಹೊಸವರ್ಷದ ಶುಭಾಶಯಗಳು ಸುನಾಥ್,

    ನಿಮ್ಮ ಅನಿಸಿಕೆಗೆ ನನ್ನ ಮನಸ್ಸೂ fall ಆಗಿದೆಯಲ್ಲ?:)

  8. ರಂಜಿತ್ ಹೇಳುತ್ತಾರೆ:

    ರೋಹಿಣಿ,

    ನಿಮಗಿಷ್ಟವಾಗಿದ್ದು ಖುಷಿಯಾಯ್ತು..:)

  9. ರಂಜಿತ್ ಹೇಳುತ್ತಾರೆ:

    ಗುರುರಾಜ್,ಶೆಟ್ಟರು,

    ನಿಮಗೂ ಹೊಸವರ್ಷದ ಶುಭಾಶಯಗಳು..:)

  10. ರಂಜಿತ್ ಹೇಳುತ್ತಾರೆ:

    ಕಲ್ಲರೆಮನೆಯವರೇ,

    ಅದು ಚಳಿಯಿಂದಾಗಿ ಮರದಿಂದ ಎಲೆಗಳುರುಳಿದವು ಎಂಬರ್ಥ.

    ಕಿಟಕಿಯಾಚೆ “ಕೂಡ” ಏನಕ್ಕೆ ಎಂದು ಕೇಳಿದ್ದರೆ ಉತ್ತರಿಸುವುದಕ್ಕೆ ರೋಮ್ಯಾಂಟಿಕ್ ಆಗಿರ್ತಿತ್ತು..;-)

  11. ರಂಜಿತ್ ಹೇಳುತ್ತಾರೆ:

    ರೇಶ್ಮಾ,

    ಕವಯತ್ರಿಯಾಗಿ ಇಷ್ಟೇ ಹೇಳುವುದಾ?
    ತಿದ್ದಿಕೊಳ್ಳಲು ತಯಾರಿರುವ ವಿದ್ಯಾರ್ಥಿ ನಾನು..ತಪ್ಪಿದ್ದರೆ ತಿದ್ದಿ ಬುದ್ದಿ ಹೇಳಬೇಕು ನೀವು:)

  12. ರೇಶ್ಮಾ ಹೇಳುತ್ತಾರೆ:

    ಅಯ್ಯಯ್ಯೊ… ಕವಯತ್ರಿ ಅಂತೆಲ್ಲ ಹೇಳಿ ಕಾಲೆಳೀತೀದೀರಾ ಹ್ಯಾಂಗೆ ಮಾರಾಯ್ರೆ?
    ನೀವು ನನ್ನನ್ನು ತಿದ್ದಬೇಕು..:)ಕವನ ನಿಜ್ವಾಗ್ಲು ಇಷ್ಟವಾಯ್ತು.. ಮನಸ್ಸಿನ ಭಾವನೆಗಳಿಗೆಲ್ಲ ಅಕ್ಷರ ರೂಪ ಕೊಡೋದು ಕಷ್ಟ ಅನಿಸ್ತು… ಅದ್ಕೆ short ಆಗಿ ಚೆನ್ನಗಿದೆ ಅಂತ ಬರ್ದೆ..:)

  13. ಪಲ್ಲವಿ ಎಸ್‌. ಹೇಳುತ್ತಾರೆ:

    ರಂಜಿತ್‌ಗೆ ವಿರಹ ಶುರುವಾದಂತಿದೆ? ಚೆನ್ನಾಗಿದೆ ಕವನ. ಎಷ್ಟಾದರೂ ಇದು ಎಲೆಯುದುರೋ ಕಾಲವಲ್ವಾ? ಎಲೆಗಳ ಜೊತೆಗೆ ಕಣ್ಣೀರೂ ಉದುರಿದವಾ?

  14. hemapowar123 ಹೇಳುತ್ತಾರೆ:

    ದೀಪಾವಳಿಗೆ ಬಂದಾಯ್ತು, ಈಗ ಮತ್ತೆ ಜನವರಿ ಚಳೀಲಿ ಜಗತ್ತಿನ ಅತ್ಯಂತ ರೊಮ್ಯಾಂಟಿಕ್ ದೇಶವನ್ನ ಬಿಟ್ಟು ಬರ್ತೀದ್ದೀರ… ಈ ಕವನ ಬೇರೆ. ಹ್ಮ್ ನಡೀಲಿ ನಡೀಲಿ 😉

  15. ರಂಜಿತ್ ಹೇಳುತ್ತಾರೆ:

    ರೇಶ್ಮಾ,

    ತುಂಬಾ ಥ್ಯಾಂಕ್ಸ್… ಅಂತೂ ನಿಮ್ಮಿಂದ ಹೊಗಳಿಸಿಕೊಳ್ಳಬೇಕೆಂಬ ಬಯಕೆ ತೀರಿತು..:)

  16. ರಂಜಿತ್ ಹೇಳುತ್ತಾರೆ:

    ಪ್ರೀತಿಯ ಪಲ್ವಿ,

    ಚಳಿಗಾಲ ಅಲ್ವೆ?

    ಅದೂ ಅಲ್ದೇ ಕರ್ನಾಟಕ ಮಾಲ್ಡೀವ್ಸ್ ನಿಂದ ಬಲು ದೂರ ಬೇರೆ…;)

    ವಿರಹ ಅಲ್ಲದೇ ರೋಮ್ಯಾಂಟಿಕ್ ಕೋನದಿಂದೊಮ್ಮೆ ಓದಿ ನೋಡಿ…

  17. ರಂಜಿತ್ ಹೇಳುತ್ತಾರೆ:

    ಹೇಮ್ಸ್,

    😉

    ಹಂಗೇನೂ ಇಲ್ಲ ಮಾರಾಯ್ತಿ…:)

    ರೋಮ್ಯಾಂಟಿಕ್ ದೇಶದಲ್ಲಿ ಒಂಟಿಯಾಗಿದ್ದುಕೊಂಡು ನಡೆಸುವುದೇನಿದೆ?:)

    ಪಲ್ಲವಿ ಚಳಿ ಬಗ್ಗೆ ಬರೀರಿ ಅಂತಿದ್ರು. ಚಳಿಯ ಹಳೆಯ ಅನುಭೂತಿ ನೆನೆದುಕೊಂಡು ಇಷ್ಟೇ ಬರೆಯಲು ಸಾಧ್ಯವಾಯ್ತು.

    ನೀವು ನನ್ನ ಕಾಲೆಳೆಯಲು ಅದೆಷ್ಟು ದಿನದಿಂದ ಸಂಚು ನಡೆಸ್ತಿದ್ದಿರಿ ?:)

  18. ವಿಜಯರಾಜ್ ಕನ್ನಂತ ಹೇಳುತ್ತಾರೆ:

    chennagide… nimage hosa varushaa sadaa tarali nooru harusha

  19. rohini ಹೇಳುತ್ತಾರೆ:

    ಯಾಕೋ ಬೇಜಾರು?
    ಎಂದು ಮುದ್ದು ಮಾಡುತ ಕೇಳಿದಳು
    “ನೀನಿಲ್ದೆ ನನ್ನೆದೆ ಖಾಲಿ
    ಖಾಲಿ “
    ii salugalanna mareyalaguttilla frendu tumba chennagide tingalugala hesarannu ponaisida riti

  20. shivu. ಹೇಳುತ್ತಾರೆ:

    ರಂಜಿತ್,

    ಹೊಸ ವರ್ಷದ ಶುಭಾಶಯಗಳು. ಇಂಥ ರೋಮ್ಯಾಂಟಿಕ್ ಕವನ ಓದಿದ ಮೇಲೆ ನಾನು ಮುಂದಿನ ಬಾರಿ ನನ್ನ ಬ್ಲಾಗಿನಲ್ಲೂ ಒಂದು ಕವನ ಹಾಕಿಯೇ ತೀರುತ್ತೇನೆ….

  21. ಪ್ರದೀಪ್ ಹೇಳುತ್ತಾರೆ:

    “ಅವನ ಕಣ್ಣು ಜೂನ್ ಆಯಿತು”! ಎನ್ರೀ ರಂಜಿತ್ ಅವರೇ… ನಿಮ್ ಕವನ ಓದಿ ಮನವು “ಮಾರ್ಚ್” ಆಯಿತು! ಚೆನ್ನಾಗಿದೆ…. 🙂

  22. ರಂಜಿತ್ ಹೇಳುತ್ತಾರೆ:

    ಥ್ಯಾಂಕ್ಸ್ ವಿಜಯ ರಾಜ್ ಸರ್‍.. ನಿಮಗೂ ಹೊಸ ವರ್ಷದ ಶುಭಾಶಯಗಳು..

  23. ರಂಜಿತ್ ಹೇಳುತ್ತಾರೆ:

    ಹೌದು ರೋಹಿಣಿ,

    ತಿಂಗಳು-ಋತು-ಭಾವನೆ ಮೂರನ್ನೂ ಜೋಡಿಸುವ ಪ್ರಯತ್ನ. ಇಷ್ಟವಾಗಿದ್ದಕ್ಕೆ ಖುಷಿಯಾಯಿತು..:)

  24. ರಂಜಿತ್ ಹೇಳುತ್ತಾರೆ:

    ಶಿವು,

    ನೀವು ಕವನ ಹಾಕಿ ನೋಡಿ…. ನಾವು ಓದಿಯೇ ತೀರುತ್ತೇವೆ..;)

    ನಿಮಗೂ ಹೊಸ ವರ್ಷದ ಶುಭಾಶಯಗಳು..

  25. ರಂಜಿತ್ ಹೇಳುತ್ತಾರೆ:

    ಪ್ರ-ಕವಿಗಳೇ,

    ಥ್ಯಾಂಕ್ಸ್ ನಿಮ್ಮ ಮೆಚ್ಚುಗೆಗೆ…

  26. Roopa Satish ಹೇಳುತ್ತಾರೆ:

    hey ranjith,
    tumba chennagide 🙂

  27. svatimuttu ಹೇಳುತ್ತಾರೆ:

    ayyo anna …………………
    balu muddagide yalla ninna kavana….

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s