ಹೊಸ ವರ್ಷದ ಹೊಸ್ತಿಲಲಿ ಇಬ್ಬನಿಯಂತಹ ಹನಿಗಳು!

Posted: ಜನವರಿ 7, 2009 in ಹನಿಗಳು...
ತನ್ನ ಇರವನ್ನು ತೋರ್ಪಡಿಸಲು
ನಾನಾ ವಿಧದ ವಿಸ್ಮಯಗಳನ್ನು
ಪ್ರದರ್ಶನಕ್ಕಿಟ್ಟ ದೇವರು
ಇನ್ನೇನು ಸೋಲುವ
ಸ್ಥಿತಿಗೆ ಬಂದಾಗ
 
ನಿನ್ನನ್ನು ತೋರಿಸಿ ಗೆದ್ದುಬಿಟ್ಟ!
 
 
**********
 
ಇಳಿಸಂಜೆಯಲಿ
ನೀನು ಮನೆಯಲ್ಲಿ
ಒಬ್ಬಂಟಿಯಾಗಿರುವ ಹೊತ್ತು..
 
 
ನನಗಿಲ್ಲಿ ಭಾರೀ
ಬಿಕ್ಕಳಿಕೆ!
 
 
**********
 
ಏನಂತ ಹೊಗಳಲಿ ನಿನ್ನ ಚೆಲುವು
ಗರಿಬಿಚ್ಚಿ ಕುಣಿದಂತೆ ನವಿಲು,
 
ಜಂಭ ಪಡುವ ಹೂಗಳೆಲ್ಲವದ್ದೂ
ಕೇವಲ ಕೆಂಭೂತದ ನಲಿವು!
 
*********
 
 
ಬೆಳದಿಂಗಳನ್ನು
ಮೌನವಾಗಿ ಸವಿಯುವವರೇ
ಇಲ್ಲಿ ಎಲ್ಲರೂ..
 
ಬೆಳಕು ಸುರಿದ ಭಾಸ್ಕರನಿಗೆ
ಅಡ್ಡದಿಂದ ಸರಿದ ಮೋಡಗಳಿಗೆ
ಧನ್ಯವಾದ ಯಾರೂ ಅನ್ನರು!
 
 
**********
 
ನನ್ನ ಪ್ರೀತಿಸ್ತಿಲ್ಲ ಅಂತ
ದೇವರ ಮೇಲೆ ಪ್ರಮಾಣ ಮಾಡಿ
ಹೇಳು ಅಂದಿದ್ದಳಷ್ಟೇ..
 
ಸಮಸ್ತ ದೇವರುಗಳು
ನನ್ನನು ಮೌನವಾಗಿರಲು
ಬೇಡಿಕೊಳ್ಳುತ್ತಿದ್ದಾರೆ!
 
*******
Advertisements
ಟಿಪ್ಪಣಿಗಳು
 1. Rajesh Manjunath ಹೇಳುತ್ತಾರೆ:

  ಕವಿವರ್ಯ ಏನಿದು ನಿಮ್ಮ ಹನಿಗಳ ಲೀಲೆ !!!
  ರಂಜಿತ್, ಮೊದಲ ೬ ಹಾಗು ಕೊನೆಯ ೬ ನನ್ನ ಅಚ್ಚುಮೆಚ್ಚಿನ ಸಾಲುಗಳು. ಹೆಚ್ಚು ಹೇಳಿದರೆ ಅತಿಶಯವೆನಿಸಬಹುದು, ನೋಡಲು ಹನಿಯೆನಿಸಿದರು, ಸುರಿದಿರುವ ಭರಾಟೆಗೆ ನಾನಂತೂ ಮಂತ್ರ ಮುಗ್ಧ.
  -ರಾಜೇಶ್ ಮಂಜುನಾಥ್

 2. ಪಲ್ಲವಿ ಎಸ್‌. ಹೇಳುತ್ತಾರೆ:

  ರಂಜಿತ್‌,

  ನನ್ನ ಮನಃಪೂರ್ವಕ ಅಭಿನಂದನೆಗಳನ್ನು ಸ್ವೀಕರಿಸಿ.

  ಹೊಸ ವರ್ಷಕ್ಕೆ ಇದಕ್ಕಿಂತ ಉತ್ತಮ ಕವನ ಬೇಕೆ? ಇವುಗಳ ಒಂದೊಂದು ನುಡಿಗಳನ್ನೂ ಅದ್ಭುತ ಗ್ರೀಟಿಂಗ್‌ ಕಾರ್ಡ್‌ ಮಾಡಬಹುದು. ಓದುತ್ತಲೇ ಒಪ್ಪಿಕೊಳ್ಳಬೇಕು ಹುಡುಗೀರು. ಹಾಗಿವೆ.

  ಮತ್ತೆ ನನ್ನ ಹೊಟ್ಟೆಕಿಚ್ಚು ಹೆಚ್ಚಾಯಿತು. ಅದು ಹಾಗೇ ಹೆಚ್ಚಾಗಲಿ ಅಂತ ದೇವರನ್ನು ಬೇಡಿಕೊಳ್ಳುವೆ.

  ಸೂಪರ್‌.

 3. shivu. ಹೇಳುತ್ತಾರೆ:

  ರಂಜಿತ್,

  ಕವನ ಬರೆಯುವುದರಲ್ಲಿ ನೀವಂತೂ ಸೂಪರ್……ನನಗೆ ಮೊದಲ ಸಾಲುಗಳು ಮತ್ತು…ನಿನ್ನನ್ನೂ ತೋರಿಸಿ ಗೆದ್ದುಬಿಟ್ಟ….ಎಂಥ ಕಲ್ಪನೆ !!

 4. ಶೆಟ್ಟರು (Shettaru) ಹೇಳುತ್ತಾರೆ:

  ರಂಜಿತ್‌,

  ಎಲ್ಲ ಹನಿಗಳು ಚೆನ್ನಾಗಿವೆ, ಆದರೆ ಕೋನೆಯ ಹನಿಗೆ ವ್ಹಾ..ವ್ಹಾ…ವ್ಹಾ..ವ್ಹಾ…ವ್ಹಾ..ವ್ಹಾ…ಗಳ ಸುರಿಮಳೆ 🙂

  ಪ್ರೀತಿಯಿರಲಿ
  -ಶೆಟ್ಟರು

 5. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ರಂಜಿತ್,
  ಇಳಿ ಸಂಜೆಯಲಿ… ಹಾಗು ನನ್ನ ಪ್ರೀತಿಸಲಿಲ್ಲ…. ಇವೆರಡು ನನಗೆ ತುಂಬ ಇಷ್ಟವಾದವು. ನಿಮ್ಮ ಹನಿಗಳಿಗೆ ಮಾರುಹೋಗಿದ್ದೇನೆ. ನಿಮ್ಮ ಕವನಗಳನ್ನೇ ಕಾಯುತ್ತಿರುವಂತೆ ಮಾಡಿಬಿಟ್ಟಿದ್ದೀರಿ. ಊರಿನ ಪರಿಸರದಲ್ಲಿ ಇನ್ನು ಒಂದಿಷ್ಟು ಬರೆಯಿರಿ…ನಾನಂತೂ ಕಾಯುತ್ತಿರುತ್ತೇನೆ ನಿಮ್ಮ ಬರಹ ಹಾಗು ಕವನಗಳಿಗೆ. ಶುಭವಾಗಲಿ.

 6. ಸುನಾಥ ಹೇಳುತ್ತಾರೆ:

  ರಂಜಿತ್,
  ಮರಳು ಮಾಡುವ ಹನಿಗಳು!

 7. palachandra ಹೇಳುತ್ತಾರೆ:

  ಮೊದಲ್ನೆ ಕವನ ಸಕ್ಕತ್ ಇಷ್ಟ ಆಯ್ತು 🙂


  ಪಾಲ

 8. ಪ್ರದೀಪ್ ಹೇಳುತ್ತಾರೆ:

  ಹನಿ ಹನಿ ಪ್ರೇಮ್ ಕಹಾನಿ! 😉

 9. ರಂಜಿತ್ ಹೇಳುತ್ತಾರೆ:

  ರಾಜೇಶ್ ಮಂಜುನಾಥ್,

  ಕವಿಸಾಗರದಲಿ ಹನಿ ನಾನಿನ್ನೂ. ಕವಿವರ್ಯ ಎಂದು ಹೇಳಿ ಹೆದರಿಸಿಬಿಟ್ಟಿರಲ್ಲ..:)

  ನಿಮ್ಮನಿಸಿಕೆ ನನಗೆ ಮತ್ತಷ್ಟು ಪ್ರೋತ್ಸಾಹ ಇತ್ತಿದೆ.

  ಧನ್ಯವಾದಗಳು ಸರ್‍.

 10. ರಂಜಿತ್ ಹೇಳುತ್ತಾರೆ:

  ಶಿವು,

  ಇನ್ನೂ ಕಲಿಯಬೇಕಾದ್ದು ಬಹಳಷ್ಟಿದೆ ಸರ್‍. ಈಗ ನೀವೂ ಕವಿತೆ ಬರೆಯೋಕೆ ಶುರು ಮಾಡಿದ್ದರಿಂದ ನಾನಿನ್ನೂ ಶಾರ್ಪ್ ಆಗಬೇಕಿದೆ.. 😉

  ಥ್ಯಾಂಕ್ಸ್ ನಿಮ್ಮ ಅಭಿಪ್ರಾಯಕ್ಕೆ.

 11. ರಂಜಿತ್ ಹೇಳುತ್ತಾರೆ:

  ಪಲ್ಲವೀ,

  ನಿಮ್ಮಿಂದ ಅಭಿನಂದನೆ, ಮೆಚ್ಚುಗೆ ಸಿಗುವುದು ಒಂದು ಗೌರವ ನಮ್ಮ ಪಾಲಿಗೆ.

  ಗ್ರೀಟಿಂಗ್ ಕಾರ್ಡ್ ಸಲಹೆ ಚೆನ್ನಾಗಿದೆ. ಇಂತದ್ದನ್ನು ಓದಿದರೆ ಹುಡುಗಿಯರು ಒಪ್ಪಿಕೊಳ್ತಾರಾ?:)

  ಪ್ರಯತ್ನಿಸಬೇಕಾಯ್ತೆ ಹಾಗಾದ್ರೆ..;-)

  ತುಂಬ ಥ್ಯಾಂಕ್ಸ್ ಪಲ್ಲವಿ.

 12. ರಂಜಿತ್ ಹೇಳುತ್ತಾರೆ:

  ಶೆಟ್ಟರೇ,

  ನಿಮ್ಮ ವಾಹ್ ವಾಹ್ ಗಳ ಸುರಿಮಳೆ ತಲುಪಿ ನನ್ನನ್ನು ಒದ್ದೆಯಾಗಿಸಿದೆ.

  ಧನ್ಯವಾದಗಳು… ನನ್ನ ಮೇಲೂ ಪ್ರೀತಿಯಿರಲಿ..:)

 13. ರಂಜಿತ್ ಹೇಳುತ್ತಾರೆ:

  ಶರತ್,

  ಮೊದಲಿಂದಲೂ ನನ್ನ ಬರಹಗಳನು ಮೆಚ್ಚಿ ಪ್ರೋತ್ಸಾಹಿಸುತ್ತ ಬಂದಿದೀರಿ.

  ಊರ ಪರಿಸರದಲ್ಲಿ ಓದುವಿಕೆ, ಬರೆಯುವಿಕೆ ತುಂಬಾ ಚೆನ್ನಾಗಿ ಸಾಗುತ್ತಿದೆ. ಟೈಪಿಸುವ ಆಲಸ್ಯ ತೊಲಗಿದರೆ ಬ್ಲಾಗು ತುಂಬಬಹುದು..:)

  ಧನ್ಯವಾದಗಳು…

 14. ರಂಜಿತ್ ಹೇಳುತ್ತಾರೆ:

  ಸುನಾಥ್,

  ನಿಮಗಿಷ್ಟವಾಗಿದ್ದು ಖುಷಿಯಾಯಿತು. ಚೆನ್ನಾಗಿದ್ದರೆ ಹೀಗೆಯೇ ಪ್ರೋತ್ಸಾಹಿಸುತ್ತಿರಿ..:)

  *********

  ಪಾಲಚಂದ್ರ,

  ನನ್ನ ಚಿಕ್ಕ ತೋಟಕ್ಕೆ ಆತ್ಮೀಯ ಸ್ವಾಗತ… ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್.

  **********

  ಪ್ರದೀಪ್,

  ಖುಷಿ ಖುಷಿಯಲೂ ಕಣ್ಣ ಕಂಬನಿ..:)

 15. shivu. ಹೇಳುತ್ತಾರೆ:

  ರಂಜಿತ್,

  ನಿಮ್ಮ ಅಭಿನಂದನೆಗೆ ಧನ್ಯವಾದಗಳು. ನಾನೇನು ಕವಿಯಲ್ಲ. ಇದೊಂದು ಆರೋಗ್ಯ ಪೂರ್ಣ ಬೆಳವಣಿಗೆಯೆಂದು ನಾನು ಹೇಳಬಲ್ಲೆ….ಮತ್ತೆ ನನ್ನ ಬ್ಲಾಗಿನಲ್ಲಿ ಚಿಕ್ಕ ಮಗಳೂರಿಗೆ ಸಂಬಂದಿಸಿದ ಹೊಸ ಲೇಖನವಿದೆ. ಬನ್ನಿ ನೋಡಿ. ಖುಷಿಯಾಗುತ್ತೀರೆನ್ನುವ ಭರವಸೆ ನನ್ನದು….

 16. nagtalwar ಹೇಳುತ್ತಾರೆ:

  ಸಹೆಬ್ರೇ..ನಿಮ್ಮ ಇಬ್ಬನಿಯಂತಹ ಹನಿಗಳನ್ನ ಓದಿ: ಹೇಳಲಾರದ್ದನ್ನ ಹೀಗೂ ಹೇಳಬಹುದಾ..? ಅಂತ ಹೊಟ್ಟೆಕಿಚ್ಚೆನಿಸಿತು..ಯಾಕೆಂದ್ರೆ..ಈ ಹಿಂದೆ ಸ್ವಲ್ಪ ಹೆಚ್ಚಿನ ಭಾವುಕನಾಗಿದ್ದೆ, ಆವಾಗ್ಲೆ ಈ ಹನಿಗಳು ಹೊರಬಂದಿದ್ದರೆ ಇನ್ನೂ ಛೊಲೋ ಇತ್ತು ನನಗೆ..!
  ನಾಗು,ತಳವಾರ್.

 17. ರಂಜಿತ್ ಹೇಳುತ್ತಾರೆ:

  ಶಿವು ಸರ್‍.. ನಿಜ.. ಕವಿತೆ ಮೂಡುವುದು ಅರೋಗ್ಯಕಾರಿ ಬೆಳವಣಿಗೆಯೇ!

  ನಿಮ್ಮೆಲ್ಲ ಬರಹಗಳೂ ಮಸ್ತಾಗಿರುತ್ತದೆ..

  ಥ್ಯಾಂಕ್ಸ್!

  *******

  ನಾಗು ತಳವಾರ್ ರವರೇ,

  ಭಾವುಕನಾಗಿರುವುದು ಒಳ್ಳೆಯ ಮಧುರ ಅನುಭವ. ಯಾಕೆ ಬಿಟ್ಟಿರಿ?:)
  ಭಾವುಕತನದಿಂದ ಹೊರಬಂದು ಓದಿದ್ದಕ್ಕೆ ಇಷ್ಟವಾಗದೇ ಹೋಯಿತಾ?

 18. Roopa Satish ಹೇಳುತ್ತಾರೆ:

  Superbbbbbbb, superbbbbbb, superbbbbb

 19. rohini ಹೇಳುತ್ತಾರೆ:

  namaste frendu
  1,2, mattu koneya hanigalu tumba ishta vadavu

 20. ರಂಜಿತ್ ಹೇಳುತ್ತಾರೆ:

  ರೂಪ,

  ಥ್ಯಾಂಕ್ಸ್ , ಥ್ಯಾಂಕ್ಸ್ , ಥ್ಯಾಂಕ್ಸ್ !

  ರೋಹಿಣಿ,

  ಉಳಿದದ್ದು ಹಿಡಿಸಲಿಲ್ವೆ?:)

 21. svatimuttu ಹೇಳುತ್ತಾರೆ:

  ಸಮಸ್ತ ದೇವರುಗಳು
  ನನ್ನನು ಮೌನವಾಗಿರಲು
  ಬೇಡಿಕೊಳ್ಳುತ್ತಿದ್ದಾರೆ!
  ಅಣ್ಣ ತುಂಬಾ ಅರ್ಥಗರ್ಭಿತವಾಗಿದೆ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s