ಮಸಾಲೆ ದೋಸೆ!

Posted: ಜನವರಿ 12, 2009 in ಅಡಿಗರ ಅಡುಗೆ ಮನೆ

dosa_05

ಹೊಟ್ಟೆ ಚುರುಗುಟ್ಟುತ್ತಿದೆ.

ಆರ್ಡರ್ ಮಾಡಿ ಬಹಳ ಹೊತ್ತಾಗಿದೆ. ತಡವಾದಷ್ಟೂ ಬರಲಿರುವ ಮಸಾಲೆ ದೋಸೆಯ ರುಚಿ ಹೆಚ್ಚಾಗಲಿದೆ. ಒಳಗೆ, ಕಾವಲಿಗೆ ನೀರು ಹಾಕಿ ಪೊರಕೆಯಲ್ಲಿ ಗುಡಿಸಿ ದೋಸೆ ಹಾಕುವವ ಆಗಲೇ ವೇದಿಕೆ ಸಜ್ಜುಗೊಳಿಸಿಯಾಗಿದೆ. ಪಾರ್ಸೆಲ್ ತೆಗೆದುಕೊಳ್ಳಲು ಬಂದು ತನ್ನ ದೋಸೆ ಹುಯ್ಯುವ ಶೈಲಿ ನೋಡುತ್ತಿರುವ ಹುಡುಗನನ್ನು ಓರೆಗಣ್ಣಿನಲ್ಲಿ ನೋಡಿದವ, ಅದನ್ನು ಗಮನಿಸದವನಂತೆ ಬಿಸಿ ಕಾವಲಿಯ ಮೇಲೆ ಬೇಕಂತಲೇ ಒಂದೆರೆಡು ಹನಿ ನೀರು ಹಾಕಿ ಚಟಪಟವೆನಿಸಿ ಸ್ಟೈಲ್ ತೋರಿದ್ದಾನೆ.

ತನ್ನನ್ನು ಗಮನಿಸುತ್ತಿರುವ ಸೂಪರ್ವೈಸರನ್ನು ಮೆಚ್ಚಿಸಲು ಈ ಸಲ ಕಾಲು ಸೌಟಿನಲ್ಲೇ ದೋಸೆ ತಿರುವಿ ನೇವರಿಸಿಯಾಗಿದೆ. ಇನ್ನೂ ಮೆಚ್ಚಿಸಲು ತುಪ್ಪ ಕಡಿಮೆ ಹಾಕಿ ದೋಸೆ ರುಚಿಕೆಟ್ಟು ಅಪಮಾನವಾದೀತೋ ಎಂಬ ಭಯದಿಂದಲೋ ಅಥವಾ ಗಿರಾಕಿಗಳಿಗೆ ತೋರಿಸಿಕೊಳ್ಳಲೋ ಎಂಬಂತೆ, ಸೂಪರ್‍ವೈಸರ್‍ ‘ಲೋ, ತುಪ್ಪ ಜಾಸ್ತಿ ಹಾಕೋ ರಾಯರಿಗೆ!’ ಅನ್ನುತ್ತಾ ಗಿರಾಕಿಗಳಿಗೆ ಬೆಣ್ಣೆ ಹಚ್ಚಿದ್ದಾನೆ. ಅಷ್ಟರಲ್ಲಿ ತನ್ನ ಪಾರ್ಸೆಲ್ ಬಂದಿದ್ದರಿಂದ ದೋಸೆ ಹಾಕುವವನ ಸ್ಟೈಲನ್ನು ಪೂರ್ತಿ ನೋಡಲಾಗದ ನಿರಾಸೆಯಿಂದ ಹುಡುಗ ಹಾಗೇ ಹೊರಟಿದ್ದಾನೆ.

ಈ ಸಲ ಸುರಿದ ತುಪ್ಪದ ಘಮ, ಹಾಗೇ ಹೊರಗೆ ಹೋಗಿ ರಸ್ತೆಯಲ್ಲಿ ಹೋಗುತ್ತಿರುವ ಮತ್ತಷ್ಟು ಜನರನ್ನು ಹೋಟೇಲಿನೊಳಗೆ ಎಳೆತಂದಿದೆ. ಒಂದಿಬ್ಬರು ಮನೆಗೆ ಫೋನ್ ಮಾಡಿ ‘ಗೆಳೆಯ ಒತ್ತಾಯ ಮಾಡಿದ್ದರಿಂದ ತಿಂದಾಗಿದೆ, ರಾತ್ರಿ ಏನು ಮಾಡಬೇಡ’ ಎಂದು ಸುಳ್ಳು ಹೇಳಿ ನಿರಾಳವಾಗಿ ಕುಳಿತಿದ್ದಾರೆ.

ಅಷ್ಟರಲ್ಲಿ ಹದ್ದು ರೆಕ್ಕೆ ಬಡಿಯದೇ ತೇಲುವಂತದ್ದೇ ಶೈಲಿಯಲ್ಲಿ ಮಾಣಿ, ದೋಸೆಯನ್ನು ಆಡಿಸುತ್ತ ತರುತ್ತಿದ್ದಾನೆ. ಅವನ ಕಣ್ಣುಗಳಲ್ಲಿ ಮಸಾಲೆ ದೋಸೆಯ ಬಗ್ಗೆ ಒಂಚೂರು ಮಮತೆಯಿಲ್ಲ. ಅವನು ಆಗಲೇ ತಿನ್ನುವ ಒಡೆಯ ನೀಡುವ ಟಿಪ್ಸ್ ಎಷ್ಟಿರಬಹುದೆಂದು ಊಹೆ ಮಾಡುತ್ತಿದ್ದಾನೆ.

 ಪಕ್ಕದ ಟೇಬಲಿನವನ ಹಸಿವು ದೋಸೆಯನ್ನು ನೋಡುತ್ತಲೇ ಭಗ್ಗನೆ ಹೊತ್ತಿಕೊಂಡಿದೆ. ಅವನ ಮೊಗದಲ್ಲಿ ತನ್ನದು ಇನ್ನೂ ಬಂದಿಲ್ಲವೆಂಬ ಅಸಹನೆಯ ಹೊಗೆ!

ಬಾಳೆ ಎಲೆಯ ಮೇಲೆ ಕೆಂಪಾಗಿ ಮಗ್ಗುಲು ಮಾಡಿ ಮಲಗಿರುವುದನ್ನು ನೋಡಿ, ಮುದ್ದಾಗಿ ಅದರ ಮೇಲೆ ಪ್ರೀತಿ ಹುಟ್ಟಿದೆ.  ಮೇಲಿರುವ ಬೆಣ್ಣೆ ಆಗಲೋ ಈಗಲೋ ಜಾರಿ ಬಾಳೆ ಎಲೆಯ ಮೇಲೆ ಹರಡಲಿದೆ.

 ಕಣ್ಣು ಅದರಂದ ಆಸ್ವಾದಿಸುತ್ತಿದ್ದರೆ, ದೋಸೆಯ ಘಮಕ್ಕೆ ಮನಸು ಆಗಲೇ ಮಾರುಹೋಗಿದೆ. ಗರಿಗರಿಯಾಗಿರುವ ದೋಸೆಯ ಅಂಚನ್ನು ಮುರಿದು ಬಾಯೊಳಗಿಟ್ಟುಕೊಂಡಾಗ ಕಣ್ಣು ತನ್ನಂತಾನೆ ಮುಚ್ಚುತ್ತದೆ.
 
ಹೀಗೆ ಪಂಚೇಂದ್ರಿಯಕ್ಕೂ ಮುದ ನೀಡಿದ, ಕ್ಷಣಕಾಲ ಸ್ವರ್ಗ ತೋರಿಸಿದ ಮಸಾಲೆ ದೋಸೆ ಎಂಬ ಮಾಯೆಗೆ ಕ್ಯಾಶಿಯರ್ ಹದಿನೈದೇ ರುಪಾಯಿ ಎಂದು ಹೇಳಿ ನಿರಾಸೆಗೊಳಿಸಿದ್ದಾನೆ..!
ಟಿಪ್ಪಣಿಗಳು
 1. Meena Jois ಹೇಳುತ್ತಾರೆ:

  ee kshana masale dose tenbeku and annistaaa ide nimma lekhana odi. Very descriptive article. Thanks,

 2. Meena Jois ಹೇಳುತ್ತಾರೆ:

  ee kshana masale dose tinbeku antaa annista=aa ide nimma lekhana odi. Very descriptive article. Thanks,

 3. ಸುನಾಥ ಹೇಳುತ್ತಾರೆ:

  ಒಂದು ಮಸಾಲೆ ದೋಸೆಯ ಸುತ್ತ ಎಷ್ಟೊಂದು ವಿಚಾರಗಳನ್ನು ಹೆಣೆದಿದ್ದೀರಿ! ದೋಸೆಯಷ್ಟೇ ರುಚಿಯಾಗಿದೆ ಅದರ ವರ್ಣನೆ. ಅಂದ ಹಾಗೆ photo ಎಲ್ಲಿಯದು?

 4. shivu. ಹೇಳುತ್ತಾರೆ:

  ರಂಜಿತ್,

  ನೀವೇನ್ರಿ….ಹೀಗೆ ಮಸಾಲೆ ದೋಸೆ ಹುಚ್ಚು ಹತ್ತಿಸುತ್ತೀರಿ….ನನಗೆ ಮಲ್ಲೇಶ್ವರಂನ ಸಿ.ಟಿ.ಆರ್. ಹೋಟಲ್ಲಿನ ಮಸಾಲೆ ದೋಸೆ ಇಷ್ಟ… ನಾನು ನನ್ನಾಕೆ ವಾಕಿಂಗ್ ಹೊರಟರೆ ಅಲ್ಲಿ ದೋಸೆ ಕತ್ತರಿಸದೇ ವಾಪಸು ಬರುವುದಿಲ್ಲ…….ನಿಮ್ಮ ಬರಹ ನನಗೆ ಅಲ್ಲಲ್ಲಿ ಸ್ಥಿರ ಚಿತ್ರಗಳ ಹಾಗೆ ಕಾಣುತ್ತಿದೆ !

 5. nagtalwar ಹೇಳುತ್ತಾರೆ:

  ಸಾರ್,ಹೊಲಕ್ಕೆ ಹೋಗಿ ಬಂದಿದ್ದೆ; ಹೊಟ್ಟೆ ಬೇರೆ ಹಸಿದಿತ್ತು ದ್ವಾಸಿ ಬಗ್ಗೆ ಹೇಳದಂಗೆಲ್ಲಾ…ನಾ… ಹೇಳಕ್ಕೊಲ್ಲೆ ಬಿಡ್ರಿ…!
  ನಾಗು, ತಳವಾರ್.

 6. ಪಲ್ಲವಿ ಎಸ್‌ ಹೇಳುತ್ತಾರೆ:

  ಚೆನ್ನಾಗಿ ದೋಸೆ ಹುಯ್ದಿದ್ದೀರಿ ರಂಜಿತ್‌. ಬೆಳಗಿನ ಈ ಹೊತ್ತು ದೋಸೆ ಮಾಡು ಅಂದರೆ ಅವ್ವ ಗಡಿಬಿಡಿ ಮಾಡಿಕೊಂಡಾಳು.

  ತುಂಬಾ ಚೆನ್ನಾಗಿದೆ ಬರವಣಿಗೆ. ದೋಸೆಯ ರುಚಿಯ ಬಗ್ಗೆ ತಿನ್ನದೇ ಹೇಳುವುದು ಕಷ್ಟ. 🙂

  ಹದಿನೈದೇ ರೂಪಾಯಿ ಎಂದು ಹೇಳಿದ್ದು ನಿರಾಸೆ ಮೂಡಿಸಬೇಕಿರಲಿಲ್ಲ. ಇಷ್ಟೆಲ್ಲ ಗಮ್ಮತ್ತು ತುಂಬಿಕೊಂಡಿರುವ ದೋಸೆಯ ಬೆಲೆಯನ್ನು ಅಲ್ಲಗಳೆಯಬಾರದಿತ್ತು, ಅಲ್ಲವೆ?

  ಹೀಗೇ ಬರೆಯುತ್ತಿರಿ. ಅಂದ್ಹಾಗೆ ಮುಂದಿನ ತಿಂಡಿ ಯಾವುದು?

 7. rohini ಹೇಳುತ್ತಾರೆ:

  ನಮಸ್ತೆ ಫ಼್ರೆಂಡು

 8. rohini ಹೇಳುತ್ತಾರೆ:

  ಊರಿಗೆ ಬಂದ ಕೂಡಲೇ ಮಸಾಲೆ ದೋಸೆಯ ನೆನಪಾದ ಹಾಗಿದೆ. ದೋಸೆ ತಿಂದಷ್ಟೇ ಖುಷಿಯಾಯಿತು. ಲೇಖನ ಮಸಾಲೆ ದೊಸೆಯಷ್ಟೇ ರುಚಿಯಾಗಿತ್ತು. ಬೆಲೆ ಮಾತ್ರ ಚಟ್ನಿಯಷ್ಟು ಚುರೇ ಚುರು ಖಾರ ಇದ್ದ ಹಾಗಿತ್ತು ಅದರೂ ಚಿಂತಿಲ್ಲ ಮಸಾಲೆ ದೋಸೆ ಮಾತ್ರ ಘಮ ಘಮ. ನನ್ನ ಹೊಟ್ಟೆ ತಾಳ ಹಾಕುತಿದೆ.

 9. Puneeth.B.A. ಹೇಳುತ್ತಾರೆ:

  ree…baayiyalli neeru tarisuvalli yashasvi yaagideeri..!!jai…ranjit…karnataka maathe,tippu sultan…

  -inthi ‘haage summane’ Puneeth.
  [www.haagesummane.wordpress.com]

 10. ರಂಜಿತ್ ಹೇಳುತ್ತಾರೆ:

  ಮೀನಾ,

  ಮೊದಲಿಗೆ ಸ್ವಾಗತ ನನ್ನ ಬರಹಗುಚ್ಚ ದ ತೋಟಕ್ಕೆ. ಈ ಬರಹ ನಿಮ್ಮ ಹಸಿವು ಬಡಿದೆಬ್ಬಿಸಿದರೆ ಸಾರ್ಥಕವಾಯಿತು.

 11. ರಂಜಿತ್ ಹೇಳುತ್ತಾರೆ:

  ಸುನಾಥ್,

  ಥ್ಯಾಂಕ್ಯೂ ಸರ್… ಆ ಫೋಟೋ ಗೂಗಲ್ ಅಂಕಲ್ ಕೊಟ್ಟಿದ್ದು. ಓದುವ ಮೊದಲು ನಾಲಗೆ ನೀರೂರಿಸಲು ಅನುಕೂಲವಾಗಲೆಂದು ಹಾಕಿದ್ದು…:)

 12. ರಂಜಿತ್ ಹೇಳುತ್ತಾರೆ:

  ಶಿವು ಸರ್‍,

  ನಮ್ಮದು ಬಸವನಗುಡಿ ಏರಿಯಾ ಸರ್‍. ಕ್ವಾಂಟಿಟಿ ಜಾಸ್ತಿ ಸಿಗುತ್ತೆ ಅಂತ ಸೆಟ್ ದೋಸೆ ತಗೊಂಡು ಹೆಚ್ಚು ಹೆಚ್ಚು ಸಾಗು ಹಾಕಿಸಿಕೊಂಡು ಹೋಟೇಲಿನವರ ಕೆಂಗಣ್ಣಿಗೆ ಗುರಿಯಾಗುತ್ತಿದ್ದೆವು ಹಾಸ್ಟೆಲಿನ ದಿನಗಳಲಿ.
  ಮಲ್ಲೇಶ್ವರಂ ಗೆ ಹೋದರೆ ಸೋನಾ ಕ್ಯಾಟರರ್ಸ್ ಗೆ ಪಾದ ಊರದೇ ವಾಪಾಸ್ಸಾಗುತ್ತಿರಲಿಲ್ಲ.

  ಈಗ ಇನ್ನೊಮ್ಮೆ ಆ ಕಡೆ ಹೋದರೆ ಸಿ.ಟಿ.ಆರ್ ನ ಹುಡುಕಿ ಒಮ್ಮೆಯಾದರೂ ಮಸಾಲೆದೋಸೆ ತಿನ್ನಲೇಬೇಕಾಯ್ತು ನೋಡಿ..:)

 13. ರಂಜಿತ್ ಹೇಳುತ್ತಾರೆ:

  ನಾಗು,

  ಹೊಲದ್ ತಾವ ಹೋಗೋರಿಗೆ ದ್ವಾಸಿ ಯಾವ್ ಮೂಲಿಗ್ ಸಾಕಾಯ್ತದೆ ಬಿಡಣ್ಣೋ. ಮುದ್ದಿನೋ ರೊಟ್ಟಿನೋ ತಿಂದ್ರೆ ಹೊಟ್ಟಿ ತಂಪಾಯ್ತದೆ…:)

  ಆದ್ರೂ ಯಾವ್ದಾರ ದಿನ ಚೇಂಜ್ ಗೆ ಅಂತ ದ್ವಾಸಿ ಒಂದು ಹತ್ತಿಪ್ಪತ್ತು ಮಾಡ್ಕಂಡು ( ಮಾಡಿಸ್ಕಂಡು) ತಿಂದ್ರೆ ಒಸಿ ಒಳ್ಳೇದು.

  ಅಂದಂಗೆ ನಿಮ್ ಎಸ್ರು ನನ್ನ ಬಲು ಹೆದರಿಸ್ತ ಐತಲ್ಲಣ್ಣ…ಇನ್ನೊಂದ್ ಕಿತ ಇನ್ನಾ ಪಸಂದಾಗಿ ಬರೀತಿನಿ ಈ ಸಲ ಬಿಟ್ಬಿಡಿ:)

  ಥ್ಯಾಂಕ್ಸ್ ನಾಗು..:)

 14. ರಂಜಿತ್ ಹೇಳುತ್ತಾರೆ:

  ಪಲ್ಲವೀ,

  ಅಯ್ಯೊ… ಅದು ದೋಸೆಯ ಬೆಲೆಯನ್ನು ಅಲ್ಲಗಳೆದಿದ್ದಲ್ಲ. ಅಷ್ಟು ಅದ್ಭುತವಾಗಿದ್ದಕ್ಕೆ ಬರೀ ಹದಿನೈದೇ ರೂಪಾಯಿಯಾ ಅನ್ನುವ ನಿರಾಸೆ ಅಷ್ಟೇ..:)

  ಪ್ರೀತಿಯ ಮಗಳು ಯಾವಾಗ ಹೇಳಿದರೂ ಝಟ್ ಪಟ್ ಅಂತ ಅಮ್ಮ ದೋಸೆ ರೆಡಿ ಮಾಡ್ತಾರೆ, ಪ್ರಯತ್ನಿಸಿ ನೋಡಿ ಬೇಕಾದ್ರೆ…:)

  ಮುಂದಿನ ಅಡುಗೆಯಾ?:) ’ಮಾನಸ’ ಪಾಕಚಂದ್ರಿಕೆ’ ಬ್ಲಾಗ್ ನ ಅಡುಗೆ ಮುಂದೆ ನನ್ನ ಅಡುಗೆ ಸಪ್ಪೆ ಅನಿಸಿದ್ದರಿಂದ ಈ ರೀತಿಯ ಬರಹ ಬರೆಯತೊಡಗಿದ್ದೇನೆ.

  ನನ್ನ ಲ್ಯಾಬೋರೇಟರಿಯಲ್ಲಿ ( ಅಡುಗೆ ಮನೆಯಲಿ) ಯಾವುದಾದರೂ ಪ್ರಯೋಗ ಯಶಸ್ವಿಯಾದರೆ ಬರೆಯುವೆ..:)

  ಥ್ಯಾಂಕ್ಸ್ ಪಲ್ಲವಿ.

 15. ರಂಜಿತ್ ಹೇಳುತ್ತಾರೆ:

  ರೋಹಿಣಿ,

  ಇಲ್ಲಮ್ಮ. ಊರಿನಲ್ಲಿ, ಮನೆಯಲ್ಲಿ ಇದಕ್ಕಿಂತ ಘಮಘಮ ದ್ದು, ರುಚಿ ರುಚಿಯಾದದ್ದು ಸಿಗುತ್ತಿದೆ..:)
  ಬೆಲೆ ಸ್ವಲ್ಪ ಖಾರ ಹೌದು… ಸೆಟ್ ದೋಸೆಯಾಗಿದ್ರೆ ಚೆನ್ನಾಗಿರುತ್ತೆ ಅಲ್ವೇನಮ್ಮ.. ಅದೇ ಬೆಲೆಗೆ ೨-೩ ದೋಸೆ ಸಿಗುತ್ತೆ..:)

  ಥ್ಯಾಂಕ್ಸ್.

 16. ರಂಜಿತ್ ಹೇಳುತ್ತಾರೆ:

  ಪುನೀತ್,

  ಥ್ಯಾಂಕ್ಸ್…

  ಬ್ಲಾಗ್ ನಲ್ಲಿ ದೋಸೆ ಬಡಿಸಲಾಗುವುದಿಲ್ಲ ಅಂತ ಬೇಜಾರಾಯ್ತು..:)

 17. shivu. ಹೇಳುತ್ತಾರೆ:

  ರಂಜಿತ್,

  ಸಿ.ಟಿ ಆರ್. ಹೋಟಲ್ ಮಲ್ಲೇಶ್ವರಂ ಮೈದಾನಕ್ಕೆ ಹತ್ತಿರವಿದೆ.. ಅಲ್ಲಿ ಸಂಜೆ ಹೊತ್ತು ಮಸಾಲೇ ದೋಸೆ ತಿನ್ನಲು ಕ್ಯೂ ಇರುತ್ತೆ…..ಮತ್ತು ತುಂಬಾ ಚೆನ್ನಾಗಿರುತ್ತೆ……. ಪ್ರಯತ್ನಿಸಿ ನೋಡಿ…..
  ಮತ್ತೆ ನನ್ನ ಬ್ಲಾಗಿನಲ್ಲಿ ಒಂದು ಹೊಸ ಲೇಖನ ಹಾಕಿದ್ದೇನೆ. ಇದು ನಾನು ಇದುವರೆಗೂ ಬರೆದಿರುವ ಲೇಖನಗಳಲ್ಲಿ ಅತ್ಯಂತ ಭಾವಪೂರ್ಣ ಲೇಖನ. ಒಮ್ಮೆ ಬಿಡುವು ಮಾಡಿಕೊಂಡು ಬನ್ನಿ…ನಿಮಗಿಷ್ಟವಾಗಬಹುದು……ಬರುತ್ತಿರಲ್ಲ…..

 18. Tejaswini ಹೇಳುತ್ತಾರೆ:

  ರಂಜಿತ್,

  ನನ್ಗೂ ಮಸಾಲೆ ದೋಸೆ ಅಂದ್ರೆ ತುಂಬಾ ಇಷ್ಟ. ನಾನು ಹಾಗೂ ಯಜಮಾನ್ರು ಹೋಟೆಲಿಗೆ ಹೋದ್ರೆ ಅವ್ರು ತಮಾಷೆ ಮಾಡ್ತಾರೆ ಎಂದು ಮಸಾಲೆ ದೋಸೆ ಬೇಡ್ವೇ ಬೇಡ ಅನ್ನೋದು. ಆದ್ರೆ ಹೋಗಿ ಆದ್ಮೇಲೆ Menu ಅಲ್ಲಿ ಯಾವುದೇ Item ಕಾಣ್ಸೋದೇ ಇಲ್ಲಾ.. ಎಲ್ಲಾ ಕಡೆ ಬರೀ ಮಸಾಲೆ ದೋಸೆನೇ ಕಾಣೋದು!! ಏನಾದ್ರೂ ತಮಾಷೆ ಮಾಡ್ಲಿ ಅಂದ್ಕೊಂಡು ಅದ್ನೇ ತಿಂದು ಬರೋದು..:) ಈಗ ಮತ್ತೆ ನೆನ್ಪಾಗ್ರಾ ಇದೆ… ಚಿತ್ರ ಖಂಡಿತ ನೀರೂರಿಸುವಂತಿದೆ.

 19. ರಂಜಿತ್ ಹೇಳುತ್ತಾರೆ:

  ಶಿವು,

  ಓದಿರುವೆ,ಭಾವುಕರಾಗಿಯೇ ಬರೆದಿದ್ದೀರಿ. ಚೆನ್ನಾಗಿದೆ.

  ತೇಜಸ್ವಿನಿ,

  ನಾವು ಚಿಕ್ಕವರಿದ್ದಾಗ ನಮ್ಮಿಂದ ಮನೆಗೆಲಸ ಮಾಡಿಸಲು ಅಪ್ಪ ಮಸಾಲೆ ದೋಸೆಯ ಲಂಚ ಕೊಡ್ತಿದ್ದರು. ಅದರ ಪ್ರಲೋಭನೆಯಿಂದಲೇ ಬಹುಶಃ ನಮ್ಮ ಕೆಲಸ ನಾವೇ ಮಾಡಲು ಕಲಿತಿದ್ದು. ನಿಮ್ಮ ಉದಾಹರಣೆಯಲ್ಲೂ ನೋಡುವಾಗ ನಮ್ಮ ದೈನಂದಿನ ಚಿಕ್ಕ ಚಿಕ್ಕ ಖುಷಿಗಳಲಿ ಈ ದೋಸೆಯಾಸೆಯ ಪಾಲೂ ಮಹತ್ವದ್ದಲ್ಲವಾ?!

 20. svatimuttu ಹೇಳುತ್ತಾರೆ:

  ರಂಜಿತ್ ಅಣ್ಣ ನಿಮ್ಮ ಮಸಾಲೆ ದೋಸೆ ಓದುತ್ತಿದ್ದರೆ ಬಾಯಲ್ಲಿ ನೀರು ಬರುತ್ತಿದೆ..ನಾನಂತೂ ಮಸಾಲೆ ದೋಸೆ ಅಮ್ಮನ ಕೈಲಿ ಮಾಡಿಸಿ ತಿನ್ದಾಯ್ತು..ನಿಮ್ಮ ವರ್ಣನೆ ಅಧ್ಭುತ ..

 21. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಸ್ ಇಂಚರ,

  ಹಾಗೆಯೇ ದೋಸೆ ತಿಂದಿದ್ದಕ್ಕೆ ನಿಮ್ಮ ಹೊಸ ವರ್ಷದ ಜಂಕ್ ಫುಡ್ ತಿನ್ನಬಾರದೆಂಬ ಸಂಕಲ್ಪಗಳೆಲ್ಲ ಮೂಲೆಗುಂಪಾಗಿಸಿದ್ದಕ್ಕೆ ಕ್ಷಮೆ ಇರಲಿ..;)

 22. Inchara ಹೇಳುತ್ತಾರೆ:

  ಏನೇ ವಿಷಯ ಇದ್ದರೂ ಅದು ಎಷ್ಟು ಚೆನ್ನಾಗಿ ಬರೀತಿರಿ. ಈಗ ತಾನೇ ದೋಸೆ ತಿಂದು ಬಂದಿದ್ದೆ. ಆದ್ರೂನೂ ಮತ್ತೆ ತಿನ್ನುವ ಆಸೆ ಆಯಿತು.

 23. ರಂಜಿತ್ ಹೇಳುತ್ತಾರೆ:

  ಇಂಚರ,

  ಸ್ವಾಗತ ನೀಲಿಹೂವಿಗೆ.

  ಮತ್ತೆ ತಿನ್ನಬೇಕೆನಿಸಿತೆ? ತುಪ್ಪದಲಿ ಮಿಂದೆದ್ದ ದೋಸೆಯ ತಿಂದು ನನ್ನನು ಬೈಕೊಳ್ಳದೇ ಹೋದರೆ ಸಾಕಷ್ಟೇ..:)

  ಥ್ಯಾಂಕ್ಸ್ ಮೇಡಮ್..

 24. ರವಿ ಹೇಳುತ್ತಾರೆ:

  ನನ್ನ ಮೆಚ್ಚಿನ ಮಸಾಲೆದೋಸೆಯ ಬಗೆ ಓದಿ ಬಹಳ ಸಂತೋಷ ಆಯಿತು… ಈಗ ಹದಿನೈದು ರುಪಾಯಿ ಅಲ್ಲಾ ಮಹಾಸ್ವಾಮಿಗಳೇ….. ಬರೋಬರಿ ಇಪ್ಪತೈದು ರುಪಾಯಿ… ಆದರೂ ಅದರ ಬೆಲೆ ಬಗೆ ಚಿಂತಿಸದೆ ಅದರ ಸವಿಯನ್ನು ಬಲ್ಲವರೇ ಬಲ್ಲರು…..

 25. ರಂಜಿತ್ ಹೇಳುತ್ತಾರೆ:

  ಡಿಯರ್ ರವಿ,

  ನನ್ ಮಸಾಲೆ ದೋಸೆ ಮೆಚ್ಕೊಂಡಿದ್ದಕ್ಕೆ ಥ್ಯಾಂಕ್ಸ್. ನಾನು ಬರೆದಾಗ ಮಸಾಲೆ ದೊಸೆ ಗೆ ಹದಿನೈದಿತ್ತು. ಇನ್ನೊಂದು ವರ್ಷ ಕಳೆದ್ರೆ ಅದಕ್ಕೆ ೩೦-೩೫ ಆಗುತ್ತೆ. ಆದರೂ ನಾಲಿಗೆಗೆ, ಜೇಬಿಗೆ ನಡೆಯುವ ಯುದ್ಧದಲ್ಲಿ ನಾವು ಯಾವಾಗಲೂ ಕೃಷ್ಣನಂತೆ ನಾಲಿಗೆಗೆ ಪರವಾಗಿಯೇ ನಿಲ್ಲಬೇಕಲ್ಲವೇ?:)

 26. ಪ್ರದೀಪ್ ಹೇಳುತ್ತಾರೆ:

  ಸಾರ್… ನಮ್ಮ ಆಫೀಸ್ ಕ್ಯಾಂಟೀನ್ ನಲ್ಲಿ ಮಸಾಲೆ ದೋಸೆ ಬೇಕೇ ಬೇಕೆಂದು ಮನವಿ ಮಾಡಿ, ಈಗ ವಾರಕ್ಕೆರಡು ಸಲ ಬೆಳಿಗ್ಗೆ ಮಸಾಲೆ ದೋಸೆ! 😉
  ಆದ್ರೆ ಹೋಟೇಲ್ನಲ್ಲಿ ತಿನ್ನೋಕ್ ಹೋದ್ರೆ ಮಾತ್ರ, ನೀವಂದಂತೆ, ಜೇಬಿಗೆ ಕತ್ತರಿ ಗ್ಯಾರಂಟಿ….

 27. mamatha ಹೇಳುತ್ತಾರೆ:

  dose andre nanage thumba isthaaaaaaaaaaaaaaaaaaaaaaaaaaaaaaaaa I Love yuo masala dose

 28. bharathi ramu ಹೇಳುತ್ತಾರೆ:

  masala dosa

 29. veekay ಹೇಳುತ್ತಾರೆ:

  Hi Ranjit,

  Nimma ee Barahanna odhirle illa.. miss agbittitthu.
  thumba channagide..thet masale dosa thara..

  naavu chikkavriddaga, namdu joint family barobbari 10 jana maklu.
  yellargu at a time bisi bisi masale dosa madi kodoke agtirlilla..
  ondu dose admele wait madta kudtidvi.. sumne kudoke agde plate alli uldiro chatni
  kaali madi amma, doddamma inda baisgota idvi..

  sunday irodakke dose madavro, athava dose madiddakke sunday agideyo ansibidtittu
  aa thara aga yeno onthara sambrama.. adella nenapagoytu.. thanks.

  -veekay

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s