ದಾರಿಹೋಕ…

Posted: ಜನವರಿ 24, 2009 in ಕವಿತೆ
ಹಾದಿಯಲಿ ಒಂದಿಷ್ಟು ಸಿಗುತ್ತದೆ
ಸಾಕಷ್ಟು ಹೋಗುತ್ತದೆ
ತುಲನೆ ಮಾಡಿ ನೋಡಿದರೆ
ಹೋದಷ್ಟೇ ನೋವು,
ಸಿಕ್ಕಷ್ಟೂ ಸಂಭ್ರಮ…
 
ಜನರು ಹೇಳುವರು
ತಲುಪಲಾಗದು
ಗುರಿಯೆಂಬುದು ಬಹಳ ದೂರ…
ಅರಿವಿದೆಯೆನಗೆ
ಯಾರೂ ಹೋಗರು ಸೋತು
ಕೇಳಿ ಹೃದಯದ ಮಾತು..
 
ಡೇರೆ ಹಾಕಿ ಮಲಗಿದವರು
ಹೊಟ್ಟೆಕಿಚ್ಚಿನಿಂದ ಸುಡುವವರು
ಸಾಗಲಾರೆ ಎಂದು ಹಂಗಿಸುವವರು
ದಾರಿ ತುಂಬಾ ಸಿಗುವರು
ಪ್ರೀತಿಯಿಂದ ನೇವರಿಸುವೆನು,
ಕಾರುವ ಕಣ್ಣುಗಳೂ ತಣ್ಣಗಾಗಬಹುದು
 
ನೋಡುವ ಆಸೆಯಿದ್ದರೆ
ನಿಲುಕಿದಷ್ಟೂ ನೋಟವಿದೆ,
ಸಾಗುವ ಇಚ್ಚೆಯಿದ್ದರೆ
ನಡೆದಷ್ಟೂ ದಾರಿಯಿದೆ
 
ಬದುಕಿನ ಸವಿ ಹೊತ್ತು
ಹೊಡೆಸಬೇಕಿದೆ
ರಸ್ತೆಗೇ ಸುಸ್ತು!
ಟಿಪ್ಪಣಿಗಳು
 1. ಸುನಾಥ ಹೇಳುತ್ತಾರೆ:

  ದಾರಿಹೋಕನ philosophy ತುಂಬಾ ಇಷ್ಟವಾಯಿತು. ಕವನ ಸಹ ಅಷ್ಟೇ ಚೆಲುವಾಗಿದೆ.
  ಅಭಿನಂದನೆಗಳು.

 2. chetana chaitanya ಹೇಳುತ್ತಾರೆ:

  ಸೊಗಸಾಗಿದೆ ಕವಿತೆ…

 3. Sandeep Sagar ಹೇಳುತ್ತಾರೆ:

  ನಮಸ್ತೆ!!

  ನಿಮ್ಮ ಕವಿತೆ ಚನ್ನಾಗಿದೆ, ಅದಲ್ಲೂ ಕೆಳಗಿನ ಈ ಸಾಲುಗಳು ನನಗೆ ಅತಿ ಪ್ರಿಯ!!

  “ನೋಡುವ ಆಸೆಯಿದ್ದರೆ
  ನಿಲುಕಿದಷ್ಟೂ ನೋಟವಿದೆ,
  ಸಾಗುವ ಇಚ್ಚೆಯಿದ್ದರೆ
  ನಡೆದಷ್ಟೂ ದಾರಿಯಿದೆ”

 4. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

  ರಂಜಿತ್,
  ತುಂಬ ಸರಳವಾದ ಭಾಷೆಯಲ್ಲಿ ಸೊಗಸಾಗಿ ಬರೆದಿದ್ದೀರ.

  “ಡೇರೆ ಹಾಕಿ ಮಲಗಿದವರು
  ಹೊಟ್ಟೆಕಿಚ್ಚಿನಿಂದ ಸುಡುವವರು
  ಸಾಗಲಾರೆ ಎಂದು ಹಂಗಿಸುವವರು
  ದಾರಿ ತುಂಬಾ ಸಿಗುವರು
  ಪ್ರೀತಿಯಿಂದ ನೇವರಿಸುವೆನು,
  ಕಾರುವ ಕಣ್ಣುಗಳೂ ತಣ್ಣಗಾಗಬಹುದು”

  ಈ ಸಾಲುಗಳು ಬಹಳ ಇಷ್ಟವಾದವು. ಶುಭವಾಗಲಿ 🙂

 5. shivu. ಹೇಳುತ್ತಾರೆ:

  ರಂಜಿತ್,

  ದಾರಿಹೋಕನ ತತ್ವ ತುಂಬಾ ಚೆನ್ನಾಗಿದೆ……ಸರಳವಾಗಿದೆ…..ಸುಲಭವಾದ ಪದಗಳಲ್ಲಿ ಅರ್ಥಗರ್ಭಿತವಾಗಿ ಬರೆಯುವುದು ಒಂದು ಕಲೆ…ಅದು ನಿಮಗೆ ಸಿದ್ದಿಸಿದೆ……
  ಹೋದಷ್ಟೇ ನೋವು,
  ಸಿಕ್ಕಷ್ಟೂ ಸಂಭ್ರಮ…

  ಸಾಲು ನನಗೆ ತುಂಬಾ ಇಷ್ಟವಾಯಿತು…..

  ಆಹಾಂ! ಈಗ ತಾನೆ ನಾನು ಒಂದು ಕವನವನ್ನು ಬ್ಲಾಗಿಗೆ ಹಾಕಿದ್ದೇನೆ……..ನೋಡಿ….ಈ ಪ್ರಯೊಗಕ್ಕೆ ನಾನು ಹೊಸಬ……..ದಯವಿಟ್ಟು ಪ್ರತಿಕ್ರಿಯಿಸಿ……..ಥ್ಯಾಂಕ್ಸ್…..

 6. nagtalwar ಹೇಳುತ್ತಾರೆ:

  ಪದ್ಯದ ಬಗ್ಗೆ ಹೇಳಿದ್ರ, ಎಲ್ಲಿ ಅದ್ರ ಗುಂಗು ಹೋಗಿಬಿಡುತೈತೋ ಅನ್ನೋದಿಗಿಲಿಂದ ನಾ ಏನೂ ಹೇಳಕ್ಕ ಒಲ್ಲೆರೀ ಸರ, ನಾ ಮೆಲುಕಾಕಬೇಕು. ಮತ್ಯಂಗ ಅನ್ಸಕತೈತಿ ಅಂತ ಮತ್ತೊಮ್ಮಿ ಕೇಳಬ್ಯಾಡ್ರಿ ಒಟ್ಟಿನ್ಯಾಗ ಅದ್ಭುತ ಬರಿತೀರಿ……!
  ನಾಗು, ತಳವಾರ್.

 7. ರಂಜಿತ್ ಹೇಳುತ್ತಾರೆ:

  ಸುನಾಥ್,

  ಬಹಳಷ್ಟು ಉತ್ತಮ ಲೇಖಕರ ಬರಹಗಳನ್ನು ಓದಿದವರು ನೀವು, ನಿಮಗೇ ಇಷ್ಟವಾಗಿದ್ದಕ್ಕೆ ನನ್ನ ಮೇಲೆ ನನಗೇ ಕೊಂಚ ಹೆಮ್ಮೆಯಾಗಿದೆ.

  ಥ್ಯಾಂಕ್ಸ್ ಸರ್‍.

  *******

  ಚೇತನಾ,

  ಥ್ಯಾಂಕ್ಸ್.

 8. ರಂಜಿತ್ ಹೇಳುತ್ತಾರೆ:

  ಸಂದೀಪ್ ಸಾಗರ್,

  ನನ್ನ ಬ್ಲಾಗಿಗೆ ಆತ್ಮೀಯ ಸ್ವಾಗತ.

  ಮೆಚ್ಚಿಕೊಂಡಿದ್ದಕ್ಕೂ ಒಂದಿಷ್ಟು ಧನ್ಯವಾದಗಳು.

 9. reshma ಹೇಳುತ್ತಾರೆ:

  Ranjith sir….
  simply superb.. tumbaa ishta aaytu 🙂 heege bareyuttiri..

 10. ರಂಜಿತ್ ಹೇಳುತ್ತಾರೆ:

  ಶರತ್ ಮತ್ತು ಶಿವು,

  “ಇಂದು ಊಟ ಮಾಡಿದೆ”

  ಇದನ್ನು

  ” ನಿನ್ನೆಯ ನಾಳೆಯಲಿ
  ಹೊಟ್ಟೆಯ ಬಯಲಲಿ
  ಸುರಿದ ಧೋ.. ಮಳೆ..!”

  ಅಂತ ಬರೆಯಲು ಕಲಿಯುತ್ತಿದ್ದೇನೆ..:) ( ತಮಾಷೆಯ ಮಾತು)

  ಧನ್ಯವಾದಗಳು ಇಬ್ಬರಿಗೂ..

 11. ರಂಜಿತ್ ಹೇಳುತ್ತಾರೆ:

  ನಾಗು,

  ನಿಮ್ಮ ಭಾಷೆ ಯಾಕೋ ನನಿಗೆ ಭಾಳ ಹಿಡಿಸೈತಿ.. ನಾನೂ ನಿಮ್ ತರ ಮಾತಾಡೊದ್ ಕಲೀಲಿಕ್ ಹತ್ತೀನ್ರಿ..:)

  ಕವನ ಮೆಚ್ಕೊಂಡಿದ್ದಕ್ಕೆ ಥ್ಯಾಂಕ್ಸ್ ರಿ ಸರ..:)

 12. ರಂಜಿತ್ ಹೇಳುತ್ತಾರೆ:

  ರೇಶ್ಮಾ ಮೇಡಮ್,

  ನೀವು ಸರ್‍ ಅಂದಿದ್ದು ನಂಗೆ ಸಿಕ್ಕ ಪ್ರಮೋಷನ್ನಾ?:)

  ಕವನ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.

 13. Santhosh Mugoor ಹೇಳುತ್ತಾರೆ:

  ನಿಮ್ಮೊಳಗಿನ “ದಾರಿ”ಹೋಕ ಬದುಕಿನ ಸವಿಯನ್ನು ಹಂಚಿದ್ದು ಹಿಡಿಸಿತು. ಉತ್ತಮ ಪ್ರಯತ್ನ ! ಮೊದಲ ಪ್ಯಾರವನ್ನು ಇನ್ನಷ್ಟು ಉತ್ತಮ ಪಡಿಸಬಹುದಿತ್ತೇನೋ ಎನಿಸಿದರು ಒಟ್ಟಾರೆಯಾಗಿ ಕವನ ಚೆನ್ನಾಗಿ ಮೂಡಿಬಂದಿದೆ ( ಅಥವಾ ನಿಮಗೆ ಮೂಡು ಬಂದಿದೆ !! ).

 14. Roopa Satish ಹೇಳುತ್ತಾರೆ:

  Hi Ranjith,
  Chennaagide 🙂
  Positive attitude towards Life.
  Sothu nonda managaLu chetarisikondu munde saagalu prerepisuttade….

  Rgds,

 15. ರಂಜಿತ್ ಹೇಳುತ್ತಾರೆ:

  ಸಂತೋಷ್ ಸರ್,

  ಬ್ಲಾಗಿಂದ ಬ್ಲಾಗಿಗೆ ಹಾರಿ ಹಾರಿ ಕಡೆಗೆ ಈ ದಾರಿ ಹೋಕ ನಿಮಗೆ ದೊರಕಿದ್ದು ನನಗೆ ಖುಷಿಯ ವಿಚಾರ. ನಿಮ್ಮ ವಿಮರ್ಶೆಯ ಮೊನಚಿಂದ ಇಷ್ಟು ದಿನ ತಪ್ಪಿಸಿಕೊಂಡಿದ್ದರಿಂದ ನನಗೇನೋ ಕಳಕೊಂಡ ಭಾವ ಇರುತ್ತಿತ್ತು.

  ಈಗ ಮೂಡಿನ ಜತೆಗೆ ಹೆಮ್ಮೆಯ ಕೋಡೂ ಮೂಡಿದೆ..:)

 16. ರಂಜಿತ್ ಹೇಳುತ್ತಾರೆ:

  ಥ್ಯಾಂಕ್ಸ್ ರೂಪ ಮೇಡಮ್..

  ಮೊದಲಿಂದಲೂ ಪ್ರೋತ್ಸಾಹಿಸುತ್ತ ಬಂದಿದ್ದೀರಿ.

  ನನ್ನ ಮೇಲೆ, ಅಕ್ಷರಗಳ ಮೇಲೆ ಪ್ರೀತಿ ಸದಾ ಹೀಗೇ ಇರಲಿ.

 17. kaligananath gudadur ಹೇಳುತ್ತಾರೆ:

  ಬದುಕಿನ ಸವಿ ಹೊತ್ತು
  ಹೊಡೆಸಬೇಕಿದೆ
  ರಸ್ತೆಗೇ ಸುಸ್ತು! -Heege kaviteyoo namma sustige maddagide. -Kaligananath gudadur

 18. rohini ಹೇಳುತ್ತಾರೆ:

  superb frendu

  ನೋಡುವ ಆಸೆಯಿದ್ದರೆ
  ನಿಲುಕಿದಷ್ಟೂ ನೋಟವಿದೆ,
  ಸಾಗುವ ಇಚ್ಚೆಯಿದ್ದರೆ
  ನಡೆದಷ್ಟೂ ದಾರಿಯಿದೆ ii patera masth ishta andye
  namage ase anodu ondu iddare khanditha aa kelasa made madtivi asene illadiddare aa kelasa hage uliyutte alvenri frendu

 19. ವಿಜಯರಾಜ್ ಕನ್ನಂತ ಹೇಳುತ್ತಾರೆ:

  kavana bhaari laaikidditt….

 20. ರಂಜಿತ್ ಹೇಳುತ್ತಾರೆ:

  ಕಲಿಗಣನಾಥ್ ರವರೇ,

  ಕವಿತೆಗಳೇ ಹಾಗೆ. ಪದಗಳೊಳಗೆ ಅವಿತು ಭಾವಗಳು ಮುದ ನೀಡುತಿರುತ್ತದೆ.
  ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ.

 21. ರಂಜಿತ್ ಹೇಳುತ್ತಾರೆ:

  ರೋಹಿಣಿ,

  ನಮ್ಮೊಳಗೊಂದು ಗುರಿ, ಗೈಡ್ ಮಾಡಬಲ್ಲ ಗುರು ಇದ್ದರೆ ಅಸಾಧ್ಯವೇನಿದೆ, ಅಲ್ವೆ?

  ******

  ವಿಜಯರಾಜ್,

  ನೀಲಿ ಹೂವಿಂದ್ ತೋಟಕ್ಕ್ ಬಂದದ್ದಕ್ಕ್ ನಿಮ್ಗೆಲ್ಲ ತೃಪ್ತಿ ಆರೆ ಅಷ್ಟ್ ಸಾಕ್ ಮಾರಾಯ್ರೆ… ಅಷ್ಟೆಲ್ಲಾ ತಲಿ ಉಪಯೋಗ್ಸಿ ಖುಷಿ ಆಯಿಲ್ಲ ಅಂದೇಳಿ ಬಯ್ಕಂಬ್ಕಾಗ ಅಷ್ಟೇ..:)

  ಥ್ಯಾಂಕ್ಸ್ ಇಟ್ಕಣಿ..:)

 22. hemapowar123 ಹೇಳುತ್ತಾರೆ:

  ರಂಜಿತ್ ಸರ್,

  >>>ನೋಡುವ ಆಸೆಯಿದ್ದರೆ
  ನಿಲುಕಿದಷ್ಟೂ ನೋಟವಿದೆ,
  ಸಾಗುವ ಇಚ್ಚೆಯಿದ್ದರೆ
  ನಡೆದಷ್ಟೂ ದಾರಿಯಿದೆ

  ಬದುಕಿನ ಸವಿ ಹೊತ್ತು
  ಹೊಡೆಸಬೇಕಿದೆ
  ರಸ್ತೆಗೇ ಸುಸ್ತು!>>> ಈ ಸಾಲುಗಳು ಇಷ್ಟವಾದವು, ಹಾಗೇ ಜಯಂತ್ ಕಾಯ್ಕಿಣಿಯ ’ಸಂಭ್ರಮದ ಕ್ಷಣ ಒಂದೇ ಮಿಕ್ಕಿದ್ದೆಲ್ಲಾ ಕಾರಕೂನಿ!!’ ಮಾತೂ ನೆನಪಾಯ್ತು 🙂

 23. Rajesh Manjunath ಹೇಳುತ್ತಾರೆ:

  ರಂಜಿತ್,
  ನಮಸ್ಕಾರ ಸರ್, ಕವನ ಇಷ್ಟವಾಯಿತು. ಇದರ ಬಗ್ಗೆ ನಾನು ಏನಾದರು ಹೇಳ ಹೊರಟರೆ ಅದು ನನ್ನ ಹುಂಬ ಪ್ರಯತ್ನವಾಗಿ ಬಿಡಬಹುದೆಂಬ ಭಯ. ಎಲ್ಲಾ ಸಾಲುಗಳು ತಮ್ಮದೇ ಆದ ದಾಟಿಯಲ್ಲಿ ಬದುಕನ್ನು ವಿಶ್ಲೇಷಿಸಿವೆ. ಏಕಾಗ್ರತೆ ತುಸು ಜಾಸ್ತಿ ಬೇಕು ಇದನ್ನು ಓದಿ ಅರಗಿಸಿಕೊಳ್ಳಲು ;).
  ಜೊತೆಗೆ ಅಡಿಗರ ಅಡುಗೆ ಮನೆಯಿಂದ ನಾನು ಈಗಾಗಲೇ ಕೇಳಿರುವ ಒಂದು ಸಾಲಿನ ಕತೆಗಳು ಇನ್ನೂ ಬಂದಿಲ್ಲ, ತೀರ ಕಾಯಿಸಿದರೆ ನಿಮ್ಮ ಬ್ಲಾಗಿನೆದುರು ಮುಷ್ಕರಕ್ಕೆ ಕುಳಿತೇನು ಎಚ್ಚರಿಕೆ :).
  -ರಾಜೇಶ್ ಮಂಜುನಾಥ್

 24. ರಂಜಿತ್ ಹೇಳುತ್ತಾರೆ:

  ಹೇಮಾ,

  ನೀವು ಬೊಗಸೆಯಲ್ಲಿರೋ ಮಳೆಯೆಲ್ಲಾ ಗಟಗಟನೆ ಕುಡಿದಂತಿದೆ?:) ಹಾಗೆಯೇ ಜಯಂತ್ ಸರ್‍ ಆ ಮಾತು ತಿಳಿಸಿದ್ದು ಬರವಣಿಗೆಯ ಬಗ್ಗೆ ಅನ್ನಿಸುತ್ತೆ, ಬದುಕಿನ ಕುರಿತಲ್ಲ.

  ಖ್ಯಾತ ಮಹಿಳಾ ಲೇಖಕಿಯೊಬ್ಬರು ನನ್ನ ಬರಹತೋಟಕ್ಕೆ ಬಂದದ್ದಕ್ಕೆ ಸಂತಸವಾಯಿತು..;)

 25. ರಂಜಿತ್ ಹೇಳುತ್ತಾರೆ:

  ನಮಸ್ತೆ ರಾಜೇಶ್,

  ಅರಗಿಸಿಕೊಳ್ಳಲು ಕಷ್ಟವಾಗುವಂತೆ ಬರೆಯುವ ಬುದ್ದಿಜೀವಿಯಾಗಿಬಿಟ್ಟೆನೇ?:)

  ಕೊನೆಯ ಸಲ ಬರೆದ ಒಂದು ಸಾಲು ಕತೆಗಳು ನನಗೇ ಅಷ್ಟು ಹಿಡಿಸದ ಕಾರಣ, ಇನ್ನಷ್ಟು ಚೆನ್ನಾಗಿ ಬರುವವರೆಗೆ ನಾನೇ ಕಷ್ಟಪಟ್ಟು ಕಾಯುತ್ತಿದ್ದೇನೆ.

  ಬಹಳ ಬೇಗ ಹಾಕ್ತೇನೆ,

  ಥ್ಯಾಂಕ್ಸ್.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s