ನಕ್ಕರೆ ಇಬ್ಬನಿ.. ಅತ್ತರೆ ಕಂಬನಿ..!

Posted: ಜನವರಿ 29, 2009 in ಹನಿಗಳು...
10321241
ನಿನ್ನನ್ನು ಚಿಂದಿ
ಉಡಾಯಿಸಬೇಕೆಂದಿದ್ದ
ನೋವುಗಳ
ಗ್ರಹಗತಿ ನೆಟ್ಟಗಿಲ್ಲ,
 
ನಿನಗೆ ನಾನು
ಸಿಕ್ಕಿರುವೆನಲ್ಲ!
 
*****
 
ತುಟಿಯ
ಚಿಪ್ಪಿನಲ್ಲಿಟ್ಟಿದ್ದೆ
 
ಕದ್ದು ಬಿಟ್ಟ!
 
****
 
ನೀ ಹೋದ ಕ್ಷಣದಿಂದ
ಕುಂಟುವುದು
ಕಲಿತಿದೆ
 
ಕಾಲ!
 
*****
 
 
ಕೋತಿಗೆ ಬಾಲವಿರುವುದಿಲ್ಲ
 
ನನ್ನವ
ಸಿಟ್ಟು ಮಾಡಿಕೊಂಡಾಗ!
 
*****
 
 
ಕ್ಷಣಗಳ ತತ್ತಿಗಳಿದ್ದವು,
 
ನೆನಪುಗಳು
ಕಾವಿಟ್ಟವು!
 
****
 
ದೇವತೆಗಳೆಲ್ಲಾ
ಸುಳ್ಳು ಹೇಳಿದ್ದರು,
 
ಸಮುದ್ರವನ್ನೇ ಕಡೆಯಬೇಕೆಂದಿಲ್ಲ,
 
ತುಟಿಗೆ ಮುತ್ತಿಟ್ಟರೂ ಸಾಕು..!
 
****
 
ಟಿಪ್ಪಣಿಗಳು
 1. shivu. ಹೇಳುತ್ತಾರೆ:

  ರಂಜಿತ್,

  ಮತ್ತೊಂದು ಕವನ……ಹುಡುಗಿಯ ಮೇಲೆ ಕವನ ಬರೆಯುವಾಗ ಈ ರೀತಿ ಹಿತಮಿತವಾದ ಪದ ಪ್ರಯೋಗ ಮಾಡುವುದರಲ್ಲಿ ನೀವು ಸಿದ್ಧ ಅಸ್ತರು…..

  ಸಮುದ್ರವನ್ನೇ ಕಡೆಯಬೇಕೆಂದಿಲ್ಲ,

  ಮುತ್ತಿಟ್ಟರೂ ಸಾಕು…..!

  ಆಹಾ! ಬಲೇ ಇದ್ದೀರಿ ನೀವು…..

 2. amara ಹೇಳುತ್ತಾರೆ:

  ಅಹಾ!!!
  ಚಂದದ ಸಾಲುಗಳು 🙂
  -ಅಮರ

 3. Rajesh Manjunath ಹೇಳುತ್ತಾರೆ:

  ರಂಜಿತ್,
  ಕ್ಷಣಗಳ ತತ್ತಿಗಳಿದ್ದವು,

  ನೆನಪುಗಳು
  ಕಾವಿಟ್ಟವು!

  ಮೂರು ಸಾಲು ನೂರು ಅರ್ಥ ಹೇಳುವಂತಿದೆ… ಒಂದೊಂದೇ ಸಾಲಿನಲ್ಲಿ ಮೋಡಿ ಮಾಡಿ ಬಿಡುತ್ತೀರಲ್ಲ ಸರ್.
  -ರಾಜೇಶ್

 4. nagtalwar ಹೇಳುತ್ತಾರೆ:

  ಮುಂದೊಮ್ಮೆ ಇಂತಹ ಮಿಂಚುಗಳನ್ನ ಒಂದಡೆ ಇಡಲು ನೀವು ಹೊತ್ತಿಗೆ; ಹೊರತರುವುದಾದಲ್ಲಿ, ನಕ್ಕರೆ..ಇಬ್ಬನಿ.ಅತ್ತರೆ..ಕಂಬನಿ..! ಎನ್ನುವ ಶೀಷಿ೯ಕೆಯನ್ನೇ ಇಡಿ.
  (ನಿಜಕ್ಕೂ ಮುದ್ದು,ಮುದ್ದಾಗಿವೆ ಈ ಹನಿಗಳು.)
  -ನಾಗು,ತಳವಾರ್

 5. ಪ್ರದೀಪ್ ಹೇಳುತ್ತಾರೆ:

  ಆಹಾ! ನೀಲಿ ತೋಟದಿಂದ ಇನ್ನೊಂದಿಷ್ಟು ನೀಲಿ ಮಲ್ಲಿಗೆಗಳು! 🙂

 6. ಅನಾಮಿಕ ಹೇಳುತ್ತಾರೆ:

  ನಕ್ಕರೆ ಇಬ್ಬನಿ.. ಅತ್ತರೆ ಕಂಬನಿ..! ಎಷ್ಟು ಒಳ್ಳೆ ಶೀಷಿ೯ಕೆ ಫ್ರೆಂಡು
  ಮನಸ್ಸು ತುಂಬಾ ಪ್ರಶಾಂತವಾಗಿರುವಾಗ ಬರೆದಿದ್ದು ಅಂತ ಅನಿಸುತ್ತೆ. ಚೆನ್ನಾಗಿ ಬಂದಿದೆ.
  ಕೆಲವು ಕಡೆ ಗೆಳತಿನ ನೆನಪು ಮಾಡಿಕೊಂಡೆ ಬರೆದಂತಿದೆ

 7. ಶೆಟ್ಟರು (Shettaru) ಹೇಳುತ್ತಾರೆ:

  ಶೀಷಿ೯ಕೆ ಆಹಾ…!!

  ಹನಿಗಳಿ ಅಹಾಹಾ…!!!!

  ಪ್ರೀತಿಯಿರಲಿ
  ಶೆಟ್ಟರು

 8. kallare ಹೇಳುತ್ತಾರೆ:

  ಚಂದದ ಸಾಲುಗಳು…. ಇಷ್ಟವಾದವು ರಂಜಿತ್.

 9. ಸುನಾಥ ಹೇಳುತ್ತಾರೆ:

  ಸುಂದರವಾದ ಚಿತ್ರ; ಸುಂದರವಾದ ಹನಿಗಳು.
  Honeyಯನ್ನು ಹನಿಸುತ್ತ ನಡೆಯಿರಿ.

 10. ರೋಹಿಣಿ ಹೇಳುತ್ತಾರೆ:

  ನೋಡಿ ಫ್ರೆಂಡು ನಿಮ್ಮ ಬರಹ ಓದಿ ಖುಷಿಲಿ ನನ್ನ ಹೆಸರು ಹಾಕೊದನ್ನೇ ಮರೆತೇ
  ನಕ್ಕರೆ ಇಬ್ಬನಿ.. ಅತ್ತರೆ ಕಂಬನಿ..! ಎಷ್ಟು ಒಳ್ಳೆ ಶೀಷಿ೯ಕೆ ಫ್ರೆಂಡು
  ಮನಸ್ಸು ತುಂಬಾ ಪ್ರಶಾಂತವಾಗಿರುವಾಗ ಬರೆದಿದ್ದು ಅಂತ ಅನಿಸುತ್ತೆ. ಚೆನ್ನಾಗಿ ಬಂದಿದೆ.
  ಕೆಲವು ಕಡೆ ಗೆಳತಿನ ನೆನಪು ಮಾಡಿಕೊಂಡೆ ಬರೆದಂತಿದೆ.
  ತುಟಿಯ
  ಚಿಪ್ಪಿನಲ್ಲಿಟ್ಟಿದ್ದೆ
  ಕದ್ದು ಬಿಟ್ಟ!
  ಈ ವಾಕ್ಯ ಅರ್ಥ ಆಗಿರಲಿಲ್ಲ ನೀವು ಹೇಳಿದ ನಂತರನೆ ಅರ್ಥ ಮಾಡ್ಕೊಂಡೆ

 11. Reshma ಹೇಳುತ್ತಾರೆ:

  nice lines…:)
  Nimma favourite kavi Jayantarige compitition kodbeku anno plan haaktiddira henge?;)

 12. ರಂಜಿತ್ ಹೇಳುತ್ತಾರೆ:

  ಶಿವು,

  ನೀಲಿಹೂವೆಂದರೆ ಭಗ್ನಪ್ರೇಮಿಯೊಬ್ಬನ ಬ್ಲಾಗು ಅಂದವರ ಬಾಯಿ ಮುಚ್ಚಿಸುವ ಪ್ರಯತ್ನ ಅಷ್ಟೇ..;)

  ಅಮರ್,

  ಸ್ವಾಗತ ಮತ್ತು ಥ್ಯಾಂಕ್ಸ್ ಎರಡೂ ಒಟ್ಟೊಟ್ಟಿಗೇ ನಿಮ್ಗೆ..:)

 13. ರಂಜಿತ್ ಹೇಳುತ್ತಾರೆ:

  ರಾಜೇಶ್.

  ಕಡಿಮೆ ಸಾಲಿನಲ್ಲಿ ಎಲ್ಲಾ ಹೇಳುವುದು ಹನಿಗಳ ಹಿರಿಮೆ ಸರ್‍. ಈ ಪಿಸುಮಾತುಗಳು ನಿಮಗೆ ಹಿಡಿಸಿದ್ದಕ್ಕೆ ಖುಷಿ..:)

  ನಾಗು,

  ಪುಸ್ತಕದ ವಿಚಾರ ಮಾಡಿಲ್ಲ..:) ಹೊತ್ತಿಗೆ ಬರುವ ಹೊತ್ತಿಗೆ ನನಗೆ ಬಹುಶಃ ಮೊಮ್ಮಕ್ಕಳು ಮುತ್ತಿಗೆ ಹಾಕಬಹುದು..:)

  ಧನ್ಯವಾದಗಳು ನಿಮ್ಮ ಪ್ರೀತಿಗೆ..

 14. ರಂಜಿತ್ ಹೇಳುತ್ತಾರೆ:

  ರೋಹಿಣಿ,

  ನೀವು ಹೆಸರು ಹಾಕದಿದ್ದರೂ ಅಷ್ಟು ಪ್ರೀತಿಯಿಂದ “ಫ್ರೆಂಡೂ” ಅಂತ ಕರೆಯುವವರು ಬೇರೆ ಯಾರೂ ಇಲ್ಲವಾದ್ದರಿಂದ ನೀವೇ ಅಂತ ಗೊತ್ತಾಯ್ತು.

  ಮುತ್ತಿನಂತಹ ವಿಚಾರಗಳು ಬೇಗ ಬೇಗ ಅರ್ಥವಾಗಬೇಕಮ್ಮ..:)

  ಥ್ಯಾಂಕ್ಸ್..

 15. ರಂಜಿತ್ ಹೇಳುತ್ತಾರೆ:

  ಪ್ರದೀಪ್,

  ನೀಲಿ ಮಲ್ಲಿಗೆಗಳು??!! ಒಳ್ಳೆಯ ಕಲ್ಪನೆ..!:).. ಹನಿಗಳನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್!

  ಶೆಟ್ಟರೇ,

  ಈ ಸಲ ಏನಾದರೂ ವಿಭಿನ್ನವಾಗಿ ಶೀರ್ಷಿಕೆ ನೀಡಬೇಕೆಂದು ನಾ ಮಾಡಿದ ಪ್ರಯತ್ನ ನಿಮ್ಮ ಮಾತಿಂದ ಸಫಲವಾಗಿದೆ..

  ಧನ್ಯವಾದಗಳು ಸರ್‍.

 16. ರಂಜಿತ್ ಹೇಳುತ್ತಾರೆ:

  ಮಹೇಶ್,

  ನಿಮಗಿಷ್ಟವಾಗಿದ್ದಕ್ಕೆ ಖುಷಿಯಾಯ್ತು..:)

  *****

  ನೀಲಾಂಜಲ,

  ನಿಮ್ಮಿಂದ ಕಾಮೆಂಟ್ ತರಿಸಿ ನನ್ನ ಹನಿಗಳು ತಮ್ಮ ಶಕ್ತಿಯನು ತೋರ್ಪಡಿಸಿವೆ..:)
  ಪ್ರೀತಿಯಿರಲಿ..

 17. ರಂಜಿತ್ ಹೇಳುತ್ತಾರೆ:

  ಸುನಾಥ್ ಸರ್‍,

  ನಿಮ್ಮೆಲ್ಲರ ಪ್ರೀತಿಯಿರಲಿ..ಹನಿಯನ್ನು ಧಾರೆಯಾಗಿಸುವೆ…

  ಥ್ಯಾಂಕ್ಯೂ ..:)

 18. ರಂಜಿತ್ ಹೇಳುತ್ತಾರೆ:

  ಅರೆ! ರೇಶ್ಮಾ..

  ಇದೇನು ಕಾಲೆಳೆವ ಹೊಸ ತಂತ್ರ??!!

  ಜಯಂತ್ ರ ಜೋಗದ ಮುಂದೆ ನನ್ನದೇನಿದ್ದರೂ ಇಬ್ಬನಿ, ಕಂಬನಿಗಳಷ್ಟೇ!:)

 19. Manjunatha ಹೇಳುತ್ತಾರೆ:

  ತುಂಬ ಚಂದದ ಸಾಲುಗಳು ರಂಜಿತ್. crisp, suggestive and powerful… ಕವನಗಳ ಕಡೆ ತಿರುಗಿ ಬಹಳ ದಿನ ಆಗಿತ್ತು, ಸುಮ್ಮನೇ ಹೀಗೆ ಬಂದೆ, honeyಗವನಗಳು ಹಿಡಿದು ನಿಲ್ಲಿಸಿದುವು.

 20. minchulli ಹೇಳುತ್ತಾರೆ:

  beautiful………..

  – shama, nandibetta

 21. ನವಿಲುಗರಿ ಹೇಳುತ್ತಾರೆ:

  ಹನಿ(honey ) ತುಂಬ ಸಿಹಿಯಾಗಿದೆ..! ಅದರಲ್ಲೂ ತುಟಿಯ ಚಿಪ್ಪಿನಲ್ಲಿಟ್ಟಿದ್ದೆ ಕದ್ದು ಬಿಟ್ಟ! ಸೂಪರ್…

  ದೇವತೆಗಳೆಲ್ಲಾ
  ಸುಳ್ಳು ಹೇಳಿದ್ದರು,

  ಸಮುದ್ರವನ್ನೇ ಕಡೆಯಬೇಕೆಂದಿಲ್ಲ, ತುಟಿಗೆ ಮುತ್ತಿಟ್ಟರೂ ಸಾಕು

  ಇದು ಸುಪರ್ ಡ್ಯೂಪರ್ !

  ನೀಲಿಹೂವಿನ ಇಂಥ ವಯ್ಯಾರ ಒನಪುಗಳನ್ನ ನೋಡಿನೆ ನಮಗೂ ಅಲ್ಪ ಸ್ವಲ್ಪ ಬರಿಬೇಕು ಅನ್ನೋ ಆಸೆ ಹುಟ್ಟುತ್ತೆ ಕೆಲವೊಮ್ಮ

 22. veerannakumar ಹೇಳುತ್ತಾರೆ:

  beautiful lines.. memorable..!

 23. ರಂಜಿತಾ ಹೆಗಡೆ ಹೇಳುತ್ತಾರೆ:

  ತುಂಬಾ ಚೆನ್ನಾಗಿವೆ … 🙂

 24. ranjanahegde ಹೇಳುತ್ತಾರೆ:

  ಸುಂದರ ಹನಿಗಳು ಇಲ್ಲೆಲ್ಲಾ ಉದುರಿ ಹೋದಂತಾಯಿತು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s