ಬೇಸತ್ತ ಮನಗಳಿಗೆ ಬೆಚ್ಚಗಿನ ಮುದ ನೀಡಲು ಬರುತ್ತಿದೆ “ಕಾಫಿಕ್ಲಬ್”

Posted: ಫೆಬ್ರವರಿ 1, 2009 in ಮಾಹಿತಿ
coffee_club-011
ಚರ್ಚೆಗಳೆಂದರೆ ಚರ್ಚೆಗಳವು.
 
ಒಂದು ಕಡೆ ಹೇಮಾಳ “ಪವರ್ರು” ಮತ್ತೊಂದು ಕಡೆ ಸುಪ್ರೀತನ “ಖದರ್ರು” ಮಧ್ಯೆ ಮಧ್ಯೆ ಇಣುಕಿ ಕೆಣಕಿ ಹೋಗುವ ಮತ್ತಷ್ಟು ಗೆಳೆಯರು. ಎಲ್ಲರೂ ಮನಸಾರೆ ವಾದ ಮಾಡುವವರೇ.. ಆ ವಾದಗಳಲ್ಲಿ ಹದವಾದ ಕಾಲೆಳೆತ, ಮಿಳಿತವಾದ ಹಾಸ್ಯ, ಅಲ್ಲಲ್ಲಿ ತುಣುಕುಗಳ ರೂಪದಲ್ಲಿ ಗಾಂಭೀರ್ಯತೆ, ಒಂದಿಷ್ಟು ಚಂದದ ರೂಪಕಗಳು, ಜತೆಗೆ ಹೋಲ್ ಸೇಲ್ ತುಂಟತನ ತುಂಬಿ ತುಳುಕುತ್ತಿತ್ತು.  
ಆದರೆ ಅದೇನಾಯ್ತೋ.. ಕಾರಣ ಹೇಳದೇ ಕೈ ಕೊಡುವ ಹುಡುಗಿಯಂತೆ ಸುಪ್ರೀತ್ ಓರ್ಕುಟ್ ಬಿಟ್ಟುಹೋದ. ನಮ್ಮ ವಾದಗಳೆಲ್ಲ ಸ್ತಬ್ಧವಾಯಿತು. ಚರ್ಚೆಗಳೆಲ್ಲ ಸ್ಥಗಿತವಾದವು. ಅಲ್ಲಿ ಬೇರೆಯವರು ಚರ್ಚೆ ಮುಂದುವರಿಸಿದರೂ ನಮ್ಮ ಮನಸ್ಸು ಮಾತ್ರ ಒಂದಷ್ಟು ದಿನ ಮೌನನಮನ ಸಲ್ಲಿಸಿತ್ತು.
 
ಅದರೆ ಮನಸ್ಸು ಸುಮ್ಮನೆ ಕೂರಬೇಕಲ್ಲ?
 
ಈಗ ಸುಪ್ರೀತ್ ಜ್ಞಾನೋದಯವಾಗಿ ಹಳೆಹುಡುಗನ ಬಳಿ ಬಂದ ಹುಡುಗಿಯಂತೆ ಮತ್ತೆ ತಯಾರಾಗಿದ್ದಾರೆ.ನಮಗೆಲ್ಲಾ ಮೆದುಳಿನ ರಿಫ್ರೆಶ್ ಬಟನ್ ಅದುಮಿ ಅಂದಿದ್ದಾರೆ. ಈಗ ಮೊದಲ ಬಾರಿ ರೆಕ್ಕೆ ಬಿಚ್ಚಿ ಆಗಸಕ್ಕೆ ಹಾರುವ ಹಕ್ಕಿ ಮನಸ್ಸು ನಮ್ಮದು, ಹೊಸತನ್ನೇನೋ ಮಾಡುವ ತವಕ, ಸೃಜನಶೀಲತೆಯ ಕಟ್ಟೆಯೊಡೆಯುವ ಕಾತರ.
 
ಏಕತಾನತೆಯಿಂದ ಬೇಸತ್ತ ಮನಗಳಿಗೆ ಬೆಚ್ಚಗೆ ಹಬೆಯಾಡುವ ಕಾಫಿ ಕುಡಿಸುವ ಅಭಿಲಾಷೆ.
 
ಅದಕ್ಕೇ ಅಂತಲೇ ಹೊಸದೊಂದು ಬ್ಲಾಗು ಕಣ್ತೆರೆದಿದೆ. “ಕಾಫಿಕ್ಲಬ್” ಎಂಬ ನಾಮಕರಣ ನಿಮಗೆಲ್ಲಾ ತಿಳಿಸದೇ ಮಾಡಿಯಾಗಿದೆ.
ನೀವು ಸುಮ್ಮನೆ ಕಾಫಿ ಕಪ್ಪು ಹಿಡಿದು(ಹಿಡಿಯದಿದ್ದರೂ ಓಕೆ!)  ಓದಿದರೆ ಸಾಕು, ಒಳ್ಳೆ ಡಿಕಾಕ್ಷನ್ನಿನ ಕಾಫಿ ಕುಡಿದ ಮುದ ನಿಮ್ಮದು.
 
ಖಂಡಿತಾ ಆಗಾಗ್ಗೆ ಬಂದು ಹೋಗ್ತೀರಲ್ಲಾ?!
 
ಇಲ್ಲಿದೆ ಕೊಂಡಿ  http://kafiklab.blogspot.com/
Advertisements
ಟಿಪ್ಪಣಿಗಳು
  1. Rajesh Manjunath ಹೇಳುತ್ತಾರೆ:

    ರಂಜಿತ್,
    ಸರ್ ಅರ್ಜೆಂಟಾಗಿ ಒಂದು ಕಪ್ ಕಾಫಿ ಪ್ಲೀಸ್… ಸ್ವಲ್ಪ ಬಿಸಿ ಇರಲಿ, ಸಕ್ಕರೆ ಸ್ವಲ್ಪ ಜಾಸ್ತಿ ಬೇಕು, ಸ್ಟ್ರಾಂಗ್ ಆಗಿರಲಿ :).
    -ರಾಜೇಶ್ ಮಂಜುನಾಥ್

  2. ಹೇಮ ಪವಾರ್ ಹೇಳುತ್ತಾರೆ:

    ರಾಜೇಶ್,
    ನಮ್ ಕಾಫೀ ಕ್ಲಬ್ಬಿಗೆ ಬನ್ನಿ, ನಿಮಗೆ ಸರ್ವ್ ಮಾಡಲು ವೇಟರ್ ಗಳು ರೆಡಿ ಇದಾರೆ!! 🙂

    ಹೇಮ

  3. shivu. ಹೇಳುತ್ತಾರೆ:

    ರಂಜಿತ್,

    ನಾನು ನಿಜವಾದ ಕಾಫಿ ಕುಡಿಯುವುದು ಅಪರೂಪ….ಅದರೆ ನಿಮ್ಮ ಸುಪ್ರೀತ್ ಬ್ಲಾಗಿನ ಕಾಫಿ ಕುಡಿಯಲು ಬಂದೇ ಬರುತ್ತೇನೆ….

  4. ಸುನಾಥ ಹೇಳುತ್ತಾರೆ:

    ನಿಮ್ಮ Coffee Clubಗೆ ನಾನೊಬ್ಬ ಉದ್ದರಿ ಗಿರಾಕಿ. OKನಾ?

  5. ರೋಹಿಣಿ ಹೇಳುತ್ತಾರೆ:

    ಫ್ರೆಂಡು ನನಗೂ ಕಾಫಿ ಬೇಕು ನಾನು ಬರ್ತೀನಿ

  6. ಶರಶ್ಚಂದ್ರ ಕಲ್ಮನೆ ಹೇಳುತ್ತಾರೆ:

    ಖಂಡಿತ ಬರ್ತೀನಿ ರಂಜಿತ್ 🙂
    ಹೇಮಾ, ನಮ್ಮನ್ನು ಅಂದು ಗಾಂಧಿ ಬಜಾರಲ್ಲಿ ಕಾಯಿಸಿದ್ದೀರ, ಇಲ್ಲಿ ಹಾಗೆ ಮಾಡಬೇಡಿ 🙂

  7. ರಂಜಿತ್ ಹೇಳುತ್ತಾರೆ:

    ರಾಜೇಶ್,

    ಬಿಸಿ, ಸರಿಯಾದ ಪ್ರಮಾಣದಲ್ಲಿ ಸಕ್ಕರೆ, ಹಿಂದೆಲ್ಲೂ ಕುಡಿದಿರಬಾರದು- ಮುಂದೆಲ್ಲೂ ಸಿಗಲಾರದು ಅಂಥಾದ್ದು ತಯಾರಾಗ್ತಿದೆ..( ಬಿಲ್ಡಪ್ ಜಾಸ್ತಿ ಆಯ್ತೆನೊ ನಮ್ದು..:))

  8. ರಂಜಿತ್ ಹೇಳುತ್ತಾರೆ:

    ಹೇಮಾ,

    ಲೇಡಿಸ್ ವೈಟರ್ ಕೂಡ ಇದಾರೆ ಅನ್ರೀ:)

  9. ರಂಜಿತ್ ಹೇಳುತ್ತಾರೆ:

    ಶಿವು,

    ಸುಪ್ರೀತ್ ತಮ್ಮ ಚಿಕ್ಕ ವಯಸ್ಸಲ್ಲೇ ಏನೇನೋ ಕ್ರಿಯೇಟಿವಿಟಿಗಳನ್ನು ಮಾಡಿದವರು. ಅವರ ಜೋಳಿಗೆಯ ಹೊಸ ಕಾಣಿಕೆ ಬಗ್ಗೆ ನಿಮ್ಮಷ್ಟೇ ಕಾತರ ನನಗಿದೆ.

    ಹಬೆಯಾಡುವ ಬಿಸಿ ಕಾಫಿ ಎಂಬುದು ಮನಸ್ಸಿನ ಬೆಚ್ಚಗಿನ, ಮುದದ ಭಾವಕ್ಕೊಂದು ರೂಪಕ ಅಷ್ಟೇ. ಕುಡಿಯದಿದ್ದರೂ ಓದಲು ಖುಷಿಯಾಗುತ್ತದೆಂದು ನಮ್ಮ ನಂಬಿಕೆ.

  10. ರಂಜಿತ್ ಹೇಳುತ್ತಾರೆ:

    ಸುನಾಥ್,

    ಖುಷಿಯಿಂದ ಬರಬೇಕು ಅನ್ನುವುದೇ ನಮ್ಮ ಕಾಫಿಯ ಬಿಲ್ಲು..:)

    ರೋಹಿಣಿ,

    ಬಲಗಾಲಿಟ್ಟು ಬರ್ಬೇಕಮ್ಮಾ..:)

  11. ರಂಜಿತ್ ಹೇಳುತ್ತಾರೆ:

    ಶರತ್,

    ಗಾಂಧಿಬಜಾರ್ ನಲ್ಲಿ ಕಾಯಿಸಿದ್ದಲ್ಲ, ಕೈಕೊಟ್ಟದ್ದೆನ್ನಿ. ಸುಪ್ರೀತ್, ಹೇಮಾ ಸೇರ್ಕೊಂಡು ಕಾಫಿಕ್ಲಬ್ ನಲ್ಲೂ ಕೈ ಕೊಡದಿದ್ರೆ ಸಾಕು..;)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s