ಸಕ್-ಹತ್ತು ಸಾಲುಗಳು !

Posted: ಫೆಬ್ರವರಿ 4, 2009 in ಒಂದು ಸಾಲಿನ ಕತೆಗಳು..
storytelling
೧.  ಬೇರೆ ಯಾರಾದರೂ ತನ್ನನು ಮುಟ್ಟಿದರೂ ಸಾಕು ಮಡಿ ಹಾಳಾಯ್ತು ಎಂದು ಎರಡೆರಡು ಸಲ ಸ್ನಾನ ಮಾಡುವ ಸುಬ್ರಾಯ ಭಟ್ಟರ ಮೇಲೆ ಅವರ ಕರುಳಕುಡಿ ಧಾರಾಕಾರ ಉಚ್ಚೆ ಹೋಯ್ದಿತು.
 
 
 ೨.  ಜಗತ್ತಿನ ಅತೀ ಚಿಕ್ಕ ಪ್ರೇಮ ಕತೆ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದವ ಬರೆದ್ದಿದ್ದಿಷ್ಟೇ: ” ಅವರಿಬ್ಬರೂ.. ಒಬ್ಬರೇ!”
 
 
 ೩.  ಊರೆಲ್ಲಾ ತಾನು ಬಂಜೆ ಎಂದಾಗಲೂ ಬೇಸರ ಮಾಡಿಕೊಳ್ಳದವಳು, “ರೀ.. ಒಂದು ಅನಾಥ ಮಗೂನ ದತ್ತು ತಗೊಳ್ಳೋಣ?” ಅಂತ ಕೇಳಿದ್ದಕ್ಕೆ ರೇಗಾಡಿದ ಗಂಡನ ಮಾನಸಿಕ ಬಂಜೆತನಕ್ಕೆ ದುಃಖಿಸಿದಳು.
 
 
 ೪.  ಹೇಳಿದ್ದರೆ ಕಷ್ಟಪಟ್ಟಾದರೂ ಜೀವ ತೆತ್ತಾದರೂ ಸರಿಪಡಿಸಿಕೊಂಡು ಮತ್ತೆ ಜತೆಗಿರುವ ಸಾವಿರ ಕನಸುಗಳನ್ನು ಕಣ್ಣಲ್ಲಿ ಹೊತ್ತು ಎದುರುನಿಲ್ಲುತ್ತಾನೆ ಎಂಬುವುದಕ್ಕೋಸ್ಕರ, ಕಾರಣವೇ ತಿಳಿಸದೇ ಹಾಗೆ ಅವನನ್ನು ಬಿಟ್ಟುಹೋದಳು.
 
 
 ೫.   ಮಗನ ಫೀಸ್ ತುಂಬಲು ಸಾಲ ಕೇಳಲು ಹೋದಾಗ ಮಾರ್ವಾಡಿ “ಒತ್ತೆಗೇನಿಡ್ತಿ?” ಎಂದು ಕೇಳಿದ. ಅವನ ಹೆಸರು, ಭವಿಷ್ಯ, ಬದುಕು ಎಲ್ಲವೂ ಬೆಲೆಕಳಕೊಂಡು ಅವನೆದುರು ನಿಂತಿತು..
 
 
೬.  ವಯಸ್ಸಾದ ಒಬ್ಬಾಕೆ ವೃದ್ಧಾಶ್ರಮದ ಫಾರಂ ತುಂಬುತ್ತಿದ್ದಳು. ಅದರಲ್ಲಿ ಮಕ್ಕಳ ಸಂಖ್ಯೆ ನಮೂದಿಸುವ ಕಾಲಮ್ ಬಂದಾಗ ಸ್ವಲ್ಪ ತಡೆದು ಬೇಸರದಿಂದಲೇ ೩ ಎಂದು ಬರೆದರೂ, ಅವಳಿಗರಿವಿಲ್ಲದೇ ಅದರ ಮೇಲೆ ಉದುರಿದ ಕಂಬನಿ ಅದನ್ನು ಹೊಡೆದುಹಾಕಿತು!
 
 
 ೭.  ಕಾಲೇಜಿನಲಿ ಓದುತ್ತಿರುವ ಮಗನ ಶರ್ಟಿನಲಿ ಸಿಗರೇಟು ಕಮಟಿದ್ದುದ್ದಕ್ಕೆ ಕೋಪಗೊಂಡು ಹೊಡೆಯಲು ಹೊರಟ ಅಮ್ಮನನ್ನು ತಡೆದು ಮಗ ಹೇಳಿದ್ದು: ” ಅಮ್ಮಾ.. ಆ ಶರ್ಟನ್ನು ನಿನ್ನೆ ಅಪ್ಪ ಹಾಕ್ಕೊಂಡು ಹೋಗಿದ್ದಮ್ಮ.. ನಾನಲ್ಲ!”
 
೮.  ಡಬ್ಬಿಯೊಳಗಿನ ಉಂಡೆ ಕದ್ದುದ್ದಕ್ಕೆ ಪಶ್ಚಾತ್ತಾಪ ಪಡುತ್ತ ಅಮ್ಮನ ಬಳಿ ಸಾರಿ ಕೇಳಲು ಬಂದ ಪುಟ್ಟ, ಅಪ್ಪನ ಪರ್ಸಿಂದ ಅಮ್ಮ ಹಣ ಕದಿಯುತ್ತಿದುದ್ದನ್ನು ನೋಡಿ ಹಾಗೆಯೇ ಹೊರಟುಹೋದ!
 
 
 ೯.   ಅರ್ಧ ಘಂಟೆಯಿಂದ ತನ್ನ ಪರಿಚಯ ಹೇಳಿಕೊಳ್ಳುತ್ತಿದ್ದರೂ ಅವರಿಗೆ ನೆನಪಾಗದಾಗ ” ಹೋಗಲಿ ಬಿಡಿ ಸಾರ್.. ನಿಮ್ಮ ಹತ್ರ ಸಾವಿರ ರೂಪಾಯಿ ಸಾಲ ಇಸ್ಕೊಂಡಿದ್ದೆ, ವಾಪಸ್ಸು ಕೊಡೋದಿತ್ತು” ಅಂದಾಗ ಬೇರೆ ವಿಧಿಯಿಲ್ಲದೇ ಅವರಿಗೆ ನೆನಪಾಗತೊಡಗಿತು..!
೧೦.  ಡೈರಿಯಲ್ಲಿ ಬರೆದುಕೊಂಡಿದ್ದ ಲಾಟರಿ ಟಿಕೆಟ್ ನಂಬರಿಗೆ ಬಂಪರ್ ಬಹುಮಾನ ಲಕ್ಷ ರೂಪಾಯಿ ಹೊಡಿದಿದ್ದು ಹೌದಾದರೂ, ಹಾಳಾದ್ದು ಈ ಮೆರವಿಂದಾಗಿ ಆ ಟಿಕೇಟ್ ಎಲ್ಲಿಟ್ಟಿದ್ದೇನೆಂದು ನೆನಪಾಗ್ತಿಲ್ಲ!
 
ಟಿಪ್ಪಣಿಗಳು
 1. shivu.k ಹೇಳುತ್ತಾರೆ:

  ರಂಜಿತ್,

  ಆಹಾ! ಮತ್ತೆ ನನ್ನ ಫೇವರೇಟ್…ಚುಟುಕು ಕತೆಗಳು….ನನಗಂತೂ ಸಿಕ್ಕಾ ಪಟ್ಟೆ ಖುಷಿಯಾಗುತ್ತೆ……ನನ್ನ ಶ್ರೀಮತಿಯೂ ಇದನ್ನು ಇಷ್ಟಪಟ್ಟು ಓದುತ್ತಾಳೆ…..

  ವಯಸ್ಸಾದ ಒಬ್ಬಾಕೆ ವೃದ್ಧಾಶ್ರಮದ ಫಾರಂ ತುಂಬುತ್ತಿದ್ದಳು. ಅದರಲ್ಲಿ ಮಕ್ಕಳ ಸಂಖ್ಯೆ ನಮೂದಿಸುವ ಕಾಲಮ್ ಬಂದಾಗ ಸ್ವಲ್ಪ ತಡೆದು ಬೇಸರದಿಂದಲೇ ೩ ಎಂದು ಬರೆದರೂ, ಅವಳಿಗರಿವಿಲ್ಲದೇ ಅದರ ಮೇಲೆ ಉದುರಿದ ಕಂಬನಿ ಅದನ್ನು ಹೊಡೆದುಹಾಕಿತು!”

  ಇದು ನಾನು ಓದಿದ ಅತ್ಯುತ್ತಮಗಳಲ್ಲಿ…ಒಂದು…..ಥ್ಯಾಂಕ್ಸ್…..
  ಆಹಾಂ ! ಅಂದ ಹಾಗೆ ನಿಮ್ಮ ಒಂದು ಸಾಲಿನ ಕತೆಗಳಂತೆ ನಾನು ಕೂಡ ಪುಟ್ಟ ಪುಟ್ಟ ಸಂತೋಷಗಳ ಬಗ್ಗೆ ಒಂದು ಲೇಖನ ಚಿತ್ತ ಸಹಿತ ಕೊಟ್ಟಿದ್ದೇನೆ…ನೋಡಿ..

 2. ರೋಹಿಣಿ ಹೇಳುತ್ತಾರೆ:

  ನಮಸ್ತೆ ಫ್ರೆಂಡು

  ಹೇಳಿದ್ದರೆ ಕಷ್ಟಪಟ್ಟಾದರೂ ಜೀವ ತೆತ್ತಾದರೂ ಸರಿಪಡಿಸಿಕೊಂಡು ಮತ್ತೆ ಜತೆಗಿರುವ ಸಾವಿರ ಕನಸುಗಳನ್ನು ಕಣ್ಣಲ್ಲಿ ಹೊತ್ತು ಎದುರುನಿಲ್ಲುತ್ತಾನೆ ಎಂಬುವುದಕ್ಕೋಸ್ಕರ, ಕಾರಣವೇ ತಿಳಿಸದೇ ಹಾಗೆ ಅವನನ್ನು ಬಿಟ್ಟುಹೋದಳು.

  ವಯಸ್ಸಾದ ಒಬ್ಬಾಕೆ ವೃದ್ಧಾಶ್ರಮದ ಫಾರಂ ತುಂಬುತ್ತಿದ್ದಳು. ಅದರಲ್ಲಿ ಮಕ್ಕಳ ಸಂಖ್ಯೆ ನಮೂದಿಸುವ ಕಾಲಮ್ ಬಂದಾಗ ಸ್ವಲ್ಪ ತಡೆದು ಬೇಸರದಿಂದಲೇ ೩ ಎಂದು ಬರೆದರೂ, ಅವಳಿಗರಿವಿಲ್ಲದೇ ಅದರ ಮೇಲೆ ಉದುರಿದ ಕಂಬನಿ ಅದನ್ನು ಹೊಡೆದುಹಾಕಿತು!

  ಇವೆರಡು ಮನಸ್ಸಿಗೆ ತುಂಬಾ ಹಿಡಿಸಿತು

 3. ಶೆಟ್ಟರು (Shettaru) ಹೇಳುತ್ತಾರೆ:

  “ಅವರಿಬ್ಬರೂ.. ಒಬ್ಬರೇ!”

  Fantastic..!!!!

  -ಶೆಟ್ಟರು

 4. bala ಹೇಳುತ್ತಾರೆ:

  ರಂಜಿತ್,

  ಹತ್ತೂ ಸಕತ್ತಾಗಿವೆ

 5. ಸುನಾಥ ಹೇಳುತ್ತಾರೆ:

  ವಿನೋದದಿಂದಲೇ ಬಾಳಿನ ತಿರುಳನ್ನು ತಿಳಿಸುವ ಸಾಲುಗಳಿಗಾಗಿ ಅಭಿನಂದನೆಗಳು.

 6. Rajesh Manjunath ಹೇಳುತ್ತಾರೆ:

  ರಂಜಿತ್,
  ೨, ೪, ಮತ್ತು ೬ ತುಂಬಾ ಚೆನ್ನಾಗಿವೆ… ಓದಿದ ಮೇಲೆ ಬಹಳ ಹೊತ್ತಿನ ತನಕ ಮನದಲ್ಲಿ ನಿಲ್ಲುತ್ತವೆ. ಇಷ್ಟು ದಿನ ಕಾದಿದ್ದಕ್ಕು ಒಳ್ಳೆ ಸಾಲುಗಳನ್ನೇ ನೀಡಿದ್ದೀರಿ, ಚೆನ್ನಾಗಿವೆ.
  -ರಾಜೇಶ್ ಮಂಜುನಾಥ್

 7. ವಿಜಯರಾಜ್ ಕನ್ನಂತ ಹೇಳುತ್ತಾರೆ:

  2, 4 , 6 super… adralloo 6 anthu bombaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaT.
  hats off

 8. M G Harish ಹೇಳುತ್ತಾರೆ:

  ಎಲ್ಲವೂ ಚೆನ್ನಾಗಿವೆ.. ಅದರಲ್ಲೂ ಆರನೆಯದು ಸೂಪರ್

 9. Tejaswini Hegde ಹೇಳುತ್ತಾರೆ:

  ಎಲ್ಲಾ ಸಾಲುಗಳೂ ಚೆನ್ನಾಗಿವೆ..ಅದರಲ್ಲೂ ಮೊದಲ ಮೂರು ಸಾಲುಗಳು ಮತ್ತೂ ಇಷ್ಟವಾದವು.

 10. nagtalwar ಹೇಳುತ್ತಾರೆ:

  ರಂಜಿತ್ ಸರ್, ಹತ್ತಾರು ಪುಟದ ಪ್ರೇಮ ಪತ್ರದಲ್ಲಿ “ನಾನಿನ್ನ ತುಂಬ ಪ್ರಿತಿಸ್ತೀನಿ” ಎಂಬ ಸಾಲು ಹೇಗೆ ಮುಖ್ಯವಾಗಿರುತ್ತೋ..? ಹಾಗೆಯೇ ಬದುಕಿನ ಹಲವಾರು ತಿರುವುಗಳಲ್ಲಿ ಇಂಥಹ ತಿರುಳುಗಳುಳ್ಳ ಸಾಲುಗಳು ಮುಖ್ಯವಾಗಿಹೋಗುತ್ತವೆ. ನಿಜಕ್ಕೂ ಓದಿ ಕಣ್ಮುಚ್ಚಿಕೊಂಡು, ಎಲ್ಲಾ ಸಾಲುಗಳನ್ನ ಮತ್ತೆ..ಮತ್ತೆ ನೆನಪಿಸಿಕೊಂಡೆ. ನನ್ನಂತರಂಗವನ್ನ ಮತ್ತೊಮ್ಮೆ ಭಾವುಕತೆಗೀಡುಮಾಡಿದ ನಿಮ್ಮ ಸಾಲುಗಳಿಗೆ ಆತ್ಮಸಾಕ್ಷಿಯಾಗಿ ಅಭಿನಂದನೆಗಳು ಸಲ್ಲುತ್ತಿವೆ….ಎದೆಯೊಡ್ಡಿ ಅರ್ಪಿಸಿಕೊಳ್ಳಿ….!
  -ನಾಗು,ತಳವಾರ್.

 11. vinayaka kodsara ಹೇಳುತ್ತಾರೆ:

  olle baraha. tumba kriyaasheelavaagide
  kodsara

 12. Rohit ಹೇಳುತ್ತಾರೆ:

  hey
  bhai
  its super fantacstic
  nange yenu helbeku anthane gothagta illa
  keep it up my boy

 13. Chitra karkera ಹೇಳುತ್ತಾರೆ:

  ಎಲ್ಲಾ ಸಾಲುಗಳೂ ನನಗೆ ತುಂಬಾನೇ ಇಷ್ಟವಾದುವು..ಕದ್ದು ನನ್ನ ಡೈರಿಯಲ್ಲಿ ಬರೆದುಕೊಂಡುಬಿಟ್ಟೆ.
  -ಚಿತ್ರಾ

 14. satish ಹೇಳುತ್ತಾರೆ:

  Super…. 3rd one was good, others as well

 15. prakash hegde ಹೇಳುತ್ತಾರೆ:

  ellavu chennaagide…

  dhanyavaadgaLu

 16. ರಂಜಿತ್ ಹೇಳುತ್ತಾರೆ:

  ಶಿವು ಸರ್‍,

  ನಿಮ್ಮ ಶ್ರೀಮತಿಯವರಿಗೂ ನನ್ನ ಧನ್ಯವಾದ ಮತ್ತು ನಮಸ್ತೆ ತಿಳಿಸಿ.

  ನಾಗು ಸರ್‍,

  ನೀವು ಆತ್ಮಸಾಕ್ಷಿಯಾಗಿ ನೀಡಿದ ಅಭಿನಂದನೆಯನ್ನು ಬೊಗಸೆಯೊಡ್ಡಿ ಈಸಿಕೊಳ್ಳುತ್ತಿದ್ದೇನೆ. ನಿಮ್ಮ ಪ್ರೀತಿಗೆ ಋಣಿ.

  ರೋಹಿತ್ ಅಣ್ಣ,

  ನೀನು ಕಾಮೆಂಟ್ ಬರ್ದಿದ್ದು ಬಹಳ ಬಹಳ ಖುಷಿ ಕೊಟ್ಟಿತು..:)

 17. ರಂಜಿತ್ ಹೇಳುತ್ತಾರೆ:

  ಶಿವು, ರೋಹಿಣಿ, ಶೆಟ್ಟರು, ಬಾಲಾ, ಸುನಾಥ್, ರಾಜೇಶ್, ವಿಜಯ್ರಾಜ್ ಜಿ, ಎಮ್.ಜಿ. ಹರೀಶ್, ತೇಜಸ್ವಿನಿ ಹೆಗ್ಡೆ, ನಾಗು, ವಿನಾಯಕ ಕೊಡ್ಸರ, ರೋಹಿತ್, ಚಿತ್ರಾ, ಸತೀಶ್, ಪ್ರಕಾಶ್ ಹೆಗ್ಡೆ

  ಎಲ್ರಿಗೂ ಒಟ್ಟಿಗೇ ಧನ್ಯವಾದಗಳು.

  ಪ್ರೋತ್ಸಾಹ, ಪ್ರೀತಿ ಹೀಗೇ ಇರಲಿ.

 18. ಅನಾಮಿಕ ಹೇಳುತ್ತಾರೆ:

  ರಂಜಿತ್,

  ಹೊಸ ಟೋಪಿಗಳು ಬಂದಿವೆ…ಹಾಕಿಕೊಳ್ಳಲು ಅಲ್ಲಲ್ಲ…ನೋಡಲು ಬನ್ನಿ….[ಹಾಕಲು ಕಾಯುತ್ತಿರುತ್ತೇನೆ. ಆಹ…ಆಹ…]

 19. sunil ಹೇಳುತ್ತಾರೆ:

  Ranjit,
  Hey ellavoo chennaguide geleya 😉
  Sunil

 20. Ganesh K ಹೇಳುತ್ತಾರೆ:

  All are superb.
  Nothing cud b left from 1st priority.

  Let it continue Ranjit.

  Ganesh.K.

 21. Deepasmitha ಹೇಳುತ್ತಾರೆ:

  ಚುಟುಕು ಕಥೆಗಳು…ಕೇವಲ ಒಂದೆರಡು ಸಾಲಿನಲ್ಲೇ ಎಷ್ಟೋ ಅರ್ಥ ಕೊಡುವ ಹಾಯ್ಕುಗಳಂತೆ ಇವೆ. ತುಂಬಾ ಚೆನ್ನಾಗಿವೆ

 22. sharanu hullur ಹೇಳುತ್ತಾರೆ:

  ondu saalina kategali channagiddavu.
  thanks

 23. ranjanahegde ಹೇಳುತ್ತಾರೆ:

  ವಾವ್ ತುಂಬಾ ಸುಂದರ ಸಾಲುಗಳು, ಈ ಚುಟುಕುಗಳನ್ನು ಓದುವ ಮಜವೇ ಬೇರೆ. ಮುಖದಲ್ಲಿ ಮುಗುಳ್ನಗೆ ತುಂಬಿಕೊಂಡು ಇವುಗಳನ್ನು ಓದಿ ಮುಗಿಸಿದ್ದೇನೆ. ತುಂಬಾ ಚೆನ್ನಾಗಿ ಬರೆದಿದ್ದೀರಿ ರಂಜೀತ್.

 24. ಅನಿಕೇತನ ಹೇಳುತ್ತಾರೆ:

  Hey Ranjit…hosa post yaavag maadteera? tumba chenda baritiri kanri.
  Sunil.

 25. ಪ್ರದೀಪ್ ಹೇಳುತ್ತಾರೆ:

  ರಂಜಿತ್, ನಿಮ್ಮ ಒಂದು ಸಾಲು ಕಥೆಗಳನ್ನು ಇದೇ ಮೊದಲ ಸಾರಿ ಓದುತ್ತಿರುವುದು! ಹೇಗೆ ತಪ್ಪಿ ಹೋಯ್ತೋ ಗೊತ್ತಿಲ್ಲ. ನಿಮ್ಮ ಕವಿತೆಗಳಂತೆ ತುಂಬಾ ಇಷ್ಟವಾದವು.. ನೀಲಿ ಹೂದೋಟದಲ್ಲಿ ಹೂಗಳ ಜೊತೆ ಹಣ್ಣುಗಳೂ ಇವೆಯೆಂದು ತಡವಾಗಿ ತಿಳಿಯಿತು! ಇನ್ನಷ್ಟು ಬರಲಿ! 🙂

 26. Prasad ಹೇಳುತ್ತಾರೆ:

  tumba chennagide.. tumba istavayitu…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s