ನಕ್ಕರೆ ಇಬ್ಬನಿ.. ಅತ್ತರೆ ಕಂಬನಿ..! (ಭಾಗ-೨)

Posted: ಫೆಬ್ರವರಿ 11, 2009 in ಹನಿಗಳು...
att1107607
ಎದೆಯೊಳು
ಸಾವಿರ ಗುಟ್ಟುಗಳು
 
ಆದರೆ ಈ
ಕಣ್ಣುಗಳು
ಪರಮವಾಚಾಳಿ!
*****
ನನ್ನ ಪಾಲಿಗೆ
ತಾನೇ ಆಗಿದ್ದರೂ
ಅಮ್ಮ
ದೇವರನು ನೋಡಲು
ತೀರ್ಥಯಾತ್ರೆಗೆ
ಹೋಗ್ತಾಳಂತೆ!
 
*****
 
ಹಸಿವೆಯ
ನೂರೆಂಟು
ಸೂರ್ಯರು
ಕಾಡುವಾಗ
ಅನ್ನದಗುಳಗುಳೂ
ಬೆಳ್ದಿಂಗಳು!
 
******
 
ನನ್ನವಳು
ಸಾಗರವಾದರೆ
 
ನಾನು
ಎಲ್ಲ ಕಡೆಯಿಂದ
ಮುತ್ತಿಕ್ಕಿಸಿಕೊಳ್ಳುವ
ದ್ವೀಪ!
 
******
 
ಶಾಪ್ಪಿಂಗ್ ಮಾಲ್ ಗಳೇ
ಮಾಯಾಜಿಂಕೆ
 
ಸದಾ ಲಕ್ಷ್ಮೀ ರೇಖೆ
ದಾಟುವ ಸೀತೆ
ನನ್ನಾಕೆ!
 
*****
 
Advertisements
ಟಿಪ್ಪಣಿಗಳು
 1. shivu.k ಹೇಳುತ್ತಾರೆ:

  ರಂಜಿತ್ ಸರ್,

  ಕವನ ಚೆನ್ನಾಗಿದೆ….ನಿಮ್ಮ ಚಿಕ್ಕ ಪದ ಪ್ರಯೋಗಳನ್ನು ನಾನು ಪ್ರಯತ್ನಿಸಿದರೂ ಆಗುತ್ತಿಲ್ಲ…ನಿಮಗೇ ಹೇಗೆ ಸಾಧ್ಯವೋ ನನಗೆ ಗೊತ್ತಿಲ್ಲ…….

  ನನ್ನವಳು
  ಸಾಗರವಾದರೆ

  ನಾನು
  ಎಲ್ಲ ಕಡೆಯಿಂದ
  ಮುತ್ತಿಕ್ಕಿಸಿಕೊಳ್ಳುವ
  ದ್ವೀಪ!

  ಈ ಪದ್ಯ ನನಗೆ ತುಂಬಾ ಮೆಚ್ಚುಗೆಯಾಯಿತು..[ಈ ರೀತಿ ಯಾರಿಗೆ ತಾನೆ ಮುತ್ತಿಕ್ಕಿಸಿಕೊಳ್ಳುವ ಆಸೆಯಾಗುವುದಿಲ್ಲ ಹೇಳಿ…]

 2. nagtalwar ಹೇಳುತ್ತಾರೆ:

  channagive….sir,

 3. ಪ್ರದೀಪ್ ಹೇಳುತ್ತಾರೆ:

  ” ಎದೆಯೊಳು
  ಸಾವಿರ ಗುಟ್ಟುಗಳು

  ಆದರೆ ಈ
  ಕಣ್ಣುಗಳು
  ಪರಮವಾಚಾಳಿ! ”

  ಸೂಪರ್ ಕಣ್ರೀ… 🙂

 4. manasu ಹೇಳುತ್ತಾರೆ:

  ರಂಜಿತ್,

  ೨-೪ ಸಾಲಿನ ಈ ಕವನಗಳು.. ಬಲು ಅರ್ಥವನ್ನೇ ಕೊಡುತ್ತವೆ.. ಎಲ್ಲ ಸಾಲುಗಳು ಇಷ್ಟವಾದವು……

  ಮಾಯಾಜಿಂಕೆಯ ಸೆಳೆತಕ್ಕೆ ಲಕ್ಷ್ಮಿರೇಖೆ ದಾಟಿದ್ದಾರೆ …. ಆ ಸೀತೆಯನ್ನು ತಡೆಯಲು ನೀವು ರಾಮನಾಗಿ ಯಾವುದಾದರು ಬ್ರ್ಮಹಾಸ್ತ್ರ ಉಪಯೋಗಿಸಿ ಹ ಹ ಹ …

  ವಂದನೆಗಳು..

 5. ಸುನಾಥ ಹೇಳುತ್ತಾರೆ:

  wonderful ಕವನಗಳು.
  ಅಭಿನಂದನೆಗಳು.

 6. Gireesh R Balakka ಹೇಳುತ್ತಾರೆ:

  ಚುಟುಕುಗಳು ಕುಟುಕುತ್ತಿವೆ
  ಜೇನು ನೊಣದಂತೆ
  ಗೂಡು ತುಂಬಾ
  ಮಧುವನಿರಿಸಿ…!

 7. ವಿಜಯರಾಜ್ ಕನ್ನಂತ ಹೇಳುತ್ತಾರೆ:

  idralli yaavdu chennagide antaa hELOna andre aagtaane illlaaa….
  ellaanu ondakkinta ondu soooooooooooper

 8. ಅನಾಮಿಕ ಹೇಳುತ್ತಾರೆ:

  Live traffic feed haakodu hege swalpa hEltira?

  amele WordPress kannada dashboard 2-3 dinadinda update aagtaane illa…
  nimge kaaNistidya updated ones?

 9. Meena Jois ಹೇಳುತ್ತಾರೆ:

  ನನ್ನ ಪಾಲಿಗೆ
  ತಾನೇ ಆಗಿದ್ದರೂ
  ಅಮ್ಮ
  ದೇವರನು ನೋಡಲು
  ತೀರ್ಥಯಾತ್ರೆಗೆ
  ಹೋಗ್ತಾಳಂತೆ!

  ee saalu nanna ammana nenapisitu!

 10. ರಂಜಿತ್ ಹೇಳುತ್ತಾರೆ:

  ಶೆಟ್ಟರು , ನಾಗಣ್ಣ , ಸುನಾಥ್, ಸಂತೋಷ್ ಚಿದಂಬರ್

  ಥ್ಯಾಂಕ್ಸು 🙂

 11. ರಂಜಿತ್ ಹೇಳುತ್ತಾರೆ:

  ಶಿವು,

  ನಾನು ಸಧ್ಯ ಇರುವುದು ದ್ವೀಪ ರಾಷ್ಟ್ರದಲ್ಲಿ ಆದ್ದರಿಂದಲೇ ಆ ಕಲ್ಪನೆ ಹೊಳೆಯಿತು ಅನ್ನಿಸುತ್ತೆ.

  ಧನ್ಯವಾದಗಳು

 12. ರಂಜಿತ್ ಹೇಳುತ್ತಾರೆ:

  ಪ್ರದೀಪ್,

  ಥ್ಯಾಂಕ್ಸ್ ಕಣ್ರೀ.

 13. ರಂಜಿತ್ ಹೇಳುತ್ತಾರೆ:

  ಮನಸು,

  “ಜೇಬು ಖಾಲಿ”ಎಂಬ ಸುಳ್ಳಿನ ಅಸ್ತ್ರವಿದೆ. ಅದರಿಂದಲೇ ಬಚಾವು.

  ರಿಸೆಷನ್ ರಾವಣನಿಗೆ ಸೋಲಬೇಕಿತ್ತು..:)

 14. ರಂಜಿತ್ ಹೇಳುತ್ತಾರೆ:

  ಗಿರೀಶ್ ಬಾಲಕ್ಕ ರವರೇ,

  ನನ್ನ ಚುಟುಕಗಳು ಕುಟುಕಿದವೇ.

  ನೀಲಿಹೂವಿನ ಗೂಡಿನ ಜೇನು ನಿಮ್ಮೆಲ್ಲರ ಆಸ್ವಾದನೆಗಂತಲೇ ಕೂಡಿಟ್ಟಿದ್ದು

  ಆತ್ಮೀಯ ಸ್ವಾಗತ ಬ್ಲಾಗಿಗೆ.

 15. ರಂಜಿತ್ ಹೇಳುತ್ತಾರೆ:

  ವಿಜಯ ರಾಜ್ ಜಿ.

  ಎಲ್ಲಾ ಹನಿಗಳೂ ಇಷ್ಟವಾಗಿದ್ದು ನನಗೆ ತುಂಬು ಖುಷಿ.

  ಬರುತ್ತಿರಿ.

 16. ರಂಜಿತ್ ಹೇಳುತ್ತಾರೆ:

  ಅನಾನಿಮಸ್ಸರೇ,

  ನಿಮ್ಮ ವೈಯುಕ್ತಿಕ ಮೈಲ್ ವಿಳಾಸ ನೀಡಿದ್ದರೆ ಮಾಹಿತಿ ಕಳುಹಿಸುತ್ತಿದ್ದೆ.

  *********

  ಮೀನಾ ಜೋಯ್ಸ್

  ತುಂಬಾ ಧನ್ಯವಾದಗಳು!

 17. hemalatha ಹೇಳುತ್ತಾರೆ:

  tell me how to write in kannada in blog…e sanna keeli kaina neevu thilisidare bhavanegala baagilu thagi beko anno aasege aasare aagthiri..pls..silly anko bedi..infact neelihoovu ,nanna bloge ido hesru ankondidde…

 18. ರಂಜಿತ್ ಹೇಳುತ್ತಾರೆ:

  ಹೇಮಾ,

  ನಿಮ್ಮ ಕನ್ನಡದ ಬರವಣಿಗೆಯ ಆಸೆಗೆ ನನ್ನ ಶರಣು. http://www.baraha.com ಗೆ ಹೋದರೆ ಬರಹ ಸಾಫ್ಟ್ ವೇರನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಕನ್ನಡದಲ್ಲಿ “ನೀಲಿಹೂವು” ಕ್ಕಿಂತ ಚೆನ್ನಾಗಿರುವ ಹೆಸರುಗಳಿವೆ. ಅದನ್ಯಾವುದಾದರೂ ಆರಿಸಿರಿ.

  ಡೌನ್ ಲೋಡಿಂಗ್ ವಿಷಯ ಮೈಲ್ ಮಾಡಿದ್ದೇನೆ. ನೀಲಿಹೂವಿನ ಬರಹದ ಕುರಿತು ಮಾತ್ರ ಇಲ್ಲಿ ಚರ್ಚೆಯಾಗಲಿ ಎಂಬುದ್ದೇಶದಿಂದ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s