ಮುದ್ದುಮೊಲಕ್ಕೆ ಮಿ.ಚಳಿ ಪ್ರೀತಿಯಿಂದ ಬರೆದ ಪತ್ರವು…

Posted: ಫೆಬ್ರವರಿ 18, 2009 in ಲವ್ ಲೆಟರ್

 

 rch_sugar3

ನಿಂಗೆ ನಾನಿಷ್ಟಾನಾ ಚಳಿ ಇಷ್ಟಾನಾ ಕೇಳಿದರೆ ಚಳಿ ಅಂತೀಯಲ್ಲೇ ಪುಣ್ಯಾತಗಿತ್ತೀ! ಅದ್ಯಾಕೇ ಚಳಿ ಅಂದ್ರೇ ಪ್ರಾಣ ಬಿಡ್ತೀಯೋ, ತಿಳೀವಲ್ದು. ಅಪ್ಪಿ ತಪ್ಪಿ ಅಮ್ಮನೆದುರು
ಚಳಿ ಅಂದ್ರೆ ಇಷ್ಟ ಅಂದುಬಿಡಬೇಡಾ, ಮಾರನೇ ದಿನದಿಂದ್ಲೇ ನಿನ್ನ ಮದುವೆ ಕುರಿತು ತಲೆ ಕೆಡೆಸಿಕೊಂಡಾರು, ಮೊಮ್ಮಗುವಿನ ನಾಮಕರಣಕ್ಕೆ ‘ಮಕ್ಕಳ ಹೆಸರುಗಳ ಪುಸ್ತಕ’
ಕೊಂಡುಕೋಬಿಟ್ಟಾರು, ಹುಷಾರು!

 ಬೆಳ್ಳಂಬೆಳಿಗ್ಗೆ ಈ ಜನವರಿ ಚಳೀಲಿ ನೀನು ಹೇಗಿರ್ತಿ ಅಂತ ಊಹಿಸ್ಕೊಳೋಕು ಎಷ್ಟು ಖುಷಿಯಾಗಿರುತ್ತೆ ಗೊತ್ತ ? ವೀಣೆ ಚಿತ್ರವಿರುವ ರಗ್ಗಿನೊಳಗೆ ಮುದುಡಿ ಮಲಗಿರುವ ಮುದ್ದು ಮೊಲ ನೀನು. ಅಂತಹ ಚಳಿಯಲ್ಲು ಫ್ಯಾನನ್ನು ಒಂದರಲ್ಲಿಟ್ಟಿರುತ್ತೀ, ಅದರ ಕೊರ ಕೊರ ಶಬ್ದ ನಿನಗೆ ಜೋಗುಳ ಹಾಡ್ತದೇನೆ? ಮೊನ್ನೆ ಅದು ಹಾಳಾದಾಗ ರಿಪೇರಿ ಆಗೋವರ್ಗೂ ನಿದ್ದೆ ಮಾಡಿರ್ಲಿಲ್ವಂತೆ?

ಐದು ಗಂಟೆಗೆ ಎಚ್ಚರವಾದರೂ ಅದೇನು ಊಹಿಸುತ್ತಿರುತ್ತೀಯ ಹೊದಿಕೆಯ ಲೋಕದೊಳಗೆ? ನನ್ನ ಕನಸಿನಲ್ಲಿ ನಾನು ಕೊಡೋ ರಾಶಿ ರಾಶಿ ಮುತ್ತುಗಳೆಲ್ಲ ನಿನಗೆ ತಲುಪ್ತಿದಾವೇನೋ ಎಂಬಂತೆ ಹೊದಿಕೆಯೊಳಗೇ ನಗ್ತಾ ಇರ್ತೀಯಲ್ಲ. ಕನಸುಗಳು ಕಾಣ್ತಾ ಕಾಣ್ತಾ ಮಗ್ಗಲು ಬದಲಿಸುವಾಗ ಗೆಜ್ಜೆ ಸದ್ದು , ಅದು ಕೇಳುತ್ತಲೇ ಅಮ್ಮ ಡಿಕಾಕ್ಷನ್ ಮಾಡಲು ಶುರು ಹಚ್ಚಿಕೊಳ್ತಾರೆ. ಸ್ವಲ್ಪ ಹೊತ್ತಿನಲ್ಲೆ ಅಮ್ಮ ಕೊಡುವ ಬೆಚ್ಚಗಿನ ಕಾಫಿ.  ಒಂದು ಕಂಡೀಷನ್ !, ಮದ್ವೆ ಆದ್ಮೇಲೆ ನಿಂಗೆ ಅಷ್ಟು ಬೆಳಿಗ್ಗೇನೆ ಕಾಫೀ ಬೇಕಂದ್ರೆ, ಅಪ್ಪುಗೆ ಅರಮನೆಯಿಂದ ನನ್ನ ಬಿಟ್ಟರೆ ಮಾತ್ರ !!

ಆ ರಗ್ಗನ್ನು ಅದೆಷ್ಟು ಮುದ್ದಾಗಿ ಅವುಚಿಕೊಂಡಿರ್ತೀಯ? ಊಹಿಸಿಕೊಂಡ್ರೆ ಹೊಟ್ಟೆಯಲ್ಲ ಉರಿದುಹೋಗತ್ತೆ. ಏನಿದ್ರೂ ಅವೆಲ್ಲಾ ಮದ್ವೆ ಆಗೋವರೆಗಷ್ಟೇ! ಆಮೇಲೆ ರಗ್ಗಿಗೆ
ಕಪಾಟಿನೊಳಗೆ ಜೀವಾವಧಿ ಶಿಕ್ಷೆ!

ಅದೇನು, ಸ್ವಲ್ಪ ಬೇಗ ಎದ್ದು ನಿನ್ನ ಮುಕ್ಕಾಲು ಕಂಗಳಿಂದ ಆ ಕಿಟಕಿಯಾಚೆ ಸ್ವಲ್ಪ ನೋಡ್ಬಾರ್ದ?  ಪಾಪ,  ಹೂಗಳು ಅರಳುವುದಕ್ಕೋಸ್ಕರ ಅದೆಷ್ಟು ಆಸೆಯಿಂದ ಕಾಯ್ತಿರ್ತಾವೆ.  ಅಮ್ಮ ಹಾಕಿದ ರಂಗೋಲಿ ನೋಡೋಕಾದ್ರು ಬಂದ್ರೆ ಕಾಲ್ಗೆಜ್ಜೆ ನಾದಕ್ಕೆ ಕೂಗೋ ಕೋಳೀಗೆ ಮುದ ಸಿಕ್ಕೀತು. ಹಂಗೇ ಜಾಗಿಂಗ್ ಗೇ ಅಂತ ಬಂದರೆ
ಅಲ್ಲಿ ಪಾರ್ಕಿಗೆ ವ್ಯಾಯಾಮ, ಲಾಫ್ಟರ್ ಕ್ಲಬ್ಬಿಗೆಂದೆ ಬರುವ ಮುದುಕರ ವಯಸ್ಸು ಸ್ವಲ್ಪ ಹೊತ್ತಾದರೂ ಕಡಿಮೆಯಾಗುತ್ತಲ್ವ?

ಅಂದ ಹಾಗೆ ಬೇಂದ್ರೆ ಅಡಿಗರ ಕವನ ಓದುತ್ತಿರುತ್ತೀಯಂತೆ? ಲಂಕೇಶರ ಬರಹ ಅಂದ್ರೆ ಇಷ್ಟ ಪಡುತ್ತಿ, ಕೆ.ಎಸ್.ನ ಅಂದ್ರೆ ಸಾಕು ಕೆ.ಆರ್.ಎಸ್. ಡ್ಯಾಮಿನಿಂದ ಬಿದ್ದೋಳ ತರಹ
ಪುಸ್ತಕದಲ್ಲೇ ಮುಳುಗಿಹೋಗ್ತೀಯಲ್ಲ, ನನಗೊಂದು ಪುಟ್ಟ ಅನುಮಾನ, ಅವರನ್ನೆಲ್ಲ ಓದೋವಾಗ ನಾನು ನೆನಪಾಗಲ್ವ? ನನ್ನನ್ನು ಚೂರು ಮಾತಾಡಿಸ್ಬೇಕು ಅನಿಸಲ್ವ? ನಂಗೊತ್ತು ಆ ವಿಷಯದಲ್ಲಿ ನೀನು ಕೊಬ್ಬಿನ ಫ್ಯಾಕ್ಟರಿ, ನಾನ್ಯಾಕೆ ಕೇಳಲಿ ಎಂಬ ಟಿಪಿಕಲ್ ಹುಡುಗಿಯ ಜಂಭ!! ನನ್ನ ಕಣ್ಣೊಳಗೆ ಯಾಚನೆ ಕಾಣುವ ಆಸೆ. “ಜೀವನ ಪೂರ್ತಿ ಕಣ್ರೆಪ್ಪೆ ತರಹ ನೋಡ್ಕೋತೀನಿ, ಪ್ಲೀಸ್ ಒಪ್ಕೋ!” ಎಂಬ ಮಾತುಗಳನ್ನ ಕೇಳೋ ಬಯಕೆ.

ಹುಡುಗರಿಗೆ ಅವರದೇ ಆದ ಭಯಗಳಿರುತ್ತೆ ಕಣೇ, ಒಬ್ಬ ಹುಡುಗ ಐ ಲವ್ ಯು ಅಂತ ಹೇಳಿದರೆ ಒಲ್ಲದ ಹುಡುಗಿಗೆ ಅವನೊಬ್ಬ ಲೋಫರ್ ಅನ್ನಿಸಿಕೊಳ್ಳುವ ಚಾನ್ಸ್ ಗಳೇ ಜಾಸ್ತಿ!! ಬೀದಿಗಳಲ್ಲಿ ತದುಕಲೆಂದೇ ತುಂಬ ಜನ ಓಡಾಡಿಕೊಂಡಿರುತ್ತಾರೆ! ಆಫೀಸಿನ ಒತ್ತಡ, ಹಣದ ಸಮಸ್ಯೆ, ಹೆಂಡತಿಯ ಜಗಳ ಎಲ್ಲದರ ಒಟ್ಟು ಮೊತ್ತವನ್ನು ಮುಷ್ಟಿಯಲ್ಲಿಟ್ಟುಕೊಂಡೇ ತಿರುಗಾಡುತ್ತಿರುತ್ತಾರೆ. ಇಂತಹ ಲೋಫರ್ ಸಿಕ್ಕರೆ ಸಾಕು ಕಾರಣ ಕೇಳದೆ ತೋರಣಕ್ಕೆ ಕಟ್ಟಿಬಿಡುತ್ತಾರೆ. ಆ ಜನಗಳಿಗೆ ಹುಡುಗಿಯರೆಂದರೆ ಕಣ್ಣಲ್ಲಿ ಕರುಣೆಯ ಕಡಲು ಹರಿಯುತ್ತಿರುತ್ತದೆ. ತಪ್ಪು ಮಾಡಿದ ಹುಡುಗಿ ಎದುರಾದರೆ ಸಾಕು, ಅವರೆಲ್ಲ ಸಾಯಿಪ್ರಕಾಶ್ ಫಿಲ್ಮಿನ ಅಣ್ಣಂದಿರು. ಅದೇಕೋ ಈ ವಿಶೇಷ
ರಿಯಾಯಿತಿ. ಈ ಎಲ್ಲ ವಿಷಯಗಳನ್ನು ಪರಿಗಣಿಸಿಯಾದರೂ ಪ್ರೀತಿಯನು ಬಾಯಿ ಬಿಟ್ಟು ಹೇಳು ಮಾರಾಯ್ತಿ. ನೀನು ಹಾಗೆ ಹೇಳಿದ ಕ್ಷಣ ನಾನು ಲತಿಕಾಳನ್ನು ಗೆದ್ದ ಜಮಾಲ್, ಆಸ್ಕರ್ ಗೆಲ್ಲುವ ರೆಹಮಾನ್!!

ನಿಂಗೆ ಚಳಿ ಇಷ್ಟ ಅಂತ ಗೊತ್ತಾದ ಮೇಲೆ ಗೆಳೆಯರೆಲ್ಲ ನನ್ನನ್ನು ಮಿಸ್ಟರ್ ಚಳಿ ಅಂತಲೇ ಕರೀತಿದ್ದಾರೆ. ಅದಕ್ಕಾದರೂ ನನ್ನನ್ನು ಚಳಿಯಷ್ಟೇ ಪ್ರೀತಿಸು.ನಿಜವಾಗ್ಲೂ ನಿಂಗೆ
ಚಳಿಗಾಲದಲ್ಲಿ ತುಂಬ ಸಹಾಯಕ್ಕೆ ಬರ್ತೀನಿ ನಾನು. ಅದೂ ಅಲ್ದೆ ನೂರು ಚಳಿಗಾಲ ನಮಗೋಸ್ಕರ ಕಾಯ್ತಿರುವಾಗ ಅದಕ್ಕೆ ಅವಮಾನ ಮಾಡೋದು ನಿಂಗಿಷ್ಟ ಆಗೋಲ್ಲ ಅಲ್ವನೇ? ಚಳಿ ಇಷ್ಟ ಪಡುವ ನನ್ನ ಮುದ್ದು ಗಿಳಿ….

Advertisements
ಟಿಪ್ಪಣಿಗಳು
 1. Rajesh Manjunath ಹೇಳುತ್ತಾರೆ:

  ರಂಜಿತ್,
  ಪ್ರೇಮ ಕವಿಗಳು, ಪ್ರಣಯ ಕವಿಗಳಾಗುತ್ತಿರುವಂತಿದೆ 😉
  ಈ ಬಾರಿಯ ಛಳಿಗಾಲ ಮುಗಿಯುತ್ತ ಬಂತು, ಬೇಗ ತಡ ಮಾಡಬೇಡಿ, ಮತ್ತೆ ಜೀವಿತದ ಒಂದು ಛಳಿಗಾಲ ಅನ್ಯಾಯವಾಗಿ ಕಳೆದು ಕೊಂಡ ಕೊರಗು ಮನಸ್ಸನ್ನು ಕಾಡಿ ಬಿಟ್ಟೀತು 😀
  ಶೀಘ್ರ ಮೇವ ಕಲ್ಯಾಣ ಪ್ರಾಪ್ತಿ ರಸ್ತು. ಹೋಗುತ್ತಿರುವ ವೇಗ ನೋಡಿದರೆ ಯಾವ ಕ್ಷಣದಲ್ಲಿ ಬೇಕಾದರೂ ನಮಗೆ ನಿಮ್ಮ ಮದುವೆಯ ಹೋಳಿಗೆ ಊಟ ಸಿಕ್ಕಿ ಬಿಡ ಬಹುದು ಅನ್ನಿಸ್ತಿದೆ ಹುರ್ರೇ 🙂

 2. keshav ಹೇಳುತ್ತಾರೆ:

  ಒಳ್ಳೆ “ಮುಂಗಾರು ಮಳೆ”ಯಲ್ಲಿ ಗಣೇಶ “ದೇವದಾಸ”ನೊಟ್ಟಿಗೆ ಮಾಡುವ ಸ್ಟೈಲಿನಲ್ಲೇ ಬರೆದಿದ್ದೀರಾ…ಗಣೇಶ ನಿಮ್ ತಲೆ ಮೇಲೆ ಕೈ ಇಟ್ಟಿರೋ ಹಂಗಿದೆ…

  – ಕೇಶವ (www.kannada-nudiblogspot.com)

 3. nagtalwar ಹೇಳುತ್ತಾರೆ:

  ಏನ್..ಸಾರ್..? ಸುಳಿವಿಲ್ದೆ ಪದ್ಯದಿಂದ ಪತ್ರಕ್ಕೆ ಹೋಗಿ ಬಿಟ್ಟಿದ್ದೀರಾ..? ಎರಡೂ ಚನ್ನಾಗಿ ಒಲಿದಿದೆ ತಮಗೆ. ಇಡಿಸಿತು ಪತ್ರ…….!
  -ನಾಗು,ತಳವಾರ್.

 4. ರೋಹಿಣಿ ಹೇಳುತ್ತಾರೆ:

  ನಮಸ್ತೇ ಗುರುಗಳೇ

  ಹುಡುಗರಿಗೆ ಅವರದೇ ಆದ ಭಯಗಳಿರುತ್ತೆ ಕಣೇ, ಒಬ್ಬ ಹುಡುಗ ಐ ಲವ್ ಯು ಅಂತ ಹೇಳಿದರೆ ಒಲ್ಲದ ಹುಡುಗಿಗೆ ಅವನೊಬ್ಬ ಲೋಫರ್ ಅನ್ನಿಸಿಕೊಳ್ಳುವ ಚಾನ್ಸ್ ಗಳೇ ಜಾಸ್ತಿ!!
  ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಿರ ಹುಡುಗಿಯರ ಮನಸ
  ಪತ್ರ ಅಂತೂ ಚಳಿ ಇಂದನೇ ತುಂಬಿ ಹೋಗಿದೆ

 5. shivu.k ಹೇಳುತ್ತಾರೆ:

  ರಂಜಿತ್ ಸರ್,

  ಚಳಿ, ಮೊಲ, ಮದುವೆ…ಇದೇನ್ ಕತೆ ಸಾರ್, ಪ್ರೀತಿಯಿಂದ , ಪ್ರೇಮಕ್ಕೆ, ಪ್ರೇಮದಿಂದ ಪ್ರಣಯಕ್ಕೆ ನಂತರ ಮದುವೆಗೆ ತಿರುಗಿರುವಂತಿದೆ ಬರವಣಿಗೆ….ಒಳ್ಳೆಯದಾಗಲಿ…

 6. svatimuttu ಹೇಳುತ್ತಾರೆ:

  anna sorry..Mr.chali….. nim patra chennagide.. muddumuddada a moladashte cute agide….:)

 7. Prakash ಹೇಳುತ್ತಾರೆ:

  Ranjith avre..lekhana thumba chennagide..aadre swalpa spell mistakes ide.. dayaviTTu check maadi

  ಅಂದ ಹಾಗೆ ಬೇಂದ್ರೆ ಅಡಿಗರ ಕವನ ಓದುತ್ತಿರುತ್ತೀಯಂತೆ? ಲಂಕೇಶರ ಬರಹ ಅಂದ್ರೆ ____(ista)? ಪಡುತ್ತಿ, ಕೆ.ಎಸ್.ನ____?(kavana/baraha) ಅಂದ್ರೆ ಸಾಕು ಕೆ.ಆರ್.ಎಸ್. ಡ್ಯಾಮಿನಿಂದ ಬಿದ್ದೋಳ ತರಹ
  ಪುಸ್ತಕದಲ್ಲೇ ಮುಳುಗಿಹೋಗ್ತೀಯಲ್ಲ, ನನಗೊಂದು ಪುಟ್ಟ ಅನುಮಾನ, ಅವರನ್ನೆಲ್ಲ(avannella) ಓದೋವಾಗ ನಾನು …

 8. ರಂಜಿತ್ ಹೇಳುತ್ತಾರೆ:

  ಪ್ರಕಾಶ್,

  “ಇಷ್ಟ” ಅನ್ನುವ ಪದ ಕಣ್ತಪ್ಪಿನಿಂದಾಗಿ ಬಿಟ್ಟುಹೋಗಿದೆ. ಈಗ ಸರಿಪಡಿಸಿದ್ದೇನೆ. ತೋರಿಸಿಕೊಟ್ಟಿದ್ದಕ್ಕಾಗಿ ಥ್ಯಾಂಕ್ಸ್.

  ಹಾಗೇ ಬರಹಗಾರರ ಪುಸ್ತಕವನ್ನು ಓದುವುದನ್ನು ಬಾಯಿಮಾತಲ್ಲಿ ಲೇಖಕನನ್ನು ಓದುವುದೆಂದೂ ಹೇಳಬಹುದು. ಉದಾಹರಣೆಗೆ “ನಾನು ಲಂಕೇಶ್, ಕೆ.ಎಸ್.ನ., ಎಚ್ಚೆಸ್ವಿ ಅವರನ್ನೆಲ್ಲಾ ಓದಿದ್ದೇನೆ..” ಅಂತ ಬಳಸುತ್ತಾರೆ. ಪ್ರಾಯೋಗಿಕವಾಗಿ ತಪ್ಪಿರಬಹುದಾದರೂ ಬಾಯಿಮಾತಲ್ಲಿ ಉಪಯೋಗಿಸಬಹುದಲ್ಲವೇ?

 9. minchulli ಹೇಳುತ್ತಾರೆ:

  ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ… ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

  ಶುಭವಾಗಲಿ,
  – ಶಮ, ನಂದಿಬೆಟ್ಟ

 10. ರಂಜಿತ್ ಹೇಳುತ್ತಾರೆ:

  ನನ್ನ ಪುಟ್ಟ ಬ್ಲಾಗಿಗೆ ಸ್ವಾಗತ ರಾಮ್ ರವರೇ

 11. ರಂಜಿತ್ ಹೇಳುತ್ತಾರೆ:

  ರಾಜೇಶ್,

  ಮದುವೆ ಸೀನ್ ಸದ್ಯಕ್ಕಿಲ್ಲ. ಇದು ಸುಮ್ಮನೆ ಫೆಬ್ರುವರಿ ೧೪ ಕ್ಕೆ ನೀಲಿಹೂವು ಸ್ಪೆಷಲ್ಲು!

 12. ರಂಜಿತ್ ಹೇಳುತ್ತಾರೆ:

  ಕೇಶವ್ ಸರ್,

  ಎಲ್ಲಕ್ಕಿಂತ ಡಿಫೆರೆಂಟಾಗಿ ಲವ್ ಲೆಟರ್ ಬರೆಯೋಕೆ ಹೋಗಿದ್ದು…ಅಯ್ಯೋ ಮುಂಗಾರು ಸ್ಟೈಲ್ ಆಗೋಯ್ತೇ?

  ನನ್ನ ತಲೆ ಮೇಲೆ ನನ್ನ ತಂದೆ ತಾಯಿ ಮತ್ತೆ ತುಂಬಾ ಜನ ನಿಮ್ಮಂಥ ದೊಡ್ಡೊರ ಕೈ ಇದೆ ಸರ್. ಅದಿದ್ರೆ ಸಾಕು ಅಂದ್ಕೊಂಡಿದ್ದೀನಿ.

  ನನ್ನ ಬ್ಲಾಗಿಗೆ ಪ್ರೀತಿಯ ಸ್ವಾಗತ. ಹರಸುತ್ತಿರಿ

 13. ರಂಜಿತ್ ಹೇಳುತ್ತಾರೆ:

  ನಾಗಣ್ಣ,

  ನಿಮ್ಗೆ ಹಿಡ್ಸಿದ್ದಕ್ಕೆ ಬಲ್ ಕುಸಿ ಆಯ್ತು ಕಣಣ್ಣ.

  ಇಂಗೇ ನನ್ ಮ್ಯಾಕೆ ನಿಮ್ ಪಿರೀತಿ ಇರ್ಲಿ

 14. ರಂಜಿತ್ ಹೇಳುತ್ತಾರೆ:

  ರೋಹಿಣಿ,

  ನನ್ನ ಪುಣ್ಯ! ನೀವು ” ನಿಮ್ಮ ಅನುಭವವಾ?” ಅಂತ ನನ್ನ ಕೇಳಲಿಲ್ಲವಲ್ಲ. ಬಚಾವಾದೆ..;)

  ಥ್ಯಾಂಕ್ಸ್ ಮೇಡಮ್ ನಿಮ್ಮ ಅನಿಸಿಕೆಗೆ.

 15. ರಂಜಿತ್ ಹೇಳುತ್ತಾರೆ:

  ಶಿವು ಸರ್‍,

  ಇನ್ನೂ ಸ್ವಲ್ಪ ದಿನ ನಗ್ತಾ ಖುಷಿಯಾಗಿ ಕಳೆಯೋಣ ಅಂದ್ಕೊಂಡಿದ್ದೀನಿ..:)

  ಪ್ರೋತ್ಸಾಹಿಸುತ್ತಿರಿ. ಥ್ಯಾಂಕ್ಸ್.

 16. ರಂಜಿತ್ ಹೇಳುತ್ತಾರೆ:

  ಏನವ್ವ ಇಂಚರ? ನಂಗೆ ಚಳಿ ಅಂತ ನಾಮಕರಣ ಮಾಡ್ಬಿಟ್ಯೇನವ್ವ?:)

  ಥ್ಯಾಂಕ್ಸ್

 17. ರಂಜಿತ್ ಹೇಳುತ್ತಾರೆ:

  ಶಮ ಅವರೇ

  ನಿಮ್ಮ ಆಹ್ವಾನಕ್ಕೆ ಧನ್ಯವಾದಗಳು

  ಸಧ್ಯದ ಪರಿಸ್ಥಿತಿಯಲ್ಲಿ ನನಗೆ ಬರಲಾಗದು. ಅಮ್ಮನ ಹಬ್ಬ ಅದ್ಭುತವಾಗಿ ನಡೆಯಲಿ ಅಂತ ಹಾರೈಸ್ತೇನೆ.

 18. Ranjitha Veena ಹೇಳುತ್ತಾರೆ:

  Good writing 🙂
  Its very romantic ………

 19. ರಂಜಿತ್ ಹೇಳುತ್ತಾರೆ:

  ರಂಜಿತಾ ವೀಣಾ,

  ನೀಲಿಹೂವಿಗೆ ಸ್ವಾಗತ.

  ಮೆಚ್ಚಿದ್ದಕ್ಕೆ ವಂದನೆಗಳು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s